Morning Wakeup Tips: ಬೆಳಗಿನ ಜಾವ ಬೇಗ ಏಳಲು ಆಗುತ್ತಿಲ್ಲವೇ? ಹಾಗಾದ್ರೆ ಈ ಸಲಹೆ ಫಾಲೋ ಮಾಡಿ!

ಬೆಳಗ್ಗೆ ಬೇಗ ಏಳುವುದರ ಹಿಂದಿನ ಅನೇಕ ಪ್ರಯೋಜನಗಳನ್ನು ತಿಳಿದಿದ್ದರೂ ಸಹ ತುಂಬಾ ಜನರು ಬೇಗ ಏಳಲ್ಲ. ನಮ್ಮಲ್ಲಿ ಅನೇಕರು ಬೆಳಿಗ್ಗೆ ಬೇಗನೆ ಎದ್ದೇಳಬೇಕು ಎಂದುಕೊಂಡರೂ ಏಳಲು ಸಾಧ್ಯ ಆಗಲ್ಲ. ಬೆಳಗ್ಗೆ ಬೇಗ ಏಳುವುದು ಹೇಗೆ ಎಂಬುದಕ್ಕೆ ಕೆಲವು ಸುಲಭ ಉಪಾಯಗಳನ್ನು ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಳಗಿನ (Morning) ಜಾವ ಯಾವಾಗಲೂ ಬೇಗ ಏಳಬೇಕು (Waking) ಎಂದು ಮನೆಯಲ್ಲಿ (Home) ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಪೋಷಕರು (Parents) ಸಹ ಆಗಾಗ್ಗೆ ಬೆಳಗ್ಗೆ ಬೇಗ ಏಳಬೇಕು. ಬೆಳಗಿನ ಬಿಸಿಲು ಮತ್ತು ವಾಕಿಂಗ್ (Walking) ನಿಮ್ಮನ್ನು ಆರೋಗ್ಯಕರವಾಗಿಡುತ್ತದೆ ಎಂದು ಹೇಳಿದ್ದನ್ನು ನೀವು ಕೇಳಿರಬಹುದು. ಬೆಳಗ್ಗೆ ಬೇಗ ಏಳಬೇಕು. ಇದು ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಆದರೆ ಹಿರಿಯರ ಈ ಮಾತುಗಳನ್ನು ಮನೆಯಲ್ಲಿ ಜನರು ಕೇಳೋದೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಬೇಗನೆ ಎದ್ದೇಳುವ ಪ್ರಾಮುಖ್ಯತೆ ಬಗ್ಗೆ ನೀವು ಹೆಚ್ಚಿನ ಗಮನ ನೀಡಬೇಕು. ಬೇಗ ಏಳುವುದು ಆರೋಗ್ಯಕ್ಕೆ ಮಾತ್ರವಲ್ಲ ನಿಮ್ಮ ಇತರೆ ಕೆಲಸಕ್ಕೂ ಒಳ್ಳೆಯದು.

    ಬೆಳಗ್ಗೆ ಬೇಗ ಏಳುವುದರ ಹಿಂದಿನ ಅನೇಕ ಪ್ರಯೋಜನಗಳು

    ಆದರೆ ಬೆಳಗ್ಗೆ ಬೇಗ ಏಳುವುದರ ಹಿಂದಿನ ಅನೇಕ ಪ್ರಯೋಜನಗಳನ್ನು ತಿಳಿದಿದ್ದರೂ ಸಹ ತುಂಬಾ ಜನರು ರಾತ್ರಿ ಲೇಟಾಗಿ ಮಲಗುವುದರಿಂದ ಬೆಳಗ್ಗೆ ಬೇಗ ಏಳಲ್ಲ. ನಮ್ಮಲ್ಲಿ ಅನೇಕರು ಬೆಳಿಗ್ಗೆ ಬೇಗನೆ ಎದ್ದೇಳಬೇಕು ಎಂದುಕೊಂಡರೂ ಏಳಲು ಸಾಧ್ಯ ಆಗಲ್ಲ.

    ಇದು ನಿಮ್ಮ ಸಮಸ್ಯೆಯೂ ಆಗಿದ್ದರೆ, ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ಬೆಳಗ್ಗೆ ಬೇಗ ಏಳುವುದು ಹೇಗೆ ಎಂಬುದಕ್ಕೆ ಕೆಲವು ಸುಲಭ ಉಪಾಯಗಳನ್ನು ತಿಳಿಯೋಣ. ಬೆಳಿಗ್ಗೆ ಬೇಗನೆ ಏಳುವುದು ನಿಮ್ಮ ಒಟ್ಟಾರೆ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಜೊತೆಗೆ ನೀವು ಶಕ್ತಿಯುತ ಮತ್ತು ಉತ್ಪಾದಕತೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆ ಅನುಭವಿಸಬಹುದು. ಆದ್ದರಿಂದ ನೀವು ಕೂಡ ಬಹಳ ಸಮಯದಿಂದ ಬೇಗನೆ ಎದ್ದೇಳಲು ಪ್ರಯತ್ನಿಸುತ್ತಿದ್ದರೆ ಮತ್ತು ಎದ್ದೇಳಲು ಸಾಧ್ಯವಾಗದಿದ್ದರೆ ತಜ್ಞರು ಕೆಲವು ಸಲಹೆ ನೀಡುತ್ತಾರೆ.

    ಬೇಗ ಎದ್ದೇಳಲು ಕೆಲವು ಸಲಹೆಗಳು

    ಬೇಗ ಮಲಗುವುದು

    ತ್ವರಿತವಾಗಿ ನಿದ್ರಿಸಲು ನಿಮ್ಮ ದೇಹಕ್ಕೆ ತರಬೇತಿ ನೀಡಬೇಕು. ಇದು ಪ್ರತಿದಿನ ಬೆಳಗ್ಗೆ ಬೇಗ ಏಳಲು ಸಹಾಯ ಮಾಡುತ್ತದೆ. ಹಾಗಾಗಿ ಜನರು ರಾತ್ರಿಯಲ್ಲಿ ಏಳರಿಂದ ಒಂಬತ್ತು ಗಂಟೆಗಳ ನಡುವೆ ಮಲಗಲು ಗುರಿ ಹೊಂದಿರಬೇಕು. ನೀವು ಇದಕ್ಕಿಂತ ಕಡಿಮೆ ನಿದ್ದೆ ಮಾಡುತ್ತಿದ್ದರೆ ಆಗ ನಿಮಗೆ ನಿದ್ದೆ ಬರಬಹುದು.

    ಹಾಸಿಗೆಗೆ ಹೋದ ಮೇಲೆ ಫೋನ್ ಬಳಸಬೇಡಿ

    ಮಲಗುವ ಸಮಯಕ್ಕೆ ಸುಮಾರು 30 ನಿಮಿಷ ಮೊದಲು ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ ದೂರವಿಡಿ. ಇದು ರಾತ್ರಿ ನಿಮಗೆ ಉತ್ತಮ ನಿದ್ರೆಗೆ ಅವಕಾಶ ನೀಡುತ್ತದೆ. ದಿ ಸ್ಲೀಪ್ ಜಡ್ಜ್ ಪ್ರಕಾರ, ಪರದೆಯ ಮೇಲಿನ ನೀಲಿ ಬೆಳಕು ನಿಮ್ಮ ದೇಹದ ನೈಸರ್ಗಿಕ ಮೆಲಟೋನಿನ್ ಮಟ್ಟ ಬದಲಾಯಿಸುತ್ತದೆ.

    ಇದು ನಿದ್ರೆ ಮಾಡುವುದು ಮತ್ತಷ್ಟು ಕಷ್ಟ ಆಗುತ್ತದೆ. ಹಾಗೆಯೇ ಫೋನ್ ನೋಡುತ್ತಾ ಮಲಗಿದರೆ ಬೆಳಗ್ಗೆ ಸುಸ್ತಾಗಿ ತಡವಾಗಿ ಏಳಬೇಕಾಗುತ್ತದೆ.

    ತಡರಾತ್ರಿ ತಿಂಡಿ ತಿನ್ನುವುದನ್ನು ತಪ್ಪಿಸಿ

    ಮಲಗುವ ಮುನ್ನ ತಿಂಡಿ ಮಾಡುವುದು ಹಾನಿಕಾರಕ. ಊಟ ಮಾಡಿ ನೇರವಾಗಿ ಹೋದರೆ ನಿದ್ರೆ ಬರುವುದಿಲ್ಲ. ದೇಹದಲ್ಲಿ ಗ್ಯಾಸ್ ಅಥವಾ ಆಮ್ಲೀಯತೆ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದಲ್ಲದೆ, ಇದು ನೇರವಾಗಿ ಸ್ಥೂಲಕಾಯತೆಯನ್ನು ಉತ್ತೇಜಿಸುತ್ತದೆ.

    ಇದು ನಿಮ್ಮ ದೇಹದ ಮೇಲೆ ಆಯಾಸದ ಪರಿಣಾಮವನ್ನು ಸಹ ಬೀರುತ್ತದೆ. ನೀವು ಬೆಳಿಗ್ಗೆ ತಾಜಾ ಭಾವನೆಯಿಂದ ಎಚ್ಚರಗೊಳ್ಳಲು ಸಾಧ್ಯವಾಗುವುದಿಲ್ಲ.

    ಫೋನ್ ಆಫ್ ಮಾಡಿ ಮಲಗಿ

    ಮಲಗುವ ಮೊದಲು ನಿಮ್ಮ ಫೋನ್ ರಿಂಗರ್ ಅನ್ನು ಆಫ್ ಮಾಡಿ. ಅಥವಾ ಸ್ಲೀಪ್ ಮೋಡ್ ಅನ್ನು ಆನ್ ಮಾಡಿ. ಫೋನ್ ಅಧಿಸೂಚನೆ ಪುನರಾವರ್ತಿತ ರಿಂಗಿಂಗ್ ನಿಮಗೆ ತೊಂದರೆ ಮಾಡಬಹುದು. ಜೊತೆಗೆ ಫೋನ್ ಅಥವಾ ಸಾಮಾಜಿಕ ಮಾಧ್ಯಮದಿಂದ ಕೆಲವು ಅಧಿಸೂಚನೆಗಳು ಮಧ್ಯರಾತ್ರಿ ನಿಮ್ಮನ್ನು ಎಚ್ಚರ ಮಾಡುತ್ತದೆ. ಇದು ನಿಮ್ಮ ನಿದ್ರೆಯ ಚಕ್ರಕ್ಕೆ ಅಡ್ಡಿ ಉಂಟು ಮಾಡುತ್ತದೆ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ಬೆಳಗ್ಗೆ ಏಳುವ 15 ನಿಮಿಷ ಮೊದಲೇ ಅಲಾರಾಂ ಹೊಂದಿಸಿ

    ರಾತ್ರಿ ಬೇಗ ಮಲಗುವುದನ್ನು ರೂಢಿಸಿಕೊಳ್ಳಿ. ಜೊತೆಗೆ ಬೆಳಿಗ್ಗೆ ಏಳುವ 15 ನಿಮಿಷ ಮುಂಚಿತವಾಗಿ ಅಲಾರಾಂ ಸೆಟ್ ಮಾಡಿ. ಇದು ನಿಮಗೆ ಬೆಳಗ್ಗೆ ಬೇಗ ಮತ್ತು ಸರಿಯಾದ ಸಮಯಕ್ಕೆ ಏಳಲು ಸಹಾಯ ಮಾಡುತ್ತದೆ.
    Published by:renukadariyannavar
    First published: