Monsoon Wedding: ನೀವು ಮಳೆಗಾಲದಲ್ಲಿ ಮದುವೆಯಾಗಲು ಪ್ಲ್ಯಾನ್ ಮಾಡ್ತಾ ಇದ್ದೀರಾ? ಹಾಗಿದ್ರೆ ಈ ವಿಷಯಗಳ ಬಗ್ಗೆ ಗಮನ ಇರಲಿ

ಮಳೆಗಾಲದ ಮದುವೆಗಳಲ್ಲಿ ವಧು ಅಥವಾ ವರನಾಗಿ ನೀವಿದ್ದರೆ, ನಿಮ್ಮ ಉಡುಗೆ ತೊಡುಗೆಗಳು, ಪರಿಕರಗಳು ಅಥವಾ ಮದುವೆಯ ಸ್ಥಳವನ್ನು ಆಯ್ಕೆ ಮಾಡುವಾಗ ನೀವು ತುಂಬಾನೇ ಜಾಗರೂಕರಾಗಿರಬೇಕು. ಮಾನ್ಸೂನ್ ನಲ್ಲಿ ನೀವು ಮದುವೆಯಾಗಲು ಯೋಜಿಸಿದ್ದರೆ ಮೊದಲು ನೀವು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳು ಇಲ್ಲಿವೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವರಿಗೆ ತಮ್ಮ ಮದುವೆಯ ದಿನ (Marriage Day) ಮಳೆ ಬಂದರೆ ತುಂಬಾನೇ ಕಿರಿಕಿರಿ ಅಂತ ಅನ್ನಿಸುತ್ತದೆ, ಏಕೆಂದರೆ ಮದುವೆಗೆ ಆಹ್ವಾನಿಸಿದ ಎಲ್ಲಾ ಅತಿಥಿಗಳು ಮಳೆಯಿಂದಾಗಿ ಮದುವೆಗೆ ಬಾರದೇ ಇರಬಹುದು ಮತ್ತು ಮದುವೆಯು ಹೆಚ್ಚು ಜನರಿಲ್ಲದೆ ಅಷ್ಟೊಂದು ಸಡಗರ ಅಂತ ಅನ್ನಿಸುವುದಿಲ್ಲ ಅಂತ ಅವರ ಅನಿಸಿಕೆ. ಆದರೆ ಇನ್ನೂ ಕೆಲವರಿಗೆ ತಮ್ಮ ಜೀವನದ ವಿಶೇಷವಾದ ದಿನವಾದ (Special Day) ಮದುವೆಯ ದಿನದಂದು ಮಳೆ ಬಂದರೆ ತುಂಬಾನೇ ಖುಷಿ ಸಹ ಆಗುತ್ತದೆ. ನೀವು ಮಾನ್ಸೂನ್ (Monsoon) ಋತುವಿನಲ್ಲಿ ಮದುವೆಯಾಗಲು ಯೋಜಿಸುತ್ತಿದ್ದೀರಾ? ಮಳೆಯ ನಡುವೆ ಮದುವೆಯಾಗುವುದು ಯಾವುದೇ ಆನಂದಕ್ಕಿಂತ ಕಡಿಮೆಯಿಲ್ಲ ಮತ್ತು ಇದು ನಿಮ್ಮ ಜೀವನದ ಅತ್ಯಂತ ಸ್ಮರಣೀಯ ದಿನವಾಗುತ್ತದೆ ಎಂದು ಹೇಳಬಹುದು. 

ಮಳೆಗಾಲದ ಮದುವೆಗಳಲ್ಲಿ ವಧು ಅಥವಾ ವರನಾಗಿ ನೀವಿದ್ದರೆ, ನಿಮ್ಮ ಉಡುಗೆ ತೊಡುಗೆಗಳು, ಪರಿಕರಗಳು ಅಥವಾ ಮದುವೆಯ ಸ್ಥಳವನ್ನು ಆಯ್ಕೆ ಮಾಡುವಾಗ ನೀವು ತುಂಬಾನೇ ಜಾಗರೂಕರಾಗಿರಬೇಕು. ಮಾನ್ಸೂನ್ ನಲ್ಲಿ ನೀವು ಮದುವೆಯಾಗಲು ಯೋಜಿಸಿದ್ದರೆ ಮೊದಲು ನೀವು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳು ಇಲ್ಲಿವೆ ನೋಡಿ.

ಫ್ಯಾಬ್ರಿಕ್ ಬಟ್ಟೆ ಆಯ್ಕೆ ಮಾಡಿರಿ
ಮಾನ್ಸೂನ್ ಎಂದರೆ ತೇವಾಂಶಕ್ಕೆ ಮುಕ್ತ ಆಹ್ವಾನ ಎಂದರ್ಥ. ಹತ್ತಿ ಮತ್ತು ರೇಷ್ಮೆ ಮಿಶ್ರಣಗಳು, ಚಾಂದೇರಿ, ಜಾರ್ಜೆಟ್, ಶುದ್ಧ ಶಿಫಾನ್ ಅಥವಾ ಆರ್ಗಂಜಾ ನಂತಹ ಬಟ್ಟೆಗಳನ್ನು ಆರಿಸಿಕೊಳ್ಳಿರಿ. ಈ ರೀತಿಯ ಮದುವೆ ಉಡುಪುಗಳು ನಿಮಗೆ ಮಳೆಗಾಲದಲ್ಲಿ ಆರಾಮವನ್ನು ನೀಡುತ್ತದೆ. ಕಸೂತಿಗಳಿಗೆ ರೇಶಮ್ ಅಥವಾ ಚಿಕಂಕಾರಿ ಕೆಲಸ, ಮಣಿಗಳು, ಮುತ್ತುಗಳಿಂದ ಮಾಡಿದವು ಸುಲಭವಾಗಿ ಹಾಳಾಗುವುದಿಲ್ಲ ಮತ್ತು ಮಾನ್ಸೂನ್ ಸಮಯಕ್ಕೆ ಸೂಕ್ತವಾದದ್ದು ಆಗಿವೆ.

ಬಣ್ಣ ಆಯ್ಕೆ
ನೀವು ಮಳೆಗಾಲದ ಹವಾಮಾನದ ಆ ಮೋಡ ಕವಿದ ವಾತಾವರಣವು ನೀವು ಧರಿಸುವ ಉಡುಪುಗಳ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂದರೆ ಎಲೆಕ್ಟ್ರಿಕ್ ಬ್ಲೂ, ಫುಚ್ಸಿಯಾ ಪಿಂಕ್, ಬರ್ಗಂಡಿ, ಪಚ್ಚೆ ಹಸಿರು ಅಥವಾ ಕ್ಲಾಸಿಕ್ ಕೆಂಪು ಮುಂತಾದ ಪ್ರಕಾಶಮಾನವಾದ ಬಣ್ಣಗಳನ್ನು ಆರಿಸಿಕೊಳ್ಳಿರಿ. ಈ ಬಣ್ಣಗಳ ಬಗ್ಗೆ ನಿಮಗೆ ಅನಿಶ್ಚಿತತೆ ಇದ್ದರೆ, ನೀವು ಯಾರಿಗಾದರೂ ಕೇಳಿ ತಿಳಿದುಕೊಳ್ಳಿರಿ. ನಿಮ್ಮ ನೆಚ್ಚಿನ ಬಣ್ಣದ ಪಾಸ್ಟೆಲ್ ಶೇಡ್ ಅನ್ನು ಆರಿಸಿಕೊಳ್ಳಿರಿ. ಮಳೆಗಾಲದಲ್ಲಿ ಕೆಸರಿನ ಕಲೆಯಿಂದ ನಿಮ್ಮ ಲೆಹೆಂಗಾಗಳನ್ನು ರಕ್ಷಿಸಿಕೊಳ್ಳುವುದನ್ನು ನೆನಪಿಡಿ.

ಇದನ್ನೂ ಓದಿ: Elon Musk: ಗೂಗಲ್ ಓನರ್ ಹೆಂಡತಿ ಜೊತೆ ಎಲಾನ್ ಮಸ್ಕ್ ಲವ್ವಿ ಡವ್ವಿ?

ಲೇಯರಿಂಗ್
ನೀವು ಮದುವೆಯ ದಿನ ಧರಿಸುವ ಉಡುಪುಗಳಿಗೆ ಲೇಯರಿಂಗ್ ಮಾಡಲು ಬಯಸಿದರೆ, ನೀವು ಹಾಕಿಕೊಳ್ಳುವ ದುಪಟ್ಟಾ ಹಗುರ ತೂಕದ್ದಾಗಿರಲಿ. ಜಾಕೆಟ್ ಬ್ಲೌಸ್ ಅನ್ನು ಹಾಕಿಕೊಳ್ಳಬೇಡಿ ಮತ್ತು ಅದರ ಬದಲು, ಉದ್ದನೆಯ ಜಾಕೆಟ್ ಅನ್ನು ಆರಿಸಿಕೊಳ್ಳಿರಿ. ಒಂದು ವೇಳೆ ನಿಮ್ಮ ಉಡುಗೆಗೆ ಕಲೆಯಾದರೆ, ನೀವು ನಿಮ್ಮ ಉದ್ದನೆಯ ಜಾಕೆಟ್ ಅನ್ನು ತೆಗೆದು ಹಾಕಬಹುದು ಮತ್ತು ಯಾವುದೇ ಚಿಂತೆಯಿಲ್ಲದೆ ನಿಮ್ಮ ಲೆಹೆಂಗಾವನ್ನು ರಕ್ಷಿಸಿಕೊಳ್ಳಬಹುದು.

ಪಾದರಕ್ಷೆಗಳು
ಮಳೆಗಾಲದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆಲವು ಒದ್ದೆಯಾಗಿರುತ್ತದೆ. ಅಲ್ಲಲ್ಲಿ ಕೆಸರು ಗದ್ದೆಗಳು ಇರಬಹುದು. ನೀವು ಆ ಕೆಸರಿನಲ್ಲಿ ಹೈ ಹೀಲ್ಸ್ ಚಪ್ಪಲಿ ಹಾಕಿಕೊಂಡು ಸುತ್ತಾಡುವುದು ಒಳ್ಳೆಯದಲ್ಲ. ಕಡಿಮೆ ಹಿಲ್ಸ್ ಇರುವ ಚಪ್ಪಲಿಗಳನ್ನು ಧರಿಸಿ ಅಥವಾ ನಿಮ್ಮ ಮದುವೆಯ ಉಡುಗೆಯೊಂದಿಗೆ ನೀವು ಅಲಂಕೃತ ಸ್ಪೋರ್ಟ್ಸ್ ಶೂ ಗಳನ್ನು ಧರಿಸಬಹುದು.

ಮೇಕಪ್ ಮಾಡಿಕೊಳ್ಳಿರಿ
ವಾಟರ್ ಪ್ರೂಫ್ ಮೇಕಪ್ ಮಾಡಿಕೊಳ್ಳಿರಿ, ಅದನ್ನು ತುಂಬಾನೇ ಹಗುರವಾಗಿರಿಸಿಕೊಳ್ಳಿ. ಇದರಿಂದ ನಿಮ್ಮ ಚರ್ಮವು ಈಗಾಗಲೇ ಆರ್ದ್ರ ವಾತಾವರಣದಲ್ಲಿ ಉಸಿರಾಡಲು ಸಾಧ್ಯವಾಗುತ್ತದೆ. ನಿಮ್ಮ ಕಣ್ಣು ಮತ್ತು ತುಟಿಗಳಿಗೆ ಮೇಕಪ್ ಮಾಡಿಕೊಳ್ಳುತ್ತೀರೊ ಅಥವಾ ಹಾಗೆ ಬಿಡುತ್ತೀರೊ ಅದು ನಿಮ್ಮ ಆಯ್ಕೆ. ಆದರೆ ಸೆಟ್ಟಿಂಗ್ ಸ್ಪ್ರೇಯಿಂದ ಮೇಕಪ್ ಅನ್ನು ಸೀಲ್ ಮಾಡಲು ಮರೆಯದಿರಿ.

ಇದನ್ನೂ ಓದಿ:  Old Couple: ಇದು ಚಾಕಲೇಟ್ ಲವ್ ಅಲ್ಲ! ಈ ಪ್ರೀತಿಗೆ ಎಂದೂ ಕೊನೆಯಿಲ್ಲ, ವೃದ್ಧ ದಂಪತಿ ವಿಡಿಯೋ ವೈರಲ್

ಹೇರ್ಸ್ಟೈಲ್ ಹೇಗಿರಬೇಕು?
ಕೂದಲನ್ನು ಹಾಗೆ ಕೆಳಗೆ ಬಿಟ್ಟುಕೊಳ್ಳದೆ, ನೀವು ಅವುಗಳನ್ನು ಹಿಂದಕ್ಕೆ ತೆಗೆದುಕೊಂಡು ಬನ್ ರೀತಿಯಲ್ಲಿ ಕಟ್ಟಿಕೊಳ್ಳಿರಿ. ಏಕೆಂದರೆ ಇದು ಕೂದಲನ್ನು ನಿಮ್ಮ ಮುಖದಿಂದ ದೂರವಿರಿಸುತ್ತದೆ ಮತ್ತು ನಿಮಗೆ ಬೆವರು ಕಡಿಮೆ ಮಾಡುತ್ತದೆ. ನಿಮ್ಮ ಕೂದಲಿಗೆ ತುಂಬಾ ತೂಕ ಅನ್ನಿಸದಂತೆ ಹಗುರವಾದ ಕೂದಲಿನ ಪರಿಕರಗಳನ್ನು ಸಹ ನೀವು ಆಯ್ಕೆ ಮಾಡಬಹುದು.
Published by:Ashwini Prabhu
First published: