HOME » NEWS » Lifestyle » ANNUAL INCOME IS A KEY FACTOR WHILE BUYING TERM LIFE INSURANCE STG HG

ವಾರ್ಷಿಕ ಆದಾಯದ ಮಾಹಿತಿ ನೀಡದೆ ಸಿಗುವುದಿಲ್ಲ ಜೀವ ವಿಮೆ..!

ಜೀವ ವಿಮೆ ಪಡೆಯಲು ಆನ್‍ಲೈನ್ ಅಲ್ಲದೆ ಯಾವುದರ ಮೂಲಕ ಹೋದರೂ ಮೊದಲು ವಾರ್ಷಿಕ ಆದಾಯದ ದಾಖಲೆ ತೋರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಭರ್ತಿ ಮಾಡಲು ನೀಡುವ ಫಾರಂನಲ್ಲಿ ವಾರ್ಷಿಕ ಆದಾಯವನ್ನು ತಿಳಿಸಲೇಬೇಕಾಗುತ್ತದೆ.

news18-kannada
Updated:April 9, 2021, 9:48 AM IST
ವಾರ್ಷಿಕ ಆದಾಯದ ಮಾಹಿತಿ ನೀಡದೆ ಸಿಗುವುದಿಲ್ಲ ಜೀವ ವಿಮೆ..!
Photo: Google
  • Share this:
ವಾರ್ಷಿಕ ಆದಾಯವು ಜೀವವಿಮೆಯ ಆಧಾರ ಸ್ತಂಭ. ನಮ್ಮ ವಾರ್ಷಿಕ ಆದಾಯ ಉತ್ತಮವಾಗಿದ್ದಷ್ಟು ಜೀವ ವಿಮೆ ಪಡೆಯಲು ಅರ್ಹತೆಯನ್ನು ಪಡೆದುಕೊಳ್ಳುತ್ತೇವೆ. ವಾರ್ಷಿಕ ಆದಾಯವೇ ಮೂಲವೇ ಎಂದು ವಿಮೆದಾರರು ಕೇಳುವ ಪ್ರಶ್ನೆಗೆ ಹೌದು. ಇದುವೇ ಮೊದಲ ಹಂತ ಎನ್ನುತ್ತದೆ ಕಂಪನಿ.

ಜೀವ ವಿಮೆ ಪಡೆಯಲು ಆನ್‍ಲೈನ್ ಅಲ್ಲದೆ ಯಾವುದರ ಮೂಲಕ ಹೋದರೂ ಮೊದಲು ವಾರ್ಷಿಕ ಆದಾಯದ ದಾಖಲೆ ತೋರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಭರ್ತಿ ಮಾಡಲು ನೀಡುವ ಫಾರಂನಲ್ಲಿ ವಾರ್ಷಿಕ ಆದಾಯವನ್ನು ತಿಳಿಸಲೇಬೇಕಾಗುತ್ತದೆ. ಮುಖ್ಯವಾಗಿ ಯಾವುದೇ ಇನ್ಶೂರೆನ್ಸ್ ಕಂಪೆನಿ ಇದೇ ಮಾನದಂಡವನ್ನೇ ಮೊದಲು ಪರಿಗಣಿಸಿ ನಂತರ ವಿಮೆ ಕೊಡುವುದೋ, ಬೇಡವೋ ಎಂದು ನಿರ್ಧರಿಸುತ್ತದೆ. ಹಾಗಾಗಿ ವಿಮೆ ಪಡೆಯುವ ಮುನ್ನ ವಾರ್ಷಿಕ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಲೇಬೇಕು ಎಂದು ಹೇಳುತ್ತಾರೆ ಜೀವವಿಮೆ ಮುಖ್ಯ ಅಧಿಕಾರಿ ಸಂತೋಷ್ ಅಗರ್‌ವಾಲ್.

ಇದನ್ನೆಲ್ಲಾ ಗಮನಿಸುತ್ತಿದ್ದ ಹಾಗೆ ಯಾಕೆ ಇನ್ಶೂರೆನ್ಸ್ ಕಂಪೆನಿ ವಾರ್ಷಿಕ ಆದಾಯವನ್ನೇ ಪ್ರಥಮ ಆದ್ಯತೆಯನ್ನಾಗಿ ಮಾಡಿಕೊಂಡಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆಲ್ಲಾ ಇಲ್ಲಿದೆ ಉತ್ತರ.

ಮೊದಲನೆಯದಾಗಿ ಜೀವವಿಮೆಯನ್ನು ಬದಲಿ ಆದಾಯ ಎಂದೇ ಪರಿಗಣಿಸಲಾಗುತ್ತದೆ. ವಿಮಾ ಗ್ರಾಹಕರ ಸಂಪಾದನೆಯನ್ನು ತಿಳಿಯಲು ವಿಮಾದಾರನು ಬಯಸುತ್ತಾನೆ. ಯಾಕೆಂದರೆ ನೀವು ಪಡೆಯುತ್ತಿರುವ ಆದಾಯದ ವ್ಯಾಪ್ತಿಯು ನಿಮ್ಮ ನಿಧನದ ನಂತರ ಮರಣದ ಲಾಭವಾಗಿ ಬದಲಾಗುವ ಆದಾಯಕ್ಕೆ ಸಂಬಂಧಿಸಿರುತ್ತದೆ. ಆದ್ದರಿಂದ ಸಂಪಾದನೆ ಮುಖ್ಯವಾಗುತ್ತದೆ.

ವಿಮಾ ಗ್ರಾಹಕರು ಜೀವವಿಮೆ ಕಂತನ್ನು ಎಷ್ಟು ಬದ್ಧರಾಗಿ, ನಿಷ್ಠಾವಂತರಾಗಿ ಪಾವತಿಸುತ್ತಾರೆ ಎಂದು ತಿಳಿಯಲು ಸಹ ಮುಖ್ಯವಾಗಿದೆ.

ವಿಮಾಗ್ರಾಹಕರು ವೈಯಕ್ತಿಕವಾಗಿ ವಿಮೆ ಮಾಡಿಸುತ್ತಾರೆ ಎಂದಾದಲ್ಲಿ ವಿಮಾ ಗ್ರಾಹಕರ ಆರ್ಥಿಕ ಸ್ಥಿತಿ, ಗಳಿಕೆಯ ಸಾಮರ್ಥ್ಯವನ್ನು ನಿರ್ಣಯಿಸಲು ವಿಮಾ ಕಂಪನಿಯು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತದೆ, ಜೊತೆಗೆ ಆದಾಯದ ಹಂಚಿಕೆ ಇವೆಲ್ಲವುಗಳನ್ನು ಪರಿಶೀಲಿಸಿದ ನಂತರ ವಿಮೆ ಪಾವತಿಸಲು ಅರ್ಹರೇ ಎಂದು ನಿರ್ಣಯಿಸಲಾಗುತ್ತದೆ. ಅವರ ಆದಾಯವನ್ನೆಲ್ಲಾ ವಿಚಾರಿಸಿ ವಿಮೆ ನೀಡಿದರೆ ವಿಮೆ ಪಡೆದುಕೊಂಡವರು ಹಿಂದೆ ಸರಿಯುವ ಪ್ರಮೇಯ ಇರುವುದಿಲ್ಲ. ಆದ ಕಾರಣ ಈ ಎಲ್ಲಾ ಹಂತಗಳನ್ನು ಕೂಲಂಕಷವಾಗಿ ವಿಚಾರಿಸಲಾಗುತ್ತದೆ ಎಂದು ಅಗರ್‌ವಾಲ್ ಹೇಳಿದರು.

ಇನ್ನು ಸೇವೆ ಸಲ್ಲಿಸಿದ ವರ್ಷಗಳ ಆಧಾರದ ಮೇಲೆ ಅನ್ಯ ಮಾಹಿತಿಯನ್ನು ಪರಿಗಣಿಸಲಾಗುತ್ತದೆ ಮತ್ತು ಆದರೆ ಹುದ್ದೆ ಬೇರೆ ವಿಷಯ. ಉದಾಹರಣೆಗೆ ವಿಮಾ ಗ್ರಾಹಕರು ಮಾಡುತ್ತಿರುವ ಕೆಲಸ ತುಂಬಾ ಒತ್ತಡದ ಕೆಲಸವಾಗಿದ್ದರೆ ಅವರ ಅನುಭವ, ಸೇವೆ ಮಾಡಿದ ವರ್ಷಗಳ ಮೇಲೆ ನಿರ್ಣಯವಾಗುತ್ತದೆ.
Youtube Video

ಅಲ್ಲದೇ ಆರ್ಥಿಕ ಭದ್ರತೆಯು ಕೂಡ ಕೊನೆಯಲ್ಲಿ ನೀಡುವ ಹಣದ ಮೊತ್ತವನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಇನ್ಶೂರೆನ್ಸ್ ಕಂಪೆನಿ ವಿಮೆಯಲ್ಲಿ ನಷ್ಟ ಅನುಭವಿಸಿದ್ದಲ್ಲಿ ಆದ ನಷ್ಟ ತುಂಬಲು ನಕಲಿ
ಹಕ್ಕನ್ನು ಪಡೆಯಲು ಪ್ರಚೋದಿಸಲೂಬಹುದು. ಅಕಸ್ಮಾತ್ ಆದಾಯ ಮಾಹಿತಿ ಘೋಷಣೆಯಲ್ಲಿ ಯಾವುದಾದರೂ ತಪ್ಪಾದಲ್ಲಿ ಪಾಲಿಸಿಯು ಕೈತಪ್ಪುವ ಸಾಧ್ಯತೆ ಇರುತ್ತದೆ ಅಲ್ಲದೇ ವಿಮಾ ಹಕ್ಕು ಕೂಡ ತಿರಸ್ಕೃತಗೊಳ್ಳಬಹುದು. ಆದ ಕಾರಣ ಆದಾಯದ ಮಾಹಿತಿ ನಿಖರ ಹಾಗೂ ಸುಳ್ಳುಗಳಿಂದ ದೂರವಿದ್ದಲ್ಲಿ ಕೊನೆಯಲ್ಲಿ ಪಡೆಯುವ ಆದಾಯಕ್ಕೆ ಯಾವುದೇ ಮೋಸವಾಗುವುದಿಲ್ಲ.
First published: April 9, 2021, 9:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories