ಪಾಲಕ್ ಪನೀರ್ (Palak Paneer) ಅಂದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಪಾಲಕ್ ಪನೀರ್ ಅತ್ಯಂತ ಜನಪ್ರಿಯ (Famous) ಮತ್ತು ತುಂಬಾ ಜನರ (People) ಫೇವರೆಟ್ ಖಾದ್ಯವಾಗಿದೆ. ಪಾಲಕ್ ಪನೀರ್ ರೆಸಿಪಿಯನ್ನು (Recipe) ಹಲವರು ಹಲವು ತರದಲ್ಲಿ ಮಾಡಿ ಸೇವಿಸುತ್ತಾರೆ. ಪಾಲಕ್ ಪನೀರ್ ಆರೋಗ್ಯಕ್ಕೆ ತುಂಬಾ ಉತ್ತಮ ಆಹಾರ ಎಂದು ಹೇಳಲಾಗಿದೆ. ಸಾಕಷ್ಟು ಪೋಷಕಾಂಶ ಭರಿತ ಪಾಲಕ್ ಪನೀರ್ ನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟ ಪಟ್ಟು ತಿನ್ನುತ್ತಾರೆ. ಪಾಲಕ್ ಪನೀರ್ ಇದ್ರೆ ಊಟದ ರುಚಿ ಮತ್ತು ಉತ್ಸಾಹ ಎರಡೂ ಹೆಚ್ಚುತ್ತದೆ. ಆದರೆ ನೀವು ತುಂಬಾ ಪ್ರೀತಿಯಿಂದ ಸೇವಿಸುವ ಪಾಲಕ್ ಪನೀರ್ ತರಕಾರಿ ನಿಮ್ಮ ಆರೋಗ್ಯಕ್ಕೆ ಕೆಲವೊಮ್ಮೆ ಹಾನಿ ಸಹ ಉಂಟು ಮಾಡುತ್ತದೆ.
ಡಯಟ್ ನಲ್ಲಿ ಸೇರಿಸುವ ಪಾಲಕ್ ಪನೀರ್ ತರಕಾರಿಯಿಂದ ಆರೋಗ್ಯಕ್ಕೆ ಹಾನಿ?!
ಇತ್ತೀಚೆಗೆ ಪೌಷ್ಟಿಕ ತಜ್ಞ ನಮಿ ಅಗರ್ವಾಲ್, ತುಂಬಾ ಜನರು ಇಷ್ಟ ಪಟ್ಟು ತಮ್ಮ ಡಯಟ್ ನಲ್ಲಿ ಸೇರಿಸುವ ಪಾಲಕ್ ಪನೀರ್ ಆರೋಗ್ಯ ಹಾನಿ ಮಾಡುತ್ತೆ ಎಂಬ ಬಗ್ಗೆ ಹೇಳಿದ್ದಾರೆ. ನಮಿ ಅಗರ್ವಾಲ್ ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಪಾಲಕ್ ಮತ್ತು ಪನೀರ್ ಅನ್ನು ಒಟ್ಟಿಗೆ ಸೇವಿಸಬಾರದು ಎಂದಿದ್ದಾರೆ. ರುಚಿಕರವಾದ ತರಕಾರಿ ತಿನ್ನುವುದನ್ನು ನೀವು ನಿಲ್ಲಿಸಬಹುದು ಎಂದು ತಿಳಿದ ನಂತರ ಹಲವು ಕಾರಣಗಳಿವೆ.
ಪಾಲಾಕ್ ಪನೀರ್ ಒಟ್ಟಿಗೆ ತಿನ್ನುವುದು ಅನಾರೋಗ್ಯಕರ ಹೇಗೆ?
ಪೌಷ್ಟಿಕ ತಜ್ಞ ನಮಿ ಅಗರ್ವಾಲ್ ಈ ಬಗ್ಗೆ ಹೀಗೆ ಹೇಳಿದ್ದಾರೆ. ಎಲ್ಲರೂ ಆರೋಗ್ಯಕ್ಕೆ ಇದು ತುಂಬಾ ಉತ್ತಮ ಎಂದು ತಿಳಿದು ಸೇವನೆ ಮಾಡುತ್ತಾರೆ. ಜೊತೆಗೆ ಇದು ಆರೋಗ್ಯ ವರ್ಧಕ ಎಂಬುದನ್ನಷ್ಟೇ ಗಮನದಲ್ಲಿಟ್ಟು ಸೇವನೆ ಮಾಡ್ತಾರೆ. ಆದ್ರೆ ಆರೋಗ್ಯಕರ ಎಂಬುದು ಎಷ್ಟು ಮುಖ್ಯವೋ, ಅದನ್ನು ಯಾವ ಪದಾರ್ಥದ ಜೊತೆ ತಿನ್ನಬೇಕು ಮತ್ತು ತಿನ್ನಬಾರದು ಎಂಬುದು ಸಹ ಅಷ್ಟೇ ಮುಖ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಅಂದ್ರೆ ನಾವು ತಿನ್ನುವ ಆಹಾರದ ಕಾಂಬಿನೇಷನ್ ಬಗ್ಗೆ ಹೆಚ್ಚು ಕಾಳಜಿ ಮತ್ತು ಗಮನಹರಿಸಬೇಕು ಎಂದಿದ್ದಾರೆ. ಪಾಲಕ್ ಮತ್ತು ಪನೀರ್ ಅನ್ನು ಒಟ್ಟಿಗೆ ತಿನ್ನುವುದು ಹಾನಿಕಾರಕ ಎನ್ನುತ್ತಾರೆ. ಕೆಲವು ಆಹಾರ ಪದಾರ್ಥಗಳ ಸಂಯೋಜನೆಗಳು ಒಟ್ಟಿಗೆ ಸೇರಿದಾಗ ಅವುಗಳು ಪರಸ್ಪರ ಪೋಷಕಾಂಶ ಕಡಿಮೆ ಮಾಡುತ್ತವೆ. ಇವುಗಳಲ್ಲಿ ಒಂದು ಕಬ್ಬಿಣ ಮತ್ತು ಕ್ಯಾಲ್ಸಿಯಂ.
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಪನೀರ್ ಕ್ಯಾಲ್ಸಿಯಂ ಹೇರಳವಾಗಿದೆ. ಇವೆರಡೂ ಒಟ್ಟಿಗೆ ಸೇರಿದಾಗ ಕ್ಯಾಲ್ಸಿಯಂ, ಕಬ್ಬಿಣದ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ. ಯಾಕಂದ್ರೆ ಪನೀರ್, ಹಾಲಿನಿಂದ ತಯಾರಾಗುತ್ತದೆ. ಹಾಗಾಗಿ ಅದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ.
ಪನೀರ್, ಪಾಲಕ್ ನಲ್ಲಿನ ಕಬ್ಬಿಣದ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ
ಇನ್ನು ಪಾಲಕ್ ಹಸಿರು ಎಲೆಗಳ ತರಕಾರಿ. ಇದರಲ್ಲಿ ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಎ, ಇ ಮತ್ತು ಕೆ ಮತ್ತು ಒಮೆಗಾ -3 ಕೊಬ್ಬಿನಾಮ್ಲ ಪೋಷಕಾಂಶ ಹೆಚ್ಚಿದೆ. ಪಾಲಕ್ ಮತ್ತು ಪನೀರ್ ನ್ನು ಒಟ್ಟಿಗೆ ತಿಂದಾಗ ಪನೀರ್ ನಲ್ಲಿರುವ ಕ್ಯಾಲ್ಸಿಯಂ ಪೋಷಕಾಂಶವು, ಪಾಲಕ್ ನಲ್ಲಿನ ಕಬ್ಬಿಣದ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ ಎಂದು ನಮಿ ಅಗರ್ವಾಲ್ ಹೇಳ್ತಾರೆ.
ದೇಹಕ್ಕೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಎರಡೂ ಸಿಗಲ್ಲ
ಪ್ರತಿಯೊಬ್ಬರ ದೇಹದಲ್ಲಿ ಕಬ್ಬಿಣವು, ಪಾಲಕದಲ್ಲಿರುವ ಕಬ್ಬಿಣದ 5 ಪ್ರತಿಶತಕ್ಕಿಂತ ಕಡಿಮೆ ಇರುತ್ತದೆ. ಹಾಗಾಗಿ ದೇಹವು ಕಬ್ಬಿಣ ಕೊರತೆ ಎದುರಿಸುತ್ತದೆ. ಪಾಲಕದಲ್ಲಿರುವ ಆಕ್ಸಲೇಟ್ ಆಂಟಿನ್ಯೂಟ್ರಿಯೆಂಟ್ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ತಡೆಯುತ್ತದೆ. ಆಗ ದೇಹವು ಕಬ್ಬಿಣ ಮತ್ತು ಕ್ಯಾಲ್ಸಿಯಂ ಎರಡನ್ನೂ ಸರಿಯಾಗಿ ಪಡೆಯಲು ಆಗಲ್ಲ ಅಂತಾರೆ.
ಇದನ್ನೂ ಓದಿ: ಪೋಷಕಾಂಶಗಳ ಗಣಿ ತೆಂಗಿನ ಹಾಲು ಸ್ಮೂಥಿ ಮಾಡೋದು ಹೀಗೆ
ಪಾಲಕ್ ತಿನ್ನಲು ಬಯಸಿದರೆ, ಪನೀರ್ ಕಾಂನಿನೇಷನ್ ಬದಲಾಯಿಸಿ, ಪಾಲಕ್ ಜೊತೆ ಆಲೂಗಡ್ಡೆ ಅಥವಾ ಪಾಲಕ್ ಕಾರ್ನ್ ಸೇರಿಸಿ ತಿನ್ನುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ