Healthy Tips: ದೇಹದಲ್ಲಿ ವಿಟಮಿನ್-ಬಿ 12 ಕಡಿಮೆಯಾದರೆ ಯಾವ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ ಗೊತ್ತಾ? ಇದಕ್ಕೆ ಪರಿಹಾರ

ಕೆಲವರಿಗೆ ರಾತ್ರಿ ಹೊತ್ತು ಉತ್ತಮವಾಗಿ ನಿದ್ರೆ ಮಾಡಿದರೂ ಸಹ ಬೆಳಿಗ್ಗೆ ಎದ್ದ ನಂತರ ಒಂದು ರೀತಿಯ ಸುಸ್ತು, ಆಲಸ್ಯ ಕಾಡುತ್ತದೆ. ಇದರಿಂದ ಒಂದು ರೀತಿಯ ಸೋಮಾರಿತನ ಉಂಟಾಗಿ ಏನು ಕೆಲಸ ಮಾಡುವ ಮೂಡ್‌ ಕೂಡ ಇರುವುದಿಲ್ಲ. ಇದರಿಂದಾಗಿ ಎಲ್ಲರೂ ನಿಮ್ಮನ್ನು ಸೋಮಾರಿ ಎಂದು ನಿಂದಿಸುತ್ತಾರೆ. ಆದರೆ ಇದು ಸೋಮಾರಿತನವಲ್ಲ. ಬದಲಿಗೆ ನಿಮ್ಮಲ್ಲಿ ವಿಟಮಿನ್ ಬಿ 12 ಕೊರತೆ ಇದೆ ಎಂದು ಅರ್ಥ.

ವಿಟಮಿನ್ ಬಿ

ವಿಟಮಿನ್ ಬಿ

  • Share this:
ಕೆಲವರಿಗೆ ರಾತ್ರಿ (Night) ಹೊತ್ತು ಉತ್ತಮವಾಗಿ ನಿದ್ರೆ (Sleep) ಮಾಡಿದರೂ ಸಹ ಬೆಳಿಗ್ಗೆ ಎದ್ದ ನಂತರ ಒಂದು ರೀತಿಯ ಸುಸ್ತು, ಆಲಸ್ಯ (Idleness) ಕಾಡುತ್ತದೆ. ಇದರಿಂದ ಒಂದು ರೀತಿಯ ಸೋಮಾರಿತನ (Laziness) ಉಂಟಾಗಿ ಏನು ಕೆಲಸ ಮಾಡುವ ಮೂಡ್‌ ಕೂಡ ಇರುವುದಿಲ್ಲ. ಇದರಿಂದಾಗಿ ಎಲ್ಲರೂ ನಿಮ್ಮನ್ನು ಸೋಮಾರಿ ಎಂದು ನಿಂದಿಸುತ್ತಾರೆ. ಆದರೆ ಇದು ಸೋಮಾರಿತನವಲ್ಲ. ಬದಲಿಗೆ ನಿಮ್ಮಲ್ಲಿ ವಿಟಮಿನ್ ಬಿ 12 (Vitamin B12) ಕೊರತೆ ಇದೆ ಎಂದು ಅರ್ಥ. ಇದರಿಂದ ನಿಮಗೆ ಆಲಸ್ಯದ ಅನುಭವವಾಗುತ್ತದೆ. ಇದಲ್ಲದೆ ಆಯಾಸ, ಹಸಿವಿನ ಕೊರತೆ ಮತ್ತು ಒಂದು ರೀತಿಯ ಖಿನ್ನತೆಯ (Depression) ಅನುಭವವಾಗುತ್ತದೆ. ಇದನ್ನು ಕೋಬಾಲಾಮಿನ್ ಎಂದು ಸಹ ಕರೆಯಲಾಗುತ್ತದೆ.

ವಿಟಮಿನ್ ಬಿ -12 ಕೊರತೆಯಿಂದಾಗುವ ಆರೋಗ್ಯ ಸಮಸ್ಯೆಗಳು
ಕೋಬಾಲಾಮಿನ್ ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶವಾಗಿದೆ. ಇದು ದೇಹದ ಚಯಾಪಚಯ ಮತ್ತು ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುತ್ತದೆ. ವಿಟಮಿನ್ ಬಿ 12 ದೇಹಕ್ಕೆ ಬಹಳ ಮುಖ್ಯವಾದ ಜೀವಸತ್ವವಾಗಿದೆ. ವಿಟಮಿನ್ ಬಿ -12 ಕೊರತೆಯಾದಾಗ ದೇಹದಲ್ಲಿ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹಾಗಾಗಿ ಈ ರೋಗಲಕ್ಷಣಗಳನ್ನು ಯಾರೂ ಕೂಡ ನಿರ್ಲಕ್ಷಿಸಬಾರದು.

ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿದ್ದರೆ ರಕ್ತಹೀನತೆ, ಆಯಾಸ, ಕಿರಿಕಿರಿ, ಮೈ, ಕೈ ಕಾಲುಗಳಲ್ಲಿ ನಡುಗುವಿಕೆ, ಠೀವಿ, ಬಾಯಿ ಹುಣ್ಣು, ಮಲಬದ್ಧತೆ, ಅತಿಸಾರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ನೀವು ನಿಮ್ಮ ದೇಹದಲ್ಲಿ ವಿಟಮಿನ್ ಬಿ 12 ಅನ್ನು ಅವಶ್ಯಕವಾಗಿ ಹೆಚ್ಚಿಸಿಕೊಳ್ಳಬೇಕು. ಹಾಗಾದರೆ ದೇಹದಲ್ಲಿ ವಿಟಮಿನ್ ಬಿ 12 ಮಟ್ಟವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಕೆಲವು ಆಹಾರಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

ವಿಟಮಿನ್ ಬಿ 12 ಆಹಾರಗಳು
ಮೊಸರು
ಮೊಸರಿನಲ್ಲಿ ವಿಟಮಿನ್ ಬಿ 12 ಉತ್ತಮವಾಗಿದೆ. ಇದು ಪದಾರ್ಥಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೊಸರು ಸೇವನೆಯು ವಿಟಮಿನ್ ಬಿ 12 ಮಟ್ಟವನ್ನು ಸುಧಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹೀಗಾಗಿ ನಿಮ್ಮ ಆಹಾರದಲ್ಲಿ ಮೊಸರನ್ನು ಸೇರಿಸಿ.

ಇದನ್ನೂ ಓದಿ: Health Tips: ಆರೋಗ್ಯವಾಗಿ ಇರಬೇಕು ಅಂದರೆ ಈ ತಪ್ಪನ್ನು ಮತ್ತೆ ಮಾಡಲೇ ಬೇಡಿ!

ಸಾಲ್ಮನ್
ಈ ಮೀನಿನಲ್ಲಿ ನೈಸರ್ಗಿಕವಾಗಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್‌ ಸಮೃದ್ಧವಾಗಿವೆ. ಇದು ವಿಟಮಿನ್ ಬಿ 12ನ ಉತ್ತಮ ಮೂಲವಾಗಿದ್ದು, ಹೃದಯ, ಮೂಳೆಗಳು, ಮೆದುಳು ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಗೆ ಸಹಕಾರಿಯಾಗಿದೆ.

ಮೊಟ್ಟೆ
ಮೊಟ್ಟೆಗಳು ಅತ್ಯಂತ ಆರೋಗ್ಯಕರ ಮತ್ತು ಪ್ರೋಟೀನ್ ಯುಕ್ತ ಆಹಾರ. ಮೊಟ್ಟೆಗಳಲ್ಲಿ ಪ್ರೋಟೀನ್ / ಅಮೈನೋ ಆಮ್ಲಗಳು ಸಹ ಸಮೃದ್ಧವಾಗಿದೆ. ಮೊಟ್ಟೆ ಕೂಡ ವಿಟಮಿನ್ ಬಿ 12ಗೆ ಉತ್ತಮ ಮೂಲವಾಗಿದೆ. ವಿಶೇಷವಾಗಿ ಮೊಟ್ಟೆಯ ಹಳದಿ ಲೋಳೆಗಳಲ್ಲಿ ಹೆಚ್ಚಿನ ವಿಟಮಿನ್ ಬಿ 12 ಅಂಶಗಳಿರುತ್ತವೆ. ವಿಟಮಿನ್ ಬಿ 12 ಮಟ್ಟವನ್ನು ಸುಧಾರಿಸಲು ಮೊಟ್ಟೆಯನ್ನು ನಿಯಮಿತವಾಗಿ ತಿನ್ನಬೇಕು.

ಬಲವರ್ಧಿತ ಆಹಾರಗಳು
ನೀವು ಸಸ್ಯಾಹಾರಿಗಳಾಗಿದ್ದರೆ, ನೈಸರ್ಗಿಕವಾಗಿ ವಿಟಮಿನ್ ಬಿ 12 ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸೊಪ್ಪು, ಧಾನ್ಯಗಳು, ಹಾಲು, ಪೌಷ್ಟಿಕಾಂಶದ ಯೀಸ್ಟ್‌ನಂತಹ ವಿಟಮಿನ್ ಬಿ 12 ನೊಂದಿಗೆ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದು ಉತ್ತಮ.

ಮಾಂಸ
ವಿಟಮಿನ್ ಬಿ12 ಹಲವಾರು ಮಾಂಸಾಹಾರಗಳಲ್ಲಿ ಹೇರಳವಾಗಿ ಲಭ್ಯವಿದೆ. ಕೋಳಿ, ಕುರಿ ಮಾಂಸ, ಮೀನು ಮತ್ತು ಮೊಟ್ಟೆಗಳಲ್ಲಿ ಇದು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಪ್ರಾಣಿಜನ್ಯ ಆಹಾರಗಳಲ್ಲಿಯೂ

ಇದನ್ನೂ ಓದಿ: Cancer And Food: ಇವುಗಳನ್ನು ತಿಂದ್ರೆ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯೋದಿಲ್ವಂತೆ

ವಿಟಮಿನ್ ಬಿ 12 ನಲ್ಲಿ ಸಮೃದ್ಧವಾಗಿವೆ. ಮೊಟ್ಟೆಯಂತೆಯೇ ಚಿಕನ್ ಸಹ ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕ್ಲಾಮ್ಸ್, ಟರ್ಕಿ, ಚಿಕನ್ ನಂತಹ ಮಾಂಸವನ್ನು ತಿನ್ನುವುದರಿಂದ ನೈಸರ್ಗಿಕವಾಗಿ ವಿಟಮಿನ್ ಬಿ 12 ಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಿದೆ.
Published by:Ashwini Prabhu
First published: