• Home
  • »
  • News
  • »
  • lifestyle
  • »
  • Purple Tomato: ಈ ನೇರಳೆ ಟೊಮೇಟೊದಲ್ಲಿದೆ ಕ್ಯಾನ್ಸರ್​ ಅನ್ನು ಹೋಗಲಾಡಿಸುವ ಶಕ್ತಿ! ಸೇವಿಸಿ ನೋಡಿ

Purple Tomato: ಈ ನೇರಳೆ ಟೊಮೇಟೊದಲ್ಲಿದೆ ಕ್ಯಾನ್ಸರ್​ ಅನ್ನು ಹೋಗಲಾಡಿಸುವ ಶಕ್ತಿ! ಸೇವಿಸಿ ನೋಡಿ

ನೇರಳೆ ಟೊಮೆಟೊ

ನೇರಳೆ ಟೊಮೆಟೊ

ಸ್ನಾಪ್‌ಡ್ರಾಗನ್ ಹೂವಿನಿಂದ ಡಿಎನ್‌ಎಯೊಂದಿಗೆ ಟೊಮೇಟೊವೊಂದನ್ನು ಸಂಯೋಜಿಸುವ ಮೂಲಕ ಒಂದು ವಿಶೇಷ ತಳೀಯಯನ್ನಾಗಿ ಮಾರ್ಪಡಿಸಿದ್ದರು. ಈ ವಿಶೇಷ ತಳಿಯಿಂದ ಕ್ಯಾನ್ಸರ್‌ ಅನ್ನು ತಡೆಗಟ್ಟಬಹುದು. ಈ ತಳಿಗೆ ಈಗ ವಿಜ್ಞಾನಿಗಳು ನೀಡಿರುವ ಹೆಸರೇ ನೇರಳೆ ಟೊಮೊಟೊ.

  • Share this:

ನವದೆಹಲಿ: ಯುರೋಪಿಯನ್ ವಿಜ್ಞಾನಿಗಳು (Scientists) 2008 ರಲ್ಲಿ ಸ್ನಾಪ್‌ಡ್ರಾಗನ್ ಹೂವಿನಿಂದ (Snapdragon flower) ಡಿಎನ್‌ಎಯೊಂದಿಗೆ ಟೊಮೇಟೊವೊಂದನ್ನು ಸಂಯೋಜಿಸುವ ಮೂಲಕ ಒಂದು ವಿಶೇಷ ತಳೀಯಯನ್ನಾಗಿ ಮಾರ್ಪಡಿಸಿದ್ದರು. ಈ ವಿಶೇಷ ತಳಿಯಿಂದ ಕ್ಯಾನ್ಸರ್‌ ಅನ್ನು (Cancer) ತಡೆಗಟ್ಟಬಹುದು. ಈ ತಳಿಗೆ ಈಗ ವಿಜ್ಞಾನಿಗಳು ನೀಡಿರುವ ಹೆಸರೇ ನೇರಳೆ ಟೊಮೊಟೊ (Purple Tomato). ಸುಮಾರು ಹದಿನಾಲ್ಕು ವರ್ಷಗಳ ನಂತರ, ಈ ರಾಯಲ್-ಬಣ್ಣದ GMO ಒಂದು ಆನುವಂಶಿಕವಾಗಿ ಮಾರ್ಪಡಿಸಿದ ತಳಿಗೆ, ಕೊನೆಗೂ ಯುಸ್‌ ನ ಆಹಾರ ನಿಯಂತ್ರಕ ಮಂಡಳಿ (Food Regulatory Commission) ಈ ವಿಶಿಷ್ಟ ಟೊಮೊಟೊ ಹಣ್ಣಿನ ಬೀಜ ಮತ್ತು ಸಸ್ಯಗಳನ್ನು ಮಾರಾಟ ಮಾಡಲು ಗ್ನೀನ್‌ ಸಿಗ್ನಲ್‌ ನೀಡಿದೆ.


ಸಂಶೋಧನೆಯಲ್ಲಿ ತಿಳಿದುಬಂದಿರುವುದೇನು?
ಇದೇ ಸೆಪ್ಟೆಂಬರ್‌ ತಿಂಗಳ ಆರಂಭದಲ್ಲಿ, US ಕೃಷಿ ಇಲಾಖೆ (USDA) ಯ, ಪ್ರಾಣಿ ಮತ್ತು ಸಸ್ಯ ಆರೋಗ್ಯ ತಪಾಸಣೆ ಸೇವೆ (APHIS) ಯು ಅಮೆರಿಕಾದಲ್ಲಿ ಈ ವಿಶೇಷ ಟೊಮೊಟೊ ಸಸ್ಯವನ್ನು ಸುರಕ್ಷಿತವಾಗಿ ಬೆಳೆಸಬಹುದು ಎಂದು ಪರಿಗಣಿಸಿತು. "ಇತರ ಕೃಷಿ ಸಸ್ಯ ಟೊಮೇಟೊಗಳಿಗೆ ಹೋಲಿಸಿದರೆ ಈ ಸಸ್ಯವು ಕೀಟದ ಅಪಾಯಕ್ಕೆ ಒಳಗಾಗುವುದು ಬಹಳ ಕಡಿಮೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ” ಎಂದು USDA ಯು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದೆ.


“ಗ್ರಾಹಕರು ಇದನ್ನು ಹೇಗೆ ಸ್ವಿಕರಿಸುತ್ತಾರೋ ಏನೋ ಮುಂದೆ ಕಾದು ನೋಡಬೇಕಿದೆ. ಆದರೆ ಮುಂದಿನ ವರ್ಷದಿಂದ, ಈ ಸಸ್ಯದ ಬೀಜಗಳನ್ನು ಖರೀದಿಸಲು ಮತ್ತು GMO ಟೊಮೇಟೊಗಳನ್ನು ಬೆಳೆಯಲು ನೂರರಷ್ಟು ಸಾಧ್ಯವಾಗುತ್ತದೆ. ಇದರ ಜೊತೆಗೆ ಅಮೇರಿಕಾದ ಹಲವು ಆರೋಗ್ಯಕರ ತರಕಾರಿಗಳಲ್ಲಿ ಇದು ಒಂದು ತರಕಾರಿ ಆಗಿ ಸೇರಿಕೊಂಡು ಜನರ ಆರೋಗ್ಯವನ್ನು ಮತ್ತಷ್ಟು ಉತ್ತಮವಾಗಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ” ಎಂದು ಸಂಶೋಧಕರು ಅತ್ಯಂತ ಉತ್ಸಾಹದಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Rice And Health: ವಿವಿಧ ತಳಿಯ ಅಕ್ಕಿ ಹೇಗೆ ಆರೋಗ್ಯ ಸಮಸ್ಯೆ ನಿವಾರಿಸುತ್ತದೆ? ಯಾವ ಅಕ್ಕಿ ಸೇವನೆ ಆರೋಗ್ಯಕ್ಕೆ ಬೆಸ್ಟ್?


ಸಂಶೋಧಕರು ಏನ್‌ ಹೇಳ್ತಿದ್ದಾರೆ?
"ಈ ಟೊಮೊಟೊ ಸಸ್ಯ ಅತ್ಯಂತ ಅದ್ಭುತವಾಗಿದೆ. ನಾನು ಈ ದಿನಕ್ಕಾಗಿ ಎದುರು ನೋಡುತ್ತಿದ್ದೆ. ಆ ದಿನ ಇಂದು ನನಸಾಗಿದೆ. ಈ ಆರೋಗ್ಯಕರ ನೇರಳೆ ಟೊಮೇಟೊಗಳನ್ನು ಸೇವಿಸಲು ಉತ್ಸುಕರಾಗಿರುವ ಅನೇಕ ಜನರಲ್ಲಿ ನಾನು ಕೂಡ ಒಬ್ಬರು. ನಮ್ಮೆಲ್ಲರ ಕನಸಿಗೆ ಈಗ ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ” ಎಂದು ಯುಕೆ ಜಾನ್ ಇನ್ನೆಸ್ ಸೆಂಟರ್‌ನ ಪ್ರಾಧ್ಯಾಪಕ ಮತ್ತು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳಲ್ಲಿ ಒಬ್ಬರಾದ ಕ್ಯಾಥಿ ಮಾರ್ಟಿನ್ ಹೇಳಿದ್ದಾರೆ.


ಸಾಮಾನ್ಯ ಟೊಮೇಟೊಗಳಿಗಿಂತ ನೇರಳೆ ಟೊಮೇಟೊಗಳು ಹೆಚ್ಚು ಪೌಷ್ಟಿಕವಾಗಿವೆ ಏಕೆ ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ. 'ನೇರಳೆ ಟೊಮೇಟೊ' ವನ್ನು ಕೇವಲ ನೋಡುವುದಕ್ಕೆ ಸುಂದರವಾಗಿ ಕಾಣಲೆಂದು ಬೆಳೆಯುವುದಿಲ್ಲ. ಅದರ ಜೊತೆಗೆ ಈ ಹಣ್ಣು ಅನೇಕ ಪೌಷ್ಠಿಕಾಂಶದ ಆಗರವಾಗಿದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.


ಸಂಶೋಧನೆ ನಡೆದದ್ದು ಹೇಗೆ?
ಈ ನೇರಳೆ ಟೊಮೊಟೊ ಹಣ್ಣಿನ ತಳಿಯನ್ನು 14 ವರ್ಷಗಳ ಹಿಂದೆ ಇಟಲಿ, ಯುಕೆ, ಜರ್ಮನಿ ಮತ್ತು ನೆದರ್‌ಲ್ಯಾಂಡ್‌ನ ಅಂತರರಾಷ್ಟ್ರೀಯ ಸಂಶೋಧಕರ ತಂಡವು ಮೊದಲು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿತು. ಈ ತಂಡವು ಸ್ನಾಪ್‌ಡ್ರಾಗನ್, ಡ್ರ್ಯಾಗನ್ ಹೂವು ಮತ್ತು ನಾಯಿ ಹೂವಿನಂತಹ ಹೆಸರುಗಳಿಂದ ಸಾಮಾನ್ಯವಾಗಿ ಕರೆಯಲ್ಪಡುವ ವಿವಿಧ ಸಸ್ಯಗಳು - ಆಂಥೋಸಯಾನಿನ್‌ಗಳಲ್ಲಿ ಸಮೃದ್ಧವಾಗಿರುವ ನೇರಳೆ ಟೊಮೇಟೊಗಳನ್ನು ಬೆಳೆಯಲು ಅಗತ್ಯವಿರುವ ಆಂಟಿರಿನಮ್‌ನಿಂದ ಜೀನ್‌ಗಳನ್ನು ಪರಿಚಯಿಸಿತು.


ಆಂಥೋಸಯಾನಿನ್‌ಗಳು ಸ್ವಾಭಾವಿಕವಾಗಿ ಕಂಡುಬರುವ ವರ್ಣದ್ರವ್ಯಗಳಾಗಿವೆ. ಅವುಗಳು ವಿಶೇಷವಾಗಿ ಬ್ಲ್ಯಾಕ್‌ಬೆರಿ, ಕ್ರ್ಯಾನ್‌ಬೆರಿ ಮತ್ತು ಚೋಕ್‌ಬೆರಿಗಳಂತಹ ಬೆರ್ರಿ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಅವು ಸುವಾಸನೆ ಹೊಂದಿರುವುದಿಲ್ಲ. ಅದರ ಜೊತೆಗೆ ಸ್ವಲ್ಪ ಹುಳಿ ರುಚಿಯನ್ನು ಸಹ ಹೊಂದಿರುತ್ತವೆ.


ಇದನ್ನೂ ಓದಿ:  Lemon And Health: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ


ಬಹು ಮುಖ್ಯವಾಗಿ, ಆಂಥೋಸಯಾನಿನ್‌ಗಳು ತಮ್ಮ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದಾಗಿ ಕೆಲವು ಕ್ಯಾನ್ಸರ್‌, ಹೃದಯರಕ್ತನಾಳದ ಕಾಯಿಲೆಗಳು ಮತ್ತು ವಯಸ್ಸಿಗೆ ಸಂಬಂಧಿಸಿದಂತಹ ಅಸ್ವಸ್ಥತೆಗಳ ವಿರುದ್ಧ ಆರೋಗ್ಯ ರಕ್ಷಣೆಯನ್ನು ನೀಡುತ್ತವೆ ಎಂಬುದಕ್ಕೆ ಅನೇಕ ವೈಜ್ಞಾನಿಕ ಪುರಾವೆಗಳಿವೆ. ಈ ಆಂಥೋಸಯಾನಿನ್‌ ಗುಣಲಕ್ಷಣಗಳಿಂದ ದೇಹದ ಸ್ಥೂಲಕಾಯತೆ ಮತ್ತು ಅದಕ್ಕೆ ಸಂಬಂಧಿಸಿದ ಸ್ಥಿತಿಗಳನ್ನು ನಿರ್ವಹಿಸುವಲ್ಲಿ ಉಪಯುಕ್ತವಾಗಿವೆ ಎಂದು ಅಧ್ಯಯನಗಳ ವರದಿಗಳು ಹೇಳುತ್ತವೆ.


ಈ ನೇರಳೆ ಟೊಮೊಟೊ ಕ್ಯಾನ್ಸರ್‌ ಕಾರಕವೇ?
ಈ ಅಧ್ಯಯನಕ್ಕಾಗಿ, ಸಂಶೋಧಕರು ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ಇಲಿಗಳ ಮೇಲೆ ಪರೀಕ್ಷೆಗಳನ್ನು ನಡೆಸಿದರು. ಸಾಮಾನ್ಯ ಕೆಂಪು ಟೊಮೇಟೊಗಳಿಗೆ ಹೋಲಿಸಿದರೆ ಕೆನ್ನೇರಳೆ ಟೊಮೇಟೊಗಳು ನಿತ್ಯ ಆಹಾರದ ಜೊತೆ ಪೂರಕ ಆಹಾರಗಳಾಗಿ ನೀಡಿದ್ದಕ್ಕೆ, ಇಲಿಗಳ ಜೀವಿತಾವಧಿಯು ಗಮನಾರ್ಹವಾಗಿ ಹೆಚ್ಚಿದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

Published by:Ashwini Prabhu
First published: