High Uric Acid: ಊರಿಯೂತದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಅದಕ್ಕೆ ಇಲ್ಲಿದೆ ಆರ್ಯುರ್ವೇದ ತಜ್ಞರ ಕೆಲವು ಸಲಹೆಗಳು

ದೇಹದಲ್ಲಿ ಹೆಚ್ಚಿನ ಯೂರಿಕ್ ಆಮ್ಲವು ಹೆಚ್ಚಾದಾಗ ಅಥವಾ ಹೆಚ್ಚು ಉತ್ಪಾದಿಸಿದಾಗ ಈ ಊರಿಯೂತದ ಸಮಸ್ಯೆ ಉಂಟಾಗುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಈ ಸಮಸ್ಯೆಯನ್ನು ಇಲ್ಲವಾಗಿಸಬಹುದು ಮತ್ತು ನೈಸರ್ಗಿಕವಾಗಿ ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಡಾ ಡಿಕ್ಸಾ ಭಾವಸರ್ ಹೇಳುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಇಂದಿನ ಜೀವನಶೈಲಿಯ (Lifestyle) ಪ್ರಭಾವವು ಎಲ್ಲರನ್ನು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತೆ ಮಾಡುತ್ತಿದೆ. ಅದರಲ್ಲಿ ಹೆಚ್ಚಿನವರು ಈ ಊರಿಯೂತ ಅಥವಾ ಹೈಪರ್ಯುರಿಸೆಮಿಯಾ ಎಂಬ ಆರೋಗ್ಯ ಸಮಸ್ಯೆಯು (Health Problem) ಪ್ರಪಂಚದಾದ್ಯಂತದ ಜನರನ್ನು ಹಿಂದೆಂದಿಗಿಂತಲೂ ಹೆಚ್ಚು ಕಾಡುತ್ತಿದೆ ಎಂದರೆಸುಳ್ಳಲ್ಲ. ಹಾಗೆಯೇ ಇದು ಹಲವಾರು ದೀರ್ಘಕಾಲದ ಆರೋಗ್ಯ (Health) ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಇದಕ್ಕೆ ಮುಖ್ಯವಾಗಿ ಕಾರಣ ಜಡ ಜೀವನಶೈಲಿ, ಕಳಪೆ ಆಹಾರ ಪದ್ಧತಿ, ಕಡಿಮೆ ನೀರಿನ ಸೇವನೆ, ಕ್ಯಾಲೋರಿ-ಹೆಚ್ಚಿರುವ ಊಟ ಇವೆಲ್ಲವೂ ಹೆಚ್ಚುವರಿ ಯೂರಿಕ್ ಆಮ್ಲ (Uric acid) ದೇಹದಲ್ಲಿ ಹೆಚ್ಚಾಗಿ ಊರಿಯೂತ ಸಮಸ್ಯೆಗೆ ಕಾರಣವಾಗುವ ಅಂಶಗಳಾಗಿವೆ.

ದೇಹದಲ್ಲಿನ ತ್ಯಾಜ್ಯ ಉತ್ಪನ್ನವಾಗಿರುವ ಯೂರಿಕ್ ಆಮ್ಲವು ಮೂಳೆಗಳು ಮತ್ತು ಕೀಲುಗಳಲ್ಲಿ ಸಂಗ್ರಹವಾಗಿ ಅನೇಕ ರೋಗಗಳನ್ನು ತರಬಹುದು. ಅದರಲ್ಲಿ ಇದು ಹೃದಯ ಮತ್ತು ಮೂತ್ರಪಿಂಡದ ತೊಂದರೆಗಳನ್ನು ಹೊರತುಪಡಿಸಿ ಸಂಧಿವಾತಕ್ಕೆ ದಾರಿ ಮಾಡಿಕೊಡುತ್ತದೆ. ದೇಹದಲ್ಲಿ ಹೆಚ್ಚಿನ ಯೂರಿಕ್ ಆಮ್ಲವು ಹೆಚ್ಚಾದಾಗ ಅಥವಾ ಹೆಚ್ಚು ಉತ್ಪಾದಿಸಿದಾಗ ಈ ಊರಿಯೂತದ ಸಮಸ್ಯೆ ಉಂಟಾಗುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಈ ಸಮಸ್ಯೆಯನ್ನು ಇಲ್ಲವಾಗಿಸಬಹುದು ಮತ್ತು ನೈಸರ್ಗಿಕವಾಗಿ ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಡಾ ಡಿಕ್ಸಾ ಭಾವಸರ್ ಹೇಳುತ್ತಾರೆ.

ಹೆಚ್ಚಿನ ಯೂರಿಕ್ ಆಮ್ಲಕ್ಕೆ ಕಾರಣಗಳು:

 • ಚಯಾಪಚಯ ಕ್ರಿಯೆ ಕಡಿಮೆ ಇರುವುದು-ಕರುಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು

 • ಜಡ ಜೀವನಶೈಲಿ ಅಥವಾ ದೈಹಿಕ ಚಟುವಟಿಕೆಯ ಕೊರತೆ

 • ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಸೇವನೆ

 • ಕೊಬ್ಬಿನಾಂಶ ಹೆಚ್ಚಿರುವ ಆಹಾರ ಸೇವನೆ

 • ಆಹಾರ ಸೇವಿಸುವ ಮತ್ತು ನಿದ್ದೆಗೆ ಜಾರುವ ಸಮಯದಲ್ಲಿ ಕ್ರಮಬದ್ದತೆ ಇಲ್ಲದಿರುವುದು

 • ನೀರಿನ ಸೇವನೆ ಕಡಿಮೆ ಇರುವುದು.

 • ಮೂತ್ರಪಿಂಡವು ಸರಿಯಾಗಿ ಕಾರ್ಯನಿವರ್ಹಿಸದೆ ಇರುವುದು.(ವಿಶೇಷವಾಗಿ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ)


ಇದನ್ನೂ ಓದಿ:  Healthy Ageing Tips: ಈ ಆಹಾರಗಳನ್ನು ತಿಂದರೆ ವಯೋಸಹಜ ಕಾಯಿಲೆಗಳನ್ನು ನಿಯಂತ್ರಿಸಬಹುದಂತೆ ನೋಡಿ

ಈ ಊರಿಯೂತ ಸಮಸ್ಯೆಯನ್ನು ನೈಸರ್ಗಿಕವಾಗಿ ತಡೆಗಟ್ಟುವ ಕ್ರಮಗಳು:

 • ದಿನನಿತ್ಯವು 45 ನಿಮಷಗಳ ಕಾಲ ವ್ಯಾಯಾಮ ಮಾಡುವುದು.

 • ಸಾಕಷ್ಟು ನೀರು ಕುಡಿಯುವುದು.

 • ಈ ನಿಮ್ಮ ಊರಿಯೂತ ಸಮಸ್ಯೆ ಸುಧಾರಿಸುವವರೆಗೆ ಊಟದಲ್ಲಿ ಬಿನ್ಸ್ ಮತ್ತು ಗೋಧಿ ಆಹಾರವನ್ನು ಸೇವಿಸಬೇಡಿ.

 • ರಾತ್ರಿ 8 ಗಂಟೆಯೊಳಗಾಗಿ ಬೇಗನೆ ಮತ್ತು ಲಘು ಆಹಾರ ಸೇವನೆಯನ್ನು ಮಾಡಿ.

 • ಹುಳಿ ಅಂಶ ಹೆಚ್ಚಿರುವ ನೆಲ್ಲಿಕಾಯಿ, ನೇರಳೆ ಹಣ್ಣುಗಳು ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸಿ.

 • ನಿಮ್ಮ ಚಯಾಪಚಯ ಸುಧಾರಿಸಲು ಹೆಚ್ಚು ಓಡಾಡಿ.

 • ನಿಮ್ಮ ಒತ್ತಡವನ್ನು ನಿರ್ವಹಿಸಿ, ಒತ್ತಡ ಹೆಚ್ಚಾದರೆ ನಿಮ್ಮ‌ ಜೀರ್ಣಕ್ರಿಯೆ ಮೇಲೆ ಇದು ನೇರವಾದ ಪ್ರಭಾವ ಬೀರುತ್ತದೆ.

 • ಪ್ರತಿ ರಾತ್ರಿ ಉತ್ತಮ ನಿದ್ದೆ ಮಾಡಿ. ಉತ್ತಮ ನಿದ್ದೆಯು ನಿಮ್ಮ ಜೀರ್ಣಕ್ರಿಯೆ ಮತ್ತು ದೇಹದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.


ಅಧಿಕ ಯೂರಿಕ್ ಆಮ್ಲದ ಚಿಕಿತ್ಸೆಗಾಗಿರುವ ಆಯುರ್ವೇದ ಮೂಲಿಕೆ ಯಾವುದು?
ಇಂಗ್ಲಿಷನಲ್ಲಿ ಗಿಲೋಯ್ ಎಂದೂ ಕರೆಯಲ್ಪಡುವ ಅಮೃತ ಬಳ್ಳಿಗೆ ಈ ಊರಿಯೂತದ ಸಮಸ್ಯೆಗೆ ರಾಮಭಾಣ ಎಂದು ಹೇಳಬಹುದು. ಇದು ಈ ಸಮಸ್ಯೆಗೆ ಅದ್ಭುತ ಮತ್ತು ಅತ್ಯುತ್ತಮ ಆಯುರ್ವೇದ ಮೂಲಿಕೆ ಎಂದು ಡಾ ಭಾವಸರ್ ಹೇಳುತ್ತಾರೆ.

ಅಮೃತ ಬಳ್ಳಿಯನ್ನು ಹೇಗೆ ಬಳಸಬೇಕು?

 • ನೀವು ಮನೆಯಲ್ಲಿ ಈ ಮೂಲಿಕೆಯ ಸಸ್ಯವನ್ನು ಹೊಂದಿದ್ದರೆ, ಸುಲಭವಾಗಿ ಬಳಸಬಹುದು. ಅದು ಹೇಗೆಂದರೆ ಅದರ ತಾಜಾ ಎಲೆಗಳು ಮತ್ತು ಸ್ವಲ್ಪ ಕಾಂಡವನ್ನು ತೆಗೆದುಕೊಂಡು ರಾತ್ರಿಯಿಡೀ ನೆನೆಸಿ. ಮರುದಿನ ಮುಂಜಾನೆ ಅದನ್ನು ಚೆನ್ನಾಗಿ ಜಜ್ಜಿ, ನಂತರ ನೀರಿನಲ್ಲಿ ಹಾಕಿ ಕುದಿಸಿ, ಸೋಸಿ ಕುಡಿಯಿರಿ.

 • ನೀವು ಇದನ್ನು ಜ್ಯೂಸ್‌, ಪುಡಿ ಅಥವಾ ಮಾತ್ರೆಗಳಂತಹ ಇತರ ರೂಪಗಳಲ್ಲಿಯೂ ಬಳಸಬಹುದು. ಈ ಊರಿಯೂತಕ್ಕೆ ಇತರ ಆಯುರ್ವೇದ ಔಷಧಿಗಳಿದ್ದರೂ ನಿಮಗೆ ನೀವೆ ವೈದ್ಯರಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ತಪ್ಪಿಸಬೇಕು ಮತ್ತು ತಜ್ಞರನ್ನು ಸಂಪರ್ಕಿಸಬೇಕು ಎಂದು ಆಯುರ್ವೇದ ತಜ್ಞರು ಡಾ ಭಾವಸರ್ ಹೇಳುತ್ತಾರೆ.


ಇದನ್ನೂ ಓದಿ:  Acupressure Points: ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದೀರಾ? ಹಾಗಿದ್ರೆ ಅಕ್ಯುಪ್ರೆಶರ್ ಪಾಯಿಂಟ್ ಗಳ ಬಗ್ಗೆ ತಿಳಿಯಿರಿ

ಈ ಊರಿಯೂತ ಅಂತಹ ದೊಡ್ಡ ಸಮಸ್ಯೆ ಏನಲ್ಲ. ಹೆದರಿಕೊಳ್ಳದೇ ನಿಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾಯಿಸಿಕೊಂಡರೆ ಈ ಸಮಸ್ಯೆಯಿಂದ ಶಾಶ್ವತ ಪರಿಹಾರ ನೀವು ಕಂಡುಕೊಳ್ಳಬಹುದು.
Published by:Ashwini Prabhu
First published: