Cholesterol: ತೋಳುಗಳ ನೋವು ಸದಾ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ರೆ ಇದು ಕೊಲೆಸ್ಟ್ರಾಲ್​​​​ನ ಲಕ್ಷಣವಾಗಿರಬಹುದು

ದೇಹದ ಹೊರಗಿನ ಕಾಯಿಲೆಗಳಿಗೆ ನಾವು ಕಂಡುಕೊಂಡು ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆಯಬಹುದು. ಆದರೆ ಕೆಲವೊಮ್ಮೆ ದೇಹದ ಒಳಗಡೆ ಬೆಳೆಯುತ್ತಿರುವ ರೋಗಗಗಳ ಬಗ್ಗೆ ನಮಗೆ ಬೇಗನೆ ಅರ್ಥ ಆಗುವುದೇ ಇಲ್ಲ. ಅದರಲ್ಲೂ ಈ ಹೃದಯ ರಕ್ತನಾಳದ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ಹಲವಾರು ಸೂಚಕಗಳಿವೆ, ಅವುಗಳಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಪ್ರಮುಖ ಅಪಾಯದ ಅಂಶಗಳಲ್ಲಿ ಒಂದಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಈಗಂತೂ ಅನೇಕ ರೀತಿಯ ರೋಗಗಳು (Diseases) ನಮ್ಮನ್ನು ಆವರಿಸುತ್ತಿದ್ದು, ಒಂದು ರೀತಿಯ ಆತಂಕ ಮತ್ತು ಭಯದಲ್ಲಿಯೇ ನಾವೆಲ್ಲಾ ಬದುಕು ಸಾಗಿಸುತ್ತಿದ್ದೇವೆ ಅಂತ ಹೇಳಿದರೆ ಸುಳ್ಳಲ್ಲ. ಅದರಲ್ಲೂ ದೇಹದ (Body) ಹೊರಗಿನ ಕಾಯಿಲೆಗಳಿಗೆ ನಾವು ಕಂಡುಕೊಂಡು ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು (Treatment) ಪಡೆಯಬಹುದು. ಆದರೆ ಕೆಲವೊಮ್ಮೆ ದೇಹದ ಒಳಗಡೆ ಬೆಳೆಯುತ್ತಿರುವ ರೋಗಗಗಳ ಬಗ್ಗೆ ನಮಗೆ ಬೇಗನೆ ಅರ್ಥ ಆಗುವುದೇ ಇಲ್ಲ. ಅದರಲ್ಲೂ ಈ ಹೃದಯ ರಕ್ತನಾಳದ ಕಾಯಿಲೆಗಳಿಗೆ (Cardiovascular Disease) ಸಂಬಂಧಪಟ್ಟಂತೆ ಹಲವಾರು ಸೂಚಕಗಳಿವೆ, ಅವುಗಳಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ (Cholesterol) ಪ್ರಮುಖ ಅಪಾಯದ ಅಂಶಗಳಲ್ಲಿ ಒಂದಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವು ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯಗಳನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇಸ್ಕೆಮಿಕ್ ಹೃದ್ರೋಗದ ಮೂರನೇ ಒಂದು ಭಾಗವು ವಿಶ್ವದಾದ್ಯಂತ ಹೆಚ್ಚಿನ ಕೊಲೆಸ್ಟ್ರಾಲ್ ಗೆ ಕಾರಣವಾಗಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಕಳವಳಕಾರಿಯಾಗಿಸುವ ಅಂಶವೆಂದರೆ, ಇದು ಹೆಚ್ಚಾಗಿ ಯಾವುದೇ ರೀತಿಯ ರೋಗಲಕ್ಷಣಗಳು ವ್ಯಕ್ತಿಯ ದೈಹಿಕ ನೋಟದ ಮೂಲಕ ಪ್ರಕಟಗೊಳ್ಳುವುದಿಲ್ಲ, ಅದಕ್ಕಾಗಿಯೇ ಇದನ್ನು 'ಸೈಲೆಂಟ್ ಕಿಲ್ಲರ್' ಎಂದು ಸಹ ಕರೆಯಲಾಗುತ್ತದೆ.

ಹೆಚ್ಚು ಕೊಲೆಸ್ಟ್ರಾಲ್ ಅನ್ನು ಹೊಂದಿರುವುದು ಎಂದರೆ ಏನು?
ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿರುವ ಮೇಣದಂತಹ ವಸ್ತುವಾಗಿದೆ. ಇದು ಆರೋಗ್ಯಕರ ಜೀವಕೋಶಗಳನ್ನು ತಯಾರಿಸಲು ನಿಮ್ಮ ದೇಹಕ್ಕೆ ತುಂಬಾನೇ ಅಗತ್ಯವಾಗಿದೆ ಎಂದು ಮೇಯೋ ಕ್ಲಿನಿಕ್ ಹೇಳುತ್ತದೆ.

ಆದಾಗ್ಯೂ, ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ನಿಮ್ಮ ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗಬಹುದು, ಇದು ಹಾಗೆಯೇ ಬೆಳೆದಂತೆ, ನಿಮ್ಮ ಅಪಧಮನಿಗಳ ಮೂಲಕ ರಕ್ತವು ಹರಿಯಲು ಸವಾಲಾಗಿ ಪರಿಣಮಿಸುತ್ತದೆ. ಕೆಲವೊಮ್ಮೆ, ಈ ನಿಕ್ಷೇಪಗಳು ಒಡೆದು ಹೋಗಬಹುದು, ಇದು ಹೆಪ್ಪುಗಟ್ಟುವಿಕೆ ಮತ್ತು ತನ್ಮೂಲಕ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೂ ಸಹ ಕಾರಣವಾಗಬಹುದು. ಈ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅನ್ನು ಸೂಚಿಸಲು ಯಾವುದೇ ಖಚಿತವಾದ ಲಕ್ಷಣಗಳು ಇಲ್ಲದೆ ಇದ್ದರೂ ಸಹ ತಜ್ಞರು ಮಾತ್ರ ಈ ಅನಾರೋಗ್ಯವನ್ನು ಸೂಚಿಸುವ ಸಂವೇದನೆಗಳಿವೆ ಎಂದು ನಂಬುತ್ತಾರೆ.

ನಿಮ್ಮ ತೋಳುಗಳನ್ನು ಬಳಸುವಾಗ ಗಮನಿಸಬೇಕಾದ ಎರಡು ರೀತಿಯ ನೋವು
ನಾವು ದೇಹದಲ್ಲಿ ಕೊಲೆಸ್ಟ್ರಾಲ್ ನ ಸಮತೋಲಿತ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಇದು ಅಪಧಮನಿಗಳಲ್ಲಿ ಕೊಬ್ಬಿನಾಂಶವನ್ನು ಉಂಟು ಮಾಡಬಹುದು, ಇದು ತೋಳುಗಳು ಮತ್ತು ಕಾಲುಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ. ಈ ಸ್ಥಿತಿಯನ್ನು ಪೆರಿಫೆರಲ್ ಆರ್ಟರಿ ಡಿಸೀಸ್ (ಪಿಎಡಿ) ಎಂದೂ ಸಹ ಕರೆಯಲಾಗುತ್ತದೆ, ಇದು ತೀವ್ರವಾದ ನೋವಿಗೆ ಕಾರಣವಾಗುತ್ತದೆ.

ಇದನ್ನೂ ಓದಿ:  Monsoon Health Tips: ಎದೆಯುರಿ ತೊಡೆದುಹಾಕಲು ಪ್ರತಿದಿನ ಈ 5 ಪದಾರ್ಥಗಳನ್ನು ತಪ್ಪದೇ ಸೇವಿಸಿ

ಆದ್ದರಿಂದ, ಮೆಯೋ ಕ್ಲಿನಿಕ್, ಒಬ್ಬರು ತಮ್ಮ ತೋಳುಗಳನ್ನು ಬಳಸುವಾಗ ನೋವು ಕೊಲೆಸ್ಟ್ರಾಲ್ ಹೆಚ್ಚಾಗುತ್ತಿರುವ ಕಥೆಯ ಸಂಕೇತವಾಗಿರಬಹುದು ಎಂದು ಬಹಿರಂಗಪಡಿಸುತ್ತದೆ. ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ನೀವು ಬರೆಯುವಾಗ ಅಥವಾ ಇತರ ಹಸ್ತಚಾಲಿತ ಕಾರ್ಯಗಳನ್ನು ಮಾಡುವಾಗ ನೋವು ಮತ್ತು ಸೆಳೆತದ ರೂಪವನ್ನು ಅನುಭವಿಸಬಹುದು.

ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆಗಳ ಪ್ರಕಾರ ಈ ತೋಳುಗಳಲ್ಲಿ ಕಾಣಿಸುವಂತಹ ನೋವು ಸೌಮ್ಯದಿಂದ ತೀವ್ರವಾಗಿರಬಹುದು ಮತ್ತು ಸಾಮಾನ್ಯವಾಗಿ ನಿಮ್ಮ ಕಾಲುಗಳಿಗೆ ವಿಶ್ರಾಂತಿ ನೀಡಿದಾಗ ಕೆಲವು ನಿಮಿಷಗಳ ನಂತರ ಆ ನೋವು ಹೋಗುತ್ತದೆ ಎಂದು ಹೇಳುತ್ತದೆ. "ಎರಡೂ ಕಾಲುಗಳು ಒಂದೇ ಸಮಯದಲ್ಲಿ ಆಗಾಗ್ಗೆ ಪರಿಣಾಮ ಬೀರುತ್ತವೆ, ಆದರೆ ಒಂದು ಕಾಲಿನಲ್ಲಿ ಆ ನೋವು ಇನ್ನಷ್ಟು ಜಾಸ್ತಿ ಸಹ ಆಗಬಹುದು" ಎಂದು ಹೇಳಲಾಗುತ್ತಿದೆ.

ಪೆರಿಫೆರಲ್ ಆರ್ಟರಿ ಡಿಸೀಸ್ (ಪಿಎಡಿ) ಎಂದರೇನು?
ಪೆರಿಫೆರಲ್ ಆರ್ಟರಿ ಡಿಸೀಸ್ (ಪಿಎಡಿ) ಹೆಚ್ಚಾಗಿ ಅಪಧಮನಿಯಲ್ಲಿ ಕೊಬ್ಬಿನ ಶೇಖರಣೆಯಿಂದ ಉಂಟಾಗುತ್ತದೆ. ಈ ಕೊಬ್ಬಿನ ಶೇಖರಣೆಯನ್ನು ಅಥೆರೋಸ್ಕ್ಲೆರೋಸಿಸ್ ಎಂದೂ ಸಹ ಕರೆಯಲಾಗುತ್ತದೆ, ಇದು ಅಪಧಮನಿಗಳ ಮೂಲಕ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದು ಕಾಲುಗಳಲ್ಲಿನ ಅಪಧಮನಿಗಳ ರೋಗವಾಗಿದೆ.

ಸಾಮಾನ್ಯ ರೋಗಲಕ್ಷಣಗಳಲ್ಲಿ ಕಾಲುಗಳಲ್ಲಿ ಮರಗಟ್ಟುವಿಕೆ, ಸೊಂಟಗಳಲ್ಲಿ ನೋವಿನ ಸೆಳೆತಗಳು, ಕಾಲುಗಳು ಅಥವಾ ಪಾದಗಳಲ್ಲಿ ದುರ್ಬಲತೆ ಅಥವಾ ಯಾವುದೇ ನಾಡಿಮಿಡಿತ ಮತ್ತು ಹೆಚ್ಚಿನವು ಇದರಲ್ಲಿ ಸೇರಿವೆ.

ತೋಳು ನೋವು ಎಂದರೆ ಅಧಿಕ ಕೊಲೆಸ್ಟ್ರಾಲ್ ಎಂದರ್ಥವಲ್ಲ.
ನಿಮ್ಮ ತೋಳುಗಳಲ್ಲಿ ನೋವು ಕಾಣಿಸಿಕೊಂಡರೆ ಅದು ಹೆಚ್ಚಿನ ಕೊಲೆಸ್ಟ್ರಾಲ್ ಸೂಚಕವನ್ನು ಹೊರತು ಪಡಿಸಿ ಬಹಳಷ್ಟು ಬೇರೆ ರೀತಿಯ ವಿಷಯಗಳನ್ನು ಸಹ ಸೂಚಿಸಬಹುದು. ತೋಳು ಮತ್ತು ಭುಜದ ನೋವು ಹೃದಯಾಘಾತ ಮತ್ತು ಆಂಜಿನಾದ ಲಕ್ಷಣಗಳಲ್ಲಿ ಒಂದಾಗಿದೆ, ಇದು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವುದಕ್ಕೆ ಸಂಬಂಧಿಸಿದೆ.

ತೋಳು ನೋವಿಗೆ ಸಂಬಂಧಿಸಿದ ಇತರ ಕಾರಣಗಳಲ್ಲಿ ಸ್ಕೆಲೆಟೋಮಸ್ಕ್ಯೂಲರ್ ಗಾಯ, ಸ್ನಾಯುಗಳ ಮೇಲೆ ಒತ್ತಡ ಬೀಳುವುದು, ಉಳುಕು, ಸ್ಥಾನಪಲ್ಲಟ ಮತ್ತು ಹೆಚ್ಚಿನವು ಸಹ ಸೇರಿವೆ.

ಗಮನಿಸಬೇಕಾದ ಇತರ ಸಾಮಾನ್ಯ ಚಿಹ್ನೆಗಳು
ತೋಳಿನಲ್ಲಿ ನೋವಿನ ಸಂವೇದನೆಗಳ ಹೊರತಾಗಿ, ಪೆರಿಫೆರಲ್ ಆರ್ಟರಿ ಡಿಸೀಸ್ ನ ಇತರ ಕೆಲವು ಸಾಮಾನ್ಯ ಚಿಹ್ನೆಗಳು ಇಲ್ಲಿವೆ ನೋಡಿ:

 • ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ದೌರ್ಬಲ್ಯವಾಗುವುದು

 • ನಿಮ್ಮ ಕಾಲುಗಳು ಮತ್ತು ಪಾದಗಳ ಮೇಲೆ ಕೂದಲು ಉದುರುವಿಕೆ

 • ಮುರಿಯುವ ಮತ್ತು ನಿಧಾನವಾಗಿ ಬೆಳೆಯುವ ಕಾಲ್ಬೆರಳು ಉಗುರುಗಳು

 • ನಿಮ್ಮ ಪಾದಗಳು ಮತ್ತು ಕಾಲುಗಳ ಮೇಲೆ ಹುಣ್ಣುಗಳು ಆಗುವುದು ಮತ್ತು ಅವುಗಳು ಗುಣವಾಗದೆ ಇರುವುದು

 • ನಿಮ್ಮ ಕಾಲುಗಳ ಮೇಲಿನ ಚರ್ಮದ ಬಣ್ಣ ಬದಲಾಗುವುದು, ಉದಾಹರಣೆಗೆ ಮಸುಕಾದ ಅಥವಾ ನೀಲಿ ಬಣ್ಣಕ್ಕೆ ತಿರುಗುವುದು

 • ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುವುದು


ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ
ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೇಗಿದೆ ಅಂತ ಒಮ್ಮೆ ಪರೀಕ್ಷಿಸಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಲಿಪಿಡ್ ಪ್ಯಾನಲ್ ಅಥವಾ ಲಿಪಿಡ್ ಪ್ರೊಫೈಲ್ ಎಂದೂ ಕರೆಯಲ್ಪಡುವ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಿರಿ. ಇದು ಒಟ್ಟು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್, ಎಲ್‌ಡಿಎಲ್ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಗಳನ್ನು ವರದಿ ಮಾಡುತ್ತದೆ.

ಇದನ್ನೂ ಓದಿ:  Diabetes Diet Plan: ಮಧುಮೇಹ ಸಮಸ್ಯೆ ಇದ್ರೆ ಈ ಆಹಾರ ಪದ್ಧತಿ ಫಾಲೋ ಮಾಡಿ

ಮೆಯೋ ಕ್ಲಿನಿಕ್ ಪ್ರಕಾರ, ಸಾಮಾನ್ಯವಾಗಿ ನೀವು ಪರೀಕ್ಷೆಗೆ ಮೊದಲು ಒಂಬತ್ತರಿಂದ 12 ಗಂಟೆಗಳವರೆಗೆ ನೀರನ್ನು ಹೊರತು ಪಡಿಸಿ ಯಾವುದೇ ಆಹಾರ ಅಥವಾ ದ್ರವಗಳನ್ನು ಸೇವಿಸದೆ ಉಪವಾಸ ಮಾಡಬೇಕಾಗುತ್ತದೆ. ಆದಾಗ್ಯೂ, ಕೆಲವು ಕೊಲೆಸ್ಟ್ರಾಲ್ ಪರೀಕ್ಷೆಗಳಿಗೆ ಉಪವಾಸದ ಅಗತ್ಯವಿಲ್ಲ, ಆದ್ದರಿಂದ ನಿಮ್ಮ ವೈದ್ಯರನ್ನು ಮೊದಲು ಸಂಪರ್ಕಿಸಿ.

ಅಧಿಕ ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುವ ಅಂಶಗಳು ಅನಾರೋಗ್ಯಕರ ಕೊಲೆಸ್ಟ್ರಾಲ್ ಮಟ್ಟಗಳು ಏರಲು ಕಾರಣವಾಗಬಹುದು. ಕಳಪೆ ಆಹಾರದಿಂದ ಅಂದರೆ ಸ್ಯಾಚುರೇಟೆಡ್ ಕೊಬ್ಬು ಅಥವಾ ಟ್ರಾನ್ಸ್ ಕೊಬ್ಬುಗಳನ್ನು ಅತಿಯಾಗಿ ತಿನ್ನುವುದು, ಬೊಜ್ಜು, ದೈಹಿಕ ನಿಷ್ಕ್ರಿಯತೆ, ಧೂಮಪಾನ ಮತ್ತು ಮದ್ಯ ಸೇವನೆಯು ಹೆಚ್ಚಿನ ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ವಯಸ್ಸು ಸಹ ಅನಾರೋಗ್ಯಕ್ಕೆ ಸಾಮಾನ್ಯ ಅಪಾಯದ ಅಂಶವಾಗಬಹುದು.

ಈ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿರಿ
ಡಯಟ್, ವ್ಯಾಯಾಮಗಳಿಂದ ಹಿಡಿದು ನಿಯಮಿತ ಸ್ಕ್ರೀನಿಂಗ್ ಗಳವರೆಗೆ, ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಇತರ ಹೃದಯ ರಕ್ತನಾಳದ ಕಾಯಿಲೆಗಳ ನಿಮ್ಮ ಅಪಾಯವನ್ನು ಬಹಳಷ್ಟು ತಡೆಗಟ್ಟಬಹುದು.

ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ ಜೀವನಶೈಲಿಯ ಪಾತ್ರ ತುಂಬಾನೇ ಮಹತ್ವದ್ದಾಗಿದೆ. ನಿಮ್ಮ ಜೀವನದಲ್ಲಿ ನೀವು ತರಬೇಕಾದ ಕೆಲವು ಜೀವನಶೈಲಿ ಬದಲಾವಣೆಗಳು ಈ ಕೆಳಗಿನಂತಿವೆ ನೋಡಿ.

 • ಹೃದಯ ಆರೋಗ್ಯಕರ, ಎಣ್ಣೆರಹಿತ ಆಹಾರಗಳನ್ನು ಸೇವಿಸಿ. ಹೆಚ್ಚಾಗಿ ಬೀಜಗಳು ಮತ್ತು ಆವಕ್ಯಾಡೊದಂತಹ ಆರೋಗ್ಯಕರ ಕೊಬ್ಬುಗಳನ್ನು ಸೇವಿಸಿರಿ.

 • ನಿಯಮಿತವಾಗಿ ವ್ಯಾಯಾಮ ಮಾಡಿ, ಪ್ರತಿದಿನ ವಾಯುವಿಹಾರಕ್ಕೆ ತಪ್ಪದೆ ಹೋಗಿ.

 • ಧೂಮಪಾನ ಮತ್ತು ಮದ್ಯ ಸೇವನೆಯನ್ನು ಮಿತಿಗೊಳಿಸುವುದು.

 • ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ, ಆರೋಗ್ಯಕರ ಆಕಾರವನ್ನು ಪಡೆಯುವ ಗುರಿಯನ್ನು ಹೊಂದಿರಿ.

 • ನಿಮ್ಮ ರೋಗಗಳ ಅಪಾಯವನ್ನು ಹೆಚ್ಚಿಸುವಂತಹ ಸಕ್ಕರೆಯುಕ್ತ, ಸಂಸ್ಕರಿಸಿದ ಆಹಾರಗಳಿಂದ ಆದಷ್ಟು ದೂರವಿರಿ.


ಗಮನಿಸಬೇಕಾದ ಪ್ರಮುಖ ಅಂಶಗಳು
ಸೈಲೆಂಟ್ ಕಿಲ್ಲರ್ ಎಂದು ಕರೆಯಲ್ಪಡುವ, ಹೆಚ್ಚಿನ ಕೊಲೆಸ್ಟ್ರಾಲ್ ಜೈವಿಕ ವ್ಯವಸ್ಥೆಯ ಮೇಲೆ ಅದರ ತುಂಬಾ ತಡವಾಗುವವರೆಗೆ ಯಾವುದೇ ಪರಿಣಾಮವನ್ನು ತೋರಿಸುವುದಿಲ್ಲ. ಇದು ಹೃದಯದ ಆರೋಗ್ಯಕ್ಕೆ ಅಪರಿಮಿತ ಅಪಾಯವನ್ನುಂಟು ಮಾಡುತ್ತದೆ. ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟಕ್ಕೆ ಸಂಬಂಧಿಸಿದ ಹಲವಾರು ಇತರ ಮಾರಣಾಂತಿಕ ತೊಡಕುಗಳಿವೆ.

ಇದನ್ನೂ ಓದಿ:  Avascular Necrosis: ಕೀಲು ನೋವಿದೆಯಾ? ಮೂಳೆಗಳ ಮರಣ ಸ್ಥಿತಿಯ ಅವಾಸ್ಕುಲರ್ ನೆಕ್ರೋಸಿಸ್ ಬಗ್ಗೆ ಇರಲಿ ಎಚ್ಚರ

ಆದ್ದರಿಂದ ನಿಯಮಿತವಾಗಿ ಈ ಕೊಲೆಸ್ಟ್ರಾಲ್ ಮಟ್ಟದ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಅತ್ಯಗತ್ಯ. ನಿಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿರಿ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಸಹ ಅತ್ಯಗತ್ಯ. ಋತುಮಾನದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ, ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ತಂಬಾಕು ಮತ್ತು ಮದ್ಯ ಸೇವಿಸುವುದನ್ನು ಬಿಡಿ.
Published by:Ashwini Prabhu
First published: