Weight Loss Diet: ತೂಕ ಇಳಿಸೋಕೆ ಡಯಟ್ ಮಾಡ್ತೀರಾ? ಮೊಸರಿನ ಈ ರೆಸಿಪಿ ಟ್ರೈ ಮಾಡಿ

ತೂಕ ಇಳಿಕೆಗೆಂದೇ ಡಯೆಟ್‌ ಮಾಡುವವರು ಮೊಸರನ್ನು ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಮೊಸರು ಆರೋಗ್ಯಯುತ, ಪ್ರೋಟೀನ್‌ಯುಕ್ತ ಆಹಾರ. ನಿಮ್ಮ ಡಯೆಟ್‌ ಗೆ ಇದು ಎಡಿಶನಲ್‌ ಆಗೋದಂತೂ ಸತ್ಯ.

ಮೊಸರು

ಮೊಸರು

 • Share this:
  ಮಾನಸಿಕ ಒತ್ತಡ (Mental stress), ಬದಲಾದ ಜೀವನ ಶೈಲಿಯಿಂದಾಗಿ ಒಬೆಸಿಟಿ ಅಥವಾ ಬೊಜ್ಜು ಅನ್ನೋದು ಈ ಕಾಲದ ಪ್ರಮುಖ ಆರೋಗ್ಯ ಸಮಸ್ಯೆ (Health Problem). ತೂಕ ಏರೋದು ಸುಲಭ ಆದ್ರೆ ಅದೇ ತೂಕ ಇಳಿಸೋವಂಥ ಕಷ್ಟ ಮತ್ತೊಂದಿಲ್ಲ. ಅದರಲ್ಲೂ ಪಿಸಿಒಡಿ, ಪಿಸಿಒಎಸ್‌ ನಂಥ ಹಾರ್ಮೋನು ಸಮಸ್ಯೆಗಳಿರೋರ ಪಾಲಿಗಂತೂ ತೂಕ ಏರಿಕೆ ದೊಡ್ಡ ಸಮಸ್ಯೆ. ಆದರೆ ಬೊಜ್ಜಿನಿಂದ (Fat) ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಆರೋಗ್ಯವಂತರಾಗಿರಬೇಕು ಎಂದಾದರೆ ತೂಕ ಇಳಿಸಿಕೊಳ್ಳೋದು (Weight Loss) ಅನಿವಾರ್ಯ. ತೂಕ ಇಳಿಕೆಯಲ್ಲಿ ಎರಡು ಅಂಶಗಳ ಪ್ರಮುಖ ವಾಗುತ್ತದೆ. ಒಂದು ವ್ಯಾಯಾಮ, ಇನ್ನೊಂದು ಡಯೆಟ್ (Diet).‌

  ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುವಾಗ ಆಹಾರವನ್ನು ಕಡಿಮೆ ಸೇವಿಸುವುದು ಹಾಗೂ ಸರಿಯಾದ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಪ್ರೋಟೀನ್‌ ಯುಕ್ತ ಆಹಾರ ತೆಗೆದುಕೊಳ್ಳದೇ ಹೋದಲ್ಲಿ ಮತ್ತಷ್ಟು ಆರೋಗ್ಯ ಸಮಸ್ಯೆಗೆ ಸಿಲುಕಿಕೊಳ್ಳುತ್ತೇವೆ.

  ತೂಕ ಇಳಿಕೆಗೆಂದೇ ಡಯೆಟ್‌ ಮಾಡುವವರು ಮೊಸರನ್ನು ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಮೊಸರು ಆರೋಗ್ಯಯುತ, ಪ್ರೋಟೀನ್‌ಯುಕ್ತ ಆಹಾರ. ನಿಮ್ಮ ಡಯೆಟ್‌ ಗೆ ಇದು ಎಡಿಶನಲ್‌ ಆಗೋದಂತೂ ಸತ್ಯ. ದಿನವೂ ಒಂದೇ ರೀತಿಯ ಆಹಾರ ಸೇವಿಸಿದರೆ ಬೋರ್‌ ಆಗೋದಂತೂ ಖಂಡಿತ. ಅದಕ್ಕಾಗಿಯೇ ಮೊಸರಿನ 5 ವಿವಿಧ ವೆರೈಟಿ ರೆಸಿಪಿಗಳನ್ನು ನಿಮ್ಮ ಮುಂದೆ ತಂದಿದ್ದೀವಿ. ಇದು ಕೇವಲ ಹೆಲ್ತಿ ಮಾತ್ರವಲ್ಲದೇ ಸಖತ್‌ ರುಚಿಕರವೂ ಹೌದು.

  ಓಟ್ಸ್‌ ದಹಿ ಮಸಾಲಾ
  ತೂಕ ಇಳಿಕೆಗೆ ಓಟ್ಸ್‌ ನಷ್ಟು ಬೆಸ್ಟ್‌ ಆಹಾರ ಮತ್ತೊಂದಿಲ್ಲ. ನೀವು ಈಗಾಗಲೇ ತೂಕ ಇಳಿಕೆಯ ಡಯೆಟ್‌ ಮಾಡ್ತಿದ್ದೀರಿ ಎಂದಾದರೆ ಓಟ್ಸ್‌ ನ ಬೇರೆ ಬೇರೆ ರೆಸಿಪಿಗಳನ್ನು ಟ್ರೈ ಮಾಡಿಯೇ ಇರ್ತೀರ. ಒಂದು ಬೌಲ್‌ ಓಟ್ಸ್‌ ತೆಗೆದುಕೊಂಡು ಅದನ್ನು ಸಾಫ್ಟ್‌ ಆಗುವವರೆಗೂ ಬೇಯಿಸಿ.

  ಇದನ್ನೂ ಓದಿ: Health Tips: ಮಳೆಗಾಲದಲ್ಲೂ ಫಿಟ್ ಆಗಿರೋದು ಹೇಗೆ ಅಂತ ಯೋಚನೆ ಮಾಡ್ತಾ ಇದ್ದೀರಾ? ನಿಮ್ಮ ಆಹಾರ ಪದ್ಧತಿ ಹೀಗಿರಲಿ

  ನಂತರ ಸಣ್ಣಗೆ ಕಟ್‌ ಮಾಡಿದ ಟೊಮ್ಯಾಟೋ, ಈರುಳ್ಳಿ, ಕ್ಯಾರೆಟ್‌ ಹೀಗೆ ನಿಮಗೆ ಯಾವ ತರಕಾರಿ ಇಷ್ಟವೋ ಅದೆಲ್ಲವನ್ನೂ ಸಣ್ಣಗೆ ಕಟ್‌ ಮಾಡಿ ಹಾಕಿ. ಅದಕ್ಕೆ ಒಂದು ಬೌಲ್‌ ಮೊಸರು ಸೇರಿಸಿ. ಆ ಮಿಶ್ರಣಕ್ಕೀಗ ಓಟ್ಸ್ ಸೇರಿಸಿ, ಇದಕ್ಕೀಗ ಪೆಪ್ಪರ್‌ ಪೌಟರ್‌, ಚಿಲ್ಲಿ ಪೌಡರ್‌, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಇದಕ್ಕೆ ಸ್ವಲ್ಪ ಸಾಸಿವೆ, ಕರಿಬೇವಿನ ಸೊಪ್ಪು ಹಾಗೂ ಒಣಮೆಣಸಿನ ಒಗ್ಗರಣೆ ನೀಡಿ. ಈಗ ಸಖತ್‌ ಟೇಸ್ಟಿಯಾದ ಓಟ್ಸ್‌ ದಹಿ ಮಸಾಲಾ ರೆಡಿ.

  ದಹಿ ಚನ್ನಾ ಚಾಟ್‌
  ಪ್ರೋಟೀನ್‌ ರಿಚ್‌ ಆಗಿರೋ ಕಡಲೆ ಹಾಗೂ ಮೊಸರಿನ ಕಾಂಬಿನೇಷನ್‌ ಸಖತ್‌ ಟೇಸ್ಟಿ. ಇನ್ನು ಡಯೆಟ್‌ ಮಾಡುತ್ತಿರುವವರೂ ಚಾಟ್ಸ್‌ ಥರಹದ ರೆಸಿಪಿಯನ್ನು ಸವಿಯೋ ಹಾಗಾದ್ರೆ ಅದರ ಖುಷಿನೇ ಬೇರೆ. ಮೊದಲು ಒಂದು ಬೌಲ್‌ ಕಡಲೆಯನ್ನು ಬೇಯಿಸಿ ಒಂದು ಪಾತ್ರೆಗೆ ಹಾಕಿಕೊಳ್ಳಿ.

  ನಂತರ ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಟೊಮ್ಯಾಟೋ, ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಹಾಗೂ ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ. ಜೊತೆಗೆ ೧ ಟೀಸ್ಪೂನ್‌ ಚಿಲ್ಲಿ ಫ್ಲೆಕ್ಸ್‌ ಹಾಗೂ ಚಾಟ್‌ ಮಸಾಲಾ ಸೇರಿಸಿ. ಜೊತೆಗೆ ರುಚಿಗೆ ತಕ್ಕಷ್ಟು ಬ್ಲಾಕ್‌ ಸಾಲ್ಟ್‌ ಹಾಗೂ ವೈಟ್‌ ಸಾಲ್ಟ್‌ ಅದಕ್ಕೆ 2 ಸ್ಪೂನ್‌ ಗ್ರೀನ್‌ ಚಟ್ನಿ ಹಾಗೂ 3 ಸ್ಪೂನ್‌ ಸ್ವೀಟ್‌ ಚಟ್ನಿ ಸೇರಿಸಿ. ಈಗ 2 ಕಪ್‌ ಮೊಸರು ಸೇರಿಸಿ. ಅದರ ಮೇಲೆ 4-5 ಪಾಪಡಿ ಚೂರು ಚೂರು ಮಾಡಿ ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ ಒಂದು ಬೌಲ್‌ ಸುರಿಯಿರಿ. ಈಗ ನೀವು ರುಚಿಯಾದ ದಹಿ ಚನ್ನಾ ಚಾಟ್‌ ಸವಿಯಬಹುದು.

  ದಹಿ ಚಿಕನ್‌
  ನೀವು ವೇಯ್ಟ್‌ ಲಾಸ್‌ ಫ್ರೆಂಡ್ಲಿ ಲಂಚ್‌ ರೆಸಿಪಿ ಹುಡುಕುತ್ತಿದ್ದೀರಾ ಅಂತಾದ್ರೆ ಇದೊಂದು ಬೆಸ್ಟ್‌ ರೆಸಿಪಿ. ಹೈ ಪ್ರೋಟೀನ್‌ ಹಾಗೂ ಕಡಿಮೆ ಕಾರ್ಬೋಹೈಡ್ರೇಟ್‌ ಹೊಂದಿರುವ ಈ ರೆಸಿಪಿ ಮಾಡೋದ್‌ ಅನ್ನೋದನ್ನ ನೋಡೋಣ.

  ಮೊದಲು ಎರಡೂವರೆ ಕಪ್‌ ನಷ್ಟು ಯೋಗರ್ಟ್‌ ತೆಗೆದುಕೊಂಡು ಅದಕ್ಕೆ 1 ಟೋಸ್ಪೂನ್‌ ಜೀರಿಗೆ ಪೌಡರ್‌, ಬೆಳ್ಳುಳ್ಳಿ ಪೇಸ್ಟ್‌, ಕಾಲು ಸ್ಪೂನ್‌ ಗರಮ್‌ ಮಸಾಲಾ, ಅರ್ಧ ಸ್ಪೂನ್‌ ಅರಿಶಿನ ಪುಡಿ, ಅರ್ಧ ಸ್ಪೂನ್‌ ಖಾರದ ಪುಡಿ ಸೇರಿಸಿ. ಅದಕ್ಕೆ ಅರ್ಧಕೆಜಿ ಯಷ್ಟು ಬೋನ್‌ ಲೆಸ್‌ ಚಿಕನ್‌ ಸೇರಿಸಿ. ಅದಕ್ಕೆ ಕಟ್‌ ಮಾಡಿದ ಹಸಿಮೆಣಸಿನ ಕಾಯಿ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ 30 ನಿಮಿಷಗಳ ಕಾಲ ಹಾಗೇ ಬಿಡಿ.

  ಇದನ್ನೂ ಓದಿ:  Weight Loss: ತೂಕ ಇಳಿಸುವ ಪ್ರಯಾಣಕ್ಕೆ ಕೇವಲ ವಸ್ತುಗಳು ಅಲ್ಲ, ನಿಮ್ಮ ಸ್ವಯಂಪ್ರೇರಣೆ ಹೆಚ್ಚಿಸುವ ಅಂಶಗಳೂ ಮುಖ್ಯ!

  ಪ್ಯಾನ್‌ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಕಟ್‌ ಮಾಡಿದ ಈರುಳ್ಳಿ ಸೇರಿಸಿ. ಅದು ಕೆಂಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಕಟ್‌ ಮಾಡಿದ ಟೊಮ್ಯಾಟೋ ಸೇರಿಸಿ. ಅದು ಬೇಯುತ್ತಿದ್ದಂತೆಯೇ ಅದಕ್ಕೆ ಚಿಕನ್‌ ಮಿಶ್ರಣವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚಿಕನ್‌ ಸುತ್ತಲೂ ಯೋಗರ್ಟ್‌ ತೇಲುವಂತೆ ಕಾಣುವವರೆಗೂ ಹಾಗೆಯೇ ಬಿಡಿ. ನಂತರ ಸ್ಟವ್‌ ಆಫ್‌ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಟೇಸ್ಟ್‌ ಮಾಡಿ.

  ಮಿಕ್ಸ್‌ ವೆಜ್‌ ರಾಯಿತಾ
  ತರಕಾರಿ ಹಾಗೂ ಮೊಸರಿನ ಕಾಂಬಿನೆಶನ್‌ ನ ರಾಯತ ಡಯೆಟ್‌ ಮಾಡುವವರಿಗೆ ಬೆಸ್ಟ್‌ ರೆಸಿಪಿ. ಸಖತ್‌ ಟೇಸ್ಟಿಯಾಗಿಯೂ ಇರುವ ವೆಜ್‌ ರಾಯಿತಾ ಮಾಡೋದು ಹೇಗೆ ಅಂತ ನೋಡೋಣ.

  ಒಂದು ಚಿಕ್ಕದಾಗಿ ಹೆಚ್ಚಿಕೊಂಡ ಟೊಮ್ಯಾಟೋ, ಈರುಳ್ಳಿ, ಒಂದು ಟೀಸ್ಪೂನ್‌ ಜೀರಿಗೆ ಯನ್ನು ಹುರಿದು ಕ್ರಶ್‌ ಮಾಡಿ ಹಾಕಿಕೊಳ್ಳಿ, 1 ಟೀಸ್ಪೂನ್‌ ಸಣ್ಣದಾಗಿ ಹೆಚ್ಚಿಕೊಂಡ ಹಸಿಮೆಣಸು, ಅರ್ಧ ಟೀಸ್ಪೂನ್‌ ಖಾರದ ಪುಡಿ ಇವಿಷ್ಟಕ್ಕೆ ಒಂದು ಕಪ್‌ ಮೊಸರನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ತಿನ್ನಿ.

  ಫ್ಲಾಕ್ಸ್‌ ಸೀಡ್‌ ರಾಯಿತಾ
  ಇದು ಮತ್ತೊಂದು ರಾಯಿತಾ ರೆಸಿಪಿ. ಅದೇ ಅಗಸೆ ಬೀಜ ಅಥವಾ ಫ್ಲಾಕ್ಸ್‌ ಸೀಡ್ಸ್‌ ರಾಯತ. ಮೊಸರು ಹಾಗೂ ಅಗಸೆ ಬೀಜ ಈ ಎರಡೂ ತೂಕ ಇಳಿಕೆಯಲ್ಲಿ ಮಹತ್ವದ ಪಾತ್ರವನ್ನೇ ಮಹಿಸುತ್ತೆ. ಒಮೆಗಾ 3 ಹೆಚ್ಚಾಹಿರುವ ಫ್ಲಾಕ್ಸ್‌ ಸೀಡ್ಸ ರಾಯತ ಜೀರ್ಣಕ್ರಿಯೆಗೂ ಸಹಕಾರಿ. ಹಾಗಿದ್ರೆ ಈ ರಾಯತ ಹೇಗೆ ಮಾಡೋದು ಅನ್ನೋದನ್ನ ನೋಡೋಣ.

  ಒಂದು ಕಪ್‌ ಕತ್ತರಿಸಿದ ಸೋರೆಕಾಯಿಯನ್ನು ನೀರಿನಲ್ಲಿ ಹಾಕಿ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದಕ್ಕೆ 3 ಟೀಸ್ಪೂನ್‌ ಅಗಸೆಬೀಜ, ಒಂದು ಕಪ್‌ ಮೊಸರು, ಸಣ್ಣಗೆ ಕಟ್‌ ಮಾಡಿ ಅರ್ಧ ಕಪ್‌ ಪುದೀನ ಸೊಪ್ಪು, ಒಂದೂವರೆ ಕಪ್‌ ಜೀರಿಗೆ, ಒಂದು ಕಪ್‌ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ರೆಡಿಯಾಯ್ತು ನಿಮ್ಮ ಪ್ಲಾಕ್ಸ್‌ ಸೀಡ್ಸ್‌ ರಾಯತ. ಇದನ್ನು ಒಂದು ಗಂಟೆಗಳ ಕಾಲ ಫ್ರಿಡ್ಜ್‌ ನಲ್ಲಿಟ್ಟು ನಂತರ ಸೇವಿಸಿ.

  ಇವಿಷ್ಟು ಅತ್ಯಂತ ಸುಲಭವಾದ ಮೊಸರಿನ ರೆಸಿಪಿಗಳು. ತೂಕ ಇಳಿಕೆ ಮಾಡಬೇಕು ಅಂದರೆ ಬೇಕಾದ್ದನ್ನೆಲ್ಲ ತಿನ್ನೋ ಹಾಗಿಲ್ಲ. ಕಡಿಮೆ ಕ್ಯಾಲೋರಿ ಹೆಚ್ಚಿನ ಪ್ರೋಟೀನ್‌ ಅಂಶ ಒಳಗೊಂಡ ಆಹಾರಗಳನ್ನೇ ಸೇವಿಸಬೇಕು. ಅದರಲ್ಲೂ ಹಸಿ ತರಕಾರಿಗಳನ್ನು ತಿಂದಷ್ಟೂ ಒಳ್ಳೆಯದು. ಆದ್ರೆ ಒಂದೇ ತರಹದ ತಿಂಡಿ ತಿಂದರೆ ಬೋರ್‌ ಆಗದೇ ಇರುತ್ತದೆಯೇ.. ಹೀಗೆ ಹಸಿ ತರಕಾರಿಯಲ್ಲೂ ಒಳ್ಳೊಳ್ಳೆ ರುಚಿಕರ ರೆಸಿಪಿ ಮಾಡಿ ತಿಂದರೆ ಡಯೆಟ್‌ ಮಾಡ್ತಾ ಇದೀವಿ ಅಂತಾನೇ ಅನ್ನಿಸಲ್ಲ.

  ಇದನ್ನೂ ಓದಿ:  Drinking Water: ನೀವು ಊಟದ ಮಧ್ಯೆ, ನಂತರ ಈ ತಪ್ಪನ್ನು ಮಾಡ್ಬೇಡಿ, ಮುಂದೆ ದೊಡ್ಡ ಸಮಸ್ಯೆಯಾಗ್ಬಹುದು!

  ಮೇಲೆ ಹೇಳಿರೋ ರೆಸಿಪಿಗಳೆಲ್ಲವೂ ಅತ್ಯಂತ ಸುಲಭವಾಗಿ ಮಾಡಬಲ್ಲಂತವು. ಅಲ್ಲದೇ ಸುಲಭವಾಗಿ ಮನೆಯಲ್ಲೇ ಸಿಗುವ ಇನ್‌ ಗ್ರೀಡಿಯೆಂಟ್ಸ್‌ ಬಳಸಿ ಮಾಡಿಕೊಳ್ಳುವಂಥವು. ಜೊತೆಗೆ ಸಖತ್‌ ಟೇಸ್ಟಿಯಾಗಿಯೂ ನೀವು ಇದನ್ನು ಆರಾಮಾಗಿ ಮಾಡಿಕೊಂಡು ಡಯೆಟ್‌ ಮಾಡಬಹುದು. ಹೀಗೆ ಬೇರೆ ಬೇರೆ ಹೆಲ್ತಿ ರೆಸಿಪಿ ಪ್ರಯೋಗ ಮಾಡೋದ್ರಿಂದ ಡಯೆಟ್‌ ಅನ್ನೂ ನೀವು ಎಂಜಾಯ್‌ ಮಾಡ್ತೀರ ಅನ್ನೋದ್ರಲ್ಲಿ ಡೌಟೇ ಇಲ್ಲ.
  Published by:Ashwini Prabhu
  First published: