Joint Families: ಮಕ್ಕಳಿಗೆ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವಲ್ಲಿ ಅವಿಭಕ್ತ ಕುಟುಂಬಗಳು ವಿಫಲವಾಗುತ್ತಿವೆಯೇ? ಕಾರಣಗಳೇನು

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅವಿಭಕ್ತ ಕುಟುಂಬಗಳು ಮಕ್ಕಳಿಗೆ ಪೋಷಣೆ ಮತ್ತು ಆರೋಗ್ಯಕರ ವಾತಾವರಣವನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಲಾಗಿದೆ. ಅವಿಭಕ್ತ ಕುಟುಂಬಗಳಲ್ಲಿರುವ ಸಂಕೀರ್ಣತೆಗಳು ಹಾಗೂ ಜಟಿಲತೆಯ ಕುರಿತಾದ ಹಲವಾರು ಅಂಶಗಳನ್ನು ಸರಣಿ ಟ್ವೀಟ್‌ಗಳ ಮೂಲಕ ಇನ್ನಷ್ಟು ಬಳಕೆದಾರರು ಹಂಚಿಕೊಂಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮ್ಮ ಪೂರ್ವಜರ ಪೀಳಿಗೆಯಲ್ಲಿ ಅವಿಭಕ್ತ ಕುಟುಂಬಗಳನ್ನು (Joint Family) ಸಂಪ್ರದಾಯದ ಭಾಗವಾಗಿ ಪರಿಗಣಿಸಲಾಗಿತ್ತು ಏಕೆಂದರೆ ಇಂತಹ ಕುಟುಂಬಗಳು ಮನೆಯ ಕಿರಿಯರಲ್ಲಿ ಕೌಟುಂಬಿಕ ಮೌಲ್ಯಗಳನ್ನು ಪೋಷಿಸುವುದರ ಜೊತೆಗೆ ಭಾರತೀಯ ಸಂಪ್ರದಾಯಗಳನ್ನು (Indian Culture) ಮೈಗೂಡಿಸುವಲ್ಲಿ ಪ್ರಧಾನ ಪಾತ್ರ ವಹಿಸಿತ್ತವೆ ಎಂದು ನಂಬಲಾಗಿದೆ. ಅದಾಗ್ಯೂ ಟ್ವಿಟ್ಟರ್‌ನಲ್ಲಿ ಬಳಕೆದಾರರೊಬ್ಬರು ಇಂಹ ಅವಿಭಕ್ತ ಕುಟುಂಬದ ಕುರಿತಾಗಿ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದು ಕೂಡುಕುಟುಂಬದಲ್ಲಿ ಕೂಡ ಇಂತಹ ಸಮಸ್ಯೆಗಳು ಇವೆಯೇ ಎಂಬುದನ್ನು ಯೋಚಿಸುವಂತೆ ಮಾಡುತ್ತದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅವಿಭಕ್ತ ಕುಟುಂಬಗಳು ಮಕ್ಕಳಿಗೆ (Children) ಪೋಷಣೆ ಮತ್ತು ಆರೋಗ್ಯಕರ ವಾತಾವರಣವನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಲಾಗಿದೆ. ಅವಿಭಕ್ತ ಕುಟುಂಬಗಳಲ್ಲಿರುವ ಸಂಕೀರ್ಣತೆಗಳು ಹಾಗೂ ಜಟಿಲತೆಯ ಕುರಿತಾದ ಹಲವಾರು ಅಂಶಗಳನ್ನು ಸರಣಿ ಟ್ವೀಟ್‌ಗಳ (Tweet) ಮೂಲಕ ಇನ್ನಷ್ಟು ಬಳಕೆದಾರರು ಹಂಚಿಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್:
"ಅವಿಭಕ್ತ ಕುಟುಂಬ ವ್ಯವಸ್ಥೆಯು ಬಹುಶಃ ಮಕ್ಕಳಿಗೆ ಒದಗಿಸಬಹುದಾದ ಅತ್ಯಂತ ಪ್ರತಿಕೂಲ ವಾತಾವರಣವಾಗಿದೆ. ಕ್ಷುಲ್ಲಕ ಕೌಟುಂಬಿಕ ಕಲಹಗಳು, ಅನವಶ್ಯಕ ವಿನಾಶಕಾರಿ ಟೀಕೆಗಳಿಗೆ ಸಾಕ್ಷಿಯಾಗಿ ನಿಮ್ಮ ಮಕ್ಕಳು ಬೆಳೆದಾಗ ಕೌಟುಂಬಿಕ ಮೌಲ್ಯಗಳು ಯಾವುದೇ ಪ್ರಯೋಜನ ಬೀರುವುದಿಲ್ಲ ಇದು ಅರಿವಿನ ದುರ್ಬಲತೆಗೆ ಕಾರಣವಾಗುತ್ತದೆ ಎಂದು ಟ್ವೀಟ್ ತಿಳಿಸಿದೆ.

ಅವಿಭಕ್ತ ಕುಟುಂಬಗಳ ಕುರಿತ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ:
ಕಾಮೆಂಟ್‌ಗಳಲ್ಲಿನ ಅಂಶಗಳನ್ನು ಹೆಚ್ಚಿನ ಮಹಿಳೆಯರು ಒಪ್ಪಿಕೊಂಡಿದ್ದು ಉತ್ತಮ ಅನುಬಂಧಗಳನ್ನು ಕಾಪಾಡಿಕೊಳ್ಳುವ ಪರಿಕಲ್ಪನೆಯನ್ನು ಭಾರತೀಯ ಕುಟುಂಬಗಳು ಹೇಗೆ ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಒತ್ತಡಗಳನ್ನು ನಿಭಾಯಿಸಿಕೊಂಡು ಕುಟುಂಬ ಸದಸ್ಯರು ಪರಸ್ಪರ 'ಸಹಿಷ್ಣುತೆ'ಯನ್ನು ಬೆಳೆಸಿಕೊಳ್ಳಬೇಕೆಂದು ಬಯಸುತ್ತಾರೆ ಇದೊಂದು ರೀತಿಯ ಮಾನಸಿಕ ಹಿಂಸೆಯನ್ನುಂಟು ಮಾಡುತ್ತದೆ ಎಂಬುದು ಟ್ವಿಟ್ಟರ್‌ನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Happy Family: ನಿಮ್ಮ ಅತ್ತೆ-ಮಾವಂದಿರ ಜೊತೆ ಸದಾ ಖುಷಿ ಖುಷಿಯಾಗಿರ್ಬೇಕಾ? ಈ ಟಿಪ್ಸ್ ಫಾಲೋ ಮಾಡಿ

ಬಹುಪಾಲು ಭಾರತೀಯರು ಅವಿಭಕ್ತ ಕುಟುಂಬಗಳ ಪರಿಕಲ್ಪನೆಯನ್ನು ಬೆಂಬಲಿಸುತ್ತಾರೆ, ಅವರು ಹೇಳುವಂತೆ ಇಂತಹ ಕುಟುಂಬಗಳು ನಮ್ಮ ಸಂಸ್ಕೃತಿಯಲ್ಲಿ ಬೋಧಿಸಲಾದ 'ಕುಟುಂಬ ಮೌಲ್ಯಗಳನ್ನು' ಸಾಕಾರಗೊಳಿಸುತ್ತದೆ. ಆದಾಗ್ಯೂ, ನಿಸ್ಸಂದೇಹವಾಗಿ, ಅವಿಭಕ್ತ ಕುಟುಂಬದಲ್ಲಿ ವಾಸಿಸುವುದು ಭಾವನಾತ್ಮಕವಾಗಿ ಕೃಶಗೊಳಿಸುತ್ತದೆ ಮತ್ತು ಅಂತೆಯೇ ಹಲವಾರು ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮಾಧ್ಯಮಗಳು, ಚಲನಚಿತ್ರಗಳು ಅವಿಭಕ್ತ ಕುಟುಂಬಗಳನ್ನು ಹೇಗೆ ವೈಭವೀಕರಿಸುತ್ತವೆ?


ಹೆಚ್ಚಿನ ಚಲನಚಿತ್ರಗಳು ಅವಿಭಕ್ತ ಕುಟುಂಬಗಳನ್ನು ಧನಾತ್ಮಕವಾಗಿ ಚಿತ್ರಿಸುತ್ತವೆ, ನಿರ್ದೇಶಕ ಸೂರಜ್ ಬರಿಜಾತ್ಯಾ ಸುಖಕರವಾದ ಭಾರತೀಯ ಅವಿಭಕ್ತ ಚಿತ್ರಗಳ ಸರಣಿಯನ್ನು ನಿರ್ಮಿಸಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಬೆಳೆಯುವುದು ಎಷ್ಟು ಸಂತೋಷಕರ ಎಂಬುದನ್ನು ಈ ಚಿತ್ರಗಳು ಬಿಂಬಿಸಿವೆ. ಇಂತಹ ಚಿತ್ರಗಳಲ್ಲಿ ಮಹಿಳೆಯರನ್ನು ಯಾವಾಗಲೂ ಅಡುಗೆ ಮನೆ ಹಾಗೂ ಮನೆಯ ಕೆಲಸಕಾರ್ಯಗಳಲ್ಲಿ ತೊಡಗಿರುವಂತೆ ಪ್ರದರ್ಶಿಸಲಾಗಿದೆ.

ಮಹಿಳೆಯರು ಮನೆ ಹಾಗೂ ಗೃಹ ಕೃತ್ಯಗಳಿಗೆ ಮಾತ್ರ ಸೀಮಿತ ಎಂಬುದನ್ನು ಇಂತಹ ಚಿತ್ರಗಳು ಪ್ರದರ್ಶಿಸಿವೆ. ಅವಿಭಕ್ತ ಕುಟುಂಬಗಳಲ್ಲಿ ಸುಖ ಶಾಂತಿ ಕಂಡುಕೊಳ್ಳಬಹುದು ನೆಮ್ಮದಿ ಪಡೆದುಕೊಳ್ಳಬಹುದು ಎಂಬುದನ್ನು ತೋರಿಸಿದ್ದಾರೆ ಆದರೆ ನಿಜ ಜೀವನದಲ್ಲಿ ಹೀಗೆಯೇ ನಡೆಯುತ್ತದೆಯೇ ಎಂಬುದು ವಾಸ್ತವಾಂಶವಾಗಿದೆ.

ಅವಿಭಕ್ತ ಕುಟುಂಬಗಳೆಂದರೆ ಒಂದು ರೀತಿ ತಲೆನೋವು:

ಅವಿಭಕ್ತ ಕುಟುಂಬಗಳಲ್ಲಿ ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರುವುದು ಮಾತ್ರವಲ್ಲದೆ ಅಸಮಾನತೆಯ ವಾತಾವರಣ ಕೂಡ ಸೃಷ್ಟಿಯಾಗುತ್ತದೆ. ಮನೆಯ ಪ್ರತಿಯೊಬ್ಬ ಸದಸ್ಯರು ಸಂತೋಷವಾಗಿರಬೇಕೆಂಬ ಕಾರಣದಿಂದ ಮಹಿಳೆಯರು ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಅವರ ವೈಯಕ್ತಿಕ ಸುಖ ಸಂತೋಷ ಇಲ್ಲವಾಗುತ್ತದೆ ಮತ್ತು ಕೆಲವೊಮ್ಮೆ ತ್ಯಾಗಮಾಡಬೇಕಾದ ಅನಿವಾರ್ಯತೆ ಕೂಡ ಬಂದೊದಗುತ್ತದೆ.

ಮನೆಯಲ್ಲಿರುವ ಪ್ರತಿಯೊಂದನ್ನು ಸದಸ್ಯರ ಮೂಲಕ ನಿರ್ಧರಿಸುವಂತಹ ಪರಿಸ್ಥಿತಿ ಉಂಟಾಗುತ್ತದೆ, ಅಂದರೆ ಮನೆಯಲ್ಲಿರುವ ಮಗುವಿನ ಶಿಕ್ಷಣ, ಮುಂದಿನ ವೃತ್ತಿ ಜೀವನ, ವೈಯಕ್ತಿಕ ಜೀವನ ಅಂತೆಯೇ ರಾತ್ರಿಯೂಟಕ್ಕೆ ಏನು ಅಡುಗೆ ಮಾಡಬೇಕೆಂಬ ಸಣ್ಣ ನಿರ್ಧಾರವನ್ನು ಅವರಿಗೆ ತೆಗೆದುಕೊಳ್ಳಲಾಗುವುದಿಲ್ಲ. ಹೀಗೆ ಪ್ರತಿಯೊಂದು ಕೌಟುಂಬಿಕ ವಿಷಯವಾಗುತ್ತದೆಯೇ ಹೊರತು ವೈಯಕ್ತಿಕ ನಿರ್ಧಾರವಾಗಿರುವುದಿಲ್ಲ.

ಇದನ್ನೂ ಓದಿ:  Sneha Saree: ಗೌರಿ ಹಬ್ಬಕ್ಕೆ ಟ್ರೆಡಿಷನಲ್​ ಆಗಿ ರೆಡಿ ಆಗೋ ಚಿಂತೆ ಬಿಡಿ, ನಟಿ ಸ್ನೇಹ ಈ ಲುಕ್ ನೀವೂ ಟ್ರೈ ಮಾಡಿ

ಕುಟುಂಬವೆಂಬುದು ಒಬ್ಬ ವ್ಯಕ್ತಿಯ ಅತಿದೊಡ್ಡ ಬೆಂಬಲವಾಗಿದೆ ಹಾಗೂ ಕುಟುಂಬದ ಬೆಂಬಲದಿಂದಲೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಸಾಧಿಸಲು ಸಾಧ್ಯವಾಗುತ್ತದೆ, ಆದರೆ ಇಂತಹ ಕುಟುಂಬಗಳು ಆದರ್ಶ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆಯೇ ಎಂಬ ಸಂದೇಹವನ್ನುಂಟು ಮಾಡುತ್ತದೆ.

ಹಾಗಾಗಿಯೇ ಅವಿಭಕ್ತ ಕುಟುಂಬಗಳು ಸಾಮಾನ್ಯವಾಗಿ ಜನರಿಗೆ ಹಿಂಸೆಯನ್ನುಂಟು ಮಾಡುತ್ತದೆ ಮತ್ತು ಸಂತೋಷದ ವಾತಾವರಣಕ್ಕೆ ಬದಲಾಗಿ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುತ್ತವೆ.

ಸಮಸ್ಯೆ ಎಲ್ಲಿದೆ?
ಇನ್ನು ಕೆಲವೊಂದು ಸಮಸ್ಯೆಗಳು ಕುಟುಂಬಗಳಿಂದಿರುವುದಿಲ್ಲ ಬದಲಿಗೆ ಸಮಾಜದ ಸಂಪ್ರದಾಯಗಳು, ಅಂತೆಯೇ ಇತರರನ್ನು ಪ್ರಶ್ನಿಸುವ ಅಂಶಗಳ ಮೇಲೆ ಆಧಾರಿತವಾಗಿದೆ. ಅವಿಭಕ್ತ ಕುಟುಂಬಗಳು ನಿಜಕ್ಕೂ ಸಂತೋಷವನ್ನುಂಟು ಮಾಡಬಹುದು ಆದರೆ ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಪರಸ್ಪರರ ಸಂತೋಷಕ್ಕೆ ಆದ್ಯತೆಗೆ ಪ್ರಾಶಸ್ತ್ಯ ನೀಡಬೇಕು ಮತ್ತು ಸ್ವತಂತ್ರ್ಯವನ್ನು ಗೌರವಿಸಬೇಕು ಆಗ ಮಾತ್ರ.
Published by:Ashwini Prabhu
First published: