ಇಂದಿನ ಧಾವಂತದ ಜೀವನದಲ್ಲಿ (Life) ಎಲ್ಲವೂ ಸಂಪೂರ್ಣವಾಗಿ ಬದಲಾವಣೆ (Changes) ಆಗುತ್ತಾ ಹೋಗುತ್ತಿದೆ. ಬೆಳಗಿನ ಉಪಾಹಾರದಲ್ಲಿ (Morning Breakfast) ನಾವು ಎಣ್ಣೆಯುಕ್ತ ಪದಾರ್ಥಗಳನ್ನೇ (Oily Ingredients) ಸೇವನೆ ಮಾಡುತ್ತೇವೆ. ಪರೋಟಾ, ಮೊಸರು ಪಾಶ್ಚಿಮಾತ್ಯ ಆಹಾರಗಳಾದ ಬ್ರೆಡ್, ಬಟರ್ ಮತ್ತು ಕಾರ್ನ್ ಫ್ಲೇಕ್ಸ್, ಹಾಲು ಇತ್ಯಾದಿ ಪದಾರ್ಥಗಳ ಸೇವನೆ ಈಗ ಚಾಲ್ತಿಯಲ್ಲಿದೆ. ಅದರಲ್ಲೂ ಬಿಳಿ ಬ್ರೆಡ್ ಗೆ ಜಾಮ್ ಹಾಕಿಕೊಂಡು ತಿನ್ನುವ ಪದ್ಧತಿ ಮಕ್ಕಳು ಮತ್ತು ವಯಸ್ಕರರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಜನರು ಕೆಲವೇ ನಿಮಿಷಗಳಲ್ಲಿ ರೆಸಿಪಿ ಮಾಡಿ ತಿನ್ನಲು ಇಷ್ಟ ಪಡುತ್ತಾರೆ. ಕೆಲವು ರೆಸಿಪಿ ತಯಾರಿಸಲು ಸಮಯ ಬೇಕಾಗುತ್ತದೆ.
ಹಾಗಾಗಿ ಬೇರೆ ರೆಸಿಪಿಗಿಂತ ಬಿಳಿ ಬ್ರೆಡ್ ಜೊತೆಗಿನ ರೆಸಿಪಿ ಆರೋಗ್ಯಕ್ಕೆ ಹಾಗೂ ಕ್ವಿಕ್ ಆಗಿ ಮಾಡಿಕೊಳ್ಳಬಹುದೆಂದು ಅಂದುಕೊಳ್ಳುತ್ತಾರೆ. ನೀವು ನಿಮ್ಮ ಬೆಳಗಿನ ಉಪಾಹಾರದಲ್ಲಿ ಪರಾಟಾ ಬದಲು ಬಿಳಿ ಬ್ರೆಡ್ ತಿನ್ನುವುದೇ ಸೂಕ್ತ ಎಂದು ತಿಳಿದಿದ್ದರೆ ಆ ಬಿಳಿ ಬ್ರೆಡ್ ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಹಾಗೂ ಅದನ್ನು ಹೇಗೆ ತಯಾರು ಮಾಡುತ್ತಾರೆ ಎಂದು ಇಲ್ಲಿ ನೋಡೋಣ.
ಬಿಳಿ ಬ್ರೆಡ್ ಹೇಗೆ ತಯಾರಿಸುತ್ತಾರೆ?
ಬಿಳಿ ಬ್ರೆಡ್ ತಯಾರಿಸಲು ಗೋಧಿ ಹಿಟ್ಟನ್ನು ಬಳಸುತ್ತಾರೆ. ಆದರೆ ಬ್ರೆಡ್ ತಯಾರಿಸುವಾಗ, ಅದನ್ನು ತುಂಬಾ ನುಣ್ಣಗೆ ಪುಡಿ ಮಾಡುತ್ತಾರೆ. ಮತ್ತು ಈ ಪ್ರಕ್ರಿಯೆಯ ಮೂಲಕ ಎಲ್ಲಾ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗುತ್ತದೆ. ಬ್ರೆಡ್ ಉತ್ಪನ್ನ ದೀರ್ಘ ಕಾಲದವರೆಗೆ ತಾಜಾ ಮತ್ತು ಖಾದ್ಯವಾಗಿ ಇರಿಸಬಹುದು ಎಂದು ಹೀಗೆ ಮಾಡುತ್ತಾರೆ.
ಇದನ್ನೂ ಓದಿ: ಈ ಟಿಪ್ಸ್ ಫಾಲೊ ಮಾಡಿದ್ರೆ ನಿಮ್ಮ ಹಲ್ಲುಗಳು ಹಾಳಾಗೋದಿಲ್ಲ, ಫಳ ಫಳ ಹೊಳೆಯುತ್ತೆ!
ಬಿಳಿ ಬ್ರೆಡ್ ಏಕೆ ಹಾನಿಕಾರಕ?
ಬ್ರೆಡ್ನಲ್ಲಿ ಬಳಸುವ ಹಿಟ್ಟು ಎಲ್ಲಾ ಪೋಷಕಾಂಶಗಳು ಮತ್ತು ಎಣ್ಣೆಯನ್ನು ತೆಗೆದು ಹಾಕಿದ ನಂತರ ಬ್ಲೀಚ್ ಆಗುತ್ತದೆ. ಅದು ಕೆಡದೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಅಲ್ಲದೆ ಇದರ ನೈಸರ್ಗಿಕ ಹಳದಿ ಬಣ್ಣ ತೆಗೆಯಲು ರಾಸಾಯನಿಕಗಳಾದ ಪೊಟಾಶಿಯಂ ಬ್ರೋಮೇಟ್, ಅಜೋಡಿಕಾರ್ಬೊನಮೈಡ್ ಅಥವಾ ಕ್ಲೋರಿನ್ ಡೈಆಕ್ಸೈಡ್ ಅನಿಲ ಬಳಸುತ್ತಾರೆ.
ಇದರ ಪರಿಣಾಮವಾಗಿ ಬಿಳಿ ಬ್ರೆಡ್ ಸೇವಿಸುವವರು ಮಧುಮೇಹ, ಹೃದ್ರೋಗ ಮತ್ತು ಬೊಜ್ಜು ಮುಂತಾದ ಸಮಸ್ಯೆ ಎದುರಿಸಬೇಕಾಗುತ್ತದೆ. ಇದಲ್ಲದೆ ಬ್ರೆಡ್ಗೆ ಸೇರಿಸಲಾದ ಅನೇಕ ಸಂರಕ್ಷಕಗಳನ್ನು ಸಹ ಸೇರಿಸಲಾಗುತ್ತದೆ. ಅದು ದೀರ್ಘ ಕಾಲದವರೆಗೆ ತಾಜಾ ಆಗಿರುತ್ತದೆ.
ಬಿಳಿ ಬ್ರೆಡ್ ಅನ್ನು ಮೈದಾದಿಂದ ತಯಾರಿಸುವುದರಿಂದ ಇದು ದೇಹಕ್ಕೆ ಹಲವು ಹಾನಿ ಉಂಟು ಮಾಡುತ್ತದೆ. ಬ್ರೆಡ್ನಲ್ಲಿ ಕಂಡು ಬರುವ ಪೊಟ್ಯಾಸಿಯಮ್ ಬ್ರೋಮೇಟ್ ಆರೋಗ್ಯಕ್ಕೆ ಹಾನಿಕಾರಕ. ಬಿಳಿ ಬ್ರೆಡ್ ತಿನ್ನುವುದರಿಂದ ನೀವು ಯಾವ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇಲ್ಲಿ ನೋಡೋಣ.
ಮಲಬದ್ಧತೆ
ಬ್ರೆಡ್ ವಾಸ್ತವವಾಗಿ ಹೊಟ್ಟು ಇಲ್ಲದೆ ತಯಾರಿಸುತ್ತಾರೆ. ಇದು ಫೈಬರ್ನಲ್ಲಿ ಅಧಿಕವಾಗಿದೆ. ಇದು ಆಹಾರದ ನಿಧಾನ ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಬ್ರೆಡ್ ಅನ್ನು ನಿಯಮಿತವಾಗಿ ಸೇವಿಸುವುದು ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ.
ಬೊಜ್ಜು
ಬೊಜ್ಜು ಕಡಿಮೆ ಮಾಡಲು ಬಯಸುವವರು ವಿಶೇಷವಾಗಿ ಬಿಳಿ ಬ್ರೆಡ್ ತಿನ್ನಬಾರದು. ಇದು ನಿಮ್ಮ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ಮತ್ತು ಕಡಿಮೆ ಮಾಡುತ್ತದೆ. ಹೀಗಾದರೆ ಹಸಿವು ಕೂಡ ಹೆಚ್ಚು ಆಗುವುದರಿಂದ ಮತ್ತೆ ಮತ್ತೆ ತಿಂದು ಬೊಜ್ಜು ಹೆಚ್ಚುತ್ತದೆ.
ಇದನ್ನೂ ಓದಿ: ಇವುಗಳನ್ನು ತಿಂದ್ರೆ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯೋದಿಲ್ವಂತೆ
ಹೊಟ್ಟೆ ಉರಿ
ದಿನನಿತ್ಯ ಬ್ರೆಡ್ ಸೇವನೆ ಹೊಟ್ಟೆ ಉರಿಯುವಿಕೆ ಹೆಚ್ಚಿಸುತ್ತದೆ. ಬಿಳಿ ಬ್ರೆಡ್ ಹೆಚ್ಚು ಪಿಷ್ಟದ ಉತ್ಪನ್ನ. ಕಂದು ಬ್ರೆಡ್ಗಿಂತ ಭಿನ್ನವಾಗಿ, ಇದು ಫೈಬರ್ ಹೊಂದಿಲ್ಲ. ಹೆಚ್ಚಿನ ಪ್ರಮಾಣದ ಗ್ಲುಟನ್, ಇದು ಸೆಪ್ಟಮ್ಗೆ ಸಂಬಂಧಿಸಿದ ಕಾಯಿಲೆ ಉಂಟು ಮಾಡುತ್ತದೆ. ಹೀಗಾಗಿ ಹೊಟ್ಟೆ ನೋವು, ಭೇದಿ, ವಾಂತಿ ಮುಂತಾದ ಸಮಸ್ಯೆ ಉಂಟಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ