Sinus: ನೀವು ಸೈನಸ್​ನಿಂದ ತೊಂದರೆ ಅನುಭವಿಸುತ್ತಿದ್ದೀರಾ? ಹಾಗಿದ್ರೆ ತಪ್ಪದೆ ಈ ಯೋಗಾಸನ ಮಾಡಿ

ಸೈನಸ್ ಅನ್ನು ಔಷಧಿಗಳೊಂದಿಗೆ ಗುಣಪಡಿಸಬಹುದು, ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುವ ಹಲವಾರು ಮನೆಮದ್ದುಗಳಿವೆ. ಹೆಚ್ಚುವರಿಯಾಗಿ, ನಿಮ್ಮ ಸೈನಸ್ ಸೋಂಕಿಗೆ ಚಿಕಿತ್ಸೆ ನೀಡಲು ಯೋಗವನ್ನು ಪ್ರಯತ್ನಿಸಲು ತಜ್ಞರು ನಿಮಗೆ ಸಲಹೆ ನೀಡುತ್ತಾರೆ.

ಸೈನಸ್ ಸಮಸ್ಯೆ

ಸೈನಸ್ ಸಮಸ್ಯೆ

  • Share this:
‘ಈ ಸೈನಸ್ ಸಮಸ್ಯೆ ನನ್ನ ಶತ್ರುವಿಗೂ ಬರಬಾರದಪ್ಪಾ ತಲೆ ನೋವು (Head Ache), ಮೂಗು ಕಟ್ಟುವುದು ತುಂಬಾನೇ ಭಾರ ಮತ್ತು ನೋವು ಆಗುತ್ತಿದೆ’ ಅಂತ ಕೆಲವರು ಹೇಳುವುದನ್ನು ನಾವು ಕೇಳಿರುತ್ತೇವೆ. ಹೌದು ಈ ಸೈನಸ್ (Sinus) ಸಮಸ್ಯೆಯೇ ಅಂತಹದ್ದು ಅಂತ ಹೇಳಬಹುದು. ಕೆಲವೊಬ್ಬರಿಗೆ ಈ ಸೈನಸ್ ಸಮಸ್ಯೆ ತುಂಬಾನೇ ಕಾಡುತ್ತಿರುತ್ತದೆ ಎಂದು ಹೇಳಬಹುದು. ಯಾವುದೇ ಕೆಲಸ ಮಾಡಲು ಆಗುವುದಿಲ್ಲ ಮೂಗು (Nose), ತಲೆ ಎಲ್ಲವೂ ಭಾರವಾಗಿ ವಿಚಿತ್ರ ನೋವು (Pain) ಶುರುವಾಗುತ್ತದೆ. ಆ ಕಡೆ ಎದ್ದು ಕೆಲಸ ಮಾಡುವುದಕ್ಕೂ ಆಗುವುದಿಲ್ಲ, ಈ ಕಡೆ ಸುಮ್ಮನೆ ಮಲಗುವುದಕ್ಕೂ ಆಗುವುದಿಲ್ಲ. ಅಂತಹ ಒಂದು ಸಂದಿಗ್ಧವಾದ ಪರಿಸ್ಥಿತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ನಿಮಗೆ ತಲೆ ನೋಯುತ್ತಿದ್ದು, ನಿಮ್ಮ ಮೂಗು ಸೋರುತ್ತಿದ್ದರೆ ಅಥವಾ ಕಿಕ್ಕಿರಿದಿದ್ದರೆ, ನಿಮಗೆ ಗಂಟಲು ಕೆರೆತ, ಕೆಮ್ಮು ಇದ್ದರೆ ಮತ್ತು ನಿಮ್ಮ ಕಣ್ಣುಗಳು, ಮೂಗು, ಕೆನ್ನೆಗಳು ಅಥವಾ ಹಣೆಯ ಸುತ್ತಲೂ ತುಂಬಾನೇ ಒತ್ತಡವನ್ನು ಅನುಭವಿಸುತ್ತಿದ್ದರೆ ನಿಮಗೆ ಸೈನಸ್ ಆಗಿರುವುದು ಖಚಿತ ಎಂದುಕೊಳ್ಳಿರಿ. ಈ ಸೈನಸ್ ಅಥವಾ ಸೈನಸೈಟಿಸ್ ನಿಂದ ವರ್ಷವಿಡೀ ಬಳಲುತ್ತಿರುವ ಕೆಲವು ಜನರಿಗೆ, ವಿಶೇಷವಾಗಿ ಮಾನ್ಸೂನ್ ಅಥವಾ ಚಳಿಗಾಲದ ಋತುವಿನಲ್ಲಿ ಜೀವಿಸುವುದು ತುಂಬಾನೇ ಕಷ್ಟವಾಗಬಹುದು. ಇದು ಗಂಭೀರ ಪ್ರಕರಣಗಳಲ್ಲಿ ಮೆದುಳಿನ ಜ್ವರಕ್ಕೂ ಸಹ ಕಾರಣವಾಗಬಹುದು. ಸೈನಸ್ ಸೋಂಕುಗಳ ಬಗ್ಗೆ ಭಯ ಮತ್ತು ಆತಂಕ ಪಡುವ ಬದಲು ಅದನ್ನು ಹೇಗೆ ತೊಡೆದು ಹಾಕುವುದು ಎಂದು ತಿಳಿದುಕೊಳ್ಳುವ ಮೂಲಕ ನಿಮ್ಮ ಜಾಗರೂಕತೆಯನ್ನು ಹೆಚ್ಚಿಸಿಕೊಳ್ಳುವುದು ಉತ್ತಮ ಎಂದು ಹೇಳಬಹುದು.

ಸೈನಸ್ ಅನ್ನು ಗುಣಪಡಿಸಲು ಏನು ಮಾಡಬೇಕು
ಸೈನಸ್ ಅನ್ನು ಔಷಧಿಗಳೊಂದಿಗೆ ಗುಣಪಡಿಸಬಹುದು, ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುವ ಹಲವಾರು ಮನೆಮದ್ದುಗಳಿವೆ. ಹೆಚ್ಚುವರಿಯಾಗಿ, ನಿಮ್ಮ ಸೈನಸ್ ಸೋಂಕಿಗೆ ಚಿಕಿತ್ಸೆ ನೀಡಲು ಯೋಗವನ್ನು ಪ್ರಯತ್ನಿಸಲು ತಜ್ಞರು ನಿಮಗೆ ಸಲಹೆ ನೀಡುತ್ತಾರೆ.

ಅಕ್ಷರ ಯೋಗ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಸ್ಥಾಪಕ ಹಿಮಾಲಯನ್ ಸಿದ್ಧ ಅಕ್ಷರ್ ಅವರನ್ನು ಸಂಪರ್ಕಿಸಿದ ಹೆಲ್ತ್ ಶಾರ್ಟ್ಸ್ ಅವರು ಸೈನಸ್ ಸಮಸ್ಯೆಗಳನ್ನು ದೂರವಿಡುವಲ್ಲಿ ಈ 5 ಯೋಗ ಭಂಗಿಗಳು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಿದ್ದಾರೆ ನೋಡಿ. ಅಕ್ಷರ್ "ಮಳೆಗಾಲದಲ್ಲಿ ಹೆಚ್ಚಿನ ಜನರನ್ನು ಬಾಧಿಸುವ ಸಾಮಾನ್ಯ ಕಾಯಿಲೆಯೆಂದರೆ ಅದು ಸೈನಸ್ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು. ತೇವವಾದ ಗಾಳಿ, ತಂಪಾದ ಹವಾಮಾನ ಮತ್ತು ತಂಪಾದ ಗಾಳಿ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ. ಮಾನ್ಸೂನ್, ಇತರ ಎಲ್ಲಾ ಋತುಗಳಲ್ಲಿ, ವಿಶೇಷವಾಗಿ ನಿಮ್ಮ ಸೈನಸ್ ಗಳನ್ನು ಪ್ರಚೋದಿಸಬಹುದು, ಇದರಿಂದಾಗಿ ಸೈನಸ್ ಕುಳಿಗಳು ಉರಿಯೂತಕ್ಕೆ ಒಳಗಾಗುತ್ತವೆ" ಎಂದು ಹೇಳುತ್ತಾರೆ.

ದೀರ್ಘಕಾಲದ ಸೈನಸೈಟಿಸ್ ಗೆ ಮುಖ್ಯವಾದ ಕಾರಣಗಳು ಏನು?
ಅಲರ್ಜಿಯ ಪ್ರತಿಕ್ರಿಯೆಗಳು, ಸೋಂಕುಗಳು, ಸೈನಸ್ ಗಳಲ್ಲಿ ಯಾವುದೇ ಅಸಹಜ ಬೆಳವಣಿಗೆ ಅಥವಾ ನಿಮ್ಮ ಸೈನಸ್ ಗಳ ಒಳಪದರದ ಊತದಂತಹ ವಿಷಯಗಳಿಂದಾಗಿ ಇದು ಸಾಮಾನ್ಯವಾಗಿ ಸಂಭವಿಸುತ್ತದೆ.

ಇದನ್ನೂ ಓದಿ: Good Habits: ಅಲಾರಂ ಇಲ್ಲದೇ ಬೆಳಿಗ್ಗೆ ಬೇಗ ಏಳ್ಬೇಕಾ? ಈ 3 ಅಭ್ಯಾಸ ರೂಢಿಸಿಕೊಳ್ಳಿ ಸಾಕು

ಸೈನಸ್ ನಿಂದ ಬಳಲುತ್ತಿರುವವರಲ್ಲಿ ಕಾಣಿಸುವ ಸಾಮಾನ್ಯವಾದ ಕೆಲವು ರೋಗಲಕ್ಷಣಗಳು:

  •  ಮೂಗು ಕಟ್ಟಿರುವುದರಿಂದ ಮೂಗಿನ ಮೂಲಕ ಉಸಿರಾಡಲು ತೊಂದರೆ ಆಗುವುದು.

  • ಸೈನಸೈಟಿಸ್ ಮೂಗಿನ ಅಡೆತಡೆಗೂ ಕಾರಣವಾಗುತ್ತದೆ.

  • ಕಣ್ಣುಗಳು, ಕೆನ್ನೆಗಳು, ಮೂಗು ಅಥವಾ ಹಣೆಯ ಸುತ್ತಲೂ ನೋವು ಮತ್ತು ಊತವಾಗುವುದು.

  • ಇದು ನಿಮಗೆ ಕೆಮ್ಮು, ತಲೆನೋವು, ಜ್ವರ ಮತ್ತು ಗಂಟಲು ನೋವಿಗೂ ಸಹ ಕಾರಣವಾಗಬಹುದು.


ಸೈನಸ್ ನಿಂದ ಮುಕ್ತಿ ಪಡೆಯಲು ಯೋಗವು ಹೇಗೆ ಸಹಾಯ ಮಾಡುತ್ತದೆ ನೋಡಿ
ಸೈನಸೈಟಿಸ್ ನಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳನ್ನು ಕಡಿಮೆ ಮಾಡುವ ಕೆಲವು ಯೋಗಾಸನಗಳಿವೆ. ಈ ಕೆಳಗಿನ ಭಂಗಿಗಳು ಮೂಗಿನ ಗಾಳಿಯ ಮಾರ್ಗಗಳನ್ನು ತೆರೆಯಲು ಅನುವು ಮಾಡಿಕೊಡುತ್ತವೆ. ಸೈನಸೈಟಿಸ್ ನಿಂದ ಪರಿಹಾರ ಪಡೆಯಲು ಈ ಯೋಗಾಭ್ಯಾಸವನ್ನು ಮಾಡಿ. ಈ ಅನುಕ್ರಮವನ್ನು 3 ಸೆಟ್ ಗಳವರೆಗೆ ಪುನರಾವರ್ತಿಸಿ, ಪ್ರತಿ ಭಂಗಿಯನ್ನು ತಲಾ 30 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ.

ಸೈನಸ್ ಒತ್ತಡವನ್ನು ನಿವಾರಿಸುವ 5 ಯೋಗ ಭಂಗಿಗಳು ಇಲ್ಲಿವೆ:

1. ವಜ್ರಾಸನ
ಮೊದಲಿಗೆ ನೀವು ನಿಮ್ಮ ಚಾಪೆಯ ಮೇಲೆ ನಿಧಾನವಾಗಿ ಮಂಡಿಯೂರಿ ಕುಳಿತುಕೊಳ್ಳಿರಿ. ನಂತರ ನಿಮ್ಮ ಹಿಮ್ಮಡಿಗಳನ್ನು ಒಂದಕ್ಕೊಂದು ಹತ್ತಿರವಾಗಿ ಇರಿಸಿ ಮತ್ತು ನಿಮ್ಮ ಕಾಲ್ಬೆರಳುಗಳನ್ನು ಒಂದರ ಪಕ್ಕ ಒಂದರಂತೆ ಇರಿಸಿ. ನಂತರ ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಮೇಲಕ್ಕೆ ಮುಖ ಮಾಡಿ ನಿಮ್ಮ ಬೆನ್ನನ್ನು ತಿರುಗಿಸಿ ಮತ್ತು ಮುಂದಕ್ಕೆ ನೋಡಿ ಈ ಆಸನವನ್ನು ಸ್ವಲ್ಪ ಸಮಯದವರೆಗೆ ಅದೇ ಭಂಗಿಯಲ್ಲಿ ಹಾಗೆಯೇ ಹಿಡಿದಿಟ್ಟುಕೊಳ್ಳಿ.

2. ಹಾಲಾಸನ
ಮೊದಲು ನೀವು ನಿಮ್ಮ ಬೆನ್ನಿನ ಮೇಲೆ ಮಲಗಿ, ನಿಮ್ಮ ಅಂಗೈಗಳನ್ನು ನಿಮ್ಮ ದೇಹದ ಪಕ್ಕದಲ್ಲಿ ಊರಿ. ನಿಮ್ಮ ಎರಡು ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ, ನಿಮ್ಮ ಅಂಗೈಗಳನ್ನು ನೆಲಕ್ಕೆ ಒತ್ತಿ ಮತ್ತು ನಿಮ್ಮ ಕಾಲುಗಳನ್ನು ನಿಮ್ಮ ತಲೆಯ ಹಿಂದೆ ಇರಿಸಿ, ನಿಮ್ಮ ಅಂಗೈಗಳನ್ನು ಬಳಸಿಕೊಂಡು ಬೆನ್ನನ್ನು ಬೆಂಬಲಿಸಿ. ಈ ಆಸನವನ್ನು ಸ್ವಲ್ಪ ಸಮಯದವರೆಗೆ ಹಾಗೆಯೇ ಹಿಡಿದಿಟ್ಟುಕೊಳ್ಳಿ.

3. ಸರ್ವಾಂಗಾಸನ
ನೀವು ನಿಮ್ಮ ಬೆನ್ನಿನ ಮೇಲೆ ಮಲಗುವ ಮೂಲಕ ಈ ಯೋಗಾಸನವನ್ನು ಪ್ರಾರಂಭಿಸಿ. ನಿಮ್ಮ ತೋಳುಗಳನ್ನು ನಿಮ್ಮ ದೇಹದ ಪಕ್ಕದಲ್ಲಿ ಇರಿಸಿ. ನಿಮ್ಮ ಕಾಲುಗಳನ್ನು ನಿಧಾನವಾಗಿ ನೆಲದಿಂದ ಮೇಲೆತ್ತಿ ಮತ್ತು ನೆಲಕ್ಕೆ ಲಂಬವಾಗಿ ನಿಮ್ಮ ಪಾದಗಳನ್ನು ಆಕಾಶಕ್ಕೆ ಅಭಿಮುಖವಾಗಿ ಇರಿಸಿ. ನಿಧಾನವಾಗಿ ನಿಮ್ಮ ಸೊಂಟವನ್ನು ಮೇಲಕ್ಕೆತ್ತಿ ಮತ್ತು ನೆಲದಿಂದ ಹಿಂದಕ್ಕೆ ಸರಿಯಿರಿ.

ಇದನ್ನೂ ಓದಿ: Acupressure Points For Health: ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಈ ಪ್ರೆಶರ್ ಪಾಯಿಂಟ್​ಗಳಲ್ಲಿದೆ ಪರಿಹಾರ

ನಿಮ್ಮ ಮುಂಗೈಗಳನ್ನು ನೆಲದಿಂದ ಕೆಳಗಿಳಿಸಿ ಮತ್ತು ಬೆಂಬಲಕ್ಕಾಗಿ ನಿಮ್ಮ ಅಂಗೈಗಳನ್ನು ನಿಮ್ಮ ಬೆನ್ನಿನ ಮೇಲೆ ಇರಿಸಿ. ನಿಮ್ಮ ಭುಜಗಳು, ಮುಂಡ, ಸೊಂಟ, ಕಾಲುಗಳು ಮತ್ತು ಪಾದಗಳ ನಡುವೆ ಸರಳ ರೇಖೆಯನ್ನು ಸಾಧಿಸಲು ಪ್ರಯತ್ನಿಸಿ. ನಿಮ್ಮ ಎದೆಯಿಂದ ನಿಮ್ಮ ಗಲ್ಲವನ್ನು ಸ್ಪರ್ಶಿಸಲು ಪ್ರಯತ್ನಿಸಿ ಮತ್ತು ನಿಮ್ಮ ದೃಷ್ಟಿಯನ್ನು ನಿಮ್ಮ ಪಾದಗಳ ಕಡೆಗೆ ಕೇಂದ್ರೀಕರಿಸಿ.

4. ಪಾದಹಸ್ತಾಸನ
ಸಮಸ್ಥಿತಿಯಲ್ಲಿ ನಿಲ್ಲುವ ಮೂಲಕ ಈ ಯೋಗಾಸನವನ್ನು ಪ್ರಾರಂಭಿಸಿ ಮತ್ತು ನಿಮ್ಮ ಮೇಲಿನ ದೇಹವನ್ನು ಸೊಂಟದಿಂದ ಕೆಳಕ್ಕೆ ನಿಧಾನವಾಗಿ ಬಾಗಿಸಿ ಮತ್ತು ನಿಮ್ಮ ಮೂಗನ್ನು ನಿಮ್ಮ ಮೊಣಕಾಲುಗಳಿಗೆ ಸ್ಪರ್ಶಿಸಿ, ನಿಮ್ಮ ಮೊಣಕಾಲುಗಳನ್ನು ಪಾದಗಳ ಎರಡೂ ಬದಿಗಳಲ್ಲಿ ಇರಿಸಿ. ನಂತರ ನೀವು ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಬಗ್ಗಿಸಬಹುದು, ಅಭ್ಯಾಸದಿಂದ, ನಿಧಾನವಾಗಿ ನಿಮ್ಮ ಮೊಣಕಾಲುಗಳನ್ನು ನೇರಗೊಳಿಸಿ ಮತ್ತು ನಿಮ್ಮ ಎದೆಯನ್ನು ನಿಮ್ಮ ತೊಡೆಗಳಿಗೆ ಸ್ಪರ್ಶಿಸಲು ಪ್ರಯತ್ನಿಸಿ.

5. ಶವಾಸನ
ನಿಮ್ಮ ಯೋಗ ಚಾಪೆಯ ಮೇಲೆ ಆರಾಮಾಗಿ ಮಲಗಿ. ಗಟ್ಟಿಯಾದ ಮೇಲ್ಮೈಯಲ್ಲಿ ಮಲಗಲು ನಾವು ಶಿಫಾರಸು ಮಾಡುತ್ತೇವೆ. ಈ ಭಂಗಿಯನ್ನು ಶಾಂತ ವಾತಾವರಣದಲ್ಲಿ ಮಾಡಲು ಪ್ರಯತ್ನಿಸಿ, ಯಾವುದೇ ತೊಂದರೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿ. ನಿಮ್ಮ ಕಾಲುಗಳು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಬಿಡಿ ಮತ್ತು ಅವುಗಳನ್ನು ಆರಾಮವಾಗಿ ದೂರದಲ್ಲಿ ಇರಿಸಿ. ನಿಮ್ಮ ಪಾದಗಳು ಕೆಳಕ್ಕೆ ಜೋತು ಬೀಳಲು ಬಿಡಿ ಮತ್ತು ನಿಮ್ಮ ಕಾಲ್ಬೆರಳುಗಳನ್ನು ಪಕ್ಕಕ್ಕೆ ಮುಖ ಮಾಡಿ ಇರಿಸಿ. ನಿಮ್ಮ ತೋಳುಗಳನ್ನು ನಿಮ್ಮ ದೇಹದ ಪಕ್ಕದಲ್ಲಿ ಮತ್ತು ಸ್ವಲ್ಪ ದೂರದಲ್ಲಿ ಇರಿಸಿ.

ನಿಮ್ಮ ಅಂಗೈಗಳು ಆಕಾಶದತ್ತ ತೆರೆದಿವೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಕಾಲ್ಬೆರಳುಗಳಿಂದ ಪ್ರಾರಂಭಿಸಿ, ನಿಮ್ಮ ಗಮನವನ್ನು ನಿಮ್ಮ ದೇಹದ ಪ್ರತಿಯೊಂದು ಭಾಗದ ಕಡೆಗೆ ತನ್ನಿ. ನಿಮ್ಮ ದೇಹವನ್ನು ಆಳವಾದ ವಿಶ್ರಾಂತಿಯ ಸ್ಥಿತಿಗೆ ತಳ್ಳಲು ಆಳವಾದ ಉಸಿರಾಟವನ್ನು ಬಳಸಿ. ಈ ಪ್ರಕ್ರಿಯೆಯಲ್ಲಿ ನೀವು ನಿದ್ರೆಗೆ ಜಾರದಂತೆ ಎಚ್ಚರ ವಹಿಸುವುದು ತುಂಬಾನೇ ಮುಖ್ಯವಾಗುತ್ತದೆ.

ನೀವು ನಿಮ್ಮ ಉಸಿರಾಟವನ್ನು ನಿಧಾನವಾಗಿ ಮತ್ತು ಆಳವಾಗಿ ತೆಗೆದುಕೊಳ್ಳಿರಿ. ನೀವು ಉಸಿರನ್ನು ಒಳಕ್ಕೆಳೆದುಕೊಳ್ಳುತ್ತಿರುವಾಗ, ನಿಮ್ಮ ಉಸಿರು ನಿಮ್ಮ ದೇಹವನ್ನು ಶಕ್ತಿಯುತಗೊಳಿಸುತ್ತಿದೆ ಮತ್ತು ನೀವು ಉಸಿರನ್ನು ಹೊರಬಿಡುತ್ತಿದ್ದಂತೆ, ನಿಮ್ಮ ದೇಹವು ನಿಧಾನವಾಗಿ ವಿಶ್ರಾಂತಿಗೆ ಶರಣಾಗುತ್ತಿದೆ ಎಂದು ಕಲ್ಪಿಸಿಕೊಳ್ಳಿ.

ಸೈನಸ್ ತುಂಬಾ ತೀವ್ರವಾಗಿದ್ದರೆ, ವೈದ್ಯರ ಸಲಹೆ ಪಡೆದುಕೊಳ್ಳಿರಿ
ಒಂದು ವೇಳೆ ಸೈನಸ್ ಸಮಸ್ಯೆ ತುಂಬಾನೇ ಇದ್ದರೆ, ವೈದ್ಯರು ಸೂಚಿಸಿದಂತೆ ನೋವು ನಿವಾರಕಗಳು ಮತ್ತು ಪ್ರತಿಜೀವಕಗಳನ್ನು ತೆಗೆದುಕೊಳ್ಳಬಹುದು. ಆದರೆ ನೀವು ಯೋಗಾಭ್ಯಾಸವನ್ನು ಪ್ರಾರಂಭಿಸಬಹುದು ಮತ್ತು ಸೈನಸೈಟಿಸ್ ನಿಂದ ಪರಿಹಾರವನ್ನು ಪಡೆಯಬಹುದು.

ಇದನ್ನೂ ಓದಿ:  Face Care: ಹೀಗೆ ಎಣ್ಣೆ ಮಸಾಜ್ ಮಾಡಿದ್ರೆ ನಿಮ್ಮ ಮುಖ ಕಾಂತಿಯುತವಾಗಿರುತ್ತೆ

ಈ ಯೋಗ ಭಂಗಿಗಳನ್ನು ಉಸಿರಾಟ ಮತ್ತು ಜೋಡಣೆಯ ಅರಿವಿನೊಂದಿಗೆ ನಿಧಾನವಾಗಿ ಮಾಡಬೇಕು. ಈ ಯೋಗ ಭಂಗಿಗಳು ನಿಮ್ಮ ದೇಹದಲ್ಲಿರುವ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಎಂಡಾರ್ಫಿನ್ ಗಳನ್ನು ಸಹ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
Published by:Ashwini Prabhu
First published: