Yoga Routine: ಕಳೆದ ಒಂದೂವರೆ ವರ್ಷದಲ್ಲಿ ನಮಗೆ ಈ ಕೋವಿಡ್-19 ವೈರಸ್ ಹಾವಳಿಯಿಂದಾಗಿ ಸಂಭವಿಸಿದ ಸಾವು ನೋವುಗಳನ್ನು ನೋಡಿದಾಗ ಆರೋಗ್ಯವು ನಮಗೆ ಎಷ್ಟು ಮುಖ್ಯವಾಗಿದೆ ಎನ್ನುವುದು ಚೆನ್ನಾಗಿ ಮನದಟ್ಟಾಗಿರುತ್ತದೆ. ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಕೋವಿಡ್ ನಂತರ ಪ್ರತಿಯೊಬ್ಬರೂ ಆರೋಗ್ಯದತ್ತ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದಾರೆ. ನಮ್ಮ ದೇಹವನ್ನು ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಅಂತ ಆಲೋಚನೆ ಮಾಡಿದರೆ, ನಮಗೆ ಮೊದಲು ನೆನಪಾಗುವುದೇ ಈ ಯೋಗಾಭ್ಯಾಸ ಎಂದರೆ ಅತಿಶಯೋಕ್ತಿಯಲ್ಲ. ಪ್ರತಿದಿನ ನೀವು ಯೋಗಾಭ್ಯಾಸವನ್ನು ಮಾಡುತ್ತಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ತುಂಬಾ ಸಕರಾತ್ಮಕವಾದ ಪ್ರಭಾವವನ್ನು ಬಿರುತ್ತದೆ. ಮಾನಸಿಕ ನೆಮ್ಮದಿ, ದೇಹದಲ್ಲಾಗುವ ಸಣ್ಣ ಪುಟ್ಟ ನೋವುಗಳು, ಅನಾರೋಗ್ಯದಿಂದ ಮುಕ್ತವಾಗಿರಿಸುತ್ತದೆ. ಯೋಗಾಭ್ಯಾಸ ಎಂದರೆ ಬರೀ ಮ್ಯಾಟ್ ಹಾಸಿಕೊಂಡು ಅದರ ಮೇಲೆ ನಡೆಸುವುದಲ್ಲ. ಬದಲಿಗೆಯೋಗಾಭ್ಯಾಸವು ನಿಮ್ಮ ಆರೋಗ್ಯದ ಮೇಲೆ ಸಕರಾತ್ಮಕ ಬದಲಾವಣೆ ಕಾಣಬೇಕಾದರೆ ಇಲ್ಲಿ ಕೆಲವು ಟಿಪ್ಸ್ ಗಳಿವೆ.
ಯೋಗಾಭ್ಯಾಸವನ್ನು ಮಾಡಲು ಒಂದು ನಿರ್ದಿಷ್ಟವಾದಂತಹ ಸಮಯವನ್ನು ನಿಗದಿಪಡಿಸಿಕೊಳ್ಳಿ ಮತ್ತು ಹೆಚ್ಚಾಗಿ ನಿಮ್ಮ ದೇಹವು ಚೆನ್ನಾಗಿ ವಿಶ್ರಾಂತಿ ತೆಗೆದುಕೊಂಡ ನಂತರ, ಎಂದರೆ ಬೆಳಿಗ್ಗೆ ಮಾಡುವುದು ಉತ್ತಮ. ಬೆಳಿಗ್ಗೆ ಯೋಗಾಭ್ಯಾಸವನ್ನು ಮಾಡಲು ಆಗದಿದ್ದರೆ ಸಂಜೆ ಮಾಡುವುದು ಉತ್ತಮವಾಗಿದೆ.
ನೀವು ಯೋಗಾಭ್ಯಾಸವನ್ನು ಖಾಲಿ ಹೊಟ್ಟೆಯಲ್ಲಿ ಮಾಡಿದರೆ ತುಂಬಾ ಒಳ್ಳೆಯದು. ಯಾವಾಗಾದರೂ ಊಟವನ್ನು ಸೇವಿಸಿದರೂ ಎರಡು ಗಂಟೆಗಳ ನಂತರ ಯೋಗಾಭ್ಯಾಸವನ್ನು ಮಾಡಿರಿ.ಯೋಗಾಭ್ಯಾಸವನ್ನು ಮಾಡುವಾಗ ನೆಲದ ಮೇಲೆ ಹಾಗೆಯೇ ಕುಳಿತು ಮಾಡುವುದಕ್ಕಿಂತ ಒಂದು ಚಾಪೆಯನ್ನು ಅಥವಾ ಹೊದಿಕೆಯನ್ನು ನೆಲದ ಮೇಲೆ ಹಾಸಿಕೊಂಡು ಅದರ ಮೇಲೆ ಯೋಗಾಭ್ಯಾಸವನ್ನು ಮಾಡಿರಿ.
ನೀವು ಯೋಗಾಭ್ಯಾಸವನ್ನು ಮಾಡುವಾಗ ನಿಮಗೆ ಯಾವುದೇ ರೀತಿಯ ಅಡಚಣೆಗಳು ಆಗದಂತೆ ನೋಡಿಕೊಳ್ಳಲು ನಿಮ್ಮ ಮೊಬೈಲ್ ಅನ್ನು ಪಕ್ಕದ ಕೋಣೆಯಲ್ಲಿ ಇರಿಸಿ ಅಥವಾ ಸ್ವಿಚ್ಆಫ್ ಮಾಡಿರಿ. ಯೋಗಾಭ್ಯಾಸವನ್ನು ಮಾಡುವಾಗ ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ತುಂಬಾ ಅವಶ್ಯಕವಾಗಿದೆ.ಉತ್ತಮ ಫಲಿತಾಂಶಕ್ಕಾಗಿ ನೀವು ಯೋಗಾಭ್ಯಾಸವನ್ನು ಆರಂಭಿಸುವ ಮೊದಲು ಸೂರ್ಯ ನಮಸ್ಕಾರ ಮಾಡಿ. ಇದರಿಂದ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯೂ ಸುಗಮವಾಗುತ್ತದೆ.
ಯೋಗಾಭ್ಯಾಸವನ್ನು ತುಂಬಾ ಗಂಭೀರವಾಗಿ ಮಾಡಲು ನಿಮ್ಮ ಉಸಿರಾಟದ ಮೇಲೆ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ಒಳ್ಳೆಯದು.ನೀವು ಯಾವುದಾದರೂ ಗಂಭೀರವಾದ ಗಾಯದಿಂದ ಅಥವಾ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರೆ ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡಿ ಸೂಕ್ತವಾದ ಸಲಹೆ ಪಡೆದುಕೊಂಡು ಯೋಗಾಭ್ಯಾಸವನ್ನು ಮಾಡುವುದು ಉತ್ತಮ.
ಯೋಗಾಭ್ಯಾಸವನ್ನು ನೀವು ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಮಾಡುವುದು ತುಂಬಾ ಉತ್ತಮ. ಏಕೆಂದರೆ ನಿಮಗೆ ಒಬ್ಬರು ಉತ್ತಮ ಯೋಗ ಗುರುಗಳು ಸಿಕ್ಕರೆ ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ಮಾಡುವುದು ನಿಮಗೆ ಪ್ರತಿದಿನ ಯೋಗಾಭ್ಯಾಸವನ್ನು ತಪ್ಪದೆ ಮಾಡುವಲ್ಲಿ ಸಹಾಯಕವಾಗುತ್ತದೆ.ಯೋಗಾಭ್ಯಾಸವನ್ನು ಮಾಡಿದ ನಂತರ ನಿಮ್ಮ ಆ ದಿನದ ಅಭ್ಯಾಸವನ್ನು ವಿಶ್ರಾಂತಿ ಪಡೆಯುವುದರ ಮುಖಾಂತರ ಮತ್ತು ಧ್ಯಾನ ಮಾಡುವುದರೊಂದಿಗೆ ಮುಗಿಸುವುದು ತುಂಬಾ ಸಹಾಯಕಾರಿ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ