Protein Powder Supplement: ಫಿಟ್ನೆಸ್‌ಗಾಗಿ ನೀವು ಪ್ರೊಟೀನ್ ಸಪ್ಲಿಮೆಂಟ್ ಪೌಡರ್ ಸೇವನೆ ಮಾಡುತ್ತಿದ್ದೀರಾ? ಮೊದಲು ಜಾಗ್ರತೆ ವಹಿಸಿ!

ಹಾರ್ವರ್ಡ್ ವೈದ್ಯಕೀಯ ಸಂಸ್ಥೆ ವರದಿಯು ಪ್ರೋಟೀನ್ ಪುಡಿಯನ್ನು ಹಾಕಿಕೊಂಡು ಶೇಕ್ ಮಾಡಿ ಕುಡಿಯುವುದು ಕೆಲ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಫಿಟ್ನೆಸ್ (Fitness) ಉದ್ಯಮದಲ್ಲಿ (Business) ಸಾಮಾನ್ಯವಾಗಿ ಬಳಕೆ ಮಾಡುವ ಪದಾರ್ಥವೆಂದರೆ (Ingredient) ಅದು ಪ್ರೊಟೀನ್ ಸಪ್ಲಿಮೆಂಟ್ ಪೌಡರ್ (Protein Supplement Powder). ದೇಹದಾರ್ಢ್ಯ ಮತ್ತು ಬಾಡಿ ಬಿಲ್ಡಿಂಗ್ (Body Build) ಗಾಗಿ ಹೆಚ್ಚಿನ ಜನರು ಪೂರಕವಾದ 'ಪ್ರೋಟೀನ್ ಸಪ್ಲಿಮೆಂಟ್' ಸೇವನೆ ಮಾಡುತ್ತಾರೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಪ್ರೋಟೀನ್ ಪುಡಿ ಅಥವಾ ಪ್ರೊಟೀನ್ ಪೌಡರ್ ಎಂದು ಕರೀತಾರೆ. ವೃತ್ತಿಪರ ಬಾಡಿ ಬಿಲ್ಡರ್ ಗಳು ಹಾಗೂ ಫಿಟ್ನೆಸ್ ಗಾಗಿ ಶ್ರಮ ಪಡುವವರು ವ್ಯಾಯಾಮದ ನಂತರ ಪ್ರೋಟೀನ್ ಪುಡಿಯನ್ನು ಹಾಕಿಕೊಂಡು ಶೇಖ್ ಮಾಡಿ ಕುಡಿಯುತ್ತಾರೆ. ಈ ಬಗ್ಗೆ ಕೆಲವು ಸಂಶೋಧನೆಗಳು ಪ್ರೋಟೀನ್ ಪುಡಿ ಸೇವನೆ ಮಾಡುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದು ಹೇಳಿವೆ.

  ಪ್ರೋಟೀನ್ ಪುಡಿ ಶೇಖ್ ಕುಡಿಯುವುದು ಅಡ್ಡ ಪರಿಣಾಮ ಉಂಟು ಮಾಡುತ್ತದೆ

  ಆದರೆ ಹಾರ್ವರ್ಡ್ ವೈದ್ಯಕೀಯ ಶಾಲೆಯ ವರದಿಯು ಪ್ರೋಟೀನ್ ಪುಡಿಯನ್ನು ಹಾಕಿಕೊಂಡು ಶೇಖ್ ಮಾಡಿ ಕುಡಿಯುವುದು ಕೆಲ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದೆ. 134 ಪ್ರೋಟೀನ್ ಪೌಡರ್‌ಗಳಲ್ಲಿ 130 ವಿಧದ ಅಪಾಯಕಾರಿ ರಾಸಾಯನಿಕಗಳನ್ನು ಸೇರಿಸಿ ತಯಾರು ಮಾಡಲಾಗಿದೆ ಎಂದು ಅಧ್ಯಯನದಲ್ಲಿ ಕಂಡು ಬಂದಿವೆ.

  ಹಾರ್ವರ್ಡ್‌ನೊಂದಿಗೆ ಸಂಯೋಜಿತವಾಗಿರುವ ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯ ಪೌಷ್ಟಿಕಾಂಶ ವಿಭಾಗದ ನಿರ್ದೇಶಕಿ ಕ್ಯಾಥಿ ಮ್ಯಾಕ್‌ಮಾನಸ್ ಹೇಳುವ ಪ್ರಕಾರ, ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಪ್ರೋಟೀನ್ ಪೌಡರ್ ಬಳಕೆಗೆ ಶಿಫಾರಸು ಮಾಡಲ್ಲ ಎಂದಿದ್ದಾರೆ.

  ಇದನ್ನೂ ಓದಿ: ಬರೋಬ್ಬರಿ 194 ಕೆಜಿ ಇದ್ದ ವೈದ್ಯ ತೂಕ ಇಳಿಸಿಕೊಳ್ಳಲು ಕಾರಣವೇನಿತ್ತು ಗೊತ್ತಾ?

  ತಜ್ಞರ ಮೇಲ್ವಿಚಾರಣೆಯ ನಂತರವೇ ನೀವು ಪ್ರೋಟೀನ್ ಪುಡಿಯ ಸೇವನೆ ಮಾಡುವುದು ಸೂಕ್ತ. ನೀವು ಪ್ರೋಟೀನ್ ಪೌಡರ್ ಪೂರಕಗಳ ಸೇವನೆ ಮಾಡುತ್ತಿದ್ದರೆ ಜಾಗರೂಕರಾಗಿರಿ.

  ಪ್ರೋಟೀನ್ ಪುಡಿ ಎಂದರೇನು

  ಪ್ರೋಟೀನ್ ಪುಡಿ ಪೂರಕಗಳು ಪುಡಿಯ ರೂಪದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಪ್ರೋಟೀನ್ ಪುಡಿ ಅನೇಕ ರೂಪಗಳಲ್ಲಿ ಸಿಗುತ್ತದೆ. ಕ್ಯಾಸೀನ್, ಹಾಲೊಡಕು ಪ್ರೋಟೀನ್ ಇತ್ಯಾದಿ. ಸಕ್ಕರೆ, ಕೃತಕ ಸಿಹಿಕಾರಕ, ಜೀವಸತ್ವ, ಖನಿಜಗಳನ್ನು ಪ್ರೋಟೀನ್ ಪುಡಿಗೆ ಸೇರಿಸಿ ತಯಾರು ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಒಂದು ಸ್ಕೂಪ್ ಪ್ರೋಟೀನ್ ಪೌಡರ್ 10 ರಿಂದ 30 ಗ್ರಾಂ ಪ್ರೋಟೀನ್ ಹೊಂದಿರುತ್ತದೆ.

  ಪ್ರೋಟೀನ್ ಪುಡಿ ಸೇವನೆಯ ಅಪಾಯ

  ಪೌಷ್ಟಿಕತಜ್ಞ ಕ್ಯಾಥಿ ಮ್ಯಾಕ್‌ಮಾನಸ್ ಹೇಳುವ ಪ್ರಕಾರ, ಪ್ರೋಟೀನ್ ಪೌಡರ್ ದೀರ್ಘಕಾಲ ಬಳಕೆ ಮಾಡುವವರಲ್ಲಿ ಕೆಲವು ಅಡ್ಡ ಪರಿಣಾಮ ಹೊಂದಿದ್ದು ಕಾಣಬಹುದು. ಆದರೆ ಈ ಪೂರಕಗಳಿಂದ ಅಡ್ಡಪರಿಣಾಮಗಳ ಡೇಟಾ ಸೀಮಿತವಾಗಿದೆ. ಅದೇನೇ ಇದ್ದರೂ ಪ್ರೋಟೀನ್ ಪುಡಿ ಅಡ್ಡ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯ ಇಲ್ಲ.

  ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ

  ಪ್ರೊಟೀನ್ ಪೌಡರ್ ಪೂರೈಕೆಯ ಸಮಯದ ಮೇಲೆ ಅಡ್ಡ ಪರಿಣಾಮಗಳು ಕಂಡು ಬರುತ್ತವೆ. ಇದರ ಸೇವನೆ ನಿಮ್ಮ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಹೆಚ್ಚಿನ ಪ್ರೋಟೀನ್ ಪುಡಿಗಳನ್ನು ಹಾಲಿನಿಂದ ತಯಾರು ಮಾಡಲಾಗುತ್ತದೆ.

  ಡೈರಿ ಉತ್ಪನ್ನಗಳಿಂದ ಅಲರ್ಜಿ ಇರುವವರು ಅಥವಾ ಲ್ಯಾಕ್ಟೋಸ್ (ಹಾಲಿನ ಸಿಹಿ) ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಇರುವವರಿಗೆ ಹೊಟ್ಟೆಯ ಸಮಸ್ಯೆ ಕಾಡುತ್ತವೆ. ಕೆಲವು ಪ್ರೊಟೀನ್ ಪೌಡರ್‌ಗಳು ಕಡಿಮೆ ಸಕ್ಕರೆ ಅಂಶ ಹೊಂದಿರುತ್ತವೆ. ಕೆಲವು ಹೆಚ್ಚು ಹೊಂದಿರುತ್ತವೆ.

  ತೂಕ ಹೆಚ್ಚಳ ಮತ್ತು ಮಧುಮೇಹದ ಅಪಾಯ

  ಈ ಹೆಚ್ಚುವರಿ ಸಕ್ಕರೆ ದೇಹದ ಮೇಲೆ ಹಲವು ವಿಧದಲ್ಲಿ ಪರಿಣಾಮ ಬೀರುತ್ತದೆ. ಪ್ರೋಟೀನ್ ಪೌಡರ್‌ಗಳಲ್ಲಿ ಹೆಚ್ಚಿನ ಕ್ಯಾಲೋರಿ ಇರುವ ಹಿನ್ನೆಲೆ ಇದು ತೂಕ ಹೆಚ್ಚಳ, ರಕ್ತದ ಸಕ್ಕರೆ ಮಟ್ಟದ ಹೆಚ್ಚಳಕ್ಕೆ ಅಂದರೆ ಮಧುಮೇಹದ ಅಪಾಯವನ್ನು ಹೆಚ್ಚು ಮಾಡುತ್ತದೆ.

  ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಮಹಿಳೆಯರಿಗೆ ದಿನಕ್ಕೆ 24 ಗ್ರಾಂ ಮತ್ತು ಪುರುಷರಿಗೆ 36 ಗ್ರಾಂ ಸಕ್ಕರೆ ಸೇವಿಸಲು ಶಿಫಾರಸು ಮಾಡುತ್ತದೆ.

  ಪ್ರೋಟೀನ್ ಪುಡಿಯ ಹೊಸ ಅಪಾಯ

  ಹಾರ್ವರ್ಡ್ ವೈದ್ಯಕೀಯ ಶಾಲೆಯ ವರದಿಯ ಪ್ರಕಾರ, 2020 ರಲ್ಲಿ ಕ್ಲೀನ್ ಲೇಬಲ್ ಪ್ರಾಜೆಕ್ಟ್ ಎಂಬ ಲಾಭ ರಹಿತ ಗುಂಪು ಪ್ರೋಟೀನ್ ಪೌಡರ್‌ನಲ್ಲಿರುವ ವಿಷಕಾರಿ ವಸ್ತುಗಳ ಬಗ್ಗೆ ವರದಿ ಬಿಡುಗಡೆ ಮಾಡಿತು. ಇದರ ಪ್ರಕಾರ, ಅನೇಕ ಪ್ರೊಟೀನ್ ಪೌಡರ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಲೋಹಗಳಾದ (ಸೀಸ, ಆರ್ಸೆನಿಕ್, ಕ್ಯಾಡ್ಮಿಯಮ್ ಮತ್ತು ಪಾದರಸ), ಬಿಸ್ಫೆನಾಲ್-ಎ (ಬಿಪಿಎ, ಪ್ಲಾಸ್ಟಿಕ್ ತಯಾರಿಸಲು ಬಳಸಲಾಗುತ್ತದೆ).

  ಇದನ್ನೂ ಓದಿ: ಬರ್ನೌಟ್ ಸಮಸ್ಯೆ ಎಂದರೇನು? ಮಾನಸಿಕವಾಗಿಯೂ ಭಾರೀ ಡೇಂಜರ್ ಇದು

  ಕೀಟನಾಶಕಗಳು ಮತ್ತು ಇತರ ಅಪಾಯಕಾರಿ ರಾಸಾಯನಿಕಗಳು ಇರುತ್ತವೆ. ಇದರಿಂದ ಕ್ಯಾನ್ಸರ್ ಮತ್ತು ಇತರ ರೋಗಗಳ ಅಪಾಯ ಹೆಚ್ಚು. ಪ್ರೋಟೀನ್ ಪುಡಿಯಲ್ಲಿ ಕೆಲವು ವಿಷಕಾರಿ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ.
  Published by:renukadariyannavar
  First published: