• Home
  • »
  • News
  • »
  • lifestyle
  • »
  • Apple Cider Vinegar: ಖಾಲಿ ಹೊಟ್ಟೆಯಲ್ಲಿ ಆ್ಯಪಲ್​ ಸೈಡರ್ ವಿನೆಗರ್ ಕುಡಿಯೋದು ಈ ಎಲ್ಲಾ ಸಮಸ್ಯೆಗೆ ಕಾರಣಗುವಾಗುತ್ತಂತೆ

Apple Cider Vinegar: ಖಾಲಿ ಹೊಟ್ಟೆಯಲ್ಲಿ ಆ್ಯಪಲ್​ ಸೈಡರ್ ವಿನೆಗರ್ ಕುಡಿಯೋದು ಈ ಎಲ್ಲಾ ಸಮಸ್ಯೆಗೆ ಕಾರಣಗುವಾಗುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಪಲ್ ಸೈಡರ್ ವಿನೆಗರ್ ನ ಅಡ್ಡ ಪರಿಣಾಮಗಳು ಮತ್ತು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಆಪಲ್ ಸೈಡರ್ ವಿನೆಗರ್ ಅಸಿಡಿಟಿ ಮತ್ತು ಹುಳಿ ಬೆಲ್ಚಿಂಗ್ ಅನ್ನು ಸಹ ಉಂಟು ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸಿದರೆ ಅಸಿಡಿಟಿ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು.

ಮುಂದೆ ಓದಿ ...
  • Share this:

    ತೂಕ ನಷ್ಟ (Weight Loss) ಹಾಗೂ ಆರೋಗ್ಯಕ್ಕಾಗಿ (Health) ಆಹಾರದಲ್ಲಿ (Food) ಆಪಲ್ ಸೈಡರ್ ವಿನೆಗರ್ (Apple cider Vinegar) ಅನ್ನು ಸೇರಿಸಲು ಅನೇಕ ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಿದಾಗ ಕೆಲವು ಅಡ್ಡ ಪರಿಣಾಮಗಳೂ ಉಂಟಾಗುತ್ತವೆ. ಜೊತೆ ಅನಾರೋಗ್ಯ ಮತ್ತು ತೊಂದರೆ ಅನುಭವಿಸಬೇಕಾಗುತ್ತದೆ. ಆಪಲ್ ಸೈಡರ್ ವಿನೆಗರ್ ನ ಅಡ್ಡ ಪರಿಣಾಮಗಳು ಮತ್ತು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಆಪಲ್ ಸೈಡರ್ ವಿನೆಗರ್ ಅಸಿಡಿಟಿ ಮತ್ತು ಹುಳಿ ಬೆಲ್ಚಿಂಗ್ ಅನ್ನು ಸಹ ಉಂಟು ಮಾಡುತ್ತದೆ. ಹಲವರು ಸಾಮಾಜಿ ಮಾಧ್ಯಮದಲ್ಲಿ ಬರುವ ವಿಡಿಯೋ ಹಾಗೂ ಸ್ಟೋರಿಗಳನ್ನು ನೋಡಿ ಆಪಲ್ ಸೈಡರ್ ವಿನೆಗರ್ ಸೇವಿಸುತ್ತಾರೆ.


    ಆಪಲ್ ಸೈಡರ್ ವಿನೆಗರ್ ಸೇವನೆಯ ಅಡ್ಡ ಪರಿಣಾಮ


    ಹೀಗೆ ಸಾಮಾಜಿಕ ಮಾಧ್ಯಮದ ಟ್ರೆಂಡ್‌ಗಳನ್ನು ಫಾಲೋ ಮಾಡಿ, ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸಲು ಪ್ರಾರಂಭಿಸುವವರು ಹೆಚ್ಚು ತೊಂದರೆ ಪಡುತ್ತಾರೆ. ಯಾಕೆಂದರೆ ಅದು ಅವರ ದೇಹಕ್ಕೆ ವರ್ಕೌಟ ಅಥವಾ ಹಿಡಿಸುತ್ತದೋ ಇಲ್ಲವೋ ಎಂದು ಗೊತ್ತಿಲ್ಲದೇ ಬಳಕೆ ಮಾಡುತ್ತಾರೆ.



    ಯಾವುದೇ ಪೌಷ್ಟಿಕ ತಜ್ಞರನ್ನು ಸಂಪರ್ಕ ಮಾಡದೇ, ಸೇವನೆ ಮಾಡುವುದು ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಹೆಚ್ಚು. ವೈದ್ಯರು ಮತ್ತು ಪೌಷ್ಟಿಕ ತಜ್ಞರನ್ನು ಸಂಪರ್ಕಿಸದೇ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸಿದರೆ ಅಸಿಡಿಟಿ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಅಸಿಡಿಟಿ ಸಮಸ್ಯೆ


    ಹೀಗೆ ಶುರುವಾಗು ಸಮಸ್ಯೆ ಹೊಟ್ಟೆಯ ಸಮಸ್ಯೆ ಹೆಚ್ಚಿಸುತ್ತೆ. ನೀವು ಏನೇ ತಿಂದರೂ ಅಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ನೀವು ಬೆಳಗಿನ ದಿನಚರಿಯನ್ನು ಪರಿಶೀಲಿಸುವ ಅನಿವಾರ್ಯತೆ ಇದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ


    ಮೊದಲು ಸ್ವಲ್ಪ ಹೆಚ್ಚಿನ ಸಂಶೋಧನೆ ಮಾಡುವುದು ತುಂಬಾ ಮುಖ್ಯ. ಜೊತೆಗೆ ವೈದ್ಯರು ಮತ್ತು ಪೌಷ್ಟಿಕ ತಜ್ಞರನ್ನು ಸಂಪರ್ಕಿಸಿ, ಸಲಹೆ ಸೂಚನೆ ಪಡೆಯಿರಿ.


    ಇನ್ನು ತೂಕ ಇಳಿಸುವವರು ಹೇಗ್ಹೇಗೋ ತಿನ್ನುವುದು, ಕುಡಿಯುವ ದಿನಚರಿ ಫಾಲೋ ಮಾಡಿದ್ರೆ ಅಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ತೂಕ ನಷ್ಟ ಪ್ರಯಾಣವು ಸರಿಯಾದ ಶಿಸ್ತು ಮತ್ತು ಆಹಾರ ಕ್ರಮ, ಚಟುವಟಿಕೆ ಬಯಸುತ್ತದೆ. ಆಪಲ್ ಸೈಡರ್ ವಿನೆಗರ್ ಸೇವನೆಯ ಬಗ್ಗೆ ಮಾಡಿದ ಸಂಶೋಧನೆ ಯಾವೆಲ್ಲಾ ಅಡ್ಡ ಪರಿಣಾಮಗಳ ಬಗ್ಗೆ ಹೇಳಿದೆ ಎಂದು ನೋಡೋಣ.


    ಆಮ್ಲೀಯತೆಗೆ ಕಾರಣ


    ಆಪಲ್ ಸೈಡರ್ ವಿನೆಗರ್ ಆಮ್ಲೀಯತೆ ಉಂಟು ಮಾಡಬಹುದು. ಏಕೆಂದರೆ ಇದು ಸ್ವತಃ ಆಮ್ಲವಾಗಿದೆ. ಅಲ್ಲದೆ, ಖಾಲಿ ಹೊಟ್ಟೆಯಲ್ಲಿ ಇದನ್ನು ತೆಗೆದುಕೊಳ್ಳುವಾಗ ನಾವು ಸ್ವಲ್ಪ ಜಾಗ್ರತೆ ವಹಿಸಬೇಕು. ನೇಚರ್ ಹೆಲ್ತ್ ಜರ್ನಲ್ ಪ್ರಕಾರ,


    ಹೆಚ್ಚಿನ ಪ್ರಮಾಣದ ಆಪಲ್ ಸೈಡರ್ ವಿನೆಗರ್ ಅನೇಕ ಹೊಟ್ಟೆ ಸಮಸ್ಯೆ ಉಂಟು ಮಾಡಬಹುದು. ಇದನ್ನು ಕುಡಿಯುವುದರಿಂದ ಎದೆ, ಹೊಟ್ಟೆ ಮತ್ತು ಗಂಟಲಿನಲ್ಲಿ ಉರಿ ಉಂಟಾಗುತ್ತದೆ.


    ಚರ್ಮದ ಕಿರಿಕಿರಿ ಉಂಟು ಮಾಡಬಹುದು


    ನ್ಯಾಷನಲ್ ಕ್ಯಾಪಿಟಲ್ ಪಾಯಿಸನ್ ಸೆಂಟರ್‌ನ ವರದಿ ಪ್ರಕಾರ, ಆಪಲ್ ಸೈಡರ್ ವಿನೆಗರ್ ಅನ್ನು ತಮ್ಮ ಚರ್ಮಕ್ಕೆ ಅನ್ವಯಿಸಿದ ನಂತರ ಜನರು ತೀವ್ರ ಸುಟ್ಟಗಾಯ ಅನುಭವಿಸಿದ್ದಾರೆ. ಚರ್ಮದ ಮೇಲೆ ಸೇಬು ವಿನೆಗರ್ ಬಳಸಬೇಡಿ. ಇದು ಚರ್ಮದ ಕಿರಿಕಿರಿ ಉಂಟು ಮಾಡಬಹುದು.


    ಮಧುಮೇಹ


    ಆಪಲ್ ಸೈಡರ್ ವಿನೆಗರ್ ಆಮ್ಲೀಯತೆ ಮಾತ್ರವಲ್ಲದೆ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಆಪಲ್ ಸೈಡರ್ ವಿನೆಗರ್ ರಕ್ತದ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತದೆ.


    ಸೇಬು ಸೈಡರ್ ವಿನೆಗರ್ ಸೇವಿಸುವ ಸರಿಯಾದ ಮಾರ್ಗ


    ಆಪಲ್ ಸೈಡರ್ ವಿನೆಗರ್ ಅನ್ನು ದಿನಕ್ಕೆ ಒಮ್ಮೆ ಮಾತ್ರ ಸೇವಿಸಬೇಕು. ಆಪಲ್ ಸೈಡರ್ ವಿನೆಗರ್ ಅನ್ನು ಮಾತ್ರ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಹಾನಿಕಾರಕ. ಅದನ್ನು ಯಾವಾಗಲೂ ನೀರಿನಲ್ಲಿ ಬೆರೆಸಿ ಕುಡಿಯಿರಿ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ಹಲ್ಲುಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಿ. ಇದು ಹಲ್ಲಿನ ದಂತ ಕವಚಕ್ಕೆ ಹಾನಿಯುಂಟು ಮಾಡುತ್ತದೆ. ಸ್ಟ್ರಾ ಬಳಸಿ.

    Published by:renukadariyannavar
    First published: