Yoga: ನಿಮಗೆ ಎಷ್ಟೇ ವಯಸ್ಸಾದರೂ ಚಿಕ್ಕವರಂತೆ ಕಾಣಬೇಕಾ..? ಹಾಗಾದರೆ ಇದನ್ನು ಟ್ರೈ ಮಾಡಿ ನೋಡಿ

ನಿಮ್ಮ ಮುಖದ ಮೇಲಿನ ಚರ್ಮವನ್ನು ಕಾಂತಿಯುತವಾಗಿ ಅಲ್ಲದೆ ಯಾವುದೇ ಕಪ್ಪು ಕಲೆಗಳು ಬಾರದಂತೆ ಮತ್ತು ಚರ್ಮ ಕಪ್ಪಾಗದಂತೆ ನೋಡಿಕೊಳ್ಳುವುದು ಹೇಗೆ ಅಂತೀರಾ..? ಇದಕ್ಕೆ ಪರಿಹಾರ ಇರುವುದು ಕೆಲವು ಆಸನಗಳಲ್ಲಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

Photo: Google

Photo: Google

  • Share this:
ಅನೇಕ ಜನರಿಗೆ ತಮ್ಮ ಕಣ್ಣುಗಳ ಕೆಳಗಿನ ಚರ್ಮವು ತುಂಬಾನೇ ಕಪ್ಪಾಗಿ, ಸಡಿಲವಾಗಿ ಮತ್ತು ಚರ್ಮವು ಮುದುಡಿಕೊಳ್ಳುವುದರಿಂದ ತಮಗಿರುವ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ. ನಮ್ಮ ದೇಹದ ಚರ್ಮವು ನಮ್ಮ ಆಂತರಿಕ ಮತ್ತು ಬಾಹ್ಯ ಆರೋಗ್ಯದ ಪ್ರತಿಬಿಂಬವಾಗಿರುತ್ತದೆ ಎಂದರೆ ಅತಿಶಯೋಕ್ತಿಯಲ್ಲ.ನೀವು ನಿಮ್ಮ ಚರ್ಮದ ಬಗ್ಗೆ ಸರಿಯಾದ ಕಾಳಜಿ ತೆಗೆದುಕೊಂಡರೆ ನೀವು ಸುಮಾರು 10 ವರ್ಷಗಳಷ್ಟು ಅಥವಾ ಇನ್ನೂ ಚಿಕ್ಕವರಾಗಿ ಕಾಣಬಹುದು. ಹೀಗೆ ಕಾಣಲು ನಿಮ್ಮ ಮುಖದ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ.

ನಿಮ್ಮ ಮುಖದ ಮೇಲಿನ ಚರ್ಮವನ್ನು ಕಾಂತಿಯುತವಾಗಿ ಅಲ್ಲದೆ ಯಾವುದೇ ಕಪ್ಪು ಕಲೆಗಳು ಬಾರದಂತೆ ಮತ್ತು ಚರ್ಮ ಕಪ್ಪಾಗದಂತೆ ನೋಡಿಕೊಳ್ಳುವುದು ಹೇಗೆ ಅಂತೀರಾ..? ಇದಕ್ಕೆ ಪರಿಹಾರ ಇರುವುದು ಕೆಲವು ಆಸನಗಳಲ್ಲಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ದಿನಕ್ಕೆ ಒಂದು ಅಥವಾ ಎರಡು ಬಾರಿ ನಿಯಮಿತವಾಗಿ ಈ ಆಸನಗಳನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಚರ್ಮದ ಆರೋಗ್ಯ ಸುಧಾರಿಸಿಕೊಳ್ಳಬಹುದು. ಇದರಿಂದ ನಿಮ್ಮ ಕಣ್ಣುಗಳ ಸುತ್ತಲೂ ಆಗುವಂತಹ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಆ ಹೊಳೆಯುವ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.

Read Also ⇒ Disney+ Hotstar: ಕೆಲವು ಪ್ರಿಪೇಯ್ಡ್ ಯೋಜನೆಗಳನ್ನ ಪರಿಷ್ಕರಿಸಿದ ಜಿಯೋ, ಹೆಚ್ಚುವರಿಯಾಗಿ 10GB ಡೇಟಾ ಉಚಿತ!

ಈ ಆಸನಗಳನ್ನು ಅಭ್ಯಾಸ ಮಾಡುವುದರೊಂದಿಗೆ ನೀವು ಜೀವನಶೈಲಿಯಲ್ಲಿಯೂ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಕಣ್ಣುಗಳ ಕೆಳಗೆ ಚರ್ಮ ಹಾಳಾಗಲು ಅಸಮರ್ಪಕ ನಿದ್ರೆ ಕಾರಣವಾಗಬಹುದು. ಆಹಾರದಲ್ಲಿ ಹೆಚ್ಚಾಗಿ ಉಪ್ಪು ಸೇರಿಸಿಕೊಳ್ಳುವುದು, ಅತಿಯಾದ ಮದ್ಯಪಾನ ಮಾಡುವುದು, ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಕೈಗಳಿಂದ ಉಜ್ಜಿಕೊಳ್ಳುವುದು ಮತ್ತು ಧೂಮಪಾನ ಮಾಡುವುದರಿಂದಲೂ ನಿಮ್ಮ ಮುಖದ ಚರ್ಮ ಹಾಳಾಗಬಹುದು.

ಈ ಕೆಳಗೆ ನೀಡಿರುವಂತಹ ಆಸನಗಳನ್ನು ನೀವು ಪ್ರತಿದಿನ ಅಭ್ಯಾಸ ಮಾಡಿ. ಆಮೇಲೆ ನೋಡಿ ನಿಮ್ಮ ಮುಖದ ಚರ್ಮ ಎಷ್ಟೊಂದು ಕಾಂತಿಯುತವಾಗಿ ಕಾಣುತ್ತದೆ.

ಪಾದಹಸ್ತಾಸನ

ನೀವು ಪಾದಹಸ್ತಾಸನ ಮಾಡಲು ಮೊದಲಿಗೆ ನೇರವಾಗಿ ನಿಲ್ಲಬೇಕು. ಬಳಿಕ ನೀವು ನಿಧಾನವಾಗಿ ಮುಂದೆ ಬಾಗಿ ನಿಮ್ಮ ಕೈಗಳಿಂದ ನಿಮ್ಮ ಪಾದಗಳನ್ನು ಮುಟ್ಟಿರಿ. ನಿಮ್ಮ ಕೈಗಳನ್ನು ನಿಮ್ಮ ಕಾಲುಗಳ ಪಕ್ಕದಲ್ಲಿ ಇರಿಸಿಕೊಳ್ಳಿ. ನೀವು ಮೊದಲ ಬಾರಿಗೆ ಇದನ್ನು ಮಾಡುತ್ತಿದ್ದರೆ ಕೊಂಚ ಕಷ್ಟವಾಗುತ್ತದೆ. ನಿಮ್ಮ ಮೊಣಕಾಲು ಮತ್ತು ಕೈಗಳನ್ನು ನೇರವಾಗಿ ಇರಿಸಿಕೊಳ್ಳಿ.

ಪಶ್ಚಿಮೋತ್ತನಾಸನ

ಮೊದಲು ನಿಮ್ಮ ಪಾದಗಳನ್ನು ನೇರವಾಗಿ ಇರಿಸಿಕೊಂಡು ಮುಂದೆ ಕುಳಿತುಕೊಳ್ಳಿ. ದೇಹವನ್ನು ಪಾದಗಳ ಕಡೆಗೆ ಚಾಚುತ್ತ, ನಿಧಾನವಾಗಿ ಉಸಿರು ಹೊರಹಾಕಿ. ಕೈಗಳಿಂದ ಪಾದಗಳನ್ನು ಮುಟ್ಟಿರಿ. ನಿಮ್ಮ ಮೂಗನ್ನು ಮೊಣಕಾಲಿಗೆ ತಾಗಿಸಲು ಪ್ರಯತ್ನಿಸಿ.

ಹಾಲಾಸನ

ಮೊದಲಿಗೆ ನೀವು ನೇರವಾಗಿ ಮಲಗಿ, ನಿಮ್ಮ ಮಧ್ಯ ಮತ್ತು ಕೆಳ ಬೆನ್ನನ್ನು ಎತ್ತಿ ನಿಮ್ಮ ಕಾಲ್ಬೆರಳುಗಳನ್ನು ಹಿಂದೆ ನೆಲದ ಮೇಲೆ ಬೀಳಿಸಿ. ನಿಮ್ಮ ಎದೆಯನ್ನು ಸಾಧ್ಯವಾದಷ್ಟು ನಿಮ್ಮ ಗಲ್ಲದ ಹತ್ತಿರ ತರಲು ಪ್ರಯತ್ನಿಸಿ. ನೀವು ನಿಮ್ಮ ತೋಳುಗಳನ್ನು ಬಾಗಿಸಬಹುದು ಮತ್ತು ಅಂಗೈಗಳಿಂದ ಬೆನ್ನನ್ನು ಹಿಡಿದುಕೊಳ್ಳಬಹುದು.

ಬಾಲ ಬಕಾಸನ

ನಿಮ್ಮ ಎರಡು ಮೊಣಕೈಗಳನ್ನು ನೆಲದ ಮೇಲೆ ಚಪ್ಪಟೆಯಾಗಿ ಇರಿಸಿಕೊಳ್ಳಿರಿ, ನಂತರ ನಿಮ್ಮ ಬೆರಳುಗಳು ಮುಂದೆ ತೋರಿಸಬೇಕು ಮತ್ತು ಅವುಗಳನ್ನು ಪ್ರತ್ಯೇಕವಾಗಿ ಹರಡಬೇಕು. ನಿಮ್ಮ ಎಲ್ಲಾ ದೇಹದ ತೂಕವು ನಿಮ್ಮ ಕೈಗಳ ಮೇಲೆ ಬೀಳುವ ರೀತಿಯಲ್ಲಿ ಮುಂದೆ ಬಾಗಿ. ನಿಧಾನವಾಗಿ ನಿಮ್ಮ ಎರಡೂ ಪಾದಗಳನ್ನು ಒಟ್ಟಿಗೆ ತಂದು ನೆಲದಿಂದ ಸ್ವಲ್ಪ ಮೇಲಕ್ಕೆ ಎತ್ತಿರಿ.
First published: