• Home
  • »
  • News
  • »
  • lifestyle
  • »
  • Prediabetes: ನೀವು ಪ್ರೀ ಡಯಾಬಿಟಿಕ್‌ ಆಗಿದ್ದರೆ ಈ 5 ಆಹಾರಗಳಿಂದ ದೂರ ಇರಿ

Prediabetes: ನೀವು ಪ್ರೀ ಡಯಾಬಿಟಿಕ್‌ ಆಗಿದ್ದರೆ ಈ 5 ಆಹಾರಗಳಿಂದ ದೂರ ಇರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಸಿಹಿತಿಂಡಿಗಳು ಬಹಳಷ್ಟು ಸ್ಯಾಚುರೇಟೆಡ್ ಕೊಬ್ಬನ್ನು ಸಂಗ್ರಹಿಸುವುದಲ್ಲದೇ ಇನ್ಸುಲಿನ್ ಹಾರ್ಮೋನುಗಳ ಉತ್ಪಾದನೆಯ ಮೇಲೂ ಪ್ರಭಾವ ಬೀರುತ್ತವೆ.

  • Trending Desk
  • 3-MIN READ
  • Last Updated :
  • Share this:

ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯವನ್ನು (Health) ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಇತ್ತೀಚಿಗೆ ಸಾಮಾನ್ಯ ಎನ್ನುವಂತಾಗಿರುವ ಬಿಪಿ (Blood Pressure), ಶುಗರ್‌ (Sugar), ಕೊಲೆಸ್ಟ್ರಾಲ್‌ (cholesterol), ಹಾರ್ಮೋನ್‌ ಸಮಸ್ಯೆಗಳನ್ನು ಬಂದ ಮೇಲೆ ನಿಯಂತ್ರಿಸೋದಕ್ಕಿಂತ ಬರುವ ಮೊದಲೇ ಎಚ್ಚರಿಕೆ ವಹಿಸೋದು ಜಾಣ ನಡೆಯಾಗುತ್ತೆ. ಮಧುಮೇಹ ಅನ್ನೋದು ಇಂದು ಕಾಮನ್‌ ಖಾಯಿಲೆಯಾದರೂ ಅದು ಬಹಳ ಅಪಾಯಕಾರಿ. ರಕ್ತದಲ್ಲಿ ಹೆಚ್ಚಾಗುವ ಸಕ್ಕರೆ ಪ್ರಮಾಣವು (Sugar Level) ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೇ ಕಣ್ಣು ಮತ್ತು ಮೂತ್ರಪಿಂಡಗಳಂತಹ ನಮ್ಮ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.


ಇನ್ನು ನೀವು ಪ್ರಿ-ಡಯಾಬಿಟಿಕ್ ಅಥವಾ ಪೂರ್ವ ಮಧುಮೇಹಿಗಳಾಗಿದ್ದರೆ, ಇನ್ನಷ್ಟು ಎಚ್ಚರಿಕೆಯನ್ನು ವಹಿಸಬೇಕು. ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿದ್ದರೂ ಅದು ಬಾರ್ಡರ್‌ ಅಂಚಿನಲ್ಲಿರುವ ಕಾರಣ ನೀವು ಮಧುಮೇಹಿ ಅಂತ ಅನ್ನಿಸಿಕೊಂಡಿರುವುದಿಲ್ಲ. ಆದ್ರೆ ಮಧುಮೇಹ ಪೂರ್ವ ಸ್ಥಿತಿಯಲ್ಲಿರುವಾಗ ಯಾವಾಗ ಬೇಕಾದರೂ ಹೆಚ್ಚಾಗಬಹುದು. ಆದ್ದರಿಂದ ನೀವು ನಿಮ್ಮ ಆಹಾರ ಕ್ರಮದಲ್ಲಿ ಕಟ್ಟುನಿಟ್ಟಾಗಿರುವುದು ಅತ್ಯಂತ ಅಗತ್ಯ.


ನೀವು ಪೂರ್ವ ಮಧುಮೇಹಿಗಳಾಗಿದ್ದಲ್ಲಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕಾದದ್ದು ಅತ್ಯಗತ್ಯ. ಹಾಗೆಯೇ ಈ 5 ಆಹಾರ ಪದಾರ್ಥಗಳ ಸೇವನೆಯಿಂದ ದೂರವಿದ್ದರೆ ನೀವು ಮಧುಮೇಹದಿಂದಲೂ ದೂರವಿರಬಹುದು.


ಸಿಹಿ ತಿಂಡಿಗಳಿಗೆ ನೋ ಹೇಳಿ


ನೀವು ಪ್ರೀ ಡಯಾಬಿಡಿಕ್‌ ಆಗಿದ್ದರೆ ಸಿಹಿತಿಂಡಿಗಳನ್ನು ತ್ಯಜಿಸುವ ನಿರ್ಧಾರ ಕೈಗೊಳ್ಳಲೇಬೇಕು. ಸಾಂಪ್ರದಾಯಿಕ ದೇಸಿ ಮಿಠಾಯಿ, ಪೇಸ್ಟ್ರಿಗಳು, ಕುಕೀಗಳು, ಕೇಕ್‌, ಮಿಠಾಯಿ,ಲಡ್ಡು, ಡೋನಟ್‌ ಮುಂತಾದವುಗಳಿಗೆ ನೋ ಹೇಳಲೇಬೇಕು.


are you pre prediabetes avoid these foods stg mrq
ಸಾಂದರ್ಭಿಕ ಚಿತ್ರ


ಈ ಸಿಹಿತಿಂಡಿಗಳು ಬಹಳಷ್ಟು ಸ್ಯಾಚುರೇಟೆಡ್ ಕೊಬ್ಬನ್ನು ಸಂಗ್ರಹಿಸುವುದಲ್ಲದೇ ಇನ್ಸುಲಿನ್ ಹಾರ್ಮೋನುಗಳ ಉತ್ಪಾದನೆಯ ಮೇಲೂ ಪ್ರಭಾವ ಬೀರುತ್ತವೆ.


ಸಿಹಿಯಾದ ಪಾನೀಯಗಳನ್ನು ತಪ್ಪಿಸಿ


 ಪ್ಯಾಕ್ ಮಾಡಲಾದ ಪಾನೀಯಗಳು, ಕೂಲ್‌ ಡ್ರಿಂಕ್ಸ್‌ ಗಳು ಎಲ್ಲರಿಗೂ ಇಷ್ಟವಾಗುತ್ತವೆ. ಆದ್ರೆ ಇದು ಆರೋಗ್ಯಕ್ಕೆ ಅಷ್ಟೇ ಕೆಟ್ಟದ್ದು. ಇಂತ ಪಾನೀಯಗಳು ರಕ್ತದಲ್ಲಿನ ಸಕ್ಕರೆ ಹೆಚ್ಚಳಕ್ಕೆ ಕಾರಣವಾಗಿದೆ. ಆರೋಗ್ಯಕ್ಕೆ ಬೇಕಾಗುವಂಥ ಫೈಬರ್‌ ಆಗಲೀ, ಪ್ರೋಟೀನ್‌ ಆಗಲಿ ಅಥವಾ ಇನ್ಯಾವುದೇ ಪೌಷ್ಠಿಕಾಂಶಗಳನ್ನು ಅವು ಹೊಂದಿರೋದಿಲ್ಲ. ಅಲ್ಲದೇ ಇವು ನಿಮ್ಮ ಜೀರ್ಣವ್ಯವಸ್ಥೆಯನ್ನೂ ನಿಧಾನಗೊಳಿಸುತ್ತವೆ.


ಇದನ್ನೂ ಓದಿ:  Food And Dreams: ರಾತ್ರಿ ಈ ಆಹಾರದ ಸೇವನೆ ಕೆಟ್ಟ ಕನಸುಗಳಿಗೆ ಕಾರಣ ಆಗುತ್ತೆ!


ನೀವು ಪೂರ್ವ-ಮಧುಮೇಹಿಗಳಾಗಿದ್ದರೆ ಅಂಥ ಪ್ಯಾಕ್ಡ್‌ ಕೂಲ್‌ ಡ್ರಿಂಕ್ಸ್‌ ಗಳು, ಜ್ಯೂಸ್‌ ಗಳು ಹಾಗೂ ಸಿಹಿಯಾದ ಕೇಫೀನ್‌ ಹೊಂದಿರುವ ಪಾನೀಯಗಳಿಂದ ದೂರವಿರಬೇಕು.


ಫಾಸ್ಟ್ ಫುಡ್ ಗೆ ಕಡಿವಾಣ ಹಾಕಿ


ಫಾಸ್ಟ್‌ ಫುಡ್‌ ಸೇವನೆ ಇಂದಿನ ಟ್ರೆಂಡ್.‌ ಆದ್ರೆ ಇದು ಎಷ್ಟು ರುಚಿಕರವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, ಫಾಸ್ಟ್-ಫುಡ್ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲ್ಲದೇ, ಇನ್ಸುಲಿನ್ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೇ ಪಿಜ್ಜಾ, ಬರ್ಗರ್‌, ಬೇಕರಿ ತಿಂಡಿಗಳು, ಫ್ರೈಸ್‌ ಗಳು ಬೊಜ್ಜು ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚು ಮಾಡುತ್ತದೆ.


ಒಮ್ಮೆಲೇ ಇದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದೇ ಹೋದರೂ ನಿಧಾನವಾಗಿ ಕಡಿಮೆ ಮಾಡುತ್ತಾ ಬಂದು ನಂತರ ಸಂಪೂರ್ಣವಾಗಿ ಬಿಟ್ಟುಬಿಡಿ.


are you pre prediabetes avoid these foods stg mrq
ಸಾಂದರ್ಭಿಕ ಚಿತ್ರ


ಉಪಹಾರದ ಧಾನ್ಯಗಳನ್ನು ಎಚ್ಚರಿಕೆಯಿಂದ ಆರಿಸಿ:


ಕೆಲವಷ್ಟು ಆಹಾರಗಳು ಮಾಡಲು ಸುಲಭ ಎಂದು ಅವುಗಳನ್ನು ನೀವು ಆಯ್ಕೆ ಮಾಡಬಹುದು. ಆದ್ರೆ ನೀವು ನೆನಪಿಡಬೇಕಾದ ಮುಖ್ಯ ಅಂಶಗಳೆಂದರೆ ಹೆಚ್ಚಿನ ಪ್ಯಾಕ್ ಮಾಡಲಾದ ಧಾನ್ಯಗಳನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ. ಜೊತೆಗೆ ಅವುಗಳಿಗೆ ಸಕ್ಕರೆಯನ್ನು ಸೇರಿಸಲಾಗಿರುತ್ತದೆ. ಹೆಚ್ಚಿನ ಜನಪ್ರಿಯ ಧಾನ್ಯಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ನೀವು ಪ್ರೀ ಡಯಾಬಿಟಿಕ್‌ ಆಗಿದ್ದರೆ ಪಾಕ್ಡ್‌ ಫುಡ್‌ ಸೇವನೆಯನ್ನು ಆದಷ್ಟೂ ತಪ್ಪಿಸಿ.


ಇದನ್ನೂ ಓದಿ:  Diabetes: ಈ ಸಸ್ಯದ ಎಲೆಯನ್ನು ಸೇವಿಸುವುದರಿಂದ ಡಯಾಬಿಟಿಸ್‌ ಕಡಿಮೆ ಆಗುತ್ತಂತೆ!


ಸಂಸ್ಕರಿಸಿದ ಧಾನ್ಯಗಳಿಂದ ದೂರವಿರಿ


 ಬಿಳಿ ಬ್ರೆಡ್, ಬಿಳಿ ಅಕ್ಕಿ ಮತ್ತು ಮೈದಾದಿಂದ ಮಾಡಿರುವ ಪಾಸ್ಟಾ ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತವೆ. ನೀವು ಮಧುಮೇಹದಿಂದ ಪಾರಾಗಬೇಕು ಎಂದಿದ್ದರೆ ಅವುಗಳ ಬದಲಿಗೆ ಬ್ರೌನ್ ಬ್ರೆಡ್, ಬ್ರೌನ್ ರೈಸ್ ಮತ್ತು ಗೋಧಿ ಪಾಸ್ಟಾಗಳಿಗೆ ಬದಲಾಯಿಸಿ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು