Health Tips: ಮೊಟ್ಟೆ ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದೇ? ಸಂಶೋಧನೆಗಳು ಹೇಳೋದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೊಟ್ಟೆಗಳು ಬರೀ ತಯಾರಿಸಲು ಅಷ್ಟೇ ಸುಲಭವಾಗಿರುವುದಿಲ್ಲ, ಇವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ ಎಂದು ಹೇಳಬಹುದು. ಆದಾಗ್ಯೂ, ಮೊಟ್ಟೆಗಳು ಮತ್ತು ಆರೋಗ್ಯದ ಸುತ್ತಲಿನ ಚರ್ಚೆಯು ಒಂದು ರೀತಿಯ "ವಿವಾದಾತ್ಮಕ" ಎಂದು ತಜ್ಞರು ಒಪ್ಪಿಕೊಳ್ಳುತ್ತಾರೆ. ಹೆಚ್ಚಿನ ಕೊಲೆಸ್ಟ್ರಾಲ್ ಅಂಶದಿಂದಾಗಿ, ಹೃದಯ ಸಮಸ್ಯೆ ಇರುವ ಜನರಿಗೆ ಸಾಮಾನ್ಯವಾಗಿ ಮೊಟ್ಟೆಗಳನ್ನು ಸೇವಿಸಬೇಡಿ ಅಂತ ಹೇಳುತ್ತಾರೆ. ವಾಸ್ತವವು ನಿಖರವಾಗಿ ವಿರುದ್ಧವಾಗಿದೆ ಎಂದು ಇಲ್ಲಿ ತಜ್ಞರು ಹೇಳುತ್ತಾರೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • New Delhi, India
  • Share this:

ಮೊಟ್ಟೆಗಳು (Egg) ಎಂದರೆ ಮನುಷ್ಯನಿಗೆ (Human) ಎಲ್ಲಿಲ್ಲದ ಪ್ರೀತಿ ಅಂತ ಹೇಳಬಹುದು. ಏಕೆಂದರೆ ಬಹುತೇಕ ಎಲ್ಲರೂ ತಿನ್ನುವಂತಹ ಆಹಾರ ಪದಾರ್ಥ ಎಂದರೆ ಅದು ಮೊಟ್ಟೆ ಅಂತ ಹೇಳಬಹುದು. ಅನೇಕರು ಇದನ್ನು ಮೊಟ್ಟೆ ಸಾರು (Egg Sambar), ಮೊಟ್ಟೆ ಆಮ್ಲೆಟ್ (Egg Omelette) ಮತ್ತು ನೀರಿನಲ್ಲಿ ಕುದಿಸಿಕೊಂಡು ಮೊಟ್ಟೆಯನ್ನು ಬೇಯಿಸಿ ಸೇವಿಸುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮನೆಯಲ್ಲಿ ಅಡುಗೆ ಮಾಡಲು ಮಹಿಳೆಯರು ಇಲ್ಲದೆ ಹೋದರೆ ಎಲ್ಲರಿಗೂ ಈ ಮೊಟ್ಟೆಗಳು ಉತ್ತಮ ಸ್ನೇಹಿತ ಅಂತ ಹೇಳಬಹುದು. ಏಕೆಂದರೆ ಯಾವುದೇ ಗೊಂದಲವಿಲ್ಲದೆ, ಬೇಗನೆ ಯಾರಾದರೂ ಮೊಟ್ಟೆಯ ಆಮ್ಲೆಟ್ ಅನ್ನು ಮಾಡಿಕೊಳ್ಳಬಹುದು ಮತ್ತು ಬೆಳಗ್ಗೆ ಟಿಫಿನ್ ಮತ್ತು ಮಧ್ಯಾಹ್ನ ಅನ್ನದ ಜೊತೆಗೆ ಮೊಟ್ಟೆ ಸಾರು, ರಾತ್ರಿ ಮತ್ತೆ ಎಗ್ ಬುರ್ಜಿ (Egg Bhurji) ಅಂತಹ ಪದಾರ್ಥಗಳನ್ನು ಮಾಡಿಕೊಳ್ಳಬಹುದು.


ಸಾಂದರ್ಭಿಕ ಚಿತ್ರ


ಮೊಟ್ಟೆಗಳು ಬರೀ ತಯಾರಿಸಲು ಅಷ್ಟೇ ಸುಲಭವಾಗಿರುವುದಿಲ್ಲ, ಇವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ ಎಂದು ಹೇಳಬಹುದು. ಆದಾಗ್ಯೂ, ಮೊಟ್ಟೆಗಳು ಮತ್ತು ಆರೋಗ್ಯದ ಸುತ್ತಲಿನ ಚರ್ಚೆಯು ಒಂದು ರೀತಿಯ "ವಿವಾದಾತ್ಮಕ" ಎಂದು ತಜ್ಞರು ಒಪ್ಪಿಕೊಳ್ಳುತ್ತಾರೆ. ಹೆಚ್ಚಿನ ಕೊಲೆಸ್ಟ್ರಾಲ್ ಅಂಶದಿಂದಾಗಿ, ಹೃದಯ ಸಮಸ್ಯೆ ಇರುವ ಜನರಿಗೆ ಸಾಮಾನ್ಯವಾಗಿ ಮೊಟ್ಟೆಗಳನ್ನು ಸೇವಿಸಬೇಡಿ ಅಂತ ಹೇಳುತ್ತಾರೆ. ವಾಸ್ತವವು ನಿಖರವಾಗಿ ವಿರುದ್ಧವಾಗಿದೆ ಎಂದು ಇಲ್ಲಿ ತಜ್ಞರು ಹೇಳುತ್ತಾರೆ.


ಮೊಟ್ಟೆ ಹೃದಯಕ್ಕೆ ಒಳ್ಳೆಯದೇ ಅನ್ನೋದರ ಬಗ್ಗೆ ಏನ್ ಹೇಳುತ್ತೇ ವರದಿ


ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಟಿಸಿದ ಒಂದು ವರದಿಯು "ಹಿಂದೆ, ಮೊಟ್ಟೆಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಕೆಟ್ಟವು ಎಂದು ಭಾವಿಸುವುದು ತಾರ್ಕಿಕವಾಗಿತ್ತು. ಮೊಟ್ಟೆಗಳಲ್ಲಿನ ಕೊಲೆಸ್ಟ್ರಾಲ್ ಮೊಟ್ಟೆಯ ಹಳದಿ ಲೋಳೆಯಿಂದ ಬಂದಿದೆ ಎಂದು ನಮಗೆ ತಿಳಿದಿತ್ತು ಮತ್ತು ರಕ್ತದಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್, ವಿಶೇಷವಾಗಿ ಎಲ್‌ಡಿಎಲ್ ಎಂದರೆ ಕೆಟ್ಟ ಕೊಲೆಸ್ಟ್ರಾಲ್ ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಮಗೆ ತಿಳಿದಿತ್ತು.


ಸಾಂದರ್ಭಿಕ ಚಿತ್ರ


ಅಂದಿನಿಂದ, ಹಲವಾರು ಅಧ್ಯಯನಗಳು "ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ನಮ್ಮ ಪಿತ್ತಜನಕಾಂಗದಿಂದ ತಯಾರಿಸಲ್ಪಡುತ್ತದೆ. ಇದು ನಾವು ತಿನ್ನುವ ಕೊಲೆಸ್ಟ್ರಾಲ್ ನಿಂದ ಬರುವುದಿಲ್ಲ" ಎಂದು ತೋರಿಸಿದೆ. ಇದರರ್ಥ ಉತ್ತಮ ಹೃದಯದ ಆರೋಗ್ಯಕ್ಕಾಗಿ ನಾವು ಮೊಟ್ಟೆಗಳನ್ನು ಬಿಡುವ ಅಗತ್ಯವಿಲ್ಲ. ಇಲ್ಲಿದೆ ನೋಡಿ ಇದರ ಬಗ್ಗೆ ಮತ್ತಷ್ಟು ಮಾಹಿತಿ.


ಮೊಟ್ಟೆಗಳು ಹೃದಯಕ್ಕೆ ಒಳ್ಳೆಯದೋ, ಕೆಟ್ಟದ್ದೋ?


ನ್ಯೂಟ್ರಿಯಂಟ್ಸ್ ಜರ್ನಲ್ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು, ನಿಯಂತ್ರಿತ ಸಂಖ್ಯೆಯ ಮೊಟ್ಟೆಗಳನ್ನು ತಿನ್ನುವುದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಬಹಿರಂಗಪಡಿಸಿದೆ.


for morning breakfast how to make egg paratha
ಸಾಂದರ್ಭಿಕ ಚಿತ್ರ


ವಾಸ್ತವವಾಗಿ, ಮೊಟ್ಟೆಗಳ ಸೇವನೆಯು ಹೃದಯ ರಕ್ತನಾಳದ ಕಾಯಿಲೆಯನ್ನು (ಸಿವಿಡಿ) ತಡೆಗಟ್ಟಲು ಪ್ರಮುಖವಾಗಿದೆ. ಅಧ್ಯಯನಕ್ಕಾಗಿ, ಸಂಶೋಧಕರು 3042 ಪುರುಷರು ಮತ್ತು ಮಹಿಳೆಯರನ್ನು ಸಮೀಕ್ಷೆ ಮಾಡಿದರು, ಅವರು ವಾರಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನುತ್ತಾರೆ ಎಂದು ವಿವರಿಸುವ ಫಾರ್ಮ್ ಅನ್ನು ಭರ್ತಿ ಮಾಡಿದರು. 10 ವರ್ಷಗಳ ಸುದೀರ್ಘ ಸಂಶೋಧನೆಯ ನಂತರ, 3042 ಜನರಲ್ಲಿ 317 ಜನರು ಹೃದಯ ಸಂಬಂಧಿತ ಅಸ್ವಸ್ಥತೆಗಳನ್ನು ಅನುಭವಿಸಿದ್ದಾರೆ ಎಂದು ಕಂಡು ಬಂದಿದೆ.


ಇದರ ಬಗ್ಗೆ ಸಂಶೋಧನೆ ಹೇಳುವುದೇನು?


ವಾರಕ್ಕೆ ಒಂದು ಅಥವಾ ಮೊಟ್ಟೆ ತಿನ್ನದೇ ಇರುವ ಜನರು ಸಿವಿಡಿಯ 18 ಪ್ರತಿಶತದಷ್ಟು ಸಂಭವನೀಯ ಪ್ರಮಾಣವನ್ನು ಅನುಭವಿಸಿದ್ದಾರೆ. ವಾರಕ್ಕೆ ಒಂದರಿಂದ ನಾಲ್ಕು ಮೊಟ್ಟೆಗಳನ್ನು ತಿನ್ನುವ ಜನರು 9 ಪ್ರತಿಶತದಷ್ಟು ಸಿವಿಡಿ ಸಂಭವನೀಯ ಪ್ರಮಾಣವನ್ನು ಅನುಭವಿಸಿದ್ದಾರೆ. ವಾರಕ್ಕೆ ನಾಲ್ಕರಿಂದ ಏಳು ಮೊಟ್ಟೆಗಳನ್ನು ತಿನ್ನುವ ಜನರು 8 ಪ್ರತಿಶತದಷ್ಟು ಸಂಭವನೀಯ ಅಪಾಯವನ್ನು ಹೊಂದಿದ್ದರು.




ಆರೋಗ್ಯಕರ ಹೃದಯಕ್ಕಾಗಿ ಒಬ್ಬ ವ್ಯಕ್ತಿಯು ಎಷ್ಟು ಮೊಟ್ಟೆಗಳನ್ನು ತಿನ್ನಬಹುದು ಅಂತ ಕೇಳಿದರೆ, ವಾರಕ್ಕೆ ಒಂದರಿಂದ ಮೂರು ಮೊಟ್ಟೆಗಳನ್ನು ತಿನ್ನುವುದರಿಂದ ಹೃದ್ರೋಗದ ಅಪಾಯವನ್ನು ಶೇಕಡಾ 60 ರಷ್ಟು ಕಡಿಮೆ ಮಾಡಿಕೊಳ್ಳಬಹುದು ಎಂದು ಅಧ್ಯಯನ ನಡೆಸಿದ ತಜ್ಞರು ಹೇಳಿದ್ದಾರೆ.


ಆದಾಗ್ಯೂ, ಸಂಭಾವ್ಯ ಸ್ಯಾಚುರೇಟೆಡ್ ಕೊಬ್ಬಿನಾಮ್ಲ (ಎಸ್ಎಫ್ಎ) ಸೇವನೆಯನ್ನು ಪರಿಗಣಿಸಿದಾಗ, "ವಾರಕ್ಕೆ ಒಂದರಿಂದ ಮೂರು ಮೊಟ್ಟೆಗಳನ್ನು ಮಾತ್ರ ತಿನ್ನುವುದು ಸಿವಿಡಿಯಿಂದ ರಕ್ಷಿಸುತ್ತದೆ" ಎಂದು ತಜ್ಞರು ಹೇಳಿದ್ದಾರೆ. ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಮೊಟ್ಟೆಯ ಸೇವನೆಯನ್ನು ಯಾವಾಗಲೂ ಆರೋಗ್ಯಕರ ಆಹಾರದೊಂದಿಗೆ ಹೊಂದಿಸಬೇಕು ಎಂದು ಅವರು ಎಚ್ಚರಿಸಿದ್ದಾರೆ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು