• Home
  • »
  • News
  • »
  • lifestyle
  • »
  • Back Pain: ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ಸರಳ ವ್ಯಾಯಾಮ ಮಾಡಿ

Back Pain: ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ಸರಳ ವ್ಯಾಯಾಮ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚಿನ ಮಹಿಳೆಯರು ತಮಗೆ ತಾವು ಸಮಯ ಕೊಟ್ಟುಕೊಳ್ಳಲು ಸಾಧ್ಯವಾಗಲ್ಲ. ವಾಕಿಂಗ್ ವ್ಯಾಯಾಮ ಯೋಗ ಮಾಡುವುದಿಲ್ಲ. ಆಹಾರದ ಸಮಯ ಪಾಲನೆ ಮತ್ತು ಸರಿಯಾದ ಪ್ರಮಾಣದಲ್ಲಿ ಪೋಷಕಾಂಶ ಭರಿತ ಪದಾರ್ಥಗಳನ್ನು ಸೇವನೆ ಮಾಡುವುದಿಲ್ಲ. ಹೆಚ್ಚಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಬೆನ್ನು ನೋವಿಗೆ ಇದು ಕಾರಣ ಆಗಿದೆ. ಅದಕ್ಕಾಗಿ ನೀವು ಈ ಸರಳ ಯೋಗಾಸನ ಮಾಡಿ.

ಮುಂದೆ ಓದಿ ...
  • Share this:

    ನೀವು ದಿನವೂ ಕಂಪ್ಯೂಟರ್ (Computer), ಲ್ಯಾಪ್ ಟಾಪ್ (Laptop) ಹಾಗೂ ಟಿವಿ ಮುಂದೆ ದೀರ್ಘಕಾಲ ಕುಳಿತಿರುತ್ತೀರಾ? ಹೀಗೆ ದೀರ್ಘಕಾಲ ಒಂದೇ ಸ್ಥಳಲ್ಲಿ ಕುಳಿತಿರುವುದು ನಿಮ್ಮ ಬೆನ್ನಿಗೆ ತ್ರಾಸದಾಯಕ. ನಿಮಗೆ ಬೆನ್ನು ನೋವು (Back Pain) ಬಾಧಿಸುತ್ತಿರಬಹುದು. ಇದಕ್ಕೆ ಕಾರಣ ನೀವು ಕುಳಿತುಕೊಳ್ಳುವ ತಪ್ಪಾದ ಭಂಗಿ, ಅಸಮರ್ಪಕ ಜೀವನಶೈಲಿ (Lifestyle), ವ್ಯಾಯಾಮ ಮಾಡದೇ ಇರುವುದು ಅಥವಾ ಭಾರವಾದ ವ್ಯಾಯಾಮ ಮತ್ತು ಕಛೇರಿಯಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡುವುದರಿಂದ ಬೆನ್ನು ನೋವು ಕಾಡುತ್ತದೆ. ಇದು ಸಾಮಾನ್ಯ ಸಮಸ್ಯೆ. ಆದ್ರೆ ದಿನಗಳು ಕಳೆದಂತೆ ನಿಮ್ಮ ಬೆನ್ನು ನೋವು ನಿಮ್ಮ ಆರೋಗ್ಯ ಮತ್ತು ದೇಹವನ್ನು ಕೆಟ್ಟದಾಗಿಸುತ್ತದೆ.  


    ಬೆನ್ನು ನೋವಿಗೆ ಯೋಗಾಸನಗಳು


    ಹೆಚ್ಚಿನ ಮಹಿಳೆಯರು ತಮಗೆ ತಾವು ಸಮಯ ಕೊಟ್ಟುಕೊಳ್ಳಲು ಸಾಧ್ಯವಾಗಲ್ಲ. ವಾಕಿಂಗ್, ವ್ಯಾಯಾಮ, ಯೋಗ ಮಾಡುವುದಿಲ್ಲ. ಆಹಾರದ ಸಮಯ ಮತ್ತು ಸರಿಯಾದ ಪ್ರಮಾಣದಲ್ಲಿ ಪೋಷಕಾಂಶ ಭರಿತ ಪದಾರ್ಥಗಳನ್ನು ಸೇವನೆ ಮಾಡುವುದಿಲ್ಲ.


    ಇದು ಸಾಕಷ್ಟು ಆರೋಗ್ಯ ಸಮಸ್ಯೆ ಉಂಟು ಮಾಡಲು ಕಾರಣವಾಗುತ್ತದೆ. ಹೆಚ್ಚಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಬೆನ್ನು ನೋವಿಗೆ ಇದು ಕಾರಣ ಆಗಿದೆ. ಅದಕ್ಕಾಗಿ ನೀವು ಯೋಗಾಸನ ಮಾಡಿ. ಬೆನ್ನು ನೋವು ತೊಡೆದು ಹಾಕಲು ಈ ಯೋಗಾಸನಗಳು ಸಹಕಾರಿ.


    ಇದನ್ನೂ ಓದಿ: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ


    ಸೇತುಬಂಧಾಸನ (ಸೇತುವೆ ಭಂಗಿ)


    ಸೇತುಬಂಧಾಸನ ಅಂದರೆ ಬ್ರಿಡ್ಜ್ ಪೋಸ್ ಆಗಿದೆ. ಇದು ಬೆನ್ನು ಮೂಳೆಯನ್ನು ಹಿಗ್ಗಿಸುತ್ತದೆ. ಮತ್ತು ಬೆನ್ನಿನ ಬಿಗಿತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.


    ಸೇತುಬಂಧಾಸನ ಮಾಡುವುದು ಹೇಗೆ?


    ಮೊದಲು ಚಾಪೆಯ ಮೇಲೆ ನೇರವಾಗಿ ಮಲಗಿ. ಈಗ ಎರಡೂ ಕೈಗಳನ್ನು ನೇರವಾಗಿ ಬದಿಯಲ್ಲಿ ಇರಿಸಿ ಮತ್ತು ನಿಮ್ಮ ಮೊಣಕಾಲು ಬಗ್ಗಿಸಿ. ನಂತರ ನಿಧಾನವಾಗಿ ದೇಹವನ್ನು ಸೊಂಟದಿಂದ ಮೇಲಕ್ಕೆತ್ತಿ. ಈಗ ನಿಮ್ಮ ಕೈಗಳನ್ನು ಮೇಲ್ಮೈಯಲ್ಲಿ ಇರಿಸಿ. ಈ ಭಂಗಿಯಲ್ಲಿ ಸ್ವಲ್ಪ ಸಮಯ ಇದ್ದು ನಂತರ ಸಹಜ ಸ್ಥಿತಿಗೆ ಬನ್ನಿ. ಐದು ಬಾರಿ ಪುನರಾವರ್ತಿಸಿ.


    ಬಾಲಾಸನ (ಮಗುವಿನ ಭಂಗಿ)


    ಬಾಲಾಸನ ನಿಮ್ಮ ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳ ವಿಸ್ತರಣೆಗೆ ಸಹಕಾರಿ. ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬೆನ್ನು, ತೊಡೆ ಮತ್ತು ಪಾದದ ನೋವು ನಿವಾರಿಸುತ್ತದೆ.


    ಬಾಲಾಸನ ಮಾಡುವುದು ಹೇಗೆ?


    ಮೊದಲು ಮೊಣಕಾಲುಗಳನ್ನು ಬಾಗಿಸಿ ಮಲಗಿಕೊಳ್ಳಿ. ದೇಹವನ್ನು ಮುಂದಕ್ಕೆ ಓರೆಯಾಗಿಸಿ. ಹಣೆಯನ್ನು ನೆಲಕ್ಕೆ ಸ್ಪರ್ಶಿಸಿ. ಬೆನ್ನನ್ನು ನೇರವಾಗಿರಿಸಿ. ಎರಡೂ ಕೈಗಳನ್ನು ನೇರವಾಗಿ ಮುಂದಕ್ಕಿರಿಸಿ. 30 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿರಿ. ದಿನವೂ ಮಾಡಿ.


    ಶಲಭಾಸನ (ಮಿಡತೆಯ ಭಂಗಿ)


    ಶಲಭಾಸನ ಬೆನ್ನು ಮತ್ತು ಸೊಂಟದ ಆಯಾಸ ಹೋಗಲಾಡಿಸುತ್ತದೆ. ಈ ಆಸನವು ಬೆನ್ನು, ಕಾಲು ಮತ್ತು ತೋಳುಗಳ ಸ್ನಾಯುಗಳನ್ನು ಸಹ ಬಲಪಡಿಸುತ್ತದೆ.


    ಶಲಭಾಸನ ಮಾಡುವುದು ಹೇಗೆ?


    ಶಲಭಾಸನ ಮಾಡಲು, ಚಾಪೆಯ ಮೇಲೆ ಬೆನ್ನಿನ ಮೇಲೆ ಮಲಗಿ. ಕಾಲುಗಳನ್ನು ನೇರವಾಗಿರಿಸಿ. ಕೈಗಳನ್ನು ಹಿಂದೆ ನೇರವಾಗಿರಿಸಿ. ಎರಡೂ ಕಣಕಾಲುಗಳನ್ನು ಸಂಪೂರ್ಣ ಪರಸ್ಪರ ಹತ್ತಿರವಿರಿಸಿ. ಈಗ ನಿಮ್ಮ ತಲೆ, ಎದೆ ಮತ್ತು ತೋಳುಗಳನ್ನು ನೆಲದಿಂದ ಸಾಧ್ಯವಾದಷ್ಟು ಮೇಲಕ್ಕೆತ್ತಿ. ಮೂವತ್ತು ಸೆಕೆಂಟ್ ಭಂಗಿಯಲ್ಲಿದ್ದು, ಸಾಮಾನ್ಯ ಸ್ಥಿತಿಗೆ ಬನ್ನಿ. ನಿಯಮಿತವಾಗಿ ಮಾಡಿ.


    ಅಧೋಮುಖ ಶ್ವಾನಾಸನ


    ಬೆನ್ನು ನೋವು ಹೋಗಲಾಡಿಸಲು ಈ ಯೋಗಾಸನವು ಪರಿಣಾಮಕಾರಿ. ದೇಹವನ್ನು ಸಮತೋಲನಗೊಳಿಸುತ್ತದೆ ಮತ್ತು ಸ್ನಾಯುಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಒಂದು ಮೂಲಿಕೆ ಪರಿಣಾಮಕಾರಿ!


    ಮೊದಲು ದೇಹವನ್ನು ಸೊಂಟದಿಂದ ಮುಂದಕ್ಕೆ ಬಾಗಿಸಿ ಮತ್ತು ನಿಮ್ಮ ಕೈಗಳಿಂದ ಮೇಲ್ಮೈ ಮೇಲೆ ಒಲವು ಮಾಡುವ ಮೂಲಕ ವಿ ಆಕಾರ ಮಾಡಿ. ಕಾಲು ಮತ್ತು ಮುಂಭಾಗದ ಮುಂಡವನ್ನು ನೇರವಾಗಿ ಇರಿಸಿ. ಸುಮಾರು 1 ನಿಮಿಷ ಈ ಸ್ಥಾನದಲ್ಲಿದ್ದು ನಂತರ, ಸಾಮಾನ್ಯ ಸ್ಥಿತಿಗೆ ಬನ್ನಿ.

    Published by:renukadariyannavar
    First published: