ಜೀವನದಲ್ಲಿ ಖುಷಿ ಖುಷಿಯಾಗಿರಬೇಕೇ? ಹಾಗಿದ್ರೆ ಅಪ್ಪಿ ತಪ್ಪಿಯೂ ಇದನ್ನು ಮಾಡಬೇಡಿ ಅನ್ನುತ್ತಿದೆ ಈ ಸಮೀಕ್ಷೆ

ಅಮೆರಿಕನ್ ಟೈಮ್ ಯೂಸ್ ಎಂಬ ಸಂಸ್ಥೆ ನಡೆಸಿದ ಹೊಸ ಸಮೀಕ್ಷೆಯಲ್ಲಿ ವಿವಾಹವಾಗಿರುವ ಮಹಿಳೆಯರಿಗಿಂತ ಮದುವೆಯಾಗದೇ ಇರುವ ಹುಡುಗಿಯರು ಹೆಚ್ಚು ಸಂತೋಷವಾಗಿದ್ದಾರೆ ಎಂದು ತಿಳಿದು ಬಂದಿದೆ.

zahir | news18
Updated:June 3, 2019, 2:45 PM IST
ಜೀವನದಲ್ಲಿ ಖುಷಿ ಖುಷಿಯಾಗಿರಬೇಕೇ? ಹಾಗಿದ್ರೆ ಅಪ್ಪಿ ತಪ್ಪಿಯೂ ಇದನ್ನು ಮಾಡಬೇಡಿ ಅನ್ನುತ್ತಿದೆ ಈ ಸಮೀಕ್ಷೆ
@magicmaman.com
  • News18
  • Last Updated: June 3, 2019, 2:45 PM IST
  • Share this:
ಜೀವನದಲ್ಲಿ ಸಂತೋಷವಾಗಿರೋದು ಹೇಗೆ? ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇದೆ. ಅಂತಹದೊಂದು ಆನಂದದ ಅನುಭೂತಿಗಾಗಿ ಪಡಬಾರದ ಕಷ್ಟಗಳನ್ನೆಲ್ಲಾ ಪಡುತ್ತೇವೆ. ಅದರಲ್ಲಿ ಕೆಲವರು ಯಶಸ್ವಿಯಾದರೆ, ಮತ್ತೆ ಕೆಲವರು ವಿಫಲರಾಗುತ್ತಾರೆ. ಹೀಗೆ ಬದುಕಿನ ವಿವಿಧ ಆಯಾಮಗಳಲ್ಲಿನ ವೈಫಲ್ಯಗಳಿಂದ ನಿರಾಸೆಯಾಗುವುದುಂಟು.

ಇನ್ನು ಕೆಲವರು ವಿವಾಹದ ಬಳಿಕ ಜೀವನ ಹೊಸ ಟ್ರ್ಯಾಕ್​ಗೆ ಮರಳಿದೆ ಎನ್ನುವವರಿದ್ದಾರೆ. ಹಾಗೆಯೇ ದಾಂಪತ್ಯಕ್ಕೆ ಕಾಲಿಟ್ಟ ಮೇಲೆಯೇ ಜೀವನದ ಅಸಲಿ ಆನಂದ ಅನುಭವಿಸುತ್ತಿದ್ದೇನೆ ಅನ್ನುವವರು ಸಹ ಇದ್ದಾರೆ. ಮತ್ತೆ ಕೆಲ ಮಂದಿ ವೈವಾಹಿಕ ಜೀವನದ ಬಳಿಕ ಸಂತೋಷವೇ ಕಳೆದು ಹೋಯಿತು ಎಂದು ಹೇಳುತ್ತಾರೆ.

ಆದರೆ ಹೆಚ್ಚಿನ ಮಹಿಳೆಯರು ಮದುವೆಯ ಬಳಿಕ ಆನಂದದಿಂದ ಕಾಲ ಕಳೆಯಬಹುದೆಂಬ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಜೀವನದ ಜಂಜಾಟದಿಂದ ಎಲ್ಲವೂ ದಾರಿ ತಪ್ಪಿರುತ್ತದೆ. ಹೀಗಾಗಿಯೇ ಜೀವನದಲ್ಲಿ ಸಂತೋಷ ಎಂದರೇನು ಎಂಬ ಪ್ರಶ್ನೆ ಸಾಮಾನ್ಯವಾಗಿ ವಿವಾಹಿತರನ್ನು ಕಾಡುತ್ತಿರುತ್ತವೆ.

ಸಂತೋಷ ಎಂಬುದು ಮನುಷ್ಯನಲ್ಲಿ ವಿಭಿನ್ನವಾಗಿದ್ದರೂ, ಅಂತಹದೊಂದು ಖುಷಿಯನ್ನು ಪ್ರತಿ ಮಹಿಳೆಯರು ಬಯಸುತ್ತಾರಂತೆ. ಹೀಗಾಗಿಯೇ ಅಧ್ಯಯನ ತಂಡವೊಂದು ಮಹಿಳೆಯರ ಸಂತೋಷದ ಬಗ್ಗೆ ಅಧ್ಯಯನವೊಂದನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಆನಂದದ ಕುರಿತಾದ ಮನದಾಳದ ಮಾತುಗಳನ್ನು ಹಲವರು ಬಹಿರಂಗಪಡಿಸಿದ್ದಾರೆ.

ಅಮೆರಿಕನ್ ಟೈಮ್ ಯೂಸ್ (ATUS) ಎಂಬ ಸಂಸ್ಥೆ ನಡೆಸಿದ ಹೊಸ ಸಮೀಕ್ಷೆಯಲ್ಲಿ ವಿವಾಹವಾಗಿರುವ ಮಹಿಳೆಯರಿಗಿಂತ ಮದುವೆಯಾಗದೇ ಇರುವ ಹುಡುಗಿಯರು ಹೆಚ್ಚು ಸಂತೋಷವಾಗಿದ್ದಾರೆ ಎಂದು ತಿಳಿದು ಬಂದಿದೆ. ವಿವಾಹಿತರು, ಅವಿವಾಹಿತ, ವಿಧವೆ ಮತ್ತು ವಿಚ್ಛೇದಿತರು ಪಾಲ್ಗೊಂಡಿದ್ದ ಈ ಸಮೀಕ್ಷೆಯಲ್ಲಿ ಒಮ್ಮತದಿಂದ ಕೇಳಿ ಬಂದ ಉತ್ತರ ಮದುವೆಗಿಂತ ಮುಂಚೆ ಸಂತೋಷವಾಗಿದ್ದೆ ಎಂಬುದಾಗಿತ್ತು. ಜನರ ಜೀವನದಲ್ಲಿನ ಸಂತೋಷ ಮತ್ತು ದುಃಖದ ಮಟ್ಟವನ್ನು ತುಲನಾತ್ಮಕವಾಗಿ ಈ ಅಧ್ಯಯನ ತಂಡ ಸಮೀಕ್ಷೆ ನಡೆಸಿತ್ತು. ಈ ಮೇಳೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆಯೇ ಜೀವನ ಜಿಗುಪ್ಸೆ ಆರಂಭವಾಗಿದೆ ಎಂದು ಹಲವರು ಹೇಳಿದ್ದಾರೆ.

ಇನ್ನು ಒಟ್ಟಾರೆ ಸಮೀಕ್ಷೆಯಲ್ಲಿ ಗಂಡ ಮತ್ತು ಮಕ್ಕಳಲಿಲ್ಲದಿದ್ದರೆ ಹೆಚ್ಚು ಸಂತೋಷವಾಗಿರುವುದಾಗಿ ಹೆಚ್ಚಿನ ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜೀವನದ ಖುಷಿಯಲ್ಲಿ ಅವಿವಾಹಿತರಾಗಿರುವ ಕಪಲ್ಸ್​ ಹೆಚ್ಚು ಹ್ಯಾಪಿಯಾಗಿದೆ ಎಂದು ಈ ಸಮೀಕ್ಷೆ ತಿಳಿಸಿದೆ.

ಮದುವೆ ಸಂಬಂಧದಲ್ಲಿ ಮಹಿಳೆಯರಿಗಿಂತ ಪುರುಷರು ಸಂತೋಷವಾಗಿರುತ್ತಾರೆ. ವಿವಾಹದ ಬಳಿಕ ಸಾಮಾನ್ಯವಾಗಿ ಪುರುಷರ ಸ್ವಭಾವವು ಬಹಳ ಶಾಂತಿಯುತವಾಗಿರುತ್ತದೆ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವ ಮುನ್ನ ಯೋಚಿಸುವಂತೆ ಮಾಡುತ್ತದೆ. ಅದರಲ್ಲೂ ಹಣ ಸಂಪಾದನೆಯ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಅದೇ ರೀತಿ ಮದುವೆಯ ಬಳಿಕ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ವಿವಾಹಕ್ಕಿಂತ ಮೊದಲೇ ಮಹಿಳೆಯರು ಹೆಚ್ಚು ಖುಷಿ ಖುಷಿಯಾಗಿರುತ್ತಾರೆ ಎಂದು "ಹ್ಯಾಪಿ ಎವರ್ ಆಫ್ಟರ್" ಪುಸ್ತಕದ ಲೇಖಕರಾದ ಲೇಖಕ ಪೌಲ್ ಡೋಲನ್ ತಿಳಿಸಿದ್ದಾರೆ.ಇದನ್ನೂ ಓದಿ: 'ರಾಕಿ ಭಾಯ್'​ ಜತೆ ಬಾಲಿವುಡ್ ಬ್ಯೂಟಿ: 10 ವರ್ಷಗಳ ಬಳಿಕ ಕನ್ನಡಕ್ಕೆ ಮರಳಿದ 'ಮಸ್ತ್​ ಮಸ್ತ್​ ಹುಡುಗಿ'
First published:June 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ