Women’s Health Problem: ಮಹಿಳೆಯರಲ್ಲಿ ಉಂಟಾಗುವ ರಕ್ತಹೀನತೆ ಸೇರಿದಂತೆ ಕೆಲವು ಕಾಯಿಲೆಗಳಿಗೆ ನೈಸರ್ಗಿಕ ಮದ್ದು ಇಲ್ಲಿದೆ ನೋಡಿ!

ರಕ್ತಹೀನತೆ ಕೊರತೆಯು ಮಹಿಳೆಯರಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಯಾಗಿದೆ. ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಹಣ್ಣು ಸೇವಿಸಬೇಕು. ದಾಳಿಂಬೆ, ಕಿವಿ, ಪೇರಲ, ಅನಾನಸ್ ಸೇರಿದಂತೆ ಕೆಲವು ಹಣ್ಣುಗಳನ್ನು ನೀವು ತಿನ್ನಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಡೀ ಕುಟುಂಬದ (Family) ಜವಾಬ್ದಾರಿ (Responsibility) ನಿರ್ವಹಿಸುವ, ಕೌಟುಂಬಿಕ ಸದಸ್ಯರ ಕಾಳಜಿ, ಆರೈಕೆ (Caring) ಮಾಡುವ ತಾಯಿ ಅಥವಾ ಮಹಿಳೆಯರಿಗೆ (Women) ತಮ್ಮ ಆರೋಗ್ಯ ಕಾಳಜಿ ವಹಿಸಲು ಸಮಯವೇ ಸಿಗಲ್ಲ. ಇದು ಬಹುತೇಕ ಮಹಿಳೆಯರ ಸ್ಥಿತಿ ಆಗಿದೆ. ಹೀಗಾಗಿಯೇ ಮಹಿಳಾ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಮೂಲಕ ಮಹಿಳೆಯರು ಎದುರಿಸುತ್ತಿರುವ ರೋಗಗಳು ಮತ್ತು ಅವುಗಳನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಪುರುಷರಿಗಿಂತ ಮಹಿಳೆಯರು ಹೆಚ್ಚು ರೋಗ, ಕಾಯಿಲೆಗೆ ತುತ್ತಾಗುತ್ತಾರೆ. ಅದರಲ್ಲೂ ಕೆಲವು ಕಾಯಿಲೆಗಳು ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾಗಿವೆ. ಮಹಿಳೆಯರಲ್ಲಿ ಉಂಟಾಗುವ ಎಂಟು ಸಾಮಾನ್ಯ ಕಾಯಿಲೆಗಳು ಯಾವುವು ಎಂದು ನೋಡೋಣ.

    ಮಹಿಳೆಯರಲ್ಲಿ ಉಂಟಾಗುವ ಎಂಟು ಸಾಮಾನ್ಯ ಕಾಯಿಲೆಗಳು

    ಜೊತೆಗೆ ಮಹಿಳೆಯರು ಕೆಲ ಕಾಯಿಲೆಗಳಿಂದ ಮುಕ್ತಿ ಹೊಂದಲು ಯಾವ ನೈಸರ್ಗಿಕ ವಿಧಾನ ಅನುಸರಿಸಬೇಕು ಎಂಬುದನ್ನು ಹಾಗೂ ತಜ್ಞರ ಸಲಹೆಯನ್ನು ಇಲ್ಲಿ ತಿಳಿಯೋಣ. ಮಹಿಳೆಯರಲ್ಲಿ ಕಂಡು ಬರುವ ಕಾಯಿಲೆಗಳು ಅಂದ್ರೆ ಅದು ಹೃದ್ರೋಗ,

    ಸ್ತನ ಕ್ಯಾನ್ಸರ್, ಅಂಡಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್, ಸ್ತ್ರೀರೋಗ ರೋಗಗಳು, ಗರ್ಭಾವಸ್ಥೆಯ ರೋಗಗಳು, ಸ್ವಯಂ ನಿರೋಧಕ ಕಾಯಿಲೆ, ಖಿನ್ನತೆ ಮತ್ತು ಆತಂಕ ಇತ್ಯಾದಿ ಕಾಯಿಲೆಗಳ ಅಪಾಯ ಹೆಚ್ಚು ಇರುತ್ತದೆ.

    ಇದನ್ನೂ ಓದಿ: ತೈಲ ಮತ್ತು ಮಸಾಲೆ ಪದಾರ್ಥಗಳಿಂದ ಕೂಡಿದ ಭಾರವಾದ ಊಟದ ನಂತರ ಹೀಗೆ ಮಾಡಿದ್ರೆ ಕರುಳಿನ ಸಮಸ್ಯೆ ಕಡಿಮೆಯಾಗುತ್ತೆ!

    ರಕ್ತಹೀನತೆ ಕೊರತೆ ಮತ್ತು ಆಹಾರದ ಯೋಜನೆ

    ರಕ್ತಹೀನತೆ ಕೊರತೆಯು ಮಹಿಳೆಯರಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಪ್ರಕಾರ, ಭಾರತದಲ್ಲಿ ಸುಮಾರು 55 ಪ್ರತಿಶತ ಮಹಿಳೆಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರರ್ಥ ಪ್ರತಿ ಎರಡನೇ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

    ಸ್ಲಿಮ್ ಮತ್ತು ಪೌಷ್ಟಿಕತಜ್ಞೆ  ಮತ್ತು ಡಯೆಟಿಷಿಯನ್ ನಿರ್ದೇಶಕರಾದ ಶಿಖಾ ಅಗರ್ವಾಲ್ ಶರ್ಮಾ, ಈ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಆಹಾರದ ಯೋಜನೆ ಏನಾಗಿರಬೇಕು ಎಂದು ತಿಳಿಸಿದ್ದಾರೆ ನೋಡೋಣ.

    ಹಣ್ಣು ಮತ್ತು ದಾಲ್ಚಿನ್ನಿ ಪುಡಿ

    ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಹಣ್ಣು ಸೇವಿಸಬೇಕು. ದಾಳಿಂಬೆ, ಕಿವಿ, ಪೇರಲ ಅನಾನಸ್ ಸೇರಿದಂತೆ ಕೆಲವು ಹಣ್ಣುಗಳನ್ನು ನೀವು ತಿನ್ನಬಹುದು. ಹಣ್ಣುಗಳಿಗೆ ದಾಲ್ಚಿನ್ನಿ, ಕಪ್ಪು ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ ಸೇವಿಸುವುದು ರಕ್ತಹೀನತೆಯಂತಹ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

    ತರಕಾರಿಗಳು ಮತ್ತು ದಾಲ್ಚಿನ್ನಿ

    ನೀವು ಪ್ರತಿದಿನ ಟೊಮೆಟೊ ಹಾಗೂ ಹಸಿರು ತರಕಾರಿಗಳ ಸಲಾಡ್ ತಿನ್ನಬೇಕು. ಇದಲ್ಲದೆ, ನೀವು ತರಕಾರಿ ಸೂಪ್ ಸಹ ಸೇವನೆ ಮಾಡಬಹುದು. ಯಾವುದೇ ರೂಪದಲ್ಲಿ ತರಕಾರಿಗಳನ್ನು ತಿನ್ನುವ ಮೊದಲು, ಅದರಲ್ಲಿ ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿ.

    ಕುಂಬಳಕಾಯಿ ಬೀಜಗಳು ಮತ್ತು ಒಣದ್ರಾಕ್ಷಿ

    ಕುಂಬಳಕಾಯಿ ಬೀಜಗಳಲ್ಲಿ ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತವೆ. ಇದು ರಕ್ತಹೀನತೆ, ಮುಟ್ಟಿನ ಸಮಸ್ಯೆ ಮತ್ತು ಅಸಮತೋಲನ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. ಇದರ ಜೊತೆ ಒಣದ್ರಾಕ್ಷಿ ಸೇರಿಸಿ ಸೇವನೆ ಮಾಡಬಹುದು. ಇದು ಕಬ್ಬಿಣದ ಉತ್ತಮ ಮೂಲವಾಗಿದೆ. ನೀವು ಅವುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮರುದಿನ ಸೇವಿಸಬಹುದು.

    ರಾಜ್ಮಾ ಮತ್ತು ಲೆಂಟಿಲ್ ಸಲಾಡ್

    ರಾಜ್ಮಾ ಮತ್ತು ಲೆಂಟಿಲ್ ಗಳನ್ನು ಕುದಿಸಿ ಮತ್ತು ಸಲಾಡ್ ಮಾಡಿ. ಅದರಲ್ಲಿ ಟೊಮೆಟೊ, ಈರುಳ್ಳಿ ಮತ್ತು ಸೌತೆಕಾಯಿ ಸೇರಿದಂತೆ ಕೆಲ ತರಕಾರಿ ಸೇರಿಸಿ. ಇದು ಕಬ್ಬಿಣ, ವಿಟಮಿನ್ ಸಿ ಮತ್ತು ಖನಿಜಗಳು ಈ ಸಂಯೋಜನೆ ಒದಗಿಸುತ್ತದೆ. ಇದರ ಸೇವನೆ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡುತ್ತದೆ.

    ಇದನ್ನೂ ಓದಿ: ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಕಾಡುತ್ತವೆ? ಪರಿಹಾರವೇನು?

    ಕೇವಲ 15 ದಿನಗಳಲ್ಲಿ ಲಾಭ

    ತಜ್ಞರ ಪ್ರಕಾರ, ಮೇಲೆ ತಿಳಿಸಲಾದ ಪದಾರ್ಥಗಳ ಸೇವನೆ ನಿಮಗೆ ಕೇವಲ 15 ದಿನಗಳಲ್ಲಿ ಪರಿಣಾಮ ಬೀರುತ್ತದೆ. ಇವುಗಳ ನಿಯಮಿತ ಸೇವನೆ ಆಯಾಸ, ದೌರ್ಬಲ್ಯ ಮತ್ತು ಒತ್ತಡ ಸಮಸ್ಯೆ ನಿಭಾಯಿಸಲು ಸಹಕಾರಿ.
    Published by:renukadariyannavar
    First published: