Bad Cholesterol: ಡೆಡ್ಲಿ ರೋಗಗಳಿಗೆ ಕಾರಣವಾಗೋ ಕೆಟ್ಟ ಕೊಲೆಸ್ಟ್ರಾಲ್​ಗೆ ದೇಹದಲ್ಲಿ ಜಾಗ ಕೊಡಬೇಡಿ, ಕಡಿಮೆ ಮಾಡೋದು ಹೇಗೆ?

ನಿಮ್ಮ ರಕ್ತ ಪರಿಚಲನೆ ಕಡಿಮೆಯಾಗಲು ಕೊಲೆಸ್ಟ್ರಾಲ್ ಕಾರಣ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ಹಲವು ಔಷಧಗಳು ಲಭ್ಯ ಇವೆ. ಅಧಿಕ ಕೊಲೆಸ್ಟ್ರಾಲ್ ಹೆಚ್ಚಳವಾದಾಗ ಇದು ರಕ್ತದ ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹದಲ್ಲಿನ (Body) ಕೊಲೆಸ್ಟ್ರಾಲ್ (Cholesterol) ಆರೋಗ್ಯದ ವಿಚಾರದಲ್ಲಿ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ರಕ್ತದಲ್ಲಿ (Blood) ಕಂಡು ಬರುವ ಈ ಮೇಣದಂಥ ವಸ್ತು ಆರೋಗ್ಯಕರ (Healthy) ಕೋಶಗಳ ರಚನೆಗೆ ಅತ್ಯಂತ ಅವಶ್ಯಕವಾಗಿದೆ. ಆದಾಗ್ಯೂ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣಕ್ಕೆ ಇಂತಿಷ್ಟೇ ಎಂಬ ಮಿತಿ ಇದೆ. ಅದನ್ನು ಮೀರಿದರೆ ದೇಹಕ್ಕೆ ಅನೇಕ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚು. ಕೊಲೆಸ್ಟ್ರಾಲ್‌ನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ. ದೇಹದ ಉತ್ತಮ ಕಾರ್ಯ ನಿರ್ವಹಣೆಗೆ ಒಳ್ಳೆಯ ಕೊಲೆಸ್ಟ್ರಾಲ್ ಅತ್ಯಂತ ಅವಶ್ಯಕ. ಆದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದ್ದರೆ ಅದು ರೋಗ ಮತ್ತು ಕಾಯಿಲೆಗಳ ಅಪಾಯ ಹೆಚ್ಚು ಮಾಡುತ್ತದೆ.

    ಕೆಟ್ಟ ಕೊಲೆಸ್ಟ್ರಾಲ್ ನಿಂದ ದೇಹಕ್ಕೆ ಅಪಾಯ

    ಹೃದ್ರೋಗ, ಪಾರ್ಶ್ವವಾಯು ಮತ್ತು ಹೃದಯಾಘಾತ ಕಾಯಿಲೆಗೆ ಇದು ಕಾರಣವಾಗುತ್ತದೆ. ಕೊಲೆಸ್ಟ್ರಾಲ್ ಮೇಣದಂತಹ ವಸ್ತುವಾಗಿದೆ. ಅದು ರಕ್ತನಾಳಗಳಲ್ಲಿ ಸಂಗ್ರಹ ಆಗುತ್ತದೆ. ರಕ್ತನಾಳಗಳ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳ ಆಗುವುದು ಆರೋಗ್ಯದ ಅಪಾಯಕ್ಕೆ ಕಾರಣವಾಗುತ್ತದೆ.

    ನಿಮ್ಮ ರಕ್ತ ಪರಿಚಲನೆ ಕಡಿಮೆಯಾಗಲು ಕೊಲೆಸ್ಟ್ರಾಲ್ ಕಾರಣ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ಹಲವು ಔಷಧಗಳು ಲಭ್ಯ ಇವೆ. ಅಧಿಕ ಕೊಲೆಸ್ಟ್ರಾಲ್ ಹೆಚ್ಚಳವಾದಾಗ ಇದು ರಕ್ತದ ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

    ಇದನ್ನೂ ಓದಿ: ಯಾವ ಡಯಟ್ ಪ್ಲಾನ್ ಫಾಲೋ ಮಾಡಿದ್ರೆ ವೇಗವಾಗಿ ತೂಕ ಕಡಿಮೆ ಮಾಡಬಹುದು? ಸಂಶೋಧನೆ ಕಂಡುಕೊಂಡಿದ್ದೇನು?

    ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಸಲಹೆ

    ಕೆಲವು ಜೀವನಶೈಲಿಯ ಬದಲಾವಣೆ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಪ್ರತಿದಿನ ತಮ್ಮ Instagram ನಲ್ಲಿ ಆರೋಗ್ಯ ಸಂಬಂಧಿತ ಸಲಹೆ ಮತ್ತು ಉಪಾಯಗಳನ್ನು ಶೇರ್ ಮಾಡುತ್ತಾರೆ. ಅವರು ಇತ್ತೀಚೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕೆಲವು ಮಾರ್ಗಗಳನ್ನು ಹೇಳಿದ್ದಾರೆ.

    ಉತ್ತಮ ಆಹಾರವು ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಅಂಜಲಿ. ಅದರಿಂದ ಉಪಶಮನ ಪಡೆಯಲು ನಿಮ್ಮ ಆಹಾರಕ್ರಮದಲ್ಲಿ ಕೆಲವು ಅಂಶಗಳನ್ನು ಸೇರಿಸಿಕೊಳ್ಳಲು ಸಲಹೆ ನೀಡಿದ್ದಾರೆ.

    ಬಹುಅಪರ್ಯಾಪ್ತ ಕೊಬ್ಬಿನ ಆಮ್ಲಗಳ ಸೇವನೆ ತಪ್ಪಿಸಿ

    ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಹೊಂದಿರುವ ತೈಲಗಳ ಸೇವನೆ ತಪ್ಪಿಸಬೇಕು. ಕಾರ್ನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯಂತಹ ತೈಲಗಳನ್ನು ಮಿತವಾಗಿ ಸೇವನೆ ಮಾಡಬೇಕು ಅನ್ನೋದು ಅಂಜಲಿ ಅವರ ಸಲಹೆ. ಆದಾಗ್ಯೂ ಏಕಪರ್ಯಾಪ್ತ ಕೊಬ್ಬಿನಾಮ್ಲಗಳಾದ ಆಲಿವ್ ಎಣ್ಣೆ, ಅಗಸೆಬೀಜದ ಎಣ್ಣೆ ಇತ್ಯಾದಿಗಳನ್ನು ಸೇವಿಸಬೇಕು.

    ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಿ

    ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಅಂಜಲಿ ಸಲಹೆ ನೀಡಿದರು. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಂಸ್ಕರಿಸಿದ ಕಾರ್ಬ್ ಸೇವನೆ ಕಡಿಮೆ ಮಾಡಬೇಕು ಎಂಬುದು ಅವರ ಸಲಹೆ.

    ಫೈಬರ್ ಸಹಿತ ಪದಾರ್ಥಗಳ ಸೇವನೆ ಮಾಡಿ

    ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಫೈಬರ್ ಸಹಿತ ಪದಾರ್ಥಗಳ ಸೇವನೆಯು ಅತ್ಯಗತ್ಯ. ಆಹಾರದಲ್ಲಿ ಓಟ್ಸ್, ಎಲ್ಲಾ ರೀತಿಯ ಕಾಳುಗಳು ಮತ್ತು ಬೀನ್ಸ್ ಸೇರಿಸಿಕೊಳ್ಳಬೇಕು. ಿವು ಫೈಬರ್ನ ಉತ್ತಮ ಮೂಲವಾಗಿದೆ.

    ಇದನ್ನೂ ಓದಿ: ನಿಮ್ಮ ಮಗು ಓದೋಕೆ ಉದಾಸೀನಾ ಮಾಡ್ತಿದ್ಯಾ? ಈ ಟ್ರಿಕ್ಸ್ ಸ್ವಲ್ಪ ಟ್ರೈ ಮಾಡಿ ನೋಡಿ

    ವಿಟಮಿನ್ ಇ

    ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ವಿಟಮಿನ್ ಇ ಪೂರಕಗಳನ್ನು ತೆಗೆದುಕೊಳ್ಳಬಹುದು. ಸ್ಯಾಚುರೇಟೆಡ್ ಕೊಬ್ಬನ್ನು ಅತಿಯಾಗಿ ಸೇವಿಸಿದಾಗ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನೀವು ಪನೀರ್, ಕೆಂಪು ಮಾಂಸ ಮತ್ತು ತುಪ್ಪದಂತಹ ಸ್ಯಾಚುರೇಟೆಡ್ ಕೊಬ್ಬನ್ನು ಸೇವಿಸುವಾಗ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಿ ಎಂಬುದು ಅಂಜಲಿ ಸಲಹೆ.
    Published by:renukadariyannavar
    First published: