ಇತ್ತೀಚಿನ ದಿನಗಳಲ್ಲಿ ಹಲವು ಕಾಯಿಲೆಗಳು (Many Disease) ಜನರನ್ನು (People) ಬಾಧಿಸುತ್ತಿವೆ. ಅದರಲ್ಲಿ ರಕ್ತಹೀನತೆ ಸಮಸ್ಯೆ (Anemia Problem) ಸಹ ಒಂದಾಗಿದೆ. ಬಹುತೇಕ ಜನರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಪೋಷಕಾಂಶ ಭರಿತ ಆಹಾರ (Food) ಸೇವನೆ ಮಾಡದೇ ಇರುವುದು, ಜೀರ್ಣಕ್ರಿಯೆ ತೊಂದರೆ, ಆಹಾರ ಕ್ರಮ ಪಾಲನೆ ಮಾಡದೇ ಇರುವುದು ಮುಖ್ಯ ಕಾರಣಗಳಾಗಿವೆ. ಹಲವು ಜನರು ಚಿಕ್ಕ ಕೆಲಸ ಮಾಡಿದ್ರೂ ಸಹ ಬೇಗ ಆಯಾಸ, ಸುಸ್ತು ಅನುಭವಿಸುತ್ತಾರೆ. ಇನ್ನು ಕೆಲವರಿಗೆ ತುಸು ಭಾರದ ವಸ್ತುಗಳನ್ನು ಎತ್ತಲು ಸಾಧ್ಯವಾಗಲ್ಲ. ರಕ್ತಹೀನತೆಯು ಯಾರಲ್ಲಿ ಕಾಡುತ್ತದೆಯೋ ಅವರು ದೌರ್ಬಲ್ಯ ಅನುಭವಿಸುತ್ತಾರೆ.
ರಕ್ತಹೀನತೆ ಸಮಸ್ಯೆ
ತುಂಬಾ ಜನರು ಯುವಕರಾಗಿದ್ದಾಗಲೇ ರಕ್ತಹೀನತೆ ಸಮಸ್ಯೆಯಿಂದ ಆಯಾಸ ಮತ್ತು ದೌರ್ಬಲ್ಯ ಹೊಂದುತ್ತಿದ್ದಾರೆ. ದೇಹದಲ್ಲಿ ರಕ್ತದ ಕೊರತೆಯು ರಕ್ತಹೀನತೆ ಸಮಸ್ಯೆಗೆ ಕಾರಣವಾಗುತ್ತದೆ. ರಕ್ತಹೀನತೆ ಸಮಸ್ಯೆ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.
ದೇಹದಲ್ಲಿ ಸಾಕಷ್ಟು ಕಬ್ಬಿಣಾಂಶ ಇರದೇ ಹೋದಾಗ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಕಬ್ಬಿಣಾಂಶ ದೇಹಕ್ಕೆ ಬೇಕಾದ ತುಂಬಾ ಅಗತ್ಯ ಪೋಷಕಾಂಶ ಆಗಿದೆ. ಕಬ್ಬಿಣಾಂಶ ಇರುವ ಆಹಾರ ಮತ್ತು ಪಾನೀಯ ಸೇವನೆ ಮೂಲಕ ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡಬಹುದು. ಕಬ್ಬಿಣಾಂಶವು ದೇಹದಲ್ಲಿ ರಕ್ತ ಮಾಡಲು ಕೆಲಸ ಮಾಡುತ್ತದೆ. ಕಬ್ಬಿಣದ ಕೊರತೆಯಿದ್ದರೆ ರಕ್ತಹೀನತೆ ಸಮಸ್ಯೆ ಉಂಟು ಮಾಡುತ್ತದೆ.
ಇದು ರಕ್ತದಲ್ಲಿ ಆರೋಗ್ಯಕರ ಕೆಂಪು ರಕ್ತ ಕಣಗಳ ಕೊರತೆ ಉಂಟು ಮಾಡುತ್ತದೆ. ಕೆಂಪು ರಕ್ತ ಕಣಗಳು ದೇಹದ ಅಂಗಾಂಶಗಳಿಗೆ ಆಮ್ಲಜನಕ ಸಾಗಿಸುತ್ತದೆ. ಸಾಕಷ್ಟು ಕಬ್ಬಿಣಂಶ ಇಲ್ಲದೆ ಹೋದರೆ ದೇಹದಲ್ಲಿ ಕೆಂಪು ರಕ್ತ ಕಣ ಉತ್ಪಾದನೆ ಆಗಲ್ಲ.
ನೀವು ರಕ್ತಹೀನತೆ ಸಮಸ್ಯೆ ಹೊಂದಿದ್ದರೆ ಆಯಾಸ, ದೌರ್ಬಲ್ಯ ಮತ್ತು ಉಸಿರಾಟದ ತೊಂದರೆ ಸೇರಿ ಹಲವು ಸಮಸ್ಯೆ ಕಾಡುತ್ತದೆ.
ಕಬ್ಬಿಣದ ಕೊರತೆ ನಿವಾರಣೆಗೆ ಏನು ಮಾಡ್ಬೇಕು?
ರಕ್ತಹೀನತೆ ಸಮಸ್ಯೆ ನಿವಾರಿಸಲು ಕಬ್ಬಿಣದಂಶವಿರುವ ಹೆಚ್ಚು ಆಹಾರ ಪದಾರ್ಥ ಸೇವನೆ ಮಾಡ್ಬೇಕು. ಆಯುರ್ವೇದ ವೈದ್ಯೆ ರೇಖಾ ರಾಧಾಮಣಿ ಹೇಳುವ ಪ್ರಕಾರ, ರಕ್ತಹೀನತೆ ಸಮಸ್ಯೆ ನಿವಾರಣೆಗೆ ಆಯುರ್ವೇದವು ಕೆಲವು ಪದಾರ್ಥಗಳ ಸೇವನೆ ಮಾಡುವಂತೆ ಸೂಚಿಸುತ್ತದೆ.
ಕಬ್ಬಿಣಾಂಶವಿರುವ ಈ ಆಹಾರ ಪದಾರ್ಥಗಳ ಸೇವನೆ ದೇಹದಲ್ಲಿ ರಕ್ತ ಮತ್ತು ರಕ್ತ ಕಣಗಳನ್ನು ತಯಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞೆ ಹೇಳಿದ್ದಾರೆ.
ಒಣ ಶುಂಠಿ ಆಹಾರದಲ್ಲಿ ಸೇವಿಸಿ
ರಕ್ತಹೀನತೆ ಮತ್ತು ಕಬ್ಬಿಣದಂಶ ಕೊರತೆ ನಿವಾರಣೆ ಮಾಡಲು ಒಣ ಶುಂಠಿ ಪರಿಣಾಮಕಾರಿ ಎಂದು ಹೇಳಿದ್ದಾರೆ. ಒಣ ಶುಂಠಿಯು ಕಬ್ಬಿಣದಂಶ ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಹಾಗೂ ರಕ್ತಹೀನತೆ ನಿವಾರಣೆಗೆ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಒಣ ಶುಂಠಿ ಪುಡಿಯನ್ನು ಆಹಾರ ಹಾಗೂ ಚಹಾದಲ್ಲಿ ಬಳಸಿ.
ತುಪ್ಪ ಮತ್ತು ಆಮ್ಲಾವನ್ನು ಆಹಾರದಲ್ಲಿ ಸೇರಿಸಿ
ಕಬ್ಬಿಣದ ಕೊರತೆ ನಿವಾರಣೆ ಮಾಡಲು ದೇಹದಲ್ಲಿ ರಕ್ತ ಉತ್ಪತ್ತಿ ಆಗಲು ಆಮ್ಲಾ ಮತ್ತು ತುಪ್ಪ ಸೇವನೆ ಮಾಡಿ. ಊಟಕ್ಕೆ ಮೊದಲು ಒಂದು ಚಮಚ ಆಮ್ಲಾ ಪುಡಿಯನ್ನು ಒಂದು ಚಮಚ ತುಪ್ಪದ ಜೊತೆ ಸೇರಿಸಿ ತಿನ್ನುವಂತೆ ವೈದ್ಯರು ಹೇಳ್ತಾರೆ.
ಹೊಟ್ಟೆ ಕೆರಳಿಸುವ ಆಹಾರ ಸೇವಿಸಬೇಡಿ
ಹೊಟ್ಟೆ ಕೆರಳಿಸುವ ಅಥವಾ ಜಿಗುಟಾದ ಸ್ರವಿಸುವಿಕೆ ಹೆಚ್ಚಿಸುವ ಆಹಾರ ಸೇವಿಸಬಾರದು ಅಂತಾರೆ ತಜ್ಞರು. ಇದನ್ನು ಆಯುರ್ವೇದದಲ್ಲಿ ವಿಧಿ ಎನ್ನುತ್ತಾರೆ. ಹೊಟ್ಟೆ ಕೆರಳಿಸುವ ಆಹಾರದಲ್ಲಿ ಆಪಲ್ ಸೈಡರ್ ವಿನೆಗರ್, ಕಾಫಿ, ಟೊಮ್ಯಾಟೊ ಮತ್ತು ಆಲೂಗಡ್ಡೆ ಸೇರಿದೆ.
ಬೆಲ್ಲ ಮತ್ತು ಒಣದ್ರಾಕ್ಷಿ ಸಿರಪ್ ಆಹಾರದಲ್ಲಿ ಸೇರಿಸಿ
ರಕ್ತಹೀನತೆ ನಿವಾರಣೆ ಮಾಡಲು ದ್ರಾಕ್ಷರಿಷ್ಟ ಸಿರಪ್ ಹಾಗೂ ಬೆಲ್ಲ ಪರಿಣಾಮಕಾರಿ ಆಗಿದೆ. ರಕ್ತಹೀನತೆ ಗುಣಪಡಿಸಲು ನೀವು ಊಟದ ನಂತರ 15 ಮಿಲಿ ದ್ರಾಕ್ಷರಿಷ್ಟ ಸೇವನೆ ಮಾಡಿ. ಬೆಲ್ಲ ಮತ್ತು ಒಣದ್ರಾಕ್ಷಿ ಅನೇಕ ಆಯುರ್ವೇದ ಪದಾರ್ಥಗಳಿಂದ ಇದನ್ನು ತಯಾರಿಸುತ್ತಾರೆ.
ಇದನ್ನೂ ಓದಿ: ತೂಕ ಇಳಿಸುವ ವಿಚಾರದಲ್ಲಿ ಬ್ರೇಕ್ಫಾಸ್ಟ್ ಬಹಳ ಇಂಪಾರ್ಟೆಂಟ್, ಹೀಗಿರಲಿ ಬೆಳಗ್ಗಿನ ಉಪಹಾರ
ಕೆಂಪು ದ್ರಾಕ್ಷಿ ಮತ್ತು ಕಪ್ಪು ಒಣದ್ರಾಕ್ಷಿ ಸೇವನೆ ಮಾಡಿ
ಚಳಿಗಾಲದಲ್ಲಿ ಹೆಚ್ಚು ಸಿಗುವ ಕೆಂಪು ದ್ರಾಕ್ಷಿ ಸೇವನೆ ಮಾಡಿ. ಇದು ಹೆಚ್ಚು ಸೇವಿಸಿದ್ರೆ ಕಪ್ಪು ಒಣದ್ರಾಕ್ಷಿ ಸಾಕಷ್ಟು ಪ್ರಮಾಣದ ಕಬ್ಬಿಣದಂಶವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ