• Home
  • »
  • News
  • »
  • lifestyle
  • »
  • COVID Cough: ಕೋವಿಡ್ ಕೆಮ್ಮಿನಿಂದ ಬಳಲುತ್ತಿದ್ದೀರಾ? ಕಡಿಮೆ ಮಾಡಲು ಈ ರೀತಿಯ ಔಷಧಿ ಟ್ರೈ ಮಾಡಿ

COVID Cough: ಕೋವಿಡ್ ಕೆಮ್ಮಿನಿಂದ ಬಳಲುತ್ತಿದ್ದೀರಾ? ಕಡಿಮೆ ಮಾಡಲು ಈ ರೀತಿಯ ಔಷಧಿ ಟ್ರೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನೆಗಡಿ, ಕಣ್ಣುಗಳು ಕೆಂಪಾಗುವುದು, ರುಚಿ ಮತ್ತು ವಾಸನೆಯ ಗ್ರಹಿಕೆ ನಷ್ಟವಾಗುವ ರೋಗಲಕ್ಷಣಗಳು ಸಾಂಕ್ರಾಮಿಕ ರೋಗದ ಆರಂಭದಲ್ಲಿ ಅನಾರೋಗ್ಯದ ಸ್ಪಷ್ಟ ಸೂಚನೆಗಳಾಗಿದ್ದವು. ಆದರೆ ಹೆಚ್ಚಿನ ರೋಗಿಗಳಲ್ಲಿ ಈಗ ಈ ಲಕ್ಷಣಗಳು ಕಂಡು ಬರುವುದಿಲ್ಲ, ಆದರೆ ಕೋವಿಡ್ ಕೆಮ್ಮು ಇನ್ನೂ ಒಂದು ಪ್ರಮುಖ ಲಕ್ಷಣವಾಗಿ ಉಳಿದಿದೆ ನೋಡಿ.

ಮುಂದೆ ಓದಿ ...
  • Share this:

ಮೊದಲೆಲ್ಲಾ ಕೆಮ್ಮು (Cough) ಅಂತ ಹೇಳಿದರೆ ತುಂಬಾನೇ ಸಾಮಾನ್ಯವಾದ ಅಸ್ವಸ್ಥತೆ ಪರಿಗಣಿಸುತ್ತಿದ್ದರು. ಆದರೆ ಈ ಕೋವಿಡ್-19 ಸಾಂಕ್ರಾಮಿಕ ರೋಗ ಶುರುವಾದ ನಂತರ ಈ ಕೆಮ್ಮು ಮತ್ತು ನೆಗಡಿಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಕೋವಿಡ್-19 (COVID-19) ರೋಗದ ಮುಖ್ಯವಾದ ಲಕ್ಷಣಗಳಾದ ಕೆಮ್ಮು ಮತ್ತು ನೆಗಡಿ (Cough and Cold). ಇದು ಪ್ರಮುಖವಾದ ರೋಗಲಕ್ಷಣಗಳಾಗಿದ್ದವು. ಅದಕ್ಕೆ ಜನರು ಈ ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಯಾರಾದರೂ ಸ್ವಲ್ಪ ಕೆಮ್ಮಿದರೆ ಅಥವಾ ಸೀನಿದರೆ (Sneeze) ಸಾಕು ಭಯದಿಂದ ಅವರ ಕಡೆಗೆ ನೋಡುವಂತಹ ಪರಿಸ್ಥಿತಿ ಉಂಟಾಗಿತ್ತು.


ಎರಡೂವರೆ ವರ್ಷಗಳ ನಂತರ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಕಡಿಮೆ ಆದರೂ ಸಹ ಅಕ್ಕಪಕ್ಕದಲ್ಲಿ ಯಾರಾದರೂ ಸ್ವಲ್ಪ ಜಾಸ್ತಿ ಕೆಮ್ಮಿದರೆ, ಅವರಿಗೆ ಮೊದಲು ಕೋವಿಡ್-19 ರೋಗ ಬಂದು ಹೋಗಿತ್ತೇ ಅಥವಾ ಕೆಮ್ಮು ಇನ್ನೂ ಹಾಗೆಯೇ ಇದೆಯೇ ಅಂತೆಲ್ಲಾ ಪ್ರಶ್ನೆ ಕೇಳಲು ಶುರು ಮಾಡುತ್ತೇವೆ.


ಏನಿದು ಕೋವಿಡ್ ಕೆಮ್ಮು?
ಕೆಮ್ಮು, ಗಂಟಲು ಕೆರೆತ ಮತ್ತು ಮೂಗು ಸೋರುವುದು ಇವೆಲ್ಲವೂ ಕೋವಿಡ್-19 ಸಾಂಕ್ರಾಮಿಕ ರೋಗದ ರೋಗಲಕ್ಷಣಗಳಾಗಿದ್ದವು. ಅದರಲ್ಲೂ ನೆಗಡಿ, ಕಣ್ಣುಗಳು ಕೆಂಪಾಗುವುದು, ರುಚಿ ಮತ್ತು ವಾಸನೆಯ ಗ್ರಹಿಕೆ ನಷ್ಟವಾಗುವ ರೋಗಲಕ್ಷಣಗಳು ಸಾಂಕ್ರಾಮಿಕ ರೋಗದ ಆರಂಭದಲ್ಲಿ ಅನಾರೋಗ್ಯದ ಸ್ಪಷ್ಟ ಸೂಚನೆಗಳಾಗಿದ್ದವು. ಆದರೆ ಹೆಚ್ಚಿನ ರೋಗಿಗಳಲ್ಲಿ ಈಗ ಈ ಲಕ್ಷಣಗಳು ಕಂಡು ಬರುವುದಿಲ್ಲ, ಆದರೆ ಕೋವಿಡ್ ಕೆಮ್ಮು ಇನ್ನೂ ಒಂದು ಪ್ರಮುಖ ಲಕ್ಷಣವಾಗಿ ಉಳಿದಿದೆ ನೋಡಿ.


ನಿಮಗೆ ಕೋವಿಡ್ ಕೆಮ್ಮು ಇದೆಯೇ?
ಮೊದಲೇ ಇದ್ದ ಕೆಮ್ಮು ನಂತರ ಹೆಚ್ಚಾಗುವುದು ಅಥವಾ ಹೊಸದಾದ ಕೆಮ್ಮಿನ ಆರಂಭವು ಕೋವಿಡ್ ಕೆಮ್ಮಿನ ಲಕ್ಷಣವಾಗಿದೆ. ಹೆಚ್ಚಿನ ಕೋವಿಡ್ ಕೆಮ್ಮುಗಳು ದೀರ್ಘಕಾಲಿಕವಾಗಿರುತ್ತವೆ. ಇದರ ಒಣ ಕೆಮ್ಮು ಕೋವಿಡ್ ಕೆಮ್ಮಿನ ಲಕ್ಷಣವಾಗಿದೆ. ಅನೇಕ ಆರೋಗ್ಯ ಸಂಸ್ಥೆಗಳು ಕೆಮ್ಮನ್ನು ಕೋವಿಡ್ ರೋಗಲಕ್ಷಣವೆಂದು ಪಟ್ಟಿ ಮಾಡಿದ್ದರೂ, ಕೋವಿಡ್ ಸೋಂಕಿಗೆ ಒಳಗಾದ ಅನೇಕ ಜನರು ಒಣ ಕೆಮ್ಮನ್ನು ಹೊಂದಿದ್ದಾರೆ ಎಂದು ವರದಿ ಮಾಡಿದ್ದಾರೆ, ಅದು ಪ್ರಾಥಮಿಕವಾಗಿ ಕಫ ಮುಕ್ತವಾಗಿರುತ್ತದೆ.


ಇದನ್ನೂ ಓದಿ: Child Care: ಮಕ್ಕಳನ್ನು ಕಾಡುವ ಶೀತ, ಕೆಮ್ಮಿಗೆ ಈ 2 ವಸ್ತುಗಳಿದ್ರೆ ಸಾಕು ಪರಿಹಾರ ಸಿಗುತ್ತೆ


ಒಣ ಕೆಮ್ಮು ದೇಹದಲ್ಲಿ ದೀರ್ಘಕಾಲದವರೆಗೆ ಇದ್ದಾಗ ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯ ಗಂಟಲು, ಧ್ವನಿ ಮತ್ತು ಆಳವಾದ ಉಸಿರಾಟದ ಸಾಮರ್ಥ್ಯದ ಮೇಲೆ ಅದು ತುಂಬಾನೇ ಪರಿಣಾಮ ಬೀರುತ್ತದೆ. ಅನೇಕ ಜನರಿಗೆ, ದೀರ್ಘಕಾಲದ, ಒಣ ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದೆ. ಆಗಾಗ್ಗೆ ಕೆಮ್ಮು ಅಥವಾ ತೀವ್ರವಾದ ಕೆಮ್ಮಿನ ಕುಣಿಕೆಗಳು ಸಹ ನಿಮ್ಮನ್ನು ಆಯಾಸಗೊಳಿಸಬಹುದು.


ನಿಮಗೆ ಕೋವಿಡ್ ಕೆಮ್ಮು ಇದ್ದರೆ ಏನು ಮಾಡಬೇಕು?
ನಿಮಗೆ ಕೋವಿಡ್ ಕೆಮ್ಮು ಇದ್ದಾಗ, ಮನೆಯೊಳಗೆ ಇರುವುದು ಉತ್ತಮ. ನೀವು ಗಾಳಿಯಲ್ಲಿ ಹೋಗಿ ಕೆಮ್ಮಿದಾಗ ಆ ಗಾಳಿಯಲ್ಲಿ ಆ ಸೋಂಕು ಇನ್ನೊಬ್ಬರಿಗೆ ಹರಡಬಹುದು. ಇತರ ಜನರು ಈ ಗಾಳಿಯಲ್ಲಿ ಉಸಿರಾಡಿದಾಗ ಮತ್ತು ನಿಮ್ಮ ಬಾಯಿಂದ ಅವರ ಬಾಯಿಗೆ ಸೋಂಕು ಹೋದಾಗ ಅದು ಅವರನ್ನು ಅನಾರೋಗ್ಯಕ್ಕೆ ದೂಡಬಹುದು.


ಇದನ್ನೂ ಓದಿ:  Back Pain: ಭುಜ ಮತ್ತು ಬೆನ್ನು ನೋವಿಗೆ ಕರಿಬೇವಿನ ಎಲೆಗಳು ಹೇಗೆ ಪರಿಹಾರ ನೀಡುತ್ತದೆ?


ಚಳಿಗಾಲವು ಸಮೀಪಿಸುತ್ತಿರುವುದರಿಂದ, ನಿಮಗೆ ಅನಾರೋಗ್ಯ ಅಂತ ಅನ್ನಿಸಲು ಶುರುವಾದರೆ ನಿಮಗೆ ಕೋವಿಡ್ -19 ಇದೆ ಎಂದು ಭಾವಿಸುವುದು ಮತ್ತು ಪರೀಕ್ಷೆ ಮತ್ತು ಸಾಮಾಜಿಕ ಪ್ರತ್ಯೇಕತೆ ಸೇರಿದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬುದ್ಧಿವಂತಿಕೆಯಾಗಿದೆ. ಕೋವಿಡ್ ಕೆಮ್ಮಿಗೆ ಚಿಕಿತ್ಸೆ ನೀಡಲು ಸರಿಯಾದ ಔಷಧಿಗಳನ್ನು ಬಳಸಬೇಕು. ಉಸಿರಾಟದ ಪರಿಸ್ಥಿತಿಗಳನ್ನು ಗುಣಪಡಿಸಲು ತಿಳಿದಿರುವ ಆಯುರ್ವೇದ ಗಿಡಮೂಲಿಕೆಗಳನ್ನು ಸೇವಿಸುವುದು ಮತ್ತೊಂದು ನೈಸರ್ಗಿಕ ಚಿಕಿತ್ಸೆಯ ಆಯ್ಕೆಯಾಗಿದೆ. ಯಾವುದೇ ಸಂದರ್ಭದಲ್ಲಿ, ಯಾವುದೇ ಗಿಡಮೂಲಿಕೆ ಔಷಧಿಗಳನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

Published by:Ashwini Prabhu
First published: