Cough: ಕೊರೋನಾ ಚೇತರಿಕೆಯ ನಂತರವೂ ಕೆಮ್ಮು ಹಾಗೆ ಇರುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಕೋವಿಡ್-19 ಸೋಂಕಿಗೆ ಗುರಿಯಾದ ನಂತರ ಅದರಿಂದ ಚೇತರಿಸಿಕೊಂಡರೂ ಸಹ ಅವರಿಗೆ ಕೆಮ್ಮು ಹಾಗೆಯೇ ದೀರ್ಘಕಾಲದವರೆಗೆ ಕಾಡುತ್ತಿರುವುದನ್ನು ನಾವು ನೋಡಿರುತ್ತೇವೆ. ಇದಷ್ಟೇ ಅಲ್ಲದೆ ಕೆಲವರಿಗೆ ವಿಪರೀತ ಆಯಾಸವಾಗುವುದು, ಏನೂ ಕೆಲಸ ಮಾಡದೆ ದಣಿವಾಗುವುದು, ಉಸಿರಾಟದ ತೊಂದರೆಯಾಗುವುದು ಹೀಗೆ ಒಂದೇ, ಎರಡೇ ಅನೇಕ ರೋಗ ಲಕ್ಷಣಗಳು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ನಂತರವೂ ಸಹ ಹಾಗೆಯೇ ಮುಂದುವರೆಯುತ್ತಿರುತ್ತದೆ ಎಂದು ಹೇಳಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಎರಡು ವರ್ಷಗಳಲ್ಲಿ ಎಂದರೆ ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ ಹಾವಳಿಯ ಸಮಯದಲ್ಲಿ ಬಹುತೇಕರು ಈ ಕೋವಿಡ್-19 ಸೋಂಕಿನಿಂದ ಬಳಲಿರುವುದನ್ನು ನಾವು ನೋಡಿದ್ದೇವೆ. ಅದರಲ್ಲಿ ಎಷ್ಟೋ ಜನರು (People) ಬೇಗನೆ ಚೇತರಿಸಿಕೊಂಡವರೂ ಇದ್ದಾರೆ. ಆದರೆ ಈ ರೀತಿ ಕೋವಿಡ್-19 ಸೋಂಕಿಗೆ ಗುರಿಯಾದ ನಂತರ ಅದರಿಂದ ಚೇತರಿಸಿಕೊಂಡರೂ ಸಹ ಅವರಿಗೆ ಕೆಮ್ಮು (Cough) ಹಾಗೆಯೇ ದೀರ್ಘಕಾಲದವರೆಗೆ ಕಾಡುತ್ತಿರುವುದನ್ನು ನಾವು ನೋಡಿರುತ್ತೇವೆ. ಇದಷ್ಟೇ ಅಲ್ಲದೆ ಕೆಲವರಿಗೆ ವಿಪರೀತ ಆಯಾಸವಾಗುವುದು, ಏನೂ ಕೆಲಸ ಮಾಡದೆ ದಣಿವಾಗುವುದು, ಉಸಿರಾಟದ ತೊಂದರೆಯಾಗುವುದು (Difficulty Breathing) ಹೀಗೆ ಒಂದೇ, ಎರಡೇ ಅನೇಕ ರೋಗ ಲಕ್ಷಣಗಳು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ನಂತರವೂ ಸಹ ಹಾಗೆಯೇ ಮುಂದುವರೆಯುತ್ತಿರುತ್ತದೆ ಎಂದು ಹೇಳಬಹುದು.

ಇದು ಅನೇಕರಲ್ಲಿ ತಾವು ಈ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ ಅಥವಾ ಇಲ್ಲವೇ ಅಂತ ಅನೇಕ ರೀತಿಯ ಭಯ ಮತ್ತು ಆತಂಕವನ್ನು ಸಹ ಹುಟ್ಟು ಹಾಕುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಕೊರೋನಾ ನಂತರವೂ ಕೆಮ್ಮು ಹಾಗೆ ಇರುವುದು ಒಳ್ಳೆಯದೇ?
ಆದರೆ ಈ ರೀತಿಯಾಗಿ ಕೆಮ್ಮು ಇರುವುದು ಒಳ್ಳೆಯ ಸಂಕೇತವಾಗಿರಬಹುದೇ ಅಂತ ಸಹ ಕೆಲವರು ಸಂದೇಹವನ್ನು ವ್ಯಕ್ತ ಪಡಿಸುವುದನ್ನು ನಾವು ನೋಡಿರುತ್ತೇವೆ. ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡ ನಂತರ ಕೆಮ್ಮು ನಿಮ್ಮನ್ನು ಹಾಗೆಯೇ ಕಾಡುತ್ತಿದ್ದರೆ, ಅದು ನಿಜವಾಗಿಯೂ ಉತ್ತಮ ಸಂಕೇತವಾಗಿರಬಹುದು.

ಇದನ್ನೂ ಓದಿ: Slim People: ಸದಾ ತೆಳ್ಳಗೆ ಇರೋರು ಜನರು ಹೆಚ್ಚು ಕೆಲಸ ಮಾಡ್ತಾರಾ? ಅಧ್ಯಯನ ಏನು ಹೇಳುತ್ತದೆ?

ಇತರ ಹೆಚ್ಚಿನ ವೈರಲ್ ಸೋಂಕುಗಳಂತೆ, ಕೋವಿಡ್-19 ಸಹ ದೀರ್ಘಕಾಲದ ಕೆಮ್ಮನ್ನು ಬಿಡಬಹುದು, ಇದು ಚೇತರಿಸಿಕೊಂಡ ನಂತರ ಹಲವಾರು ವಾರಗಳವರೆಗೆ ಉಳಿಯಬಹುದು. ಈ ಸೋಂಕು ಶ್ವಾಸನಾಳಗಳ ಲೋಳೆಯ ಪೊರೆಗಳನ್ನು ಪ್ರಚೋದಿಸಬಹುದು, ಗಂಟಲಿನಿಂದ ಪ್ರಾರಂಭಿಸಿ ನಂತರ ಶ್ವಾಸನಾಳದ ಟ್ಯೂಬ್ ಗಳಿಗೆ ಪ್ರವೇಶಿಸಬಹುದು. ಕೋವಿಡ್ ನಿಂದ ಚೇತರಿಸಿಕೊಂಡ ನಂತರವೂ, ಉಳಿದ ಉರಿಯೂತವು ಕೆಮ್ಮನ್ನು ಪ್ರಚೋದಿಸಬಹುದು. ಇದು ನಿಮಗೆ ತೊಂದರೆ ಉಂಟು ಮಾಡಬಹುದಾದರೂ, ಕೆಮ್ಮು ಸೋಂಕಿನ ಪರಿಣಾಮಗಳಿಂದ ಚೇತರಿಸಿಕೊಳ್ಳುತ್ತಿದೆ ಎಂದು ಸೂಚಿಸುವ ನಿಮ್ಮ ದೇಹದ ಮಾರ್ಗವಾಗಿರಬಹುದು.

ಕೆಮ್ಮಿನ ಮೂಲಕ ವೈರಸ್ ಅನ್ನು ಹರಡುವ ಸಾಧ್ಯತೆ
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಉರಿಯೂತದ ಸಮಯದಲ್ಲಿ ಸಂಗ್ರಹವಾಗಬಹುದಾದ ಸಾಯುವ ಜೀವಕೋಶಗಳು ಅಥವಾ ಹೆಚ್ಚುವರಿ ಲೋಳೆಯಂತಹ ಅನಗತ್ಯ ವಸ್ತುಗಳಿಂದ ಶ್ವಾಸನಾಳವನ್ನು ಸ್ವಚ್ಛಗೊಳಿಸುವ ದೇಹದ ವಿಧಾನವೇ ಕೆಮ್ಮು. ಕೆಮ್ಮು ಸಹ ವೈರಸ್ ನ ವಾಹಕವಾಗುವ ಅಪಾಯ ಯಾವಾಗಲೂ ಇರುತ್ತದೆ ಆದರೆ ನೀವು ನಿಮ್ಮ ಪ್ರತ್ಯೇಕತೆಯ ಅವಧಿಯ ಕೊನೆಯಲ್ಲಿದ್ದಾಗ ಮತ್ತು ಸುಧಾರಣೆಯ ಚಿಹ್ನೆಗಳನ್ನು ತೋರಿಸುವ ರೋಗಲಕ್ಷಣಗಳನ್ನು ಹೊಂದಿರುವಾಗ, ನೀವು ಸಾಂಕ್ರಾಮಿಕರಾಗುವ ಸಾಧ್ಯತೆಯಿಲ್ಲ. ಆದಾಗ್ಯೂ, ನಿಮ್ಮ ರೋಗಲಕ್ಷಣಗಳು ಇನ್ನೂ ತೀವ್ರವಾಗಿದ್ದರೆ, ನೀವು ಕೆಮ್ಮಿನ ಮೂಲಕ ವೈರಸ್ ಅನ್ನು ಹರಡುವ ಸಾಧ್ಯತೆ ತುಂಬಾನೇ ಇರುತ್ತದೆ.

ಕೆಮ್ಮು ಕಡಿಮೆಯಾಗದೇ ಇದ್ದಾರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ನಿಮ್ಮನ್ನು ನೀವು ಸದಾ ಕಾಲ ಹೈಡ್ರೇಟ್ ಆಗಿರಿಸಿಕೊಳ್ಳುವುದರಿಂದ ಈ ಕೆಮ್ಮಿನಿಂದ ನೀವು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಶ್ವಾಸನಾಳಗಳಲ್ಲಿನ ಅನಗತ್ಯ ವಸ್ತುಗಳನ್ನು ತೆರವುಗೊಳಿಸುವ ಮೂಲಕ ನೈಸರ್ಗಿಕವಾಗಿ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ. ಆದಾಗ್ಯೂ, ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಮ್ಮು ಹಸ್ತಕ್ಷೇಪ ಮಾಡುತ್ತಿದ್ದರೆ ಮತ್ತು ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡ ಒಂದು ತಿಂಗಳ ನಂತರವೂ ಅದು ಸುಧಾರಿಸದಿದ್ದರೆ, ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಇದನ್ನೂ ಓದಿ:  Ashwagandha Benefits: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು

ಕೆಲವು ರೋಗಿಗಳು ವೈರಲ್ ಸೋಂಕಿನಿಂದ ಚೇತರಿಸಿಕೊಂಡ ನಂತರ ಅಸಾಮಾನ್ಯ ಆಯಾಸ, ಉಸಿರಾಟದ ತೊಂದರೆ ಮತ್ತು ಅರಿವಿನ ತೊಂದರೆಗಳ ಬಗ್ಗೆ ದೂರು ನೀಡುತ್ತಿದ್ದಾರೆ. ದೀರ್ಘ ಕೋವಿಡ್ ಅಥವಾ ಕೋವಿಡ್ ನಂತರದ ಸ್ಥಿತಿ ಎಂದು ಕರೆಯಲ್ಪಡುವ ಈ ರೋಗಲಕ್ಷಣಗಳು ಆರಂಭಿಕ ಸೋಂಕಿನ ನಂತರ ನಾಲ್ಕು ವಾರಗಳಿಗಿಂತ ಹೆಚ್ಚು, ತಿಂಗಳುಗಳು ಅಥವಾ ವರ್ಷಗಳವರೆಗೆ ಇರಬಹುದು. ಈ ರೋಗಲಕ್ಷಣಗಳು ಉಳಿಯುವ ಸಮಯವು ರೋಗಿಯ ರೋಗನಿರೋಧಕ ಶಕ್ತಿಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.

ನೀವು ಸಹ ಈ ಯಾವುದೇ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಪ್ರೋಟೀನ್ ಸಮೃದ್ಧ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಸೇರಿಸಿಕೊಳ್ಳುವುದು ನಿಮ್ಮನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಬಹುದು.
Published by:Ashwini Prabhu
First published: