Mental Health: ಕೆಲಸದಿಂದಾಗಿ ತೀವ್ರ ಒತ್ತಡದಲ್ಲಿದ್ದೀರಾ? ಹಾಗಿದ್ರೆ ಈ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಿ,

ಮುಖ್ಯವಾಗಿ ಇದು ಕೆಲಸಕ್ಕೆ ಸಂಬಂಧಿಸಿದ ಒತ್ತಡದ ವೇಳೆ ತುಂಬಾ ಜನರು ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಹಣವೇ ಮುಖ್ಯ ಎಂಬ ಸ್ಥಿತಿ ಈಗಿನದ್ದು. ಜಗತ್ತಿನಲ್ಲಿ ಎಲ್ಲರೂ ಹಣ ಗಳಿಕೆಗೆ ಮುಂದಾಗುತ್ತಾರೆ. ಪರಿಣಾಮ ಮಾನಸಿಕ ಮತ್ತು ದೈಹಿಕ ಒತ್ತಡ ಪ್ರತಿನಿತ್ಯ ಅನುಭವಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಮ್ತಿಯಾಜ್ ಅಲಿ ನಿರ್ದೇಶನದ ರಾಕ್‌ಸ್ಟಾರ್ ಚಿತ್ರದ (Movie) ಮೂಲಕ ಬಾಲಿವುಡ್‌ (Bollywood) ಪ್ರವೇಶಿಸಿ ತನ್ನ ವೃತ್ತಿ ಜೀವನ (Career Life) ಪ್ರಾರಂಭಿಸಿದ ಅಮೇರಿಕನ್ ನಟಿ (American Actress) ನರ್ಗಿಸ್ ಫಕ್ರಿ, ಕೆಲಸದಿಂದಾಗಿ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾರೆ. ಸುದ್ದಿ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಬಾಲಿವುಡ್ ರ್ಯಾಟ್ ರೇಸ್ ಇದ್ದಂತೆ. ಇದು ಎಂದಿಗೂ ನಿಲ್ಲುವುದಿಲ್ಲ. ನೀವು ಅನುಭವಿಸುವ ಒತ್ತಡ ಮತ್ತು ಮಾನಸಿಕ ಒತ್ತಡವನ್ನು ವಿವರಿಸಲಾಗಲ್ಲ. ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದೆ. ಹಾಗಾಗಿ ಕೆಲ ಕಾಲ ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ಮಾನಸಿಕ ಆರೋಗ್ಯ ಮಾನವ ಜೀವನದ ಅತ್ಯಂತ ನಿರ್ಲಕ್ಷ್ಯದ ಅಂಶ ಎನ್ನುತ್ತಾರೆ ಅವರು.

  ಕೆಲಸಕ್ಕೆ ಸಂಬಂಧಿಸಿದ ಒತ್ತಡ

  ಮುಖ್ಯವಾಗಿ ಇದು ಕೆಲಸಕ್ಕೆ ಸಂಬಂಧಿಸಿದ ಒತ್ತಡದ ವೇಳೆ ತುಂಬಾ ಜನರು ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಹಣವೇ ಮುಖ್ಯ ಎಂಬ ಸ್ಥಿತಿ ಈಗಿನದ್ದು. ಜಗತ್ತಿನಲ್ಲಿ ಎಲ್ಲರೂ ಹಣ ಗಳಿಕೆಗೆ ಮುಂದಾಗುತ್ತಾರೆ. ಪರಿಣಾಮ ಮಾನಸಿಕ ಮತ್ತು ದೈಹಿಕ ಒತ್ತಡ ಪ್ರತಿನಿತ್ಯ ಅನುಭವಿಸುತ್ತಾರೆ. ಪ್ರತಿದಿನ ಹೊಸ ಗುರಿ, ಇಮೇಲ್‌, ಸಂದೇಶ, ಕರೆಗಳು ತುಂಬಾ ಸಮಯ ತೆಗೆದುಕೊಳ್ಳುತ್ತವೆ.

  ವ್ಯಕ್ತಿಯು ಒಂದು ನಿಮಿಷವೂ ಶಾಂತವಾಗಿರಲು ಅವಕಾಶವಿಲ್ಲದಂತಾಗುತ್ತದೆ. ಒಂದಿಷ್ಟು ಟೆನ್ಷನ್ ಆಗುವುದು ಸಹಜ. ಆದರೆ ಕೆಲಸದ ಒತ್ತಡವು 24 ಗಂಟೆಗಳ ಕಾಲ ಇದ್ದರೆ ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕಾಗುತ್ತದೆ.

  ಇದನ್ನೂ ಓದಿ: ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ಕಿರುತೆರೆ ನಟಿ! ಅವರ ಆಹಾರ ಪದ್ಧತಿ ಹೀಗಿದೆ

  ಜೀವನದ ಪ್ರತಿ ಹಂತದಲ್ಲೂ ಮಾನಸಿಕ ಆರೋಗ್ಯ ಮುಖ್ಯ

  ಸಿಡಿಸಿ ಪ್ರಕಾರ ಮಾನಸಿಕ ಆರೋಗ್ಯವು ನಮ್ಮ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮ ಹೊಂದಿದೆ. ನಾವು ಏನನ್ನು ಯೋಚಿಸುತ್ತೇವೆ. ಯಾವುದನ್ನು ಹೇಗೆ ಭಾವಿಸುತ್ತೇವೆ. ಮತ್ತು ವರ್ತಿಸುತ್ತೇವೆ ಎಂಬುದರ ಮೇಲೆ ಇದು ಪರಿಣಾಮ ಬೀರುತ್ತದೆ.

  ನಾವು ಒತ್ತಡ ಹೇಗೆ ನಿಭಾಯಿಸುತ್ತೇವೆ, ನಾವು ಹೇಗೆ ಆಯ್ಕೆ ಮಾಡುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ. ಜೀವನದ ಪ್ರತಿ ಹಂತದಲ್ಲೂ ಮಾನಸಿಕ ಆರೋಗ್ಯ ಮುಖ್ಯ. ಈ ರೀತಿ ಕೆಲಸದ ಒತ್ತಡ ಹೆಚ್ಚಾದಾಗ ಒತ್ತಡ ಹೇಗೆ ನಿಭಾಯಿಸಬೇಕು ಎಂದು ತಿಳಿಯೋಣ.

  ಮಾನಸಿಕ ಆರೋಗ್ಯ ಏಕೆ ಮುಖ್ಯ?

  ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯ ಮುಖ್ಯ. ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆಯು ವಿವಿಧ ದೈಹಿಕ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ. ಮಧುಮೇಹ, ಹೃದ್ರೋಗ ಮತ್ತು ಪಾರ್ಶ್ವವಾಯು ಸೇರಿದಂತೆ ದೀರ್ಘಕಾಲದ ಅಪಾಯದ ಉಪಸ್ಥಿತಿ ಮಾನಸಿಕ ಅಸ್ವಸ್ಥತೆ ಅಪಾಯ ಹೆಚ್ಚಿಸುತ್ತದೆ.

  ಮಾನಸಿಕ ಒತ್ತಡದ ಲಕ್ಷಣಗಳು ಯಾವವು?

  ಆಯಾಸ, ತಲೆನೋವು, ನಿದ್ರಾಹೀನತೆ, ಹಸಿವು ಬದಲಾವಣೆ, ಜೀರ್ಣಕಾರಿ ಸಮಸ್ಯೆ, ಹೃದಯ ಬಡಿತ ಹೆಚ್ಚುವುದು, ಬೆವರುವಿಕೆ, ಕಡಿಮೆ ಆತ್ಮವಿಶ್ವಾಸ, ಲೈಂಗಿಕ ಡ್ರೈವ್ ನಷ್ಟ, ಮರುಕಳಿಸುವ ರೋಗ

  ಒತ್ತಡದ ಕಾರಣ ಗುರುತಿಸಿ

  ಒತ್ತಡ ಅನುಭವಿಸುವ ವೇಳೆ ಏನಾಗುತ್ತಿದೆ ಎಂಬುದನ್ನು ಕಂಡು ಹಿಡಿಯಲು ಪ್ರಯತ್ನಿಸಿ. ನಿಮ್ಮ ಒತ್ತಡದ ಪ್ರಚೋದಕಗಳು ಮತ್ತು ನಿಮ್ಮ ಪ್ರತಿಕ್ರಿಯೆ ಟ್ರ್ಯಾಕ್ ಮಾಡಲು 1 ವಾರ ಟ್ರೈ ಮಾಡಿ. ನಿಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ಒತ್ತಡ ಹೇರಿರುವ ಜನರು, ಸ್ಥಳ ಮತ್ತು ಘಟನೆಗಳನ್ನು ಸೇರಿಸಿ.

  ನಿಮ್ಮೊಂದಿಗೆ ಸಮಯ ಕಳೆಯಿರಿ

  ಬಿಡುವಿಲ್ಲದ ದಿನದಲ್ಲಿ ನಿಮ್ಮೊಂದಿಗೆ ನೀವು ಸಮಯ ಕಳೆಯಿರಿ. ಬ್ಯುಸಿ ಕೆಲಸದ ವೇಳಾಪಟ್ಟಿಯ ನಡುವೆ, ಆಸಕ್ತಿದಾಯಕ ಪಾಡ್‌ಕ್ಯಾಸ್ಟ್ ಆಲಿಸಿ, ಹಾಸ್ಯ ಭರಿತ ವಿಡಿಯೋ ನೋಡಿ. ಇದು ಒತ್ತಡದಿಂದ ನಿಮ್ಮನ್ನು ಉಳಿಸಬಹುದು. ಸ್ವಲ್ಪ ಸಮಯ ಮೊಬೈಲ್ ನಿಂದ ದೂರವಿರಿ. ವಿರಾಮ ತೆಗೆದುಕೊಳ್ಳಿ.

  ವಿಶ್ರಾಂತಿ ಪಡೆಯುವ ತಂತ್ರಗಳು

  ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳು ನಿಮ್ಮ ಆತಂಕ ಕಡಿಮೆ ಮಾಡುತ್ತವೆ. ಇರುವ ಸಮಯವನ್ನು ಆನಂದಿಸಲು ಮತ್ತು ಸರಳವಾದ ಚಟುವಟಿಕೆ ರಚಿಸಿ ಆನಂದಿಸಲು ಗಮನಹರಿಸಿ. ಪ್ರತಿದಿನ ಕೆಲವು ನಿಮಿಷ ಶಾಂತವಾಗಿ ಕೆಲ ಚಟುವಟಿಕೆಗಳಲ್ಲಿ ಕಳೆಯಿರಿ. ಯೋಗ, ಧ್ಯಾನ ಮಾಡಿ. ಎಂಟು ಗಂಟೆಗಳ ನಿದ್ರೆ ಮಾಡಿ. ವಿನೋದಕ್ಕಾಗಿ ಸಮಯ ಮೀಸಲಿಡಿ. ಸರಿಯಾದ ಆಹಾರ ಮತತು ನೀರು ಸೇವಿಸಿ.

  ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡುತ್ತದೆ ಕೆಂಪು ಬೆಂಡೆಕಾಯಿ! ಇಲ್ಲಿದೆ ಇದರ ಆರೋಗ್ಯ ಗುಣಗಳು

  ನಕಾರಾತ್ಮಕ ಚಿಂತನೆ

  ದೀರ್ಘಕಾಲದ ಆತಂಕ ಮತ್ತು ದೀರ್ಘಕಾಲದ ಒತ್ತಡ ಅನುಭವಿಸಿದಾಗ ನಕಾರಾತ್ಮಕ ಆಲೋಚನೆ ಹುಟ್ಟುತ್ತವೆ. ತಕ್ಷಣವೇ ಯಾವುದೇ ನಿರ್ಧಾರಕ್ಕೆ ಬಾರದೇ ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ.
  Published by:renukadariyannavar
  First published: