• Home
 • »
 • News
 • »
 • lifestyle
 • »
 • Health Care: ದೇಹದಲ್ಲಿ ಉಂಟಾಗುವ ಆಯಾಸ ಈ ಗಂಭೀರ ಕಾಯಿಲೆಯ ಮುನ್ಸೂಚನೆ ಆಗಿರಬಹುದು! ಎಚ್ಚರವಿರಲಿ

Health Care: ದೇಹದಲ್ಲಿ ಉಂಟಾಗುವ ಆಯಾಸ ಈ ಗಂಭೀರ ಕಾಯಿಲೆಯ ಮುನ್ಸೂಚನೆ ಆಗಿರಬಹುದು! ಎಚ್ಚರವಿರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೆನ್ನಾಗಿ ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಮಾಡುವುದು. ರಾತ್ರಿ ಉತತಮವಾಗಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಮುಖ್ಯ. ಅದರ ಜೊತೆಗೆ ಮೂಲ ಮತ್ತು ಮುಖ್ಯ ಅಂಶವೆಂದರೆ ಸಮತೋಲಿತ ಆಹಾರ ಸೇವನೆ ಮಾಡುವುದು. ಜೊತೆಗೆ ದೈಹಿಕ ನಿಯಮಿತ ಚಟುವಟಿಕೆಗಳು ಸದೃಢ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮುಂದೆ ಓದಿ ...
 • Share this:

  ದೈಹಿಕ ಮತ್ತು ಮಾನಸಿಕ ಆರೋಗ್ಯ (Physical And Mental Health) ಕಾಪಾಡಲು ವ್ಯಕ್ತಿ ಏನೆಲ್ಲಾ ಪ್ರಯತ್ನ ಮಾಡಬೇಕಾಗುತ್ತದೆ. ಅದರಲ್ಲೂ 40ರ ಹರೆಯದ ನಂತರ ಶರೀರ ಕುಗ್ಗಲು ಶುರುವಾಗುತ್ತದೆ. ಹಾಗಾಗಿ ಸಾಕಷ್ಟು ಎಚ್ಚರಿಕೆಯಿಂದ ಜೀವನಶೈಲಿ (Lifestyle) ರೂಪಿಸಿಕೊಳ್ಳಬೇಕಾಗುತ್ತದೆ. ದೇಹಕ್ಕೆ ಶಕ್ತಿ (Energy) ಮತ್ತು ಜೀರ್ಣಕ್ರಿಯೆ ಚೆನ್ನಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ದೇಹದ ಶಕ್ತಿ ಕಾಪಾಡಲು ಏನು ಮಾಡಬೇಕು? ಚೆನ್ನಾಗಿ ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಮಾಡುವುದು. ರಾತ್ರಿ ಉತತಮವಾಗಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಮುಖ್ಯ. ಅದರ ಜೊತೆಗೆ ಮೂಲ ಮತ್ತು ಮುಖ್ಯ ಅಂಶವೆಂದರೆ ಸಮತೋಲಿತ ಆಹಾರ ಸೇವನೆ ಮಾಡುವುದು.


  ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬೇಕಾದ ಅಂಶಗಳು


  ಜೊತೆಗೆ ದೈಹಿಕ ನಿಯಮಿತ ಚಟುವಟಿಕೆಗಳು ಸದೃಢ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ನೀವು ದಿನವೂ ನಿಯಮಿತವಾಗಿ ಇದೆಲ್ಲವನ್ನೂ ಫಾಲೋ ಮಾಡುತ್ತಿದ್ದೀರಾ ಎಂಬುದನ್ನು ನೋಡಿಕೊಳ್ಳಿ.


  ಯಾಕೆಂದರೆ ಇವುಗಳಲ್ಲಿ ಉಂಟಾಗುವ ತಪ್ಪುಗಳು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಒಂದು ವೇಳೆ ಸದೃಢ ಆರೋಗ್ಯಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಫಾಲೋ ಮಾಡಿದ ನಂತರವೂ ನಿಮಗೆ ಕೆಲವೊಮ್ಮೆ ದೈಹಿಕ ಮತ್ತು ಮಾನಸಿಕ ತೊಂದರೆಗಳು ಕಾಡಬಹುದು.


  ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


  ನೀವು ಸೇವಿಸುವ ಕೆಲವು ಔಷಧಿ ಮತ್ತು ಕೆಲಸದ ಒತ್ತಡ ನಿಮ್ಮಲ್ಲಿ ಆಯಾಸ, ದಣಿವು ಉಂಟು ಮಾಡಬಹುದು. ಅತಿಯಾದ ದಣಿವಿನ ಕಾರಣವು ಕೆಲವೊಮ್ಮೆ ನಿಮ್ಮ ದೇಹದಲ್ಲಿ ಬೆಳೆಯುತ್ತಿರುವ ರೋಗಗಳ ಆರಂಭಿಕ ಲಕ್ಷಣಗಳಿಗೆ ಕಾರಣವಾಗಿರುತ್ತದೆ.


  ಆಯಾಸ ಗಂಭೀರ ಕಾಯಿಲೆಯ ಮುನ್ಸೂಚನೆ


  ನೀವು ಸಮತೋಲಿತ ಜೀವನಶೈಲಿ ಫಾಲೋ ಮಾಡಿದ್ರೂ ನೀವು ದಿನವಿಡೀ ದಣಿದ ಭಾವನೆ ಅನುಭವಿಸಿದರೆ ನೆಚ್ಚಿನ ಕೆಲಸವನ್ನು ಮಾಡಲು ಮನಸ್ಸಾಗದಿದ್ರೆ ಈ ಸಮಯದಲ್ಲಿ ನಿಮ್ಮ ಆಹಾರ ಕ್ರಮವನ್ನು ಬದಲಾಯಿಸುವ ಬದಲು ನೀವು ತಕ್ಷಣ ವೈದ್ಯರ ಸಂಪರ್ಕಿಸಿ.


  ನಿಮಗೆ ಆಯಾಸ ಉಂಟು ಮಾಡುವ ಕೆಲವು ಗಂಭೀರ ಕಾಯಿಲೆಯ ಮುನ್ಸೂಚನೆ ನೀಡುವ ಸಮಸ್ಯೆಗಳ ಬಗ್ಗೆ ಹೇಳಲಾಗಿದ್ದು, ಅವುಗಳ ಬಗ್ಗೆ ತಿಳಿಯೋಣ.


  ಅಧಿಕ ರಕ್ತದ ಸಕ್ಕರೆ ಅಥವಾ ಮಧುಮೇಹ


  ಎನ್ ಸಿಬಿಐ ಪ್ರಕಾರ, ಆಯಾಸವು ಮಧುಮೇಹದ ಸಾಮಾನ್ಯ ಲಕ್ಷಣ ಆಗಿದೆ. ನಿಮ್ಮ ದೇಹದಲ್ಲಿ ನಿರಂತರ ಸುಸ್ತು ಕಾಡುತ್ತಿದ್ದರೆ ನೀವು ತಕ್ಷಣ ನಿಮ್ಮ ದೇಹದ ಸಕ್ಕರೆ ಪರೀಕ್ಷೆ ಮಾಡಿಸಿ. ಮಧುಮೇಹವು ದೀರ್ಘಕಾಲದ ಕಾಯಿಲೆ ಆಗಿದೆ. ಇದು ಕಳಪೆ ಜೀವನಶೈಲಿ ಅಭ್ಯಾಸ ಮತ್ತು ಆನುವಂಶಿಕ ಅಂಶಗಳಿಂದ ಉಂಟಾಗುತ್ತದೆ.


  ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ ರಕ್ತಹೀನತೆ


  Webmd ಪ್ರಕಾರ, ಕಬ್ಬಿಣವು ಕೆಂಪು ರಕ್ತ ಕಣಗಳಲ್ಲಿ ಕಂಡು ಬರುವ ಒಂದು ರೀತಿಯ ಪ್ರೋಟೀನ್ ಆಗಿದೆ. ಅದು ಶ್ವಾಸಕೋಶದಿಂದ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಸಾಗಿಸುತ್ತದೆ. ಕಬ್ಬಿಣದ ಕೊರತೆಯು ರಕ್ತಹೀನತೆಯ ಸಾಮಾನ್ಯ ವಿಧ. ತಮ್ಮ ದೇಹದಲ್ಲಿ ಸಾಕಷ್ಟು ಕಬ್ಬಿಣದ ಕೊರತೆಯಿದ್ದರೆ ದಣಿವು, ನಿಂತಿರುವಾಗ ತಲೆ ತಿರುಗುವಿಕೆ, ಮೆದುಳಿನ ಮಂಜು, ಅನಿಯಮಿತ ಹೃದಯ ಬಡಿತ ಉಂಟಾಗುವ ಸಾಧ್ಯತೆ ಹೆಚ್ಚು.


  ಥೈರಾಯ್ಡ್ ಸಮಸ್ಯೆ


  ಥೈರಾಯ್ಡ್ ಗ್ರಂಥಿಯು ನಿಮ್ಮ ಕುತ್ತಿಗೆಯಲ್ಲಿರುವ ಚಿಟ್ಟೆ ಆಕಾರದ ಸಣ್ಣ ಗ್ರಂಥಿ. ಶಕ್ತಿಯನ್ನು ಹೇಗೆ ಬಳಸುತ್ತೀರಿ ಎಂಬುದನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನ್ ಅನ್ನು ಇದು ಉತ್ಪತ್ತಿ ಮಾಡುತ್ತದೆ.


  ಥೈರಾಯ್ಡ್ ಕ್ಷೀಣಿಸುತ್ತಿರುವ ಸಮತೋಲನವು ನಿಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಥೈರಾಯ್ಡ್ ಗ್ರಂಥಿಯ ಕೊರತೆ ರೋಗಿ ಹೆಚ್ಚು ಆಯಾಸ ಅನುಭವಿಸುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಅವರ ಜೀವಕೋಶಗಳು ಸರಿಯಾಗಿ ಕೆಲಸ ಮಾಡುತ್ತಿರುವುದಿಲ್ಲ.


  ಖಿನ್ನತೆ ಸಮಸ್ಯೆ


  ಖಿನ್ನತೆ ದಣಿವು ಉಂಟು ಮಾಡುತ್ತದೆ. ಮೆದುಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಬೇಕಾದ ರಾಸಾಯನಿಕ ಪಡೆಯದಿದ್ದಾಗ ಹೀಗಾಗುತ್ತದೆ. ಸಿರೊಟೋನಿನ್ ಅಂಶ ಆಂತರಿಕ ದೇಹದ ಗಡಿಯಾರ ನಿಯಂತ್ರಿಸುತ್ತದೆ. ಖಿನ್ನತೆಯು ನಿಮ್ಮ ಶಕ್ತಿಯ ಮಟ್ಟವನ್ನು ಕಡಿಮೆ ಮತ್ತು ನಿದ್ರಾಹೀನತೆ ಉಂಟು ಮಾಡುತ್ತದೆ.


  ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


  ಹೃದಯರೋಗ ಸಮಸ್ಯೆ


  ತೀವ್ರ ಆಯಾಸ ರಕ್ತ ಕಟ್ಟಿ ಹೃದಯ ಸ್ಥಂಭನದ ಸಾಮಾನ್ಯ ಲಕ್ಷಣ. ಹೃದಯವು ರಕ್ತವನ್ನು ಪಂಪ್ ಮಾಡದಿದ್ದಾಗ ಸಂಭವಿಸುತ್ತದೆ. ತೋಳು, ಕಾಲುಗಳಲ್ಲಿ ಊತ ಮತ್ತು ಉಸಿರಾಟದ ತೊಂದರೆ ಹೆಚ್ಚಿಸುತ್ತದೆ.

  Published by:renukadariyannavar
  First published: