Migraine: ಪದೇ ಪದೇ ಕಾಡೋ ಮೈಗ್ರೇನ್​ಗೆ ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ

ಮೈಗ್ರೇನ್‌ ನೋವು ನಿಮ್ಮ ತಲೆಯ ಮುಂಭಾಗದಲ್ಲಿ ನಿಮ್ಮ ತಲೆಯ ಒಂದು ಬದಿಯಿಂದ ಮತ್ತೊಂದು ಭಾಗಕ್ಕೆ ಈ ನೋವು ಸ್ಥಳಾಂತರಗೊಂಡು ನಂತರದ ದಿನಗಳಲ್ಲಿ ನಿಮ್ಮ ಸಂಪೂರ್ಣ ತಲೆ ನೋಯಿಸಲು ಪ್ರಾರಂಭವಾಗಬಹುದು ಎಂದು ಅನೇಕ ಸಂಶೋಧನೆಗಳು ಸೂಚಿಸುತ್ತವೆ. ಹಾಗಿದ್ರೆ ಈ ಮೈಗ್ರೇನ್‌ ನಿಂದ ದೂರವುಳಿಯುವುದು ಹೇಗೆ? ಎಂಬುದರ ಬಗ್ಗೆ ಮುಂದೆ ತಿಳಿಯೋಣ ಬನ್ನಿ.

ಮೈಗ್ರೇನ್‌

ಮೈಗ್ರೇನ್‌

  • Share this:
ತಲೆನೋವಿನ (Head Ache) ಮತ್ತೊಂದು ತೀವ್ರ ನೋವಿನ ರೂಪವಾದ ಮೈಗ್ರೇನ್ (Migraine) ಇಂದು ಹತ್ತರಲ್ಲಿ ಒಬ್ಬರನ್ನಾದರೂ ವಿಪರೀತವಾಗಿ ಕಾಡುತ್ತಿದೆ. ಈ ಅರೆತಲೆ ನೋವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ತರಹ ಆಗಿರಬಹುದು. ಆದರೆ ಬಹುತೇಕವಾಗಿ ಈ ನೋವು ತಲೆಯ ಒಂದು ಭಾಗದಲ್ಲಿ ಸೂಜಿ ಚುಚ್ಚಿದಂತಹ ನೋವು (Pain) ಯಾವಾಗಲೂ ಬಾಧಿಸುತ್ತಿರುತ್ತದೆ. ಈ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ಈ ನೋವಿನ ಬಾಧೆ ಎಷ್ಟು ಎಂದು ಗೊತ್ತೆ ಇರುತ್ತದೆ. ಈ ಮೈಗ್ರೆನ್‌ ನೋವನ್ನು ಆಯುರ್ವೇದದ ಚಿಕಿತ್ಸೆಯ (Ayurvedic treatment) ಮೂಲಕ ಹೇಗೆ ನಿವಾರಿಸಬಹುದು ಎಂಬುದನ್ನು ನಾವಿಂದು ಈ ಲೇಖನದಲ್ಲಿ ನೋಡೋಣ.

ಮೈಗ್ರೇನ್ ನೋವಿನ ಕೆಲವು ಲಕ್ಷಣಗಳು 
ಈ ಮೈಗ್ರೇನ್‌ ನೋವು ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಬೆಳಕಿನ ವೀಪರೀತ ಕಿರಣಗಳು ದೇಹಕ್ಕೆ ಸೋಕಿದಾಗ ಕಾಣಿಸಿಕೊಳ್ಳುತ್ತದೆ. ಕೆಲವು ಜನರಿಗೆ, ಈ ಅರೆ ತಲೆನೋವು ಕೆಲವು ಗಂಟೆಗಳು ಅಥವಾ ಹಲವಾರು ದಿನಗಳವರೆಗೆ ವಿಪರೀತವಾಗಿ ಕಾಡುತ್ತದೆ. ಮೈಗ್ರೇನ್ ಅನ್ನು ಸಾಮಾನ್ಯ ಭಾಷೆಯಲ್ಲಿ ಮಂದ ನೋವು ಎಂದು ಕರೆಯುತ್ತಾರೆ. ಇದು ಮುಂದೆ ಹೆಚ್ಚಾಗಿ ಕಾಡುವ ಸಂಭವ ಹೆಚ್ಚಿರುತ್ತದೆ.

ದೈಹಿಕ ಚಟುವಟಿಕೆಯನ್ನು ಕುಂಠಿತಗೊಳಿಸುವ ಸಾಮರ್ಥ್ಯವನ್ನು ಈ ಮೈಗ್ರೇನ್‌ ಹೊಂದಿದೆ. ಈ ಮೈಗ್ರೇನ್‌ ನೋವು ನಿಮ್ಮ ತಲೆಯ ಮುಂಭಾಗದಲ್ಲಿ ನಿಮ್ಮ ತಲೆಯ ಒಂದು ಬದಿಯಿಂದ ಮತ್ತೊಂದು ಭಾಗಕ್ಕೆ ಈ ನೋವು ಸ್ಥಳಾಂತರಗೊಂಡು ನಂತರದ ದಿನಗಳಲ್ಲಿ ನಿಮ್ಮ ಸಂಪೂರ್ಣ ತಲೆ ನೋಯಿಸಲು ಪ್ರಾರಂಭವಾಗಬಹುದು ಎಂದು ಅನೇಕ ಸಂಶೋಧನೆಗಳು ಸೂಚಿಸುತ್ತವೆ. ಹಾಗಿದ್ರೆ ಈ ಮೈಗ್ರೇನ್‌ ನಿಂದ ದೂರವುಳಿಯುವುದು ಹೇಗೆ? ಎಂಬುದರ ಬಗ್ಗೆ ಮುಂದೆ ತಿಳಿಯೋಣ ಬನ್ನಿ.

ಮೈಗ್ರೇನ್‌ ಗೆ ಆರಂಭಿಕ ದಿನಗಳಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ
ಯಾವುದೇ ತಲೆನೋವಿನಂತೆ ಮೈಗ್ರೇನ್ ಸಹಾ ಪ್ರಾರಂಭದಲ್ಲಿ ನಿಧಾನವಾಗಿದ್ದು ಕ್ರಮೇಣ ಏರುತ್ತಾ ತೀವ್ರಸ್ವರೂಪ ಪಡೆಯುತ್ತದೆ. ತೀವ್ರರೂಪ ಪಡೆದ ಬಳಿಕ ಸುಮ್ಮನೇ ಮಲಗದೇ ವಿಧಿಯೇ ಇಲ್ಲ. ಆದ್ದರಿಂದ ಯಾವುದೇ ಚಿಕಿತ್ಸೆ ಮಾಡುವುದಾದರೂ ಪ್ರಾರಂಭದಲ್ಲಿಯೇ ಮಾಡಿದರೆ ಮಾತ್ರ ಫಲಕಾರಿ. ಆದ್ದರಿಂದ ಈ ನೋವು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯುವುದು ಬಹಳಷ್ಟು ಉತ್ತಮ.

ಈ ತಲೆನೋವನ್ನು ಆಯುರ್ವೇದದಲ್ಲಿ ಸೂರ್ಯವರ್ತ ಎಂದು ಕರೆಯಲಾಗಿದೆ. ಸಂಸ್ಕೃತದಲ್ಲಿ ಆವರ್ತ ಎಂದರೆ ಮರೆಮಾಚು ಎಂದರ್ಥ. ಬಹುತೇಕ ಈ ನೋವು ಹಗಲಿನಲ್ಲಿ, ಅದರಲ್ಲೂ ಸೂರ್ಯನ ಆವೃತ್ತಕ್ಕನುಗುಣವಾಗಿಯೇ ಇರುವ ಕಾರಣ ಈ ಹೆಸರನ್ನಿಡಲಾಗಿದೆ. ಎಲ್ಲಾ ಮೈಗ್ರೇನ್ ತಲೆನೋವುಗಳು ಒಂದು ನಿಗದಿತ ಸಮಯಕ್ಕೇ ಬರುವುದಿಲ್ಲವಾದರೂ ಸಾಮಾನ್ಯವಾಗಿ ಬೆಳಿಗ್ಗೆ ಕಡಿಮೆ, ಮಧ್ಯಾಹ್ನ ಹೆಚ್ಚು ನೋವು ಸಂಜೆ ಮತ್ತೆ ನೋವು ಕಡಿಮೆ ಇರುತ್ತದೆ.

ಇದನ್ನೂ ಓದಿ: Teeth Health: ದಿನಕ್ಕೆ 3 ಹೊತ್ತು ಹಲ್ಲುಜ್ಜದಿದ್ರೆ ಯಾವ ಕಾಯಿಲೆಗಳು ಬರುತ್ತೆ!?

ಇದರ ಬಗ್ಗೆ ಆಯುರ್ವೇದ ತಜ್ಞ ಡಾ. ದಿಕ್ಸಾ ಭಾವಸರ್ ಅವರು ಆಯುರ್ವೇದ ವಿಧಾನಗಳಿಂದ ಮೈಗ್ರೇನ್ ಅನ್ನು ಹೇಗೆ ನಿರ್ವಹಿಸಬಹುದು ಎಂಬುದರ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಮಾಡಿದ್ದಾರೆ. ಅದಕ್ಕೆ “ಮೈಗ್ರೇನ್ ರೋಗಲಕ್ಷಣಗಳಿಗೆ ಮಾತ್ರೆಗಳನ್ನು ಸೇವಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಅಡುಗೆಮನೆಯಲ್ಲಿ ಇರುವ ಪದಾರ್ಥಗಳಿಂದ ನಿಮ್ಮ ಮೈಗ್ರೇನ್‌ ಅನ್ನು ಓಡಿಸಿ” ಎಂಬ ಶಿರ್ಷಿಕೆ ನೀಡಿದ್ದಾರೆ. ಅದರ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ.

ಮೈಗ್ರೇನ್ ನೋವನ್ನು ನಿವಾರಿಸಲು ಡಾ. ಭಾವಸರ್ ಅವರು ಹೇಳಿರುವ ಆರ್ಯುವೇದದ ಕೆಲವು ಸಲಹೆಗಳಿವೆ ಇಲ್ಲಿವೆ:
ನೆನೆಸಿದ ಒಣದ್ರಾಕ್ಷಿಗಳನ್ನು ತಿನ್ನಿರಿ: ಮೈಗ್ರೇನ್ ನೋವನ್ನು ನಿವಾರಿಸಲು 10 ರಿಂದ 15 ಒಣದ್ರಾಕ್ಷಿಗಳನ್ನು ರಾತ್ರಿಯಲ್ಲಿ ನೆನೆಸಿಡಲು ತಜ್ಞರು ಸಲಹೆ ನೀಡುತ್ತಾರೆ. ಈ ನೆನೆಸಿದ ಒಣದ್ರಾಕ್ಷಿಗಳನ್ನು 12 ವಾರಗಳ ಕಾಲ ಸತತವಾಗಿ ಸೇವಿಸಿದರೆ ಒಣದ್ರಾಕ್ಷಿಗಳು ದೇಹದಲ್ಲಿನ ಹೆಚ್ಚುವರಿ ಪಿತ್ತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಇದು ಆಮ್ಲೀಯತೆ, ವಾಕರಿಕೆ, ಕಿರಿಕಿರಿ, ಒಂದೇ ಕಡೆಯ ತಲೆನೋವು, ಮುಂತಾದ ಮೈಗ್ರೇನ್‌ಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಸಹ ನಿಯಂತ್ರಿಸುತ್ತದೆ.

ಜೀರಿಗೆ-ಏಲಕ್ಕಿ ಚಹಾವನ್ನು ಕುಡಿಯಿರಿ: ಮೈಗ್ರೇನ್ ಲಕ್ಷಣಗಳು ಕಾಣಿಸಿಕೊಂಡಾಗ ಈ ರೋಗ ನಿರೋಧಕ-ಸಮೃದ್ಧ ಚಹಾವನ್ನು ಕುಡಿಯುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಮಧ್ಯಾಹ್ನ ಅಥವಾ ರಾತ್ರಿಯ ಊಟದ ನಂತರ ಒಂದು ಗಂಟೆಯ ನಂತರ ಈ ಚಹಾವನ್ನು ನಿಯಮಿತವಾಗಿ ದಿನಾಲು ಕುಡಿಯಲು ಪ್ರಯತ್ನಿಸಿ ಆಗ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ:  Bay Leaves Side Effects: ಈ ಸಮಸ್ಯೆ ಇದ್ರೆ ಮಿಸ್​ ಆಗಿಯೂ ಬಿರಿಯಾನಿ ಎಲೆಯನ್ನು ತಿನ್ಬೇಡಿ

ಹಸುವಿನ ತುಪ್ಪವನ್ನು ಸೇವಿಸಿ: ಆಯುರ್ವೇದದ ಪ್ರಕಾರ, "ದೇಹ ಮತ್ತು ಮನಸ್ಸಿನಲ್ಲಿ ಹೆಚ್ಚುವರಿ ಪಿತ್ತವನ್ನು ಸಮತೋಲನಗೊಳಿಸುವಲ್ಲಿ ಹಸುವಿನ ತುಪ್ಪಕ್ಕಿಂತ ಉತ್ತಮವಾಗಿ ಬೇರೆ ಯಾವ ಪದಾರ್ಥವೂ ಇಲ್ಲ. ಆಹಾರ ತಯಾರಿಕೆಯ ವಿವಿಧ ವಿಧಾನಗಳಲ್ಲಿ ತುಪ್ಪವನ್ನು ಊಟದಲ್ಲಿ ಸೇರಿಸಲು ತಜ್ಞರು ಸಲಹೆ ನೀಡುತ್ತಾರೆ.
Published by:Ashwini Prabhu
First published: