Dandruff: ತಲೆಹೊಟ್ಟು ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ತಪ್ಪದೇ ಈ ಎಣ್ಣೆ ಬಳಸಿ

ಕೂದಲಿನ ಉತ್ಪನ್ನಗಳ ಅತಿಯಾದ ಬಳಕೆಯು ತಲೆಹೊಟ್ಟುಗೆ ಕಾರಣವಾಗುತ್ತದೆ. ಈ ತಲೆಹೊಟ್ಟು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲವಾದರೂ ಇಂದು ಇದು ಅನೇಕರು ಎದುರಿಸುತ್ತಿರುವ ಸಾಮಾನ್ಯ ಸ್ಥಿತಿಯಾಗಿದೆ. ನೀವು ಈ ರೀತಿಯ ಕೂದಲ ಸಮಸ್ಯೆ ಎದುರಿಸುತ್ತಿದ್ದರೆ, ಕೂದಲ ಎಲ್ಲ ಸಮಸ್ಯೆಗಳಿಗೂ ಪರಿಹಾರ ಆಗಿರುವ ಈ ಆಲಿವ್ ಎಣ್ಣೆಯನ್ನು ಬಳಸಿ. ಆಗ ನೋಡಿ ಫಲಿತಾಂಶ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರತಿನಿತ್ಯ ಕೂದಲಿಗೆ ಎಣ್ಣೆ (Oil) ಹಚ್ಚುವುದು ಕೂದಲ ರಕ್ಷಣೆಗೆ ಇರುವ ಮುಖ್ಯ ದಿನಚರಿ ಆಗಿದೆ. ಏಕೆಂದರೆ ಎಣ್ಣೆಯು ಕೂದಲನ್ನು ಬಲಪಡಿಸುತ್ತದೆ ಮತ್ತು ಸೂರ್ಯನ ಶಾಖ ಅಥವಾ ಬೇರೆ ಯಾವುದೇ ಹಾನಿಯಿಂದ ಕೂದಲನ್ನು ರಕ್ಷಿಸುತ್ತದೆ. ಇಂದು ಮಾರುಕಟ್ಟೆಯಲ್ಲಿ (Market) ಅನೇಕ ಇಂದು ಅನೇಕ ಬಗೆಯ ಕೂದಲ ಎಣ್ಣೆಗಳು ಲಭ್ಯವಿದ್ದರೂ, ಆಲಿವ್ ಎಣ್ಣೆಯು ಕೂದಲ ರಕ್ಷಣೆಗೆ (Hair Care) ಮೊದಲ ಸ್ಥಾನವನ್ನು ಪಡೆದಿದೆ. ಆಲಿವ್‌ ಎಣ್ಣೆಯು ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಈ ಎಣ್ಣೆಯಲ್ಲಿ ರೋಗ ನಿರೋಧಕ ಶಕ್ತಿಗೆ ಬೇಕಾಗುವ ಅಂಶಗಳು ಇರುವುದರಿಂದ ಇದು ಮಾನವ ದೇಹದ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕೂದಲ ಬುಡಕ್ಕೂ ಶಕ್ತಿಯನ್ನು ನೀಡುತ್ತದೆ.

ತಲೆಯಲ್ಲಿ ಹೊಟ್ಟಾಗುವುದು ಹೇಗೆ 
ಇದಲ್ಲದೇ, ಈ ಎಣ್ಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ನೆತ್ತಿಯ ಶುಷ್ಕತೆ, ಯೀಸ್ಟ್‌ ಬೆಳವಣಿಗೆ, ಕಳಪೆ ಉತ್ಪನ್ಗಳನ್ನು ಬಳಸುವುದರಿಂದ ಮತ್ತು ಕೂದಲ ಆರೈಕೆಗೆ ಸಮಯ ಕೊಡದೇ ಇರುವುದು ಮತ್ತು ಜಡವಾದ ಜೀವನಶೈಲಿಯಿಂದ ಕೂದಲಿನಲ್ಲಿ ತಲೆಹೊಟ್ಟು ಕಾಣಿಸಲು ಆರಂಭವಾಗುತ್ತದೆ.

ಕೂದಲಿನ ಉತ್ಪನ್ನಗಳ ಅತಿಯಾದ ಬಳಕೆಯು ತಲೆಹೊಟ್ಟುಗೆ ಕಾರಣವಾಗುತ್ತದೆ. ಈ ತಲೆಹೊಟ್ಟು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲವಾದರೂ ಇಂದು ಇದು ಅನೇಕರು ಎದುರಿಸುತ್ತಿರುವ ಸಾಮಾನ್ಯ ಸ್ಥಿತಿಯಾಗಿದೆ. ನೀವು ಈ ರೀತಿಯ ಕೂದಲ ಸಮಸ್ಯೆ ಎದುರಿಸುತ್ತಿದ್ದರೆ, ಕೂದಲ ಎಲ್ಲ ಸಮಸ್ಯೆಗಳಿಗೂ ಪರಿಹಾರ ಆಗಿರುವ ಈ ಆಲಿವ್ ಎಣ್ಣೆಯನ್ನು ಬಳಸಿ. ಆಗ ನೋಡಿ ಫಲಿತಾಂಶ.

ಇದನ್ನೂ ಓದಿ:  Avocado Oil Benefits: ಕೂದಲ ಆರೈಕೆಗೆ ಅವಕಾಡೊ ಎಣ್ಣೆ! ಇನ್ನೂ ಹಲವು ಪ್ರಯೋಜನ

ಕೂದಲ ಆರೈಕೆಗೆ ಆಲಿವ್‌ ಎಣ್ಣೆಯು ಹೇಗೆ ಪ್ರಯೋಜನಕಾರಿಯಾಗಿದೆ?

  • ಆಲಿವ್ ಎಣ್ಣೆಯು ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.

  • ಇದು ತಲೆಹೊಟ್ಟು ಕಡಿಮೆ ಮಾಡುತ್ತದೆ.

  • ರೋಗ ನಿರೋಧಕ ಶಕ್ತಿಗೆ ಬೇಕಾಗುವ ಪೋಷಕಾಂಶಗಳು ಸಮೃದ್ಧವಾಗಿರುವ ಆಲಿವ್ ಎಣ್ಣೆಯು ಕೂದಲಿಗೆ ಉತ್ತಮ ಕ್ಲೆನ್ಸರ್ ಆಗಿದೆ.

  • ಇದು ನೆತ್ತಿಯನ್ನು ಬಲಪಡಿಸುತ್ತದೆ ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

  • ಆಲಿವ್ ಎಣ್ಣೆಯು ಕೂದಲ ತುದಿಗಳನ್ನು ಸೀಳುವ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.

  • ಆಲಿವ್ ಎಣ್ಣೆಯಲ್ಲಿ ಅಪರ್ಯಾಪ್ತ ಕೊಬ್ಬಿನ ಅಂಶವು ಕೂದಲನ್ನು ಪೋಷಿಸುತ್ತದೆ.

  • ಇದನ್ನು ಕಂಡೀಷನರ್ ಆಗಿಯೂ ಬಳಸಬಹುದು.

  • ಆಲಿವ್ ಎಣ್ಣೆಯ ನಿಯಮಿತ ಬಳಕೆಯು ಕೂದಲಿನ ಇತರ ಸಮಸ್ಯೆಗಳನ್ನು ರಕ್ಷಿಸುತ್ತದೆ.


ತಲೆಹೊಟ್ಟಿಗೆ ಆಲಿವ್‌ ಎಣ್ಣೆಯ ಚಿಕಿತ್ಸೆ ಹೀಗಿದೆ:

  • ವಾರದಲ್ಲಿ ಒಂದು ಅಥವಾ ಎರಡು ಬಾರಿ ತಲೆಗೆ ಆಲಿವ್ ಎಣ್ಣೆ ಮತ್ತು ಮೊಟ್ಟೆಯ ಹೇರ್‌ ಮಾಸ್ಕ್‌ ಹಾಕಿಕೊಳ್ಳಿ.

  • ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿ ತಲೆಗೆ ಹಚ್ಚಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ.

  • ಆಲಿವ್ ಎಣ್ಣೆಯನ್ನು ಬೆರೆಸಿದ ನಿಂಬೆ ಹೇರ್‌ ಮಾಸ್ಕ್‌ ತಲೆಹೊಟ್ಟನ್ನು ಹೋಗಲಾಡಿಸುತ್ತದೆ.

  • ಟೀ ಟ್ರೀ ಆಯಿಲ್ ಮತ್ತು ಆಲಿವ್ ಎಣ್ಣೆಯು ಕೂದಲಿನ ಬೆಳವಣಿಗೆಗೆ ಅಪಾರವಾದ ಸಹಾಯ ಮಾಡುತ್ತದೆ ಮತ್ತು ತಲೆಹೊಟ್ಟನ್ನು ದೂರವಿಡುತ್ತದೆ.

  • ತಲೆಹೊಟ್ಟಿನ ಸಮಸ್ಯೆಗೆ ಪರಿಹಾರವಾಗಿ ಅರಿಶಿನದೊಂದಿಗೆ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಹೇರ್‌ ಮಾಸ್ಕ್‌ ಹಾಕಿ ಕೊಳ್ಳುವುದು ಇನ್ನೊಂದು ಉತ್ತಮ ಮಾರ್ಗವಾಗಿದೆ.

  • ಆಲಿವ್ ಎಣ್ಣೆಯ ಹೊರತಾಗಿ, ಉತ್ತಮ ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಇತರ ಎಣ್ಣೆಗಳೆಂದರೆ ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಜೊಜೊಬಾ ಎಣ್ಣೆ ಮತ್ತು ಅರ್ಗಾನ್ ಎಣ್ಣೆಗಳನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ತಲೆಹೊಟ್ಟು ಸಮಸ್ಯೆಯನ್ನು ಪರಿಹರಿಸಬಹುದು.

  • ಆಲಿವ್‌ ಎಣ್ಣೆಯಿಂದ ದಿನಾಲು ಮಲಗುವ ಮೊದಲು ಕೂದಲಿಗೆ ಚೆನ್ನಾಗಿ ಮಸಾಜ್‌ ಮಾಡಬೇಕು.


ಇದನ್ನೂ ಓದಿ:  Cold Water Bath: ತಣ್ಣೀರಿನ ಸ್ನಾನವು ಹೃದಯಾಘಾತಕ್ಕೆ ಹೇಗೆ ಕಾರಣವಾಗುತ್ತದೆ?

ಅಂತಿಮವಾಗಿ ಕೂದಲ ಆರೈಕೆ ನಮ್ಮ ದಿನನಿತ್ಯದ ಕಾಯಕಗಳಲ್ಲಿ ಒಂದಾಗಬೇಕು. ಯಾವಾಗಲೋ ಒಮ್ಮೆ ಕೂದಲಿಗೆ ಎಣ್ಣೆ ಹಚ್ಚಿ ಅಯ್ಯೋ ನನ್ನ ಕೂದಲು ಬೆಳೆಯುತ್ತಿಲ್ಲ, ತಲೆಹೊಟ್ಟು ಸಮಸ್ಯೆ ಎಂದು ಗೊಣಗುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಆದ್ದರಿಂದ ದಿನನಿತ್ಯ ಸ್ವಲ್ಪ ಸಮಯ ನಿಮ್ಮ ದೇಹ ಮತ್ತು ಕೂದಲ ಆರೈಕೆ ಕಡೆ ಗಮನ ಕೊಡುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ಇಲ್ಲವಾಗುತ್ತವೆ.
Published by:Ashwini Prabhu
First published: