• Home
  • »
  • News
  • »
  • lifestyle
  • »
  • Back Pain: ವಿಪರೀತ ಬೆನ್ನು ನೋವು, ಅಡುಗೆ ಮನೆಯಲ್ಲಿರೋ ಈ ವಸ್ತು ಬೆಸ್ಟ್ ಮದ್ದು

Back Pain: ವಿಪರೀತ ಬೆನ್ನು ನೋವು, ಅಡುಗೆ ಮನೆಯಲ್ಲಿರೋ ಈ ವಸ್ತು ಬೆಸ್ಟ್ ಮದ್ದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕರು ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮನೆ ಕೆಲಸ, ಕಛೇರಿ ಕೆಲಸಗಳಲ್ಲಿ ನಿರತರಾಗಿರುವವರು ತಮ್ಮ ಆರೋಗ್ಯದತ್ತ ಸ್ವಲ್ಪ ಸಮಯ ನೀಡಬೇಕು. ಯಾಕೆಂದರೆ ನಿಮ್ಮನ್ನು ಕಾಡುವ ಬೆನ್ನು ನೋವಿಗೆ ನೀವು ಪರಿಹಾರ ಕಂಡುಕೊಳ್ಳಬೇಕು.

  • Share this:

    ಇತ್ತೀಚಿನ ದಿನಗಳಲ್ಲಿ (Now a Days) ವಯಸ್ಸಾದವರು (Aged) ಮಾತ್ರವಲ್ಲ, ವಯಸ್ಕರರು (Youngsters) ಕೂಡ ಹೆಚ್ಚು ಬೆನ್ನು ನೋವಿನ (Back Pain) ಸಮಸ್ಯೆಗೆ (Problem) ತುತ್ತಾಗುತ್ತಿದ್ದಾರೆ. ನೀವು ಸಹ ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮಗಾಗಿ ಇಲ್ಲಿ ಮನೆಮದ್ದನ್ನು ನಾವು ಹೇಳಲಿದ್ದೇವೆ. ಹೌದು ಕೋವಿಡ್‌ ಶುರುವಾದಾಗಿನಿಂದ ಅನೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರು ದೀರ್ಘಕಾಲದವರೆಗೆ ಕುಳಿತುಕೊಂಡೇ ಕೆಲಸ ಮಾಡುತ್ತಾರೆ. ಈ ಕಾರಣದಿಂದಾಗಿ ಅನೇಕರು ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮನೆ ಕೆಲಸ, ಕಛೇರಿ ಕೆಲಸಗಳಲ್ಲಿ ನಿರತರಾಗಿರುವವರು ತಮ್ಮ ಆರೋಗ್ಯದತ್ತ ಸ್ವಲ್ಪ ಸಮಯ ನೀಡಬೇಕು. ಯಾಕೆಂದರೆ ನಿಮ್ಮನ್ನು ಕಾಡುವ ಬೆನ್ನು ನೋವಿಗೆ ನೀವು ಪರಿಹಾರ ಕಂಡುಕೊಳ್ಳಬೇಕು.


    ಕುಳಿತು ಗಂಟೆಗಟ್ಟಲೇ ಕೆಲಸ ಮಾಡುತ್ತಿರುವವರಲ್ಲಿ ಬೆನ್ನು ನೋವಿನ ಸಮಸ್ಯೆ


    ನೀವು ಬೆನ್ನು ನೋವಿನಿಂದ ಬಳಲುತ್ತಿದ್ದರೆ ಗಾಬರಿಯಾಗಬೇಡಿ. ನಿಮ್ಮ ಬೆನ್ನು ನೋವಿಗೆ ಪರಿಹಾರ ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ನಿಮ್ಮ ಸಮಸ್ಯೆಯನ್ನು ತೊಡೆದು ಹಾಕಲಿದೆ. ಹಿಂದಿನ ಕಾಲದಲ್ಲಿ ಬೆನ್ನು ನೋವು ವಯದ್ದಾದವರಲ್ಲಿ ಕಂಡು ಬರುತ್ತಿತ್ತು.


    ಆದರೆ ಇಂದಿನ ಬಿಡುವಿಲ್ಲದ ಜೀವನಶೈಲಿ ಮತ್ತು ಲ್ಯಾಪ್‌ಟಾಪ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತಿರುವವರಲ್ಲಿ ಬೆನ್ನು ನೋವು ಆವರಿಸಿಕೊಳ್ಳುತ್ತಿದೆ. ಹೀಗಾಗಿ ಹೆಚ್ಚಿನ ಜನರು ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ.


    ಇದನ್ನೂ ಓದಿ: ಎತ್ತರ ಜಾಸ್ತಿ ಇದ್ದರೆ ಕಾಡುತ್ತೆ ಈ ಭಯಾನಕ ಕಾಯಿಲೆ, ಹೈಟ್ ಜಾಸ್ತಿ ಇದ್ದಷ್ಟು ರಿಸ್ಕ್ ಹೆಚ್ಚು


    ದಾಲ್ಚಿನ್ನಿ ಬೆನ್ನು ನೋವಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ


    ಬೆನ್ನು ನೋವಿನಿಂದಾಗಿ ಯಾವುದೇ ಕೆಲಸ ಮಾಡಲು ತುಂಬಾ ಕಷ್ಟವಾಗುತ್ತದೆ. ನಿಮಗೂ ಬೆನ್ನು ನೋವಿನಿಂದ ತೊಂದರೆಯಾಗಿದ್ದರೆ, ಒತ್ತಡ ಬಿಟ್ಟು ಈ ಪರಿಣಾಮಕಾರಿ ದಾಲ್ಚಿನ್ನಿ ಪರಿಹಾರ ಪಡೆಯಿರಿ. ದಾಲ್ಚಿನ್ನಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ಮಸಾಲೆ ಪದಾರ್ಥವಾಗಿದೆ.


    ಇದು ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಸತು ಮುಂತಾದ ಅನೇಕ ಅಂಶಗಳೊಂದಿಗೆ ಸಿನ್ನಾಮಾಲ್ಡಿಹೈಡ್ ಮತ್ತು ಸಿನಾಮಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.


    ಇದು ದೇಹದ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಸಂಧಿವಾತ, ಕೀಲು ಮತ್ತು ಬೆನ್ನುನೋವಿಗೆ ಪರಿಹಾರ ನೀಡುತ್ತದೆ. ವಾಸ್ತವವಾಗಿ ಅಡುಗೆ ಮನೆಯಲ್ಲಿ ಇರುವ ದಾಲ್ಚಿನ್ನಿ ಮಸಾಲೆ ಪದಾರ್ಥ ನಮ್ಮ ಆಹಾರದ ರುಚಿ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ.


    ದಾಲ್ಚಿನ್ನಿ ದೇಹದ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತದೆ


    ಜೊತೆಗೆ ಅನೇಕ ರೋಗಗಳ ನಿವಾರಣೆಗೆ ಸಹಕಾರಿ ಆಗಿದೆ. ಹಾಗಾದರೆ ಅಡುಗೆ ಮನೆಯಲ್ಲಿ ಇರುವ ದಾಲ್ಚಿನ್ನಿ ಬೆನ್ನು ನೋವಿಗೆ ಹೇಗೆ ಪರಿಹಾರ ನೀಡುತ್ತದೆ ಎಂಬುದನ್ನು ನೋಡೋಣ. ದಾಲ್ಚಿನ್ನಿ ಸಿನ್ನಾಮಾಲ್ಡಿಹೈಡ್ ಮತ್ತು ಸಿನಾಮಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಹಾಗೂ ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಸತು ಹೊಂದಿದೆ.


    ಇದು ದೇಹದ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ನಮಗೆ ಸಹಾಯ ಮಾಡುತ್ತದೆ. ಇದು ಸಂಧಿವಾತ, ಕೀಲು ನೋವು ಮತ್ತು ಬೆನ್ನುನೋವಿಗೆ ಪರಿಹಾರವನ್ನು ನೀಡಲು ಕೆಲಸ ಮಾಡುವ ಕಾರಣವಾಗಿದೆ.


    ಬೆನ್ನು ನೋವಿಗೆ ಪರಿಹಾರಗಳು


    ಬಾಣಲೆಗೆ ನೀರು ಹಾಕಿ ದಾಲ್ಚಿನ್ನಿ ತುಂಡುಗಳು ಅಥವಾ ಸ್ವಲ್ಪ ಪುಡಿ ಹಾಕಿ ಸ್ವಲ್ಪ ಸಮಯ ಕುದಿಸಿ. ನಂತರ ಅದನ್ನು ಒಂದು ಕಪ್‌ನಲ್ಲಿ ಫಿಲ್ಟರ್ ಮಾಡಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಬಿಸಿಯಾಗಿ ಕುಡಿಯಿರಿ. ನೀವು ಅದನ್ನು ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಇದನ್ನು ಸೇವನೆ ಮಾಡಿ. ನೀವು ಕೆಲವೇ ದಿನಗಳಲ್ಲಿ ಬೆನ್ನುನೋವಿನಿಂದ ಪರಿಹಾರವನ್ನು ಪಡೆಯಲು ಪ್ರಾರಂಭಿಸುತ್ತೀರಿ.


    ಇದನ್ನೂ ಓದಿ: ಯಾವ ಡಯಟ್ ಪ್ಲಾನ್ ಫಾಲೋ ಮಾಡಿದ್ರೆ ವೇಗವಾಗಿ ತೂಕ ಕಡಿಮೆ ಮಾಡಬಹುದು? ಸಂಶೋಧನೆ ಕಂಡುಕೊಂಡಿದ್ದೇನು?


    ಬೆನ್ನು ನೋವನ್ನು ತೊಡೆದು ಹಾಕಲು ದಾಲ್ಚಿನ್ನಿ ಪಾಕ ವಿಧಾನ


    ಬೆನ್ನುನೋವಿನ ಸಮಸ್ಯೆ ಹೋಗಲಾಡಿಸಲು, ಎರಡು ಗ್ರಾಂ ದಾಲ್ಚಿನ್ನಿ ಪುಡಿಗೆ 1 ಚಮಚ ಜೇನುತುಪ್ಪ ಸೇರಿಸಿ. ನಂತರ ಅದನ್ನು ಸೇವಿಸಿ. ಈ ಪಾಕವಿಧಾನವನ್ನು ದಿನಕ್ಕೆ ಎರಡು ಬಾರಿಯಾದರೂ ಸೇವನೆ ಮಾಡಬೇಕು. ಇದು ಬೆನ್ನುನೋವಿನಿಂದ ನೀವು ಶೀಘ್ರ ಪರಿಹಾರ ನೀಡುತ್ತದೆ.

    Published by:renukadariyannavar
    First published: