Fashion Tips: ಟ್ರೆಂಡ್ ಹಾಗೂ ಸ್ಟೈಲಿಶ್ ಬಟ್ಟೆ ಖರೀದಿಸುವ ಮೊದಲು ನಿಮ್ಮ ಆಕಾರ ಹಾಗೂ ಲುಕ್ ನೆನಪಿಟ್ಟುಕೊಳ್ಳಿ

ನೀವು ಇಷ್ಟಪಟ್ಟ ಡ್ರೆಸ್ ನಿಮಗೆ ಚೆನ್ನಾಗಿ ಕಾಣಿಸಬೇಕು ಎಂದು ನಿಮ್ಮ ಸಹಜ ಬಯಕೆ ನಿಜ. ಆದರೆ ಆ ಡ್ರೆಸ್ ನಿಮಗೆ ಎಷ್ಟರ ಮಟ್ಟಿಗೆ ಫಿಟ್ ಆಗುತ್ತೆ, ಚೆನ್ನಾಗಿ ಕಾಣುತ್ತದೆ ಎಂಬುದು ತುಂಬಾ ಮುಖ್ಯ. ಕೆಲವೊಮ್ಮೆ ನೀವು ಫಿಟ್ ಆಗಿದ್ದರೂ ಕೆಲವು ಬಟ್ಟೆಗಳಲ್ಲಿ ದಪ್ಪ ಕಾಣಿಸುತ್ತೀರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರತಿಯೊಬ್ಬ (Every) ಮಹಿಳೆಯು (Women) ಒಳ್ಳೆಯ ಡ್ರೆಸ್ (Dress) ಹಾಕಬೇಕು, ಚೆನ್ನಾಗಿ ಕಾಣಬೇಕು, ಹೇರ್ ಸ್ಟೈಲ್ (Hair Style) ಮಾಡಬೇಕು. ಸ್ಲಿಮ್ (Slim) ಆಗಿ ಬದಲಾವಣೆಗೆ ತಕ್ಕಂತೆ ಫ್ಯಾಷನ್ (Fashion), ಸ್ಟೈಲ್ ಫಾಲೋ ಮಾಡಬೇಕು ಎಂದು ಬಯಸುತ್ತಾಳೆ. ತಾನು ಹಾಕುವ ಬಟ್ಟೆಯಲ್ಲಿ ಸ್ಲಿಮ್ ಟ್ರಿಮ್ ಆಗಿ ಕಾಣಲು ಇಷ್ಟ ಪಡುತ್ತಾಳೆ. ಸ್ಲಿಮ್ ಆಗಿ ಕಾಣಲು ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ಬಹಳ ಮುಖ್ಯ. ನಿಮ್ಮ ಆಕಾರಕ್ಕೆ ಸರಿಯಾಗಿ ಬಟ್ಟೆಗಳನ್ನು ಆರಿಸದೇ ಇರುವುದು, ನೀವು ಅತೀಯಾಗಿ ಸ್ಲಿಮ್ ಮತ್ತು ದಪ್ಪವಾಗಿ ಕಾಣುವಂತೆ ಮಾಡುತ್ತದೆ. ಅನೇಕ ಮಹಿಳೆಯರು ಬಟ್ಟೆಗಳನ್ನು ಖರೀದಿಸುವಾಗ ಬಣ್ಣ ಅಥವಾ ಶೈಲಿಯನ್ನು ಮಾತ್ರ ನೋಡುತ್ತಾರೆ.

    ಇಷ್ಟಪಟ್ಟ ಡ್ರೆಸ್ ನಿಮಗೆ ಚೆನ್ನಾಗಿ ಕಾಣಿಸಬೇಕಲ್ವಾ?

    ಅಂತಹ ಸಮಯದಲ್ಲಿ ನೀವು ಇಷ್ಟಪಟ್ಟ ಡ್ರೆಸ್ ನಿಮಗೆ ಚೆನ್ನಾಗಿ ಕಾಣಿಸಬೇಕು ಎಂದು ನಿಮ್ಮ ಸಹಜ ಬಯಕೆ ನಿಜ. ಆದರೆ ಆ ಡ್ರೆಸ್ ನಿಮಗೆ ಎಷ್ಟರ ಮಟ್ಟಿಗೆ ಫಿಟ್ ಆಗುತ್ತೆ, ಚೆನ್ನಾಗಿ ಕಾಣುತ್ತದೆ ಎಂಬುದು ತುಂಬಾ ಮುಖ್ಯ. ಕೆಲವೊಮ್ಮೆ ನೀವು ಫಿಟ್ ಆಗಿದ್ದರೂ ಕೆಲವು ಬಟ್ಟೆಗಳಲ್ಲಿ ದಪ್ಪ ಕಾಣಿಸುತ್ತೀರಿ.

    ಬಟ್ಟೆ ಖರೀದಿಸುವಾಗ ಮತ್ತು ಒಯ್ಯುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಇಂದು ನಾವು ಇಲ್ಲಿ ಕೆಲವು ಫ್ಯಾಷನ್ ಮತ್ತು ಸ್ಟೈಲ್ ಸಲಹೆ ಹೇಳುತ್ತಿದ್ದೇವೆ. ಇದು ನಿಮ್ಮನ್ನು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ.

    ಇದನ್ನೂ ಓದಿ: ವರ್ಕೌಟ್ ಮಾಡುವ 40 ನಿಮಿಷಗಳ ಮೊದಲು ಈ ಪದಾರ್ಥಗಳನ್ನು ಸೇವಿಸಿ ಎನರ್ಜಿ ಪಡೆಯಿರಿ!

    ಸರಿಯಾದ ಪ್ರಿಂಟಿಂಗ್ ಬಟ್ಟೆ ಆರಿಸಿ

    ಬಟ್ಟೆಗಳನ್ನು ಖರೀದಿಸುವಾಗ ನೀವು ಸರಿಯಾದ ಪ್ರಿಂಟಿಂಗ್ ಮತ್ತು ಸ್ಟೈಲ್ ಬಟ್ಟೆ ಆರಿಸಬೇಕು. ನೀವು ಸಣ್ಣ ಮುದ್ರಣ ಮತ್ತು ಲಂಬ ರೇಖೆಯ ಮುದ್ರಣಗಳ ನಡುವೆ ಆಯ್ಕೆ ಮಾಡಬೇಕು. ಇದರಲ್ಲಿ ನಿಮ್ಮ ಲುಕ್ ಸ್ಲಿಮ್ ಆಗಿ ಕಾಣುತ್ತದೆ.

    ಗಾತ್ರಕ್ಕೆ ಮೀರಿದ ಬಟ್ಟೆಗಳನ್ನು ಆಯ್ಕೆ ಮಾಡಿ

    ನೀವು ಅಧಿಕ ತೂಕ ಹೊಂದಿದ್ದರೆ ಮತ್ತು ನಿಮ್ಮ ಎತ್ತರ ಕಡಿಮೆ ಇದ್ದರೆ ನೀವು ಹಾಕುವ ಬಟ್ಟೆಗಳನ್ನು ಸಡಿಲ ಬಟ್ಟೆ ಆರಿಸಿ, ಧರಿಸಬೇಕು. ಸಡಿಲವಾದ ಬಟ್ಟೆ ಧರಿಸಿ. ಇನ್ನೂ ಸಡಿಲವಾದ ಬಟ್ಟೆಗಳನ್ನು ಧರಿಸಲು ಬಯಸಿದರೆ ಗಾಢ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ.

    ಬಟ್ಟೆಗೆ ಹಾಗೂ ನಿಮಗೆ ಹೊಂದಿಕೆಯಾಗುವ ಸರಿಯಾದ ಪರಿಕರ ಆರಿಸಿ

    ನೀವು ಉಡುಪಿನ ಜೊತೆಗೆ ಸರಿಯಾದ ಪರಿಕರ ಅಂದರೆ ಸಾಮಗ್ರಿಗಳನ್ನು ಸಹ ಆಯ್ಕೆ ಮಾಡಬೇಕು. ನೀವು ದಪ್ಪಗಿದ್ದರೆ, ತೆಳುವಾದ ಬೆಲ್ಟ್ ಬದಲಿಗೆ ದಪ್ಪ ಬೆಲ್ಟ್ ಬಳಸಿ. ಇದು ಹೊಟ್ಟೆಯ ಕೊಬ್ಬನ್ನು ಮರೆಮಾಡಲು ಸಹಾಯ ಮಾಡುತ್ತದೆ.

    ಯಾವ ಟಾಪ್‌ನಲ್ಲಿ ನೀವು ಸ್ಲಿಮ್ ಆಗಿ ಕಾಣುತ್ತೀರಿ

    ನಿಮಗೆ ಸ್ಲಿಮ್ ಲುಕ್ ಬೇಕಾದರೆ, ಸ್ಟೈಲ್ ಮತ್ತು ಟ್ರೆಂಡ್‌ಗೆ ಅನುಗುಣವಾಗಿ ಟಾಪ್ ಆಯ್ಕೆ ಮಾಡುವ ಬದಲು, ನಿಮ್ಮ ಫಿಗರ್‌ಗೆ ಅನುಗುಣವಾದ ಟಾಪ್ ಆರಿಸಿ. ನೀವು ಗಾತ್ರದ ತೋಳುಗಳು, ಕವಚದ ಮೇಲ್ಭಾಗಗಳು, ಬಲೂನ್ ಟಾಪ್‌ಗಳು ಮತ್ತು ಕಫ್ತಾನ್ ಟಾಪ್‌ ಧರಿಸುವುದನ್ನು ತಪ್ಪಿಸಬೇಕು. ಉತ್ತಮ ಪ್ರಿಂಟ್‌ ನೇರವಾದ ತೋಳು, ಮತ್ತು ತ್ರೀಫೋರ್ತ್ ಸ್ಲೀವ್‌ ಟಾಪ್‌ ಧರಿಸಿ. ನೀವು ಗಾಢ ಬಣ್ಣದ ಸ್ಲಿಮ್ ಲುಕಿಂಗ್ ಟಾಪ್‌ ಆರಿಸಿ.

    ಸ್ಲಿಮ್ ಲುಕ್‌ಗಾಗಿ ಜೀನ್ಸ್ ಧರಿಸಿ

    ನೀವು ಜೀನ್ಸ್ ಅನ್ನು ಬುದ್ಧಿವಂತಿಕೆಯಿಂದ ಆರಿಸಬೇಕು. ನೀವು ಹೆಚ್ಚು ಸ್ಕಿನ್ನಿ ಜೀನ್ಸ್ ಧರಿಸಿದರೆ, ಅದು ದಪ್ಪವಿರುವ ಚರ್ಮವನ್ನು ಇನ್ನು ಎದ್ದು ಕಾಣುವಂತೆ ಮಾಡುತ್ತದೆ. ನೀವು ಎತ್ತರದ ವೆಸ್ಟ್ ಮತ್ತು ಸಡಿಲವಾದ ಜೀನ್ಸ್ ಧರಿಸಿದರೆ ಅದು ದಪ್ಪವಾಗಿ ಕಾಣುತ್ತದೆ. ಸ್ಲಿಮ್ ಲುಕ್‌ಗಾಗಿ ನೀವು ಪೆನ್ಸಿಲ್ ಫಿಟ್ ಜೀನ್ಸ್ ಧರಿಸಿ.

    ಇದನ್ನೂ ಓದಿ: ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು? ಯಾವ ಪದಾರ್ಥ ಸೇವನೆ ಮಾಡಬೇಕು? ಇಲ್ಲಿದೆ ಮಾಹಿತಿ

    ಸಮುದ್ರತೀರದಲ್ಲಿ ಯಾವ ಉಡುಗೆ ಧರಿಸಬೇಕು

    ಆರಾಮದಾಯಕ ಬೂಟು ಅಥವಾ ಸ್ಯಾಂಡಲ್, ಕ್ರೋಕ್ಸ್ ಅಥವಾ ರಬ್ಬರ್ ಸ್ಯಾಂಡಲ್ ಅತ್ಯುತ್ತಮ ಆಯ್ಕೆ. ಜೀನ್ಸ್ ಅಥವಾ ಟೀ ಶರ್ಟ್‌ ಧರಿಸಿ ಬೀಚ್ ಗೆ ಹೋದರೆ ಆನಂದಿಸಲು ಸಾಧ್ಯವಿಲ್ಲ. ನೈಲಾನ್ ಬಟ್ಟೆಗಳು ಬೇಗನೆ ಒಣಗುತ್ತವೆ. ಹಾಗಾಗಿ ಇವುಗಳನ್ನು ಬಳಸಿ.
    Published by:renukadariyannavar
    First published: