Constipation: ನಿಮಗೆ ಮಲಬದ್ಧತೆ ಸಮಸ್ಯೆ ಇದೆಯಾ? ಹಾಗಿದ್ರೆ ಈ 3 ಆಹಾರಗಳಿಂದ ದೂರವಿರಿ

ಬಿಸಿಲಿನ ಧಗೆ ನಮ್ಮ ಆರೋಗ್ಯಕ್ಕೂ ಖಂಡಿತಾ ಒಳ್ಳೆಯದಲ್ಲ. ಬೇಸಿಯಲ್ಲಿ, ಶಾಖದ ಅಲೆಗಳ ಕಾರಣದಿಂದ ಉಂಟಾಗುವ ಕಾಯಿಲೆಗಳಲ್ಲಿ ಮಲಬದ್ಧತೆ ಕೂಡ ಒಂದು. ಆದರೆ, ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ, ದೇಹವನ್ನು ಹೈಡ್ರೇಟ್ ಮತ್ತು ತಂಪಾಗಿಡುವುದರಿಂದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರಗಳ ಸೇವನೆಯಿಂದ, ನಮಗೆ ಬೇಸಿಗೆಯಲ್ಲಿ ಬರುವ ಕಾಯಿಲೆಗಳನ್ನು ದೂರ ಇಡಲು ಸಹಾಯವಾಗುತ್ತದೆ.

 ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೇಸಿಗೆ (Summer) ಬಂತೆಂದರೆ, ಕೆಲವೊಂದು ಕಾಯಿಲೆಗಳನ್ನು (Problem) ಜೊತೆಗೆ ಕರೆದುಕೊಂಡು ಬರುತ್ತದೆ. ನಮ್ಮ ದೇಶದ ಕೆಲವು ರಾಜ್ಯಗಳಲ್ಲಿ ಈ ಬಾರಿ ಬಿಸಿಲಿನ ಪ್ರಮಾಣ ವಿಪರೀತ ಹೆಚ್ಚಾಗಿದೆ. ಮನುಷ್ಯರು ಮಾತ್ರವಲ್ಲ ಪ್ರಾಣಿ (Animal) ಪಕ್ಷಿಗಳು (Birds) ಕೂಡ ಧಗೆ ತಡೆಯಲಾರದೆ ಒದ್ದಾಡುತ್ತಿವೆ. ಬಿಸಿಲಿನ ಧಗೆ ನಮ್ಮ ಆರೋಗ್ಯಕ್ಕೂ ಖಂಡಿತಾ ಒಳ್ಳೆಯದಲ್ಲ. ಬೇಸಿಯಲ್ಲಿ, ಶಾಖದ ಅಲೆಗಳ ಕಾರಣದಿಂದ ಉಂಟಾಗುವ ಕಾಯಿಲೆಗಳಲ್ಲಿ ಮಲಬದ್ಧತೆ (Constipation) ಕೂಡ ಒಂದು. ಆದರೆ, ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ, ದೇಹವನ್ನು ಹೈಡ್ರೇಟ್ (Hydrate) ಮತ್ತು ತಂಪಾಗಿಡುವುದರಿಂದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರಗಳ (Nutritious food) ಸೇವನೆಯಿಂದ, ನಮಗೆ ಬೇಸಿಗೆಯಲ್ಲಿ ಬರುವ ಕಾಯಿಲೆಗಳನ್ನು ದೂರ ಇಡಲು ಸಹಾಯವಾಗುತ್ತದೆ.

ತೀವ್ರ ಶಾಖವು ನಿರ್ಜಲೀಕರಣಕ್ಕೆ ಕಾರಣ ಆಗುವುದರಿಂದ ಬೇಸಿಗೆಯಲ್ಲಿ ಮಲಬದ್ಧತೆಯ ಸಮಸ್ಯೆ ಸಾಮಾನ್ಯ. ಫೈಬರ್ ಯುಕ್ತ ಆಹಾರವನ್ನು ಸೇವಿಸಿದರೆ, ಅದು ಮಲವನ್ನು ಮೃದುವಾಗಿಸುತ್ತದೆ ಮತ್ತು ಮಲ ವಿಸರ್ಜನೆ ಸಲೀಸಾಗುವಂತೆ ಸಹಾಯ ಮಾಡುತ್ತದೆ. ಆದರೆ ಇನ್ನೂ ಕೆಲವು ಆಹಾರ ಪದಾರ್ಥಗಳು ಇದಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತವೆ – ಅವು ನಿಮ್ಮ ಮಲವನ್ನು ಶುಷ್ಕ ಮತ್ತು ಗಟ್ಟಿಯಾಗಿಸುತ್ತವೆ. ನಿಮಗೆ ಮೊದಲೇ ಮಲಬದ್ಧತೆಯ ಸಮಸ್ಯೆ ಇದ್ದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಖಂಡಿತಾ ದೂರ ಇಡಲೇಬೇಕು.

ಆಯುರ್ವೇದ ತಜ್ಞೆ , ಡಾ.ದಿಕ್ಸಾ ಭಾವ್‍ಸರ್ ಅವರು, ತಮ್ಮ ಫಾಲೋವರ್ಸ್ ಗಳಿಗೆ ಮಲಬದ್ಧತೆಯನ್ನು ಹೆಚ್ಚಿಸುವ ಮೂರು ಆಹಾರ ವಸ್ತುಗಳ ಕುರಿತು ಮಾಹಿತಿ ನೀಡಿದ್ದಾರೆ. ಅವು ಈ ಕೆಳಗಿನಂತಿವೆ.

1. ಜೀರಿಗೆ
ಡಾ, ಭಾವ್‍ಸರ್ ಹೇಳುವ ಪ್ರಕಾರ, ಜೀರಿಗೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಆದರೆ, ಅದೇ ರೀತಿ, ಶುಷ್ಕ ಮತ್ತು ಹೀರಿಕೊಳ್ಳುವ ಅದರ ಗುಣವು, ಮಲಬದ್ಧತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಕೂಡ ಇರುತ್ತದೆ.

ಇದನ್ನೂ ಓದಿ:  Urinary Tract Infection: ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

“ಆಯುರ್ವೇದದಲ್ಲಿ ಜೀರಿಗೆಯನ್ನು ಜೀರಕ ಎಂದು ಕರೆಯುತ್ತಾರೆ (ಅಂದರೆ ಜೀರ್ಣ ಎಂಬ ಪದದಿಂದ ಬಂದಿರುವಂತದ್ದು). ಅಂದರೆ ಜೀರಕ ಎಂದರೆ ‘ಜೀರ್ಣ ಮಾಡುವಂತದ್ದು’ ಎಂದು ಅರ್ಥ. ಅದು ಪಿತ್ತವನ್ನು ಹೆಚ್ಚಿಸುತ್ತದೆ (ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ) ಅದು ಲಘು (ಹಗುರ ಜೀರ್ಣ), ಆದರೆ ಅದು ರೂಕ್ಷ (ಶುಷ್ಕ ಗುಣ) ಮತ್ತು ಗ್ರಹಿ (ಹೀರಿಕೊಳ್ಳುವ ಗುಣ) ಕೂಡ. ಹಾಗಾಗಿ ಅದು ಹಸಿವು ಮತ್ತು ಅತಿಸಾರ, ಐಬಿಎಸ್‍ಗೆ ಒಳ್ಳೆಯದು. ಆದರೆ, ಮಲಬದ್ಧತೆಗೆ ಅಲ್ಲ” ಎನ್ನುತ್ತಾರೆ ಡಾ. ದಿಕ್ಸಾ ಭಾವ್‍ಸಾರ್.

2. ಮೊಸರು
ಆಯುರ್ವೇದದ ಪ್ರಕಾರ, ಮೊಸರು ಜೀರ್ಣಿಸಿಕೊಳ್ಳಲು ಹಗುರವಾಗಿರುವುದಿಲ್ಲ ಮತ್ತು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಮಲಬದ್ಧತೆ ಇದ್ದಲ್ಲಿ ಅದನ್ನು ತಿನ್ನಬಾರದು. “ಮೊಸರು ರುಚಾಯ (ರುಚಿಯನ್ನು ಸುಧಾರಿಸುತ್ತದೆ), ಉಷ್ಣ (ತಾಪ ಗುಣ ಹೊಂದಿದೆ) ಮತ್ತು ವಾತಾಜಿತು (ವಾತವನ್ನು ಸಮತೋಲನಗೊಳಿಸುತ್ತದೆ. ಆದರೆ ಅದು ಗುರು (ಜೀರ್ಣಿಸಿಕೊಳ್ಳಲು ಕಷ್ಟಕರ) ಮತ್ತು ಗ್ರಹಿ (ಜೀರಿಗೆಯಂತೆ ಹೀರಿಕೊಳ್ಳುವ ಗುಣವುಳ್ಳದ್ದು). ಹಾಗಾಗಿ ಅದು ಮಲಬದ್ಧತೆಗೆ ಹೊಂದಿಕೆ ಆಗುವುದಿಲ್ಲ” ಎಂದು ಹೇಳುತ್ತಾರೆ ಡಾ. ಭಾವ್‍ಸರ್.

3. ಕೆಫೆನ್
ಕೆಫೀನ್ ಸೇವನೆ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಮತ್ತು ನಿಮ್ಮ ಮಲಬದ್ಧತೆಯ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. “ಕೆಫೀನ್ ನಮ್ಮ ಜೀರ್ಣಾಂಗ ವ್ಯವಸ್ಥೆಯ ಸ್ನಾಯುಗಳನ್ನು ಉತ್ತೇಜಿಸಬಹುದು ಮತ್ತು ಸುಲಭವಾದ ಬವೆಲ್ ಮೂಮೆಂಟ್‍ಗೆ ಕಾರಣವಾಗಬಹುದು ಎಂದು ನಾವೆಲ್ಲರು ನಂಬಿದ್ದೇವೆ.

ಆದರೆ ಕೇಫಿನ್ (ಅತಿಯಾದ ಕೆಫೀನ್) ನಿರ್ಜಲೀಕರಣವನ್ನು ಕೂಡ ಉಂಟು ಮಾಡುತ್ತದೆ. ಅದು ವಿರುದ್ಧ ಪರಿಣಾಮ ಉಂಟು ಮಾಡಬಹುದು ಮತ್ತು ಮಲಬದ್ಧತೆಗೆ ಕಾರಣ ಆಗಬಹುದು. ಹಾಗಾಗಿ, ನೀವು ಮಲಬದ್ಧತೆಯನ್ನು ಹೊಂದಿದ್ದರೆ ಅದನ್ನು ಸೇವಿಸಬೇಡಿ” ಎಂದು ಸಲಹೆ ನೀಡುತ್ತಾರೆ ಡಾ. ಭಾವ್‍ಸರ್.

ಇದನ್ನೂ ಓದಿ:  ಕಾಲಿನಲ್ಲಿ ಹೀಗಾಗ್ತಿದ್ರೆ ಏನೋ ಸಣ್ಣ ಸಮಸ್ಯೆ ಅಂದ್ಕೊಂಡು ಸುಮ್ಮನಾಗ್ಬೇಡಿ, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್​ಗೂ ಹೀಗೇ ಆಗುತ್ತೆ ಜೋಪಾನ!

ನಿಮಗೆ ಮಲಬದ್ಧತೆ ಇರಲಿ, ಅಥವಾ ಇಲ್ಲದೇ ಇರಲಿ, ನಿಮ್ಮ ದಿನವನ್ನು ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸಬೇಡಿ. ಬದಲಿಗೆ ಬೆಚ್ಚಗಿನ ನೀರು ಅಥವಾ ಒಂದು ಚಮಚ ಹಸುವಿನ ತುಪ್ಪದ ಸೇವನೆ ಉತ್ತಮ ಎನ್ನುತ್ತಾರೆ ಅವರು.
Published by:Ashwini Prabhu
First published: