ಹಣ್ಣುಗಳ (Fruits) ಸೇವನೆ (Eating) ಉತ್ತಮ ಆರೋಗ್ಯ (Good Health) ನೀಡುತ್ತದೆ. ಇದರ ಜೊತೆಗೆ ಸೌಂದರ್ಯಕ್ಕೂ (Beauty) ಹಣ್ಣುಗಳು ತುಂಬಾ ಪ್ರಯೋಜನಕಾರಿ (Benefits) ಆಗಿದೆ. ಈ ವಿಷಯವನ್ನು ತಜ್ಞರು ಮತ್ತು ವೈದ್ಯರೂ ಸಹ ತಳ್ಳಿ ಹಾಕುವಂತಿಲ್ಲ. ಹಣ್ಣುಗಳಲ್ಲಿ ಇರುವ ಪೋಷಕಾಂಶಗಳು ತ್ವಚೆಯ ಆರೈಕೆ ಮಾಡುತ್ತವೆ. ಅವುಗಳ ಜಲಸಂಚಯನ ಗುಣಲಕ್ಷಣಗಳು, ಹೊಳಪು ನೀಡುವ ಗುಣಲಕ್ಷಣಗಳು ಮತ್ತು ವಿಟಮಿನ್ ಅಂಶಗಳು, ತ್ವಚೆ ಮತ್ತು ಮುಖವನ್ನು ಪುನರ್ಯೌವನಗೊಳಿಸುತ್ತವೆ. ಮುಖದ ಕೆಲವು ಭಾಗಗಳ ಚರ್ಮವು ಹೆಚ್ಚು ಸೂಕ್ಷ್ಮವಾಗಿ ಇರುತ್ತದೆ. ಅದರಲ್ಲಿ ಕಣ್ಣಿನ ಕೆಳಗಿನ ಚರ್ಮವೂ ಒಂದು. ಕಣ್ಣಿನ ಕೆಳಗಿನ ಚರ್ಮು ಸುಕ್ಕು, ಕಪ್ಪು ವರ್ತುಲ ಮತ್ತು ಉಬ್ಬಿದ ಕಣ್ಣುಗಳಂತಹ ಸಮಸ್ಯೆ ಹುಟ್ಟು ಹಾಕುತ್ತದೆ.
ಇದು ಹಲವು ಕಾರಣಗಳಿಂದ ಉಂಟಾಗುತ್ತದೆ. ಕಣ್ಣಿನ ಕೆಳಗಿನ ತ್ವಚೆಯು ಮಂದವಾದಾಗ ಸೌಂದರ್ಯವೂ ಕಳೆ ಗುಂದುತ್ತದೆ. ತ್ವಚೆಯು ಮಂದವಾಗುತ್ತದೆ. ಹಾಗಾಗಿ ನಿಮ್ಮ ಕಣ್ಣುಗಳ ಕೆಳಗಿರುವ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ.
ಮನೆಯಲ್ಲಿಯೇ ಕಣ್ಣಿನ ಕೆಳಗಿ ತ್ವಚೆಯ ಆರೈಕೆ ಮತ್ತು ಅಂದ ಕಾಪಾಡಲು ಕೆಲವು ಹಣ್ಣುಗಳಿಂದ ಕೂಡಿದ ಮಾಸ್ಕ್ ಬಗ್ಗೆ ಇಲ್ಲಿ ತಿಳಿಯೋಣ.
ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ
ಕಣ್ಣಿನ ಕೆಳಗಿನ ಚರ್ಮದಲ್ಲಿ ಸಮಸ್ಯೆ ಉಂಟಾಗಲು ಕಾರಣವೇನು?
ನಿದ್ರೆಯ ಕೊರತೆ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಪರದೆಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ಮತ್ತು ಅನಾರೋಗ್ಯಕರ ಜೀವನಶೈಲಿ ಫಾಲೋ ಮಾಡುವುದು ಕಣ್ಣುಗಳ ಕೆಳಗಿರುವ ಪ್ರದೇಶದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಈ ಭಾಗವು ಮುಖದ ಅತ್ಯಂತ ಸೂಕ್ಷ್ಮ ಭಾಗವಾಗಿದೆ.
ಮತ್ತು ಚರ್ಮದ ಸಮಸ್ಯೆಗಳು ಬೇಗ ಕಾಣಿಸಿಕೊಳ್ಳುತ್ತವೆ. ಕಣ್ಣಿನ ಕೆಳಗಿರುವ ಸಮಸ್ಯೆ ಮತ್ತು ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಹೈಡ್ರೀಕರಿಸಿ ಮತ್ತು ಆರೋಗ್ಯಕರವಾಗಿರಿಸುತ್ತದೆ.
ಕಿವಿ ಹಣ್ಣು ಮತ್ತು ಮೊಸರು ಮಾಸ್ಕ್
ಮೊಸರು ಮತ್ತು ಕಿವಿ ಹಣ್ಣು ಮಾಸ್ಕ್ ಚರ್ಮವನ್ನು ವಿಶೇಷವಾಗಿ ಕಣ್ಣಿನ ಕೆಳಗಿರುವ ಪ್ರದೇಶವನ್ನು ಹೈಡ್ರೇಟ್ ಮಾಡಲು, ಮತ್ತು ಪುನಃ ಯೌವ್ವನಗೊಳಿಸಲು ಉತ್ತಮ ಸಂಯೋಜನೆ ಆಗಿದೆ. ಇದಕ್ಕಾಗಿ ಕಿವಿ ಹಣ್ಣು ಮತ್ತು ಅದಕ್ಕೆ ಮೊಸರು ಸೇರಿಸಿ ಪೇಸ್ಟ್ ಮಾಡಿ.
ಅದನ್ನು ಕನಿಷ್ಠ 10 ನಿಮಿಷ ಈ ಪೇಸ್ಟ್ ಅನ್ನು ಕಣ್ಣಿನ ಕೆಳಭಾಗಕ್ಕೆ ಅನ್ವಯಿಸಿ. ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಪಪ್ಪಾಯಿ ಮತ್ತು ನಿಂಬೆ ಮಾಸ್ಕ್
ಹಿಸುಕಿದ ಪಪ್ಪಾಯಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಅದರಲ್ಲಿ ನಿಂಬೆ ರಸ ಮತ್ತು ಚಿಟಿಕೆ ಅರಿಶಿನ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು 15 ರಿಂದ 20 ನಿಮಿಷ ಕಣ್ಣಿನ ಕೆಳಗಿನ ಚರ್ಮಕ್ಕೆ ಅನ್ವಯಿಸಿ ಬಿಡಿ. 10 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ. ಈ ಪಾಕವಿಧಾನವು ಕಣ್ಣುಗಳ ಸುತ್ತಲಿನ ಪ್ರದೇಶವನ್ನು ಚೆನ್ನಾಗಿ ಮತ್ತು ಮೃದುವಾಗಿರಿಸುತ್ತದೆ.
ಅನಾನಸ್ ಮಾಸ್ಕ್
ಊತ ಮತ್ತು ಕಪ್ಪು ವರ್ತುಲಗಳಿಗೆ, ಅನಾನಸ್ ರಸ ಮತ್ತು ಒಂದು ಚಿಟಿಕೆ ಅರಿಶಿನ ಪುಡಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ. 30 ನಿಮಿಷ ಬಿಟ್ಟು ತೊಳೆಯಿರಿ. ಕಣ್ಣಿನ ಕೆಳಗಿನ ವಲಯಗಳು ಗಾಢವಾಗಿದ್ದರೆ, ಕನಿಷ್ಠ ಎರಡು ವಾರಗಳವರೆಗೆ ಪ್ರತಿದಿನ ಪುನರಾವರ್ತಿಸಿ.
ಸ್ಟ್ರಾಬೆರಿ ಮಾಸ್ಕ್
ಇದು ಕಪ್ಪು ವಲಯ ಕಡಿಮೆ ಮಾಡುತ್ತದೆ. ಚರ್ಮವನ್ನು ವಿಶ್ರಾಂತಿ ನೀಡುತ್ತದೆ. ಕೆಲವು ಸ್ಟ್ರಾಬೆರಿ ತೆಗೆದುಕೊಂಡು ಅವುಗಳನ್ನು ಪೇಸ್ಟ್ ಮಾಡಲು ಮಿಶ್ರಣ ಮಾಡಿ. ಈ ಪೇಸ್ಟ್‌ನಲ್ಲಿ ಕೆಲವು ಹನಿ ವಿಟಮಿನ್ ಇ ಎಣ್ಣೆ ಮತ್ತು ರೋಸ್ ವಾಟರ್ ಮಿಶ್ರಣ ಮಾಡಿ ಮತ್ತು ಈ ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ. ನಂತರ ತೊಳೆಯಿರಿ.
ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?
ಆವಕಾಡೊ ಮತ್ತು ಅಲೋವೆರಾ ಮಾಸ್ಕ್
ಆವಕಾಡೊ ಮತ್ತು ಅಲೋವೆರಾ ಕಣ್ಣಿನ ಕೆಳಗಿರುವ ಪ್ರದೇಶಕ್ಕೆ ಉತ್ತಮ ಸಂಯೋಜನೆ. ಚಮಚ ಅಲೋವೆರಾ ಮತ್ತು ಒಂದು ಚಮಚ ಹಿಸುಕಿದ ಅವಕಾಡೊ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ವಯಿಸಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ