ಸಕ್ಕರೆ ಕಾಯಿಲೆ (Diabetes) ನಿಯಂತ್ರಣದಲ್ಲಿದ್ದರೆ ಆರೋಗ್ಯಕ್ಕೆ (Health) ಅಷ್ಟೊಂದು ಅಪಾಯವಾಗುವುದಿಲ್ಲ, ಆದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಆಗಾಗ ಜಾಸ್ತಿಯಾಗುತ್ತಿದ್ದು (High), ನಿಯಂತ್ರಣಕ್ಕೆ ಬಾರದೇ ಹೋದರೆ ಅದು ಖಂಡಿತವಾಗಿಯೂ ಪಾರ್ಶ್ವವಾಯು (lateral air) ಮತ್ತು ಹೃದಯಾಘಾತದಂತಹ (Heart attacks) ಕೆಲವು ದೀರ್ಘಕಾಲೀನ ಕಾಯಿಲೆಗಳ (long term) ಅಪಾಯವನ್ನು ತಂದೊಡ್ಡುತ್ತದೆ ಅಂತ ವೈದ್ಯರು ಎಚ್ಚರಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ.
ಹಾಗಾದರೆ ಈ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಜಾಸ್ತಿ ಆದಾಗಲೆಲ್ಲಾ ಕಡಿಮೆ ಮಾಡುವುದು ಮತ್ತು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ ಅಂತ ಅನೇಕರಿಗೆ ತಿಳಿದಿರುವುದಿಲ್ಲ.
ನೀವು ಈಗಾಗಲೇ ಮಧುಮೇಹದಿಂದ ಬಳಲುತ್ತಿದ್ದರೆ ಅಥವಾ ಇನ್ನೇನು ಸಕ್ಕರೆ ಕಾಯಿಲೆ ನಿಮಗೆ ಬರುವ ಸೂಚನೆಗಳಿವೆ ಅಂತ ಹೇಳಿದಾಗ ಆರೋಗ್ಯದ ಕಡೆಗೆ ಗಮನ ಹರಿಸುವುದು ತುಂಬಾನೇ ಮುಖ್ಯವಾಗುತ್ತದೆ ಅಂತ ಹೇಳಬಹುದು.
ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ನೀವು ಬೆಳಿಗ್ಗೆ ಹೊತ್ತು ಎದ್ದ ತಕ್ಷಣ ಆಹಾರ ಸೇವಿಸುವ ಮೊದಲು 126 mg/dl ಗಿಂತ ಮತ್ತು ಆಹಾರ ಸೇವಿಸಿದ ಎರಡು ಗಂಟೆಗಳ ನಂತರ 200 mg/dl ಗಿಂತ ಹೆಚ್ಚಿದ್ದರೆ, ಅದನ್ನು ಅಧಿಕ ರಕ್ತದ ಸಕ್ಕರೆ ಮಟ್ಟ ಅಥವಾ ಹೈಪರ್ ಗ್ಲೈಸೀಮಿಯಾ ಎಂದು ಕರೆಯಲಾಗುತ್ತದೆ.
ಇದಕ್ಕೆ ಸಕಾಲದಲ್ಲಿ ಮತ್ತು ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಹೆಚ್ಚಿನ ರಕ್ತದಲ್ಲಿನ ಸಕ್ಕರೆ ಅಂಶವು ಗ್ಲೂಕೋಸ್ ಅಂಶವನ್ನು ಹೆಚ್ಚಿಸುತ್ತದೆ, ಇದು ಮಧುಮೇಹ, ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಆಯಾಸವಾಗುವುದು
ಹಸಿವು ಹೆಚ್ಚಾಗುವುದು ಮತ್ತು ವಿಪರೀತ ಬಾಯಾರಿಕೆಯಾಗುವುದು
ತಲೆನೋವು ಆಗುವುದು
ಏಕಾಗ್ರತೆಯಲ್ಲಿ ತೊಂದರೆ ಅನುಭವಿಸುವುದು
ದೃಷ್ಟಿ ಮುಸುಕಾಗುವುದು
ವಯಸ್ಸು, ಮಧುಮೇಹವು ಎಷ್ಟು ವರ್ಷಗಳಿಂದ ಇದೆ ಮತ್ತು ಇದರ ಜೊತೆಯಲ್ಲಿ ಇತರ ಆರೋಗ್ಯ ಸಮಸ್ಯೆಗಳು ಇವೆಯೇ ಎಂಬುದನ್ನು ಅವಲಂಬಿಸಿ, ಹೆಚ್ಚಿನ ರಕ್ತದ ಸಕ್ಕರೆಯ ಮಟ್ಟವು ಪ್ರತಿಯೊಬ್ಬ ವ್ಯಕ್ತಿಗೂ ಭಿನ್ನವಾಗಿರುತ್ತದೆ.
ಆದ್ದರಿಂದ, ನಿಮ್ಮ ವೈದ್ಯರು ಹೇಳಿದ ಜೀವನಶೈಲಿಯನ್ನು ಅನುಸರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯವಾಗುತ್ತದೆ.
ನಿಮ್ಮ ರಕ್ತದ ಗ್ಲುಕೋಸ್ ಅನ್ನು ಕಡಿಮೆ ಮಾಡಲು ಕೆಲವು ಸರಳ ಆದರೆ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ. ಆದಾಗ್ಯೂ, ನೀವು ಮೊದಲು ನಿಮ್ಮ ಇನ್ಸುಲಿನ್ ಅಥವಾ ಇತರ ಮಧುಮೇಹ ಔಷಧಿಗಳನ್ನು ತೆಗೆದುಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ನೀವು ಒಂದು ಡೋಸ್ ತಪ್ಪಿಸಿಕೊಂಡರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಇದ್ದಕ್ಕಿದ್ದಂತೆ ಕುಸಿಯಬಹುದು.
1. ನಿಮ್ಮನ್ನು ನೀವು ಹೈಡ್ರೇಟ್ ಮಾಡಿಕೊಳ್ಳಿ
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ತನೆ ಏರಿಕೆಯಾದರೆ, ನೀವು ನಿಮ್ಮ ಹೈಡ್ರೇಶನ್ ಮಟ್ಟದ ಕಡೆಗೆ ಗಮನ ಹರಿಸುವುದು ಮೊದಲ ಮತ್ತು ಪ್ರಮುಖವಾದ ವಿಷಯವಾಗಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾದಾಗ, ನಿಮ್ಮ ದೇಹವು ಹೆಚ್ಚುವರಿ ಗ್ಲೂಕೋಸ್ ಅನ್ನು ಮೂತ್ರದ ಮೂಲಕ ಬಿಡುಗಡೆ ಮಾಡುತ್ತದೆ, ಅದನ್ನು ಶುದ್ಧೀಕರಿಸುತ್ತದೆ.
ಆದ್ದರಿಂದ, ಜ್ಯೂಸ್ ಅಥವಾ ಕಾರ್ಬೊನೇಟೆಡ್ ಪಾನೀಯಗಳ ಬದಲಿಗೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ನೀರನ್ನು ಕುಡಿಯಿರಿ. ಇದಲ್ಲದೆ, ನಿರ್ಜಲೀಕರಣಗೊಂಡಾಗ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚು ಜಾಸ್ತಿಯಾಗುತ್ತದೆ.
2. ವಾಕಿಂಗ್ ಅಥವಾ ಜಾಗಿಂಗ್ ಮಾಡಿ
ನೀವು ಹೆಚ್ಚಿನ ಗ್ಲೂಕೋಸ್ ಮಟ್ಟದ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ, ಸರಳ ವ್ಯಾಯಾಮವು ಹಠಾತ್ ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಏರಿಕೆಯನ್ನು ನಿಲ್ಲಿಸಲು ಚಿಕ್ಕದಾಗಿ ವಾಕಿಂಗ್ ಅಥವಾ ಫಾಸ್ಟ್ ಜಾಗಿಂಗ್ ಮಾಡಿರಿ.
ಯಾವುದೇ ಏರೋಬಿಕ್ ವ್ಯಾಯಾಮವು ನಿಮ್ಮ ರಕ್ತದ ಗ್ಲುಕೋಸ್ ಅನ್ನು ಸಮತೋಲನಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ ನೀವು 20 ನಿಮಿಷಗಳ ಕಾಲ ಜೋರಾಗಿ ನಡೆಯುವುದರಿಂದ ನಿಮ್ಮ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಬಹುದು.
3. ಫೈಬರ್ ಭರಿತ ಆಹಾರಗಳನ್ನು ಸೇವಿಸಿ
ಕೆಲವು ಆಹಾರಗಳು ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಉದಾಹರಣೆಗೆ, ಅಧಿಕ ನಾರಿನಂಶವಿರುವ ಆಹಾರಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದಲ್ಲದೆ, ನಾರಿನಂಶ ಹೆಚ್ಚಿರುವ ಆಹಾರಗಳಾದ ಪಾಲಕ್, ಏಕದಳ ಧಾನ್ಯಗಳು (ಓಟ್ ಮೀಲ್, ಬಾರ್ಲಿ ಇತ್ಯಾದಿ), ಮತ್ತು ಆವಕಾಡೊಗಳು ಟೈಪ್ 2 ಮಧುಮೇಹವನ್ನು ಹೆಚ್ಚು ಮಾಡುವ ಅಪಾಯವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ ಎಂದು ಸಂಶೋಧನೆಯು ತೋರಿಸಿದೆ.
4. ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವನೆ ಕಡಿಮೆ ಮಾಡಿ
ಅಧಿಕ ರಕ್ತದ ಸಕ್ಕರೆಯ ಪ್ರಾಥಮಿಕ ಕಾರಣಗಳಲ್ಲಿ ಒಂದು ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳನ್ನು ತಿನ್ನುವುದು. ನಿಮ್ಮ ದೇಹವು ಈ ರೀತಿಯ ಕಾರ್ಬೋಹೈಡ್ರೇಟ್ ಗಳನ್ನು ತ್ವರಿತವಾಗಿ ಸಂಸ್ಕರಿಸುತ್ತದೆ ಮತ್ತು ಹೀರಿಕೊಳ್ಳುತ್ತದೆ, ಅವುಗಳನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ.
ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ತಡೆಗಟ್ಟಲು, ನೀವು ಬ್ರೆಡ್, ಪಾಸ್ತಾ, ಅನ್ನ ಮತ್ತು ಇತರ ಕಾರ್ಬೋಹೈಡ್ರೇಟ್ ಭರಿತ ಆಹಾರಗಳನ್ನು ತಿನ್ನಲೆಬಾರದು. ಬದಲಾಗಿ, ಕಡಿಮೆ ಕಾರ್ಬ್ ಇರುವ ತರಕಾರಿಗಳು, ಆರೋಗ್ಯಕರ ಕೊಬ್ಬುಗಳು ಮತ್ತು ತೆಳುವಾದ ಪ್ರೋಟೀನ್ ಗಳನ್ನು ಸೇವಿಸಿ.
5. ಎಲೆಕ್ಟ್ರೋಲೈಟ್ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಿ
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾದರೆ, ನೀವು ಸಾಮಾನ್ಯಕ್ಕಿಂತ ಹೆಚ್ಚು ಮೂತ್ರವಿಸರ್ಜನೆ ಮಾಡುತ್ತೀರಿ.
ಇದರರ್ಥ ನೀವು ನಿಮ್ಮ ಹೊಟ್ಟೆಯಲ್ಲಿರುವ ನೀರನ್ನು ಕಳೆದುಕೊಳ್ಳುತ್ತಿದ್ದೀರಿ ಅಂತ ಅರ್ಥ ಮತ್ತು ನೀವು ಅದಕ್ಕೆ ಪರಿಹಾರವಾಗಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಫಾಸ್ಫೇಟ್ ಗಳು ಸೇರಿದಂತೆ ನಿಮ್ಮ ಎಲೆಕ್ಟ್ರೋಲೈಟ್ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಿ.
ದೇಹದ ಸಾಕಷ್ಟು ಕಾರ್ಯಗಳನ್ನು ನಿರ್ವಹಿಸಲು ನೀರು ಬೇಕಾಗುತ್ತವೆ, ಆದ್ದರಿಂದ ತ್ವರಿತ ಮರುಪೂರಣ ಅತ್ಯಗತ್ಯ. ಬಾಳೆಹಣ್ಣುಗಳು, ಸಿಹಿ ಆಲೂಗಡ್ಡೆ ಮತ್ತು ಬೀಜಗಳಂತಹ ಆಹಾರಗಳು ಸಮತೋಲಿತವಾಗಿರಲು ನಿಮಗೆ ಸಹಾಯ ಮಾಡುತ್ತದೆ.
6. ಧ್ಯಾನ ಅಥವಾ ಯೋಗ ಮಾಡಿ
ಮಾನಸಿಕ ಮತ್ತು ದೈಹಿಕ ಒತ್ತಡವು ನಿಮ್ಮ ರಕ್ತದಲ್ಲಿ ಹಠಾತ್ ಸಕ್ಕರೆ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ. ಆದ್ದರಿಂದ, ಪ್ರತಿದಿನ ತಪ್ಪದೆ ನೀವು ಧ್ಯಾನ ಅಥವಾ ಯೋಗ ಮಾಡುವುದು ಒಳ್ಳೆಯದು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ.
ಆತಂಕವನ್ನು ಕಡಿಮೆ ಮಾಡಲು, ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಮತ್ತು ದೇಹವನ್ನು ಪರಿಣಾಮಕಾರಿಯಾಗಿ ವಿಶ್ರಾಂತಿಗೊಳಿಸಲು ಯೋಗ ಸೆಷನ್ ಸೂಕ್ತ ಅಂತಾರೆ ತಜ್ಞರು.
ಇದನ್ನೂ ಓದಿ:Diabetes: ಮಧುಮೇಹಿಗಳು ಕಾರ್ನ್ ತಿನ್ನಬಹುದಾ? ಡಾಕ್ಟರ್ ಹೇಳೋದೇನು ನೋಡಿ
7. ವೇಗವಾಗಿ ಕಾರ್ಯನಿರ್ವಹಿಸುತ್ತೆ ಇನ್ಸುಲಿನ್
ನೀವು ಆಹಾರ ಸೇವಿಸುವಾಗ ಸ್ವಾಭಾವಿಕವಾಗಿ ಸಂಭವಿಸಬಹುದಾದ ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡಲು ನಿಮ್ಮ ವೈದ್ಯರು ವೇಗವಾಗಿ ಕಾರ್ಯನಿರ್ವಹಿಸುವ ಇನ್ಸುಲಿನ್ ಅನ್ನು ಸೂಚಿಸುತ್ತಾರೆ.
ನಿಮ್ಮ ದೇಹವು ಅದನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ ಮತ್ತು ಊಟದ ನಂತರ ಹೆಚ್ಚಿನ ರಕ್ತದ ಸಕ್ಕರೆಯನ್ನು ಕಡಿಮೆ ಮಾಡಲು ಚುಚ್ಚುಮದ್ದು ನೀಡಿದ 15 ನಿಮಿಷಗಳಲ್ಲಿ ಅದು ಕೆಲಸ ಮಾಡಲು ಪ್ರಾರಂಭಿಸುತ್ತದೆ.
ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರಿಗೆ ಶಿಫಾರಸು ಮಾಡಲಾದ ತ್ವರಿತ ಪರಿಣಾಮ ಸೂಚಿಸುವ ಊಟದ ಸಮಯದ ಇನ್ಸುಲಿನ್ ಸಾಮಾನ್ಯ ಇನ್ಸುಲಿನ್ ಗಿಂತಲೂ ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ