• Home
  • »
  • News
  • »
  • lifestyle
  • »
  • Apple Cider Vinegar: ಆಪಲ್ ಸೈಡರ್ ವಿನೆಗರ್ ಬಳಕೆ ಚರ್ಮ ಮತ್ತು ಕೂದಲ ಆರೋಗ್ಯಕ್ಕೆ ಹಾನಿ ಮಾಡುತ್ತದೆಯೇ?

Apple Cider Vinegar: ಆಪಲ್ ಸೈಡರ್ ವಿನೆಗರ್ ಬಳಕೆ ಚರ್ಮ ಮತ್ತು ಕೂದಲ ಆರೋಗ್ಯಕ್ಕೆ ಹಾನಿ ಮಾಡುತ್ತದೆಯೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ಆಹಾರದಲ್ಲಿ ಸೇರಿಸುವುದು ಸಾಕಷ್ಟು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಆಯುರ್ವೇದದ ಪ್ರಕಾರ ಆಪಲ್ ಸೈಡರ್ ವಿನೆಗರ್ ಅನ್ನು ಆಹಾರದಲ್ಲಿ ಸೇರಿಸಿ ಸೇವನೆ ಮಾಡುವುದು ಅನೇಕ ಗಂಭೀರ ಅಡ್ಡ ಪರಿಣಾಮ ಉಂಟು ಮಾಡುತ್ತದೆಯಂತೆ!

  • Share this:

    ಆಪಲ್ ಸೈಡರ್ ವಿನೆಗರ್ (Apple Cider Vinegar) ಸೇವನೆಯನ್ನು ಹೆಚ್ಚಾಗಿ ಬೆಲ್ಲಿ ಫ್ಯಾಟ್ (Belly Fat) ಕರಗಿಸಲು ಮತ್ತು ತೂಕ ಇಳಿಕೆ (Weight Loss) ವೇಳೆ ಸೇವಿಸಲು ತಜ್ಞರು ಶಿಫಾರಸು ಮಾಡ್ತಾರೆ. ಆಪಲ್ ಸೈಡರ್ ವಿನೆಗರ್ ಬಳಕೆ ಮಾಡುವುದು ಹಲವಾರು ಆರೋಗ್ಯ ಪ್ರಯೋಜನ ನೀಡುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಸಾಕಷ್ಟು ಆರೋಗ್ಯ ಲಾಭ ತಂದು ಕೊಡುತ್ತದೆ. ಆದರೆ ಆಪಲ್ ಸೈಡರ್ ವಿನೆಗರ್ ನ್ನು ತಪ್ಪಾಗಿ ಸೇವನೆ ಮಾಡುವುದು ಕೆಲವು ಕೆಟ್ಟ ಪರಿಣಾಮಗಳನ್ನೂ ಬೀರುತ್ತದೆ. ಇದು ನಿಮಗೆ ಹೆಚ್ಚು ಆರೋಗ್ಯ ಹಾನಿ ಉಂಟು ಮಾಡುತ್ತದೆ. ಆಯುರ್ವೇದ ತಜ್ಞೆ ಡಾ. ರೇಖಾ ಅವರು ಆ್ಯಪಲ್ ಸೈಡರ್ ವಿನೆಗರ್ ಯಾವೆಲ್ಲಾ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ ಇಲ್ಲಿ ನೋಡೋಣ.


    ಆಪಲ್ ಸೈಡರ್ ವಿನೆಗರ್ ಅನಾನುಕೂಲತೆಗಳು


    ಇತ್ತೀಚಿನ ದಿನಗಳಲ್ಲಿ ಆಪಲ್ ಸೈಡರ್ ವಿನೆಗರ್ ನ್ನು ಆಹಾರದಲ್ಲಿ ಸೇರಿಸುವುದು ಸಾಕಷ್ಟು ಪ್ರಯೋಜನಕಾರಿ ಎಂದು ಹೇಳುವುದನ್ನು ನೀವು ನೋಡಿರಬಹುದು. ಆದರೆ ಆಯುರ್ವೇದದ ಪ್ರಕಾರ,


    ಆಪಲ್ ಸೈಡರ್ ವಿನೆಗರ್ ನ್ನು ಆಹಾರದಲ್ಲಿ ಸೇರಿಸಿ ಸೇವನೆ ಮಾಡುವುದು ಅನೇಕ ಗಂಭೀರ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ಸೇವನೆ ಉಂಟಾಗುವ ಅನಾನುಕೂಲತೆಗಳ ಬಗ್ಗೆ ಇಲ್ಲಿ ನೋಡೋಣ.


    ಇದನ್ನೂ ಓದಿ: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ


    ಸೇಬು ಸೈಡರ್ ವಿನೆಗರ್ ಒಂದು ಔಷಧ


    ಆಯುರ್ವೇದ ತಜ್ಞೆ ಡಾ.ರೇಖಾ ಮಾತನಾಡಿ, ಆ್ಯಪಲ್ ಸೈಡರ್ ವಿನೆಗರ್ ಔಷಧ ಇದ್ದಂತೆ. ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಇದು ಆಹಾರ ಪದಾರ್ಥವಲ್ಲ ಎಂದು ಹೇಳ್ತಾರೆ. ಆಯುರ್ವೇದ ತಜ್ಞರ ಪ್ರಕಾರ, ಸೇಬು ಸೈಡರ್ ವಿನೆಗರ್ ಕ್ಷಾರ ವರ್ಗದ ಅಡಿ ಬರುತ್ತದೆ. ಇದು ತುಂಬಾ ಬಿಸಿ.


    ಹಾಗಾಗಿ ಇದು ಶುಷ್ಕವಾಗಿರುತ್ತದೆ. ಇದರ ಸೇವನೆ ದೇಹದ ಚಾನಲ್‌ ಗಳ ಕಿರಿಕಿರಿ ಮತ್ತು ತಡೆಗಟ್ಟುವಿಕೆ ಕಾರಣ ಆಗಬಹುದು. ಇದು ದೇಹದಲ್ಲಿ ವಿಷ ಉತ್ಪತ್ತಿ ಮಾಡುತ್ತದೆ. ಇದರಿಂದ ದೀರ್ಘಕಾಲದ ಕಾಯಿಲೆ ಉಂಟಾಗುತ್ತವೆ.


    ಆಪಲ್ ಸೈಡರ್ ವಿನೆಗರ್ ಅನಾನುಕೂಲಗಳು


    ಚರಕ ಸಂಹಿತೆ ಸೂತ್ರ ಉಲ್ಲೇಖಿಸಿ, ಡಾ. ರೇಖಾ ಅವರು, ಹೃದಯ, ಯಕೃತ್ತು, ಹೊಟ್ಟೆ, ಕರುಳು, ಚರ್ಮ ಮತ್ತು ಕೂದಲಿಗೆ ಹಾನಿಕಾರಕ ಎಂದು ವಿವರಿಸಿದ್ದಾರೆ. ಮೂಲಗಳ ಪ್ರಕಾರ, ಇದನ್ನು ಪ್ರತಿದಿನ ಸೇವಿಸಿದರೆ ಕುರುಡುತನ, ಬೋಳುತನ, ಬೂದು ಕೂದಲು, ಹೃದಯ ಕಾಯಿಲೆ ಮತ್ತು ದುರ್ಬಲತೆ ಉಂಟು ಮಾಡುತ್ತದೆ.


    ಆಪಲ್ ಸೈಡರ್ ವಿನೆಗರ್ ನಿಂದ ಉಂಟಾಗುವ ಇತರೆ ದುಷ್ಪರಿಣಾಮಗಳು


    ಆಪಲ್ ಸೈಡರ್ ವಿನೆಗರ್ ನ್ನು ಪ್ರತಿದಿನ ಸೇವನೆ ಮಾಡುವುದು ಹಲವು ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಹೆಚ್ಚು. ಕೆಟ್ಟ ಹೊಟ್ಟೆ ನೋವು, ಎದೆಯುರಿ, ಒಸಡುಗಳಲ್ಲಿ ಊತ, ಗಂಟಲು ಕೆರೆತ, ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚು.


    ಆಪಲ್ ಸೈಡರ್ ವಿನೆಗರ್ ಸರಿಯಾದ ಬಳಕೆ ಯಾವುದು?


    ಡಾ.ರೇಖಾ ಅವರ ಪ್ರಕಾರ, ಆಪಲ್ ಸೈಡರ್ ವಿನೆಗರ್ ನ್ನು ಪ್ರತಿನಿತ್ಯ ಬಳಸುವ ವಿಧಾನ ಆಗಿದೆ. ಇದರಲ್ಲಿ ನೀವು ಸ್ವಲ್ಪ ಸೇಬು ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ, ಹಣ್ಣು ಮತ್ತು ತರಕಾರಿ ಜೊತೆ ಸೇವನೆ ಮಾಡಬಹುದು. ಇದು ತಮ್ಮ ಪೌಷ್ಟಿಕಾಂಶ ಕಳೆದುಕೊಳ್ಳದೆ ರಾಸಾಯನಿಕ ಮತ್ತು ಕೊಳಕು ತೊಡೆದು ಹಾಕಲು ಸಹಾಯ ಮಾಡುತ್ತದೆ.


    ಮಹಿಳೆಯರ ತೂಕ ಕಡಿಮೆ ಮಾಡುತ್ತದೆ


    ಹೊಟ್ಟೆ, ಸೊಂಟ, ತೊಡೆಗಳಲ್ಲಿ ತೂಕ ಹೆಚ್ಚಾಗುತ್ತಿದ್ದರೆ, ಆಪಲ್ ಸೈಡರ್ ವಿನೆಗರ್ ಸೇವಿಸಿ. ಇದು ಅಸಿಟಿಕ್ ಆಮ್ಲ ಹೊಂದಿದೆ. ಇದು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ಸೇವನೆ ಹಸಿವನ್ನು ಕಡಿಮೆ ಮಾಡುತ್ತದೆ. ಅರ್ಧ ಟೀಚಮಚ ಸೇಬು ಸೈಡರ್ ವಿನೆಗರ್ ಮತ್ತು ಅರ್ಧ ಚಮಚ ನಿಂಬೆ ರಸ ಬೆರೆಸಿ ಬೆಳಿಗ್ಗೆ ಕುಡಿಯಿರಿ.


    ಇದನ್ನೂ ಓದಿ: ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ತಜ್ಞರು ಹೇಳಿರುವ ಸುಲಭ ಪರಿಹಾರ ಹೀಗಿದೆ!


    ಚರ್ಮ ಆರೋಗ್ಯವಾಗಿಡುತ್ತದೆ


    ಹೆಚ್ಚು ಮೊಡವೆ, ಮುಖದ ಮೇಲೆ ಸುಕ್ಕು, ನಸುಕಂದು ಮಚ್ಚೆ ಸಮಸ್ಯೆ ಹೊಂದಿದ್ದರೆ ನಂತರ ಆಪಲ್ ಸೈಡರ್ ವಿನೆಗರ್ ಸೇವಿಸಿ. ಇದನ್ನು ನೀರಿನಲ್ಲಿ ಬೆರೆಸಿ ಮುಖ ತೊಳೆಯಿರಿ.

    Published by:renukadariyannavar
    First published: