• Home
 • »
 • News
 • »
 • lifestyle
 • »
 • Winter Recipe: ಚಳಿಗಾಲದಲ್ಲಿ ದೇಹ ಬೆಚ್ಚಗಿರಿಸಲು ಮ್ಯಾಜಿಕಲ್ ಡ್ರಿಂಕ್​, ಜೀರ್ಣಕ್ರಿಯೆಗೂ ಬೆಸ್ಟ್​

Winter Recipe: ಚಳಿಗಾಲದಲ್ಲಿ ದೇಹ ಬೆಚ್ಚಗಿರಿಸಲು ಮ್ಯಾಜಿಕಲ್ ಡ್ರಿಂಕ್​, ಜೀರ್ಣಕ್ರಿಯೆಗೂ ಬೆಸ್ಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗೆ ಇರಿಸಲು ಉಲ್ಲಾಸಕರವಾದ ಬಿಸಿ ಪಾನೀಯ ರೆಸಿಪಿ ಇಲ್ಲಿದೆ. ಅದು ಅತ್ಯಂತ ಆರೋಗ್ಯಕರ ಆಗಿದೆ. ಮತ್ತು ಅದನ್ನು ಕುಡಿದ ನಂತರ ನೀವು ಉತ್ತಮ ಭಾವನೆ ಹೊಂದುತ್ತೀರಿ. ಅದು ಆಪಲ್ ಕಿನ್ನೋ ಪಂಚ್ ರೆಸಿಪಿ ಆಗಿದೆ. ಇದು ನಿಮಗೆ ತಾಜಾತನ ನೀಡುತ್ತದೆ. ಮತ್ತು ದೇಹವನ್ನು ಬೆಚ್ಚಗೆ ಇರಿಸುತ್ತದೆ.

ಮುಂದೆ ಓದಿ ...
 • Share this:

  ಬೇಸಿಗೆಯಲ್ಲಿ ದೇಹವನ್ನು (Body) ತಂಪಾಗಿಸೋಕೆ (Cold) ಎಳನೀರು, ಜ್ಯೂಸ್, ತಂಪು ಪಾನೀಯಗಳನ್ನು ಕುಡಿಯುವುದು ಸಾಮಾನ್ಯವಾಗಿದೆ. ತುಂಬಾ ಜನರು ಬೇಸಿಗೆಯಲ್ಲಿ ಪಾನೀಯಗಳು, ಜ್ಯೂಸ್ ಅಥವಾ ಮಾಕ್‌ಟೇಲ್‌ಗಳನ್ನು ಕುಡಿಯಲು ಇಷ್ಟ ಪಡ್ತಾರೆ. ಇದು ಅವರ ದೇಹವನ್ನು ಹೈಡ್ರೀಕರಿಸುತ್ತದೆ (Hydration). ಜೊತೆಗೆ ತಂಪಾಗಿಡುತ್ತದೆ. ಮತ್ತು ಒಟ್ಟಾರೆ ದೇಹದಲ್ಲಿ ತಾಜಾತನ ಮತ್ತು ಶಕ್ತಿಯ ಪರಿಚಲನೆ ಇರಲು ಸಹಾಯ ಮಾಡುತ್ತದೆ. ಆದರೆ ಚಳಿಗಾಲ (Winter) ಬಂತು ಅಂದ್ರೆ ಸಾಕು ದೇಹವನ್ನು ಬೆಚ್ಚಗಿಡಲು ತುಂಬಾ ಜನರು ಟೀ (Tea), ಕಾಫಿ, ಹಾಲು ಕುಡಿಯುತ್ತಾರೆ. ಇದನ್ನು ಬಿಟ್ಟರೆ ಬೇರೆ ಪರ್ಯಾಯ ಪದಾರ್ಥಗಳು ಗೊತ್ತಿರುವುದಿಲ್ಲ. ಆದರೆ ಈ ಪದಾರ್ಥಗಳಲ್ಲಿ ಕೆಫೀನ್ ಇದೆ.


  ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸುವ ಪಾನೀಯ


  ಸಕ್ಕರೆ ಹಾಕಿ ಮಾಡಿದ ಚಹಾ, ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಕ್ಯಾಲೋರಿ ಹೆಚ್ಚು ಮಾಡಲು ಮುಖ್ಯ ಕಾರಣ ಆಗುತ್ತದೆ. ಪಾನೀಯಗಳು ಬಿಸಿಯಾಗಿರುವುದಿಲ್ಲ. ಮತ್ತು ಅವು ತುಂಬಾ ಸಿಹಿಯಾಗಿದ್ದು, ಕ್ಯಾಲೊರಿ ಪ್ರಮಾಣವು ಹೆಚ್ಚಿರುತ್ತದೆ. ಆದರೆ ನೀವು ಚಿಂತಿಸಬೇಕಾಗಿಲ್ಲ.


  ಯಾಕಂದ್ರೆ ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗೆ ಇರಿಸಲು ಉಲ್ಲಾಸಕರವಾದ ಬಿಸಿ ಪಾನೀಯ ರೆಸಿಪಿ ಇಲ್ಲಿದೆ. ಅದು ಅತ್ಯಂತ ಆರೋಗ್ಯಕರ ಆಗಿದೆ. ಮತ್ತು ಅದನ್ನು ಕುಡಿದ ನಂತರ ನೀವು ಉತ್ತಮ ಭಾವನೆ ಹೊಂದುತ್ತೀರಿ. ಆ ರೆಸಿಪಿ ಆಪಲ್ ಕಿನ್ನೋ ಪಂಚ್ ರೆಸಿಪಿ ಆಗಿದೆ. ಇದು ನಿಮಗೆ ತಾಜಾತನ ನೀಡುತ್ತದೆ. ಮತ್ತು ದೇಹವನ್ನು ಬೆಚ್ಚಗೆ ಇರಿಸುತ್ತದೆ.


  ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


  ಆಪಲ್ ಕಿನ್ನೋ ಪಂಚ್ ರೆಸಿಪಿ


  ಬೇಕಾಗುವ ಪದಾರ್ಥಗಳು


  ಆರು ಕಪ್ ಸೇಬು ರಸ, ದಾಲ್ಚಿನ್ನಿ ದೊಡ್ಡ ತುಂಡು, ಜಾಯಿಕಾಯಿ ಕಾಲು ಟೀ ಸ್ಪೂನ್, ಜೇನುತುಪ್ಪ ಕಾಲು ಕಪ್, ನಿಂಬೆ ರಸ ಮೂರು ಟೀ ಸ್ಪೂನ್, ಅನಾನಸ್ ರಸ ಒಂದೂವರೆ ಕಪ್, ಟ್ಯಾಂಗರಿನ್ ರಸ ಒಂದು ಕಪ್ ಬೇಕು.


  ಆಪಲ್ ಕಿನ್ನೋ ಪಂಚ್ ರೆಸಿಪಿ ಮಾಡುವ ವಿಧಾನ


  ಸೇಬು, ಅನಾನಸ್ ಮತ್ತು ಟ್ಯಾಂಗರಿನ್‌ ಗಳಿಂದ ರಸ ತಯಾರಿಸಲು ನೀವು ತಾಜಾ ಹಣ್ಣು ಸಹ ಬಳಸಬಹುದು. ಅಥವಾ ನೀವು ಬಯಸಿದರೆ ಪ್ಯಾಕ್ ಮಾಡಿದ ಮಾರುಕಟ್ಟೆಯಿಂದ ತಂದಿರುವ ರಸವನ್ನು ಸಹ ಬಳಸಬಹುದು. ದೊಡ್ಡ ಲೋಹದ ಪಾತ್ರೆಗೆ ಸೇಬು ರಸ ಮತ್ತು ದಾಲ್ಚಿನ್ನಿ ತುಂಡು ಸೇರಿಸಿ. ಅದು ಕುದಿ ಬಂದ ನಂತರ ಉರಿ ಕಡಿಮೆ ಮಾಡಿ ಚೆನ್ನಾಗಿ ಐದು ನಿಮಿಷ ಕುದಿಸಿ.


  ಐದು ನಿಮಿಷದ ನಂತರ ಈ ಮಿಶ್ರಣವನ್ನು ಒಲೆಯಿಂದ ಕೆಳಗಿಳಿಸಿ. ನಂತರ ಜಾಯಿಕಾಯಿ, ಜೇನುತುಪ್ಪ, ನಿಂಬೆ, ಅನಾನಸ್ ಮತ್ತು ಟ್ಯಾಂಗರಿನ್ ರಸ ಸೇರಿಸಿ. ಅದನ್ನು ಗಾಜಿನ ಗ್ಲಾಸ್ ಗೆ ಹಾಕಿ ಟ್ಯಾಂಗರಿನ್ ಚೂರುಗಳಿಂದ ಅಲಂಕಾರ ಮಾಡಿರಿ ಮತ್ತು ಕುಡಿಯಿರಿ.


  ಟ್ಯಾಂಗರಿನ್ ಮತ್ತು ಆಪಲ್ ಪಂಚ್ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?


  ಆಪಲ್ ಕಿನ್ನೋ ಪಂಚ್ ರೆಸಿಪಿ ಪಾನೀಯವು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಸೇಬು, ಅನಾನಸ್ ಮತ್ತು ಟ್ಯಾಂಗರಿನ್ ರಸ ಹೊಂದಿದೆ. ಹಾಗಾಗಿ ಇದು ವಿಟಮಿನ್ ಗಳಿಂದ ಸಮೃದ್ಧ ಉತ್ತಮ ಮೂಲ ಆಗಿದೆ.  ಈ ಪಾನೀಯ ಸೇವನೆ ಮಾಡುವುದು ಭಾರವಾದ ಆಹಾರ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


  ಹಾಗೂ ಆಪಲ್ ಕಿನ್ನೋ ಪಂಚ್ ಪಾನೀಯ ನಿಮಗೆ ಹೆದರಿಕೆ ಮತ್ತು ವಾಂತಿ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಟ್ಯಾಂಗರಿನ್‌ ಗಳು ವಿಟಮಿನ್ ಸಿ ಯ ಉತ್ತಮ ಮೂಲ. ರೋಗ ನಿರೋಧಕ ಶಕ್ತಿಗೆ ಸಹ ಪ್ರಯೋಜನಕಾರಿ ಆಗಿದೆ.

  Published by:renukadariyannavar
  First published: