• Home
  • »
  • News
  • »
  • lifestyle
  • »
  • Healthy Breakfast: ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಉಪಾಹಾರ ಸೇವಿಸಿ

Healthy Breakfast: ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಉಪಾಹಾರ ಸೇವಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಕ್ಕರೆ ಕಾಯಿಲೆ ನಮ್ಮ ಆಹಾರ ಪದ್ದತಿಯ ಜೊತೆಗೆ ನಮ್ಮ ಇಡೀ ಜೀವನಶೈಲಿಯನ್ನು ಬದಲಾಯಿಸಿ ಬಿಡುತ್ತದೆ. ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಬೆಳಿಗ್ಗೆ ಯಾವ ಉಪಾಹಾರವನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ಅನೇಕ ರೀತಿಯ ಗೊಂದಲಗಳಿರುತ್ತವೆ. ಇಲ್ಲಿವೆ ನೋಡಿ 7 ಆರೋಗ್ಯಕರವಾದ ಉಪಾಹಾರದ ಆಯ್ಕೆಗಳು.

ಮುಂದೆ ಓದಿ ...
  • Share this:

ಈಗಂತೂ ಜನರಲ್ಲಿ ಸಕ್ಕರೆ ಕಾಯಿಲೆ (Diabetes) ಮತ್ತು ಅಧಿಕ ರಕ್ತದೊತ್ತಡ (High Blood Pressure) ಎಂದರೆ ಬಿಪಿ ತುಂಬಾನೇ ಸಾಮಾನ್ಯವಾದ ಕಾಯಿಲೆಗಳಂತಾಗಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಒಮ್ಮೆ ಈ ಸಕ್ಕರೆ ಕಾಯಿಲೆ ಅನ್ನೋ ಕಾಯಿಲೆ ನಮ್ಮನ್ನು ಅವರಿಸಿಕೊಂಡಿತೆಂದರೆ, ನಾವು ಸೇವಿಸುವ ಆಹಾರಗಳಲ್ಲಿ (Food) ಕೆಲವೊಂದನ್ನು ನಾವು ಪೂರ್ತಿಯಾಗಿ ಬಿಡಬೇಕಾಗಿ ಬರಬಹುದು. ಈ ಕಾಯಿಲೆ ನಮ್ಮ ಆಹಾರ ಪದ್ದತಿಯ ಜೊತೆಗೆ ನಮ್ಮ ಇಡೀ ಜೀವನಶೈಲಿಯನ್ನು ಬದಲಾಯಿಸಿ ಬಿಡುತ್ತದೆ. ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಬೆಳಿಗ್ಗೆ ಯಾವ ಉಪಾಹಾರವನ್ನು (Breakfast) ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ಅನೇಕ ರೀತಿಯ ಗೊಂದಲಗಳಿರುತ್ತವೆ. ಇಲ್ಲಿವೆ ನೋಡಿ 7 ಆರೋಗ್ಯಕರವಾದ ಉಪಾಹಾರದ ಆಯ್ಕೆಗಳು.


ಸಕ್ಕರೆ ಕಾಯಿಲೆ ಇದ್ದರೆ ಈ ಉಪಾಹಾರಗಳು ಬೆಸ್ಟ್
ಸಕ್ಕರೆಯನ್ನು ಮಾತ್ರವಲ್ಲದೆ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವ ಆಹಾರ ಮತ್ತು ಸೇವನೆಯ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗುವ ಆಹಾರಗಳಿಂದಾನೂ ಸಹ ದೂರವಿರುವುದು ಒಳ್ಳೆಯದು.


ದಿನವನ್ನು ಆರೋಗ್ಯಕರವಾದ ರೀತಿಯಲ್ಲಿ ಶುರು ಮಾಡುವುದು ತುಂಬಾನೇ ಅಗತ್ಯವಿದೆ ಮತ್ತು ಆದ್ದರಿಂದ, ಉಪಾಹಾರದ ಆಯ್ಕೆಯು ಬಹಳ ಮುಖ್ಯವಾಗುತ್ತದೆ. ಮಧುಮೇಹಿಗಳಿಗಾಗಿ 7 ಆರೋಗ್ಯಕರ ಭಾರತೀಯ ಉಪಾಹಾರ ಆಯ್ಕೆಗಳು ಇಲ್ಲಿವೆ ನೋಡಿ.


1. ಬೇಸನ್ ಚಿಲ್ಲಾ: ಕಡಲೆ ಹಿಟ್ಟು ಮತ್ತು ತಾಜಾ ತರಕಾರಿಗಳಿಂದ ತಯಾರಿಸಲಾಗುವ ಬೇಸನ್ ಚಿಲ್ಲಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉತ್ತಮ ಉಪಾಹಾರ ಆಯ್ಕೆಯಾಗಿದೆ. ಇದನ್ನು ಇನ್ನಷ್ಟು ಆರೋಗ್ಯಕರವಾಗಿ ಮಾಡಿಕೊಳ್ಳಲು ಸಾಧ್ಯವಾದಷ್ಟು ಕಡಿಮೆ ಎಣ್ಣೆಯನ್ನು ಬಳಸಿ. ಅಲ್ಲದೆ, ಇದರಲ್ಲಿ ಬಳಸುವ ಉಪ್ಪಿನ ಪ್ರಮಾಣವನ್ನು ಮಿತಿಗೊಳಿಸಿ.


ಇದನ್ನೂ ಓದಿ:  Orange Effect: ಕಿತ್ತಳೆ ಹಣ್ಣು ಇಷ್ಟ ಅಂತ ಅತಿಯಾಗಿ ತಿನ್ಬೇಡಿ, ಇದಕ್ಕೂ ಒಂದು ಲಿಮಿಟ್​ ಇದೆ


2. ಮೊಟ್ಟೆಗಳು: ಮೊಟ್ಟೆಗಳು ಪ್ರೋಟೀನ್ ನಿಂದ ಸಮೃದ್ಧವಾಗಿವೆ, ಅದು ಆಮ್ಲೆಟ್ ರೂಪದಲ್ಲಿ ಆಗಿರಲಿ, ಅಥವಾ ಕುದಿಸಿರಲಿ ಎರಡೂ ಆರೋಗ್ಯಕ್ಕೆ ಒಳ್ಳೆಯದು. ಪ್ರೋಟೀನ್ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರರ್ಥ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದೀರ್ಘಕಾಲದವರೆಗೆ ಸ್ಥಿರವಾಗಿಡಲು ಸಹಾಯ ಮಾಡುತ್ತದೆ.


ನೀವು ಅಣಬೆಗಳು, ತರಕಾರಿಗಳು ಇತ್ಯಾದಿಗಳನ್ನು ಬಳಸಿಕೊಂಡು ಆರೋಗ್ಯಕರ ಆಮ್ಲೆಟ್ ಗಳನ್ನು ತಯಾರಿಸಬಹುದು. ನೀವು ಅದನ್ನು ಮೊಟ್ಟೆಯ ಸ್ಯಾಂಡ್ವಿಚ್ ರೂಪದಲ್ಲಿಯೂ ಸಹ ಮಾಡಿಕೊಂಡು ಸೇವಿಸಬಹುದು, ಬಹು-ಧಾನ್ಯದ ಬ್ರೆಡ್ ಅನ್ನು ಬಳಸುವುದನ್ನು ಮಾತ್ರ ಮರೆಯಬೇಡಿ.


3. ಮೆಂತ್ಯೆ ಪರಾಠಾ: ತಾಜಾ ಮೆಂತ್ಯೆ ಎಲೆಗಳು ಅಥವಾ ಕಸ್ತೂರಿ ಮೆಂತ್ಯೆದಿಂದ ತಯಾರಿಸಲಾದ ಮೆಂತ್ಯೆ ಪರಾಠಾಗಳು ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು, ಏಕೆಂದರೆ ಅವು ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತವೆ. ಬಳಸುವ ಹಿಟ್ಟು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರಬೇಕು ಮತ್ತು ಮಧುಮೇಹ ಸ್ನೇಹಿಯಾಗಿರಬೇಕು ಅನ್ನೋದನ್ನ ನೀವು ನೋಡಿಕೊಳ್ಳಬೇಕು.


4. ಹಣ್ಣುಗಳು ಅಥವಾ ಕಾಟೇಜ್ ಚೀಸ್ ಪರಾಠಾ: ಪ್ರೋಟೀನ್, ಕಾಟೇಜ್ ಚೀಸ್ ನ ಪವರ್ ಹೌಸ್ ಅಂತ ಹೇಳಬಹುದು. ರಕ್ತದಲ್ಲಿ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿರುವವರಿಗೆ ಈ ಚೀಸ್ ಉತ್ತಮವಾದ ಆಯ್ಕೆಯಾಗಿದೆ ಎಂದು ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಹೇಳುತ್ತದೆ.


ಕಡಿಮೆ ಕೊಬ್ಬಿನ ಕಾಟೇಜ್ ಚೀಸ್ ಹೊಂದಿರುವ ಮತ್ತು ಕಡಿಮೆ ಎಣ್ಣೆಯಿಂದ ಮಾಡಿದ ಬಹುಧಾನ್ಯ ಪರಾಟಾ ಮಧುಮೇಹಿಗಳಿಗೆ ಸೂಕ್ತವಾದ ಭಾರತೀಯ ಉಪಾಹಾರವಾಗಿದೆ. ನೀವು ಪರಾಠಾಗಳನ್ನು ಸೇವಿಸಲು ಬಯಸದಿದ್ದರೆ, ಹಣ್ಣುಗಳೊಂದಿಗೆ ಅಥವಾ ಕಡಿಮೆ ಕೊಬ್ಬಿನ ಕಾಟೇಜ್ ಚೀಸ್ ನೊಂದಿಗೆ ಸೇವಿಸಬಹುದು.


5. ಮೊಳಕೆ ಕಾಳುಗಳು: ಆರೋಗ್ಯಕರ ಮತ್ತು ರುಚಿಕರವಾಗಿರುವ ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು. ಇದು ಮಧುಮೇಹಿಗಳಿಗೆ ಸೂಕ್ತವಾದ ಉಪಾಹಾರದ ಆಯ್ಕೆಯಾಗಿದೆ. ನಿಮ್ಮ ಮೊಳಕೆ ಕಾಳುಗಳ ಬಟ್ಟಲಿಗೆ, ಕತ್ತರಿಸಿದ ಸೌತೆಕಾಯಿ, ಈರುಳ್ಳಿ, ಬೆಲ್ ಪೆಪ್ಪರ್ ಮತ್ತು ಟೊಮೆಟೊಗಳನ್ನು ಸಹ ಸೇರಿಸಿಕೊಳ್ಳಿರಿ ಮತ್ತು ಅದಕ್ಕೆ ನಿಂಬೆಹಣ್ಣಿನ ರಸವನ್ನು ಚಿಮುಕಿಸಿ ಮತ್ತು ಅದರ ಮೇಲೆ ಉಪ್ಪು ಮತ್ತು ಮೆಣಸನ್ನು ಸಹ ಸೇರಿಸಿಕೊಳ್ಳಿರಿ.


ಇದನ್ನೂ ಓದಿ:  Vitamin Deficiency: ಜೀವಸತ್ವ ಕೊರತೆಯಿಂದ ಉಂಟಾಗುವ ಕಾಯಿಲೆಗಳಿವು


6. ಓಟ್ಸ್ ಆಮ್ಲೆಟ್: ಓಟ್ಸ್ ಆಮ್ಲೆಟ್ ಮಧುಮೇಹಿಗಳಿಗೆ ಉತ್ತಮ ಉಪಾಹಾರದ ಆಯ್ಕೆಯಾಗಿದೆ. ಓಟ್ಸ್ ಆಮ್ಲೆಟ್ ತಯಾರಿಸಲು ಮೊಟ್ಟೆಗಳಿಗೆ ಸಾದಾ ಓಟ್ಸ್ ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಿರಿ ಮತ್ತು ಆರೋಗ್ಯಕರವಾದ ಮತ್ತು ಹೊಟ್ಟೆ ತುಂಬುವಂತಹ ಉಪಾಹಾರವನ್ನು ಆನಂದಿಸಿ.


7. ಆವಕಾಡೊ ಟೋಸ್ಟ್: ನಾರಿನಂಶ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿಂದ ತುಂಬಿರುವ ಆವಕಾಡೊಗಳು, ತಿಂದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮಲ್ಟಿಗ್ರೇನ್ ಆವಕಾಡೊ ಟೋಸ್ಟ್ ಮಧುಮೇಹಿಗಳಿಗೆ ಸರಳ ಮತ್ತು ಆರೋಗ್ಯಕರ ಉಪಾಹಾರದ ಆಯ್ಕೆಯಾಗಿದೆ.

Published by:Ashwini Prabhu
First published: