Veg Omelette: ನೀವು ಮೊಟ್ಟೆ ಆಮ್ಲೆಟ್ ತಿನ್ನಲ್ವಾ? ಹಾಗಿದ್ರೆ ಇಲ್ಲಿದೆ ನಿಮಗಾಗಿ ಸಿಂಪಲ್ ವೆಜ್ ಎಗ್‌ಲೆಸ್ ಆಮ್ಲೆಟ್

ಈಗ ಸಸ್ಯಾಹಾರಿಗಳು ಸಹ ಈ ಜನಪ್ರಿಯ ಮೊಟ್ಟೆ ಉಪಾಹಾರ ಪಾಕವಿಧಾನಗಳನ್ನು ಹೇಗೆ ಮಾಡಿಕೊಂಡು ಆನಂದಿಸಬಹುದು ಎಂದು ನಾವು ನಿಮಗೆ ಹೇಳುತ್ತೇವೆ ನೋಡಿ. ಇದನ್ನು ಕೇಳಿ ಒಂದು ಕ್ಷಣ ನಿಮಗೆ ಆಶ್ಚರ್ಯವಾಗಬಹುದು. ಮೊಟ್ಟೆಗೆ ಬದಲಿಯನ್ನು ರಚಿಸುವ ಮೂಲಕ ಎಂದರೆ ವೆಜ್ ಎಗ್‌ಲೆಸ್ ಆಮ್ಲೆಟ್ ಅನ್ನು ನೀವು ಮಾಡಿಕೊಂಡು ಸೇವಿಸಬಹುದು ಮತ್ತು ಇದು ನೋಡಲು ಮೊಟ್ಟೆಯ ಆಮ್ಲೆಟ್ ರೀತಿಯಲ್ಲಿಯೇ ಕಾಣುತ್ತದೆ.

ವೆಜ್ ಎಗ್‌ಲೆಸ್ ಆಮ್ಲೆಟ್

ವೆಜ್ ಎಗ್‌ಲೆಸ್ ಆಮ್ಲೆಟ್

  • Share this:
ನೀವು ಮೊಟ್ಟೆಯನ್ನು (Egg) ತುಂಬಾನೇ ಇಷ್ಟ ಪಡುತ್ತಿದ್ದರೆ, ಬೆಳಿಗ್ಗೆ ಉಪಹಾರಕ್ಕೆ (Breakfast) ತ್ವರಿತವಾಗಿ ಏನಾದರೂ ಉಪಾಹಾರ ಮಾಡಿಕೊಳ್ಳಬೇಕು ಎಂದು ನಿಮಗೆ ಅನ್ನಿಸಿದಾಗ ಮೊದಲು ನಿಮ್ಮ ಯೋಚನೆಯಲ್ಲಿ ಬರುವುದೇ ಈ ಮೊಟ್ಟೆ ಆಮ್ಲೆಟ್ (Egg omelette) ಎಂದು ಹೇಳಬಹುದು. ಕೆಲವರು ಈ ಆಮ್ಲೆಟ್ ಅನ್ನು ಹಾಕಿಕೊಂಡು ಅದರಲ್ಲಿ ಬ್ರೆಡ್ ಗಳನ್ನು (Bread) ಇರಿಸಿ ಅದರಿಂದ ಸುತ್ತಿಕೊಂಡು ತಿನ್ನುತ್ತಾರೆ. ಇನ್ನೂ ಕೆಲವು ಜನರು ಆಮ್ಲೆಟ್ ಅನ್ನು ಹಾಕಿಕೊಂಡು ನಂತರ ಬ್ರೆಡ್ ಅನ್ನು ಇನ್ನೊಂದು ಕಡೆಯಲ್ಲಿ ಬಿಸಿ ಮಾಡಿಕೊಂಡು ಅದರ ಜೊತೆಯಲ್ಲಿ ಹಚ್ಚಿಕೊಂಡು ತಿನ್ನುತ್ತಾರೆ. ಕೆಲವೊಬ್ಬರು ಮೊಟ್ಟೆಯಿಂದ ಎಗ್‌ಬುರ್ಜಿ ಮಾಡಿಕೊಂಡು ಅದನ್ನು ಎರಡು ಬ್ರೆಡ್ ನ ಮಧ್ಯಭಾಗದಲ್ಲಿ ಹಾಕಿಕೊಂಡು ಅದನ್ನು ಸ್ಯಾಂಡ್‌ವಿಚ್ (Sandwich) ಮಾಡಿಕೊಂಡು ತಿನ್ನುತ್ತಾರೆ. ಹೀಗೆ ಒಟ್ಟಿನಲ್ಲಿ ಆಮ್ಲೆಟ್ ಅನ್ನು ಇಷ್ಟ ಪಡುವ ಜನರಿಗಾಗಿ ಅನೇಕ ರೀತಿಯ ಪಾಕವಿಧಾನಗಳು ಇರುವುದನ್ನು ನಾವು ನೋಡಬಹುದು.

ಮೊಟ್ಟೆ ಆಮ್ಲೆಟ್ ಬದಲು ವೆಜ್ ಆಮ್ಲೆಟ್
ಈ ಆಮ್ಲೆಟ್ ಎನ್ನುವುದು ಬಹುಶಃ ಇಡೀ ಜಗತ್ತಿನಲ್ಲಿಯೇ ಉಪಾಹಾರಕ್ಕಾಗಿ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಇದು ಮಾಂಸಹಾರಿಗಳಿಗೆ ಉತ್ತಮ ಉಪಹಾರದ ಆಯ್ಕೆ ಎಂದಾದರೆ, ಸಸ್ಯಾಹಾರಿಗಳು ಆ ಎಲ್ಲಾ ಅದ್ಭುತ ಮೊಟ್ಟೆ ಭಕ್ಷ್ಯಗಳನ್ನು ಆನಂದಿಸಲು ಸಾಧ್ಯವಿಲ್ಲ. ಈ ಮೊಟ್ಟೆ ಆಮ್ಲೆಟ್ ತಿನ್ನದೇ ಇರುವವರಿಗೆ ಅದರ ರುಚಿ ಹೇಗಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ.

ಆದರೆ ಈಗ ಸಸ್ಯಾಹಾರಿಗಳು ಸಹ ಈ ಜನಪ್ರಿಯ ಮೊಟ್ಟೆ ಉಪಾಹಾರ ಪಾಕವಿಧಾನಗಳನ್ನು ಹೇಗೆ ಮಾಡಿಕೊಂಡು ಆನಂದಿಸಬಹುದು ಎಂದು ನಾವು ನಿಮಗೆ ಹೇಳುತ್ತೇವೆ ನೋಡಿ. ಇದನ್ನು ಕೇಳಿ ಒಂದು ಕ್ಷಣ ನಿಮಗೆ ಆಶ್ಚರ್ಯವಾಗಬಹುದು. ಮೊಟ್ಟೆಗೆ ಬದಲಿಯನ್ನು ರಚಿಸುವ ಮೂಲಕ ಎಂದರೆ ವೆಜ್ ಎಗ್‌ಲೆಸ್ ಆಮ್ಲೆಟ್ ಅನ್ನು ನೀವು ಮಾಡಿಕೊಂಡು ಸೇವಿಸಬಹುದು ಮತ್ತು ಇದು ನೋಡಲು ಮೊಟ್ಟೆಯ ಆಮ್ಲೆಟ್ ರೀತಿಯಲ್ಲಿಯೇ ಕಾಣುತ್ತದೆ.

ಇದನ್ನೂ ಓದಿ:  Breakfast Recipe: ಬೆಳಗ್ಗಿನ ಬ್ರೇಕ್ ಫಾಸ್ಟ್ ಫಟಾ ಪಟ್ ಅಂತಾ ಆಗ್ಬೇಕಾ? ಬರೀ ಎರಡೇ ನಿಮಿಷಲ್ಲಾಗುತ್ತೆ ಈ ರೆಸಿಪಿಗಳು

ನಾವು ಸಸ್ಯಾಹಾರಿ ಆಮ್ಲೆಟ್ ಸ್ಯಾಂಡ್‌ವಿಚ್ ನ ಪಾಕವಿಧಾನವನ್ನು ಕಂಡು ಕೊಂಡಿದ್ದೇವೆ, ಮತ್ತು ಇದು ತುಂಬಾನೇ ಸ್ವಾದಿಷ್ಟವಾಗಿರುತ್ತದೆ. ಅರೇ.. ಮೊಟ್ಟೆ ಆಮ್ಲೆಟ್ ರುಚಿ ಹೇಗೆ ಬರುತ್ತದೆ ಎಂದು ಕುತೂಹಲ ಹೊಂದಿರುವ ಸಸ್ಯಾಹಾರಿಗಳು ಖಂಡಿತವಾಗಿಯೂ ಈ ಪಾಕವಿಧಾನವನ್ನು ಮನೆಯಲ್ಲಿ ಪ್ರಯತ್ನಿಸಲೆಬೇಕು.

ವೆಜ್ ಆಮ್ಲೆಟ್ ಸ್ಯಾಂಡ್‌ವಿಚ್ ಅನ್ನು ಮನೆಯಲ್ಲಿ ತಯಾರಿಸುವುದು ಹೇಗೆ?
ಈ ಸಸ್ಯಾಹಾರಿ ಆಮ್ಲೆಟ್ ಉಪಾಹಾರವನ್ನು ತಯಾರಿಸಲು, ನೀವು ಮೊಟ್ಟೆ ರಹಿತ ಆಮ್ಲೆಟ್ ಅನ್ನು ತಯಾರಿಸುವ ಮೂಲಕ ಪ್ರಾರಂಭಿಸಬೇಕು. ಒಂದು ಮಿಕ್ಸಿಂಗ್ ಬೌಲ್ ನಲ್ಲಿ,ಕಡಲೆ ಹಿಟ್ಟು, ಮೈದಾ, ಉಪ್ಪು ಮತ್ತು ಬೇಕಿಂಗ್ ಪೌಡರ್ ಅನ್ನು ಸೇರಿಸಿ. ಈ ಒಣ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ.

ಈಗ ಅದಕ್ಕೆ ಬೇಕಾಗುವಷ್ಟು ನೀರನ್ನು ಸುರಿಯಿರಿ ಮತ್ತು ನೀವು ಆಮ್ಲೆಟ್ ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿರಿ. ಈ ಹಿಟ್ಟು ತೆಳ್ಳಗೆ ಮತ್ತು ನಯವಾಗಿರುವ ತನಕ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಹಾಗೆಯೇ ಅದರ ಪಕ್ಕದಲ್ಲಿ ಒಂದು ಬಾಣಲೆಯನ್ನು ಬಿಸಿ ಮಾಡಿ ಮತ್ತು ಅದರ ಮೇಲೆ ತೆಳುವಾದ ಆಮ್ಲೆಟ್ ತಯಾರಿಸಲು ಹಿಟ್ಟನ್ನು ವೃತ್ತಾಕಾರವಾಗಿ ಆಮ್ಲೆಟ್ ನಂತೆಯೇ ಸುರಿಯಿರಿ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಹೆಲ್ದಿ ಬೀಟ್​ರೂಟ್​ ಬಾತ್ ಮಾಡಿ

ಇದು ಅರೆ ಬೆಂದ ನಂತರ, ಬೆಣ್ಣೆ ಹಾಕಿದ ಬ್ರೆಡ್ ನ ಎರಡು ಸ್ಲೈಸ್ ಗಳನ್ನು ಅದರಲ್ಲಿ ಇರಿಸಿ ಮತ್ತು ಆಮ್ಲೆಟ್ ಅನ್ನು ತಿರುಗಿಸಿ. ಇನ್ನೊಂದು ಬದಿಯಲ್ಲಿ, ಚೀಸ್ ಸ್ಲೈಸ್, ಕತ್ತರಿಸಿದ ಟೊಮೆಟೊ, ಈರುಳ್ಳಿ ಮತ್ತು ಕ್ಯಾಪ್ಸಿಕಂ ಅನ್ನು ಸೇರಿಸಿ. ಆಮ್ಲೆಟ್ ಬ್ರೆಡ್ ಅನ್ನು ಸ್ಯಾಂಡ್‌ವಿಚ್ ನಂತೆ ಮುಚ್ಚಿ ಮತ್ತು ಬ್ರೆಡ್ ಅನ್ನು ಚೆನ್ನಾಗಿ ಮತ್ತು ಗರಿಗರಿಯಾಗುವ ತನಕ ಗ್ರಿಲ್ ಮಾಡಿ. ಮೊಟ್ಟೆ ರಹಿತ ಆಮ್ಲೆಟ್ ಸ್ಯಾಂಡ್‌ವಿಚ್ ಸವಿಯಲು ಸಿದ್ಧವಾಗಿದೆ.
Published by:Ashwini Prabhu
First published: