Anar Kulfi: ಎಂಥಾ ಟೇಸ್ಟ್​ ಮಾರಾಯ್ರೆ ಈ 'ಅನಾರ್ ಕುಲ್ಫಿ'.. ಹೊಸ ರುಚಿಗೆ ನೆಟಿಜನ್‌ ಫಿದಾ..!

ಅನಾರ್ ಕುಲ್ಫಿಯನ್ನ ಜೈ ವೀರ್ ಚಾಟ್ ಸೆಂಟರಲ್ಲಿ ಹೇಗೆ ಮಾಡ್ತಾರೆ ಅಂತ ಫುಡ್ ಬ್ಲಾಗರ್ ಹಾರ್ದಿಕ್ ಮಲ್ಲಿಕ್ ವೀಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅನಾರ್ ಕುಲ್ಫಿ

ಅನಾರ್ ಕುಲ್ಫಿ

  • Share this:
ಆಹಾರದ ಟ್ರೆಂಡ್ ಬದಲಾಗಿದೆ. ಜನ ಒಂದೇ ರೀತಿಯ ರುಚಿ ತಿನ್ನೋ ಮನಸ್ಸೇ ಮಾಡಲ್ಲ. ಹೊಸ ರುಚಿ, ಹೊಸ ಪದಾರ್ಥ(Ingredient) , ಹೊಸ ಕಾಂಬೋಗೆ ಬೇಗ ಅಟ್ರಾಕ್ಟ್ ಆಗ್ತಿದ್ದಾರೆ. ನಿಮಗೂ ಹೀಗೇ ಆಗುತ್ತಲ್ವಾ..? ನೀವು  ಆಹಾರ ಪ್ರಿಯರಾದರೆ ನಿಮಗೆ ಗುಡ್ ನ್ಯೂಸ್. ಅನಾರ್ ಕುಲ್ಫಿ(Anar Kulfi) ಅನ್ನೋ ಬೆಸ್ಟ್ ಕಾಂಬೋ ಮೆನುಗೆ ಸೇರಿಕೊಂಡಿದೆ. ಈಗ್ಲೇ ಹೋಗಿ ಟ್ರೈ ಮಾಡಿ ರುಚಿ ಹೇಗಿದೆ ತಿಳ್ಕೋಬಿಡಿ. ಈ ಹೊಸ ಟೇಸ್ಟ್ ಅನಾರ್ ಕುಲ್ಫಿ ಬಗ್ಗೆ ಫುಡ್ ಬ್ಲಾಗರ್(Food blogger) ಹಾರ್ದಿಕ್ ಮಲ್ಲಿಕ್ (Hardik Mallik) ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಜೈ ವೀರ್ ಚಾಟ್ ಸೆಂಟರ್‌ನಲ್ಲಿ ಲಭ್ಯ

ಜನ ಬೀದಿ ಬದಿಯ ಚಾಟ್ಸ್‌ಗೆ ಬೇಗ ಮನಸೋಗ್ತಾರೆ. ವ್ಯಾಪಾರಿಗಳು ಕೂಡ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ತಿನಿಸು ಟ್ರೈ ಮಾಡ್ತಿರ್ತಾರೆ. ಈಗೆಲ್ಲ ತಿನ್ನೋದರ ಬಗ್ಗೆ ಕ್ರೇಜ್ ಜಾಸ್ತಿ ಆಗಿದೆ. ಹೊಸ ಐಟಂ ಟೇಸ್ಟ್ ಮಾಡಲು ಜನ ಕಾಯ್ತಿರ್ತಾರೆ. ನಮ್ಮ ಫೋನ್ ಓಪನ್ ಮಾಡಿದ್ರೆ ಸಾಕು ಫುಡ್ ಐಟಂ ಜಾಹೀರಾತುಗಳು ಬರ್ತಾನೆ ಇರ್ತವೆ. ಅದನ್ನ ನೋಡೀನೇ ನಾವೆಲ್ಲ ಎಷ್ಟೋ ರುಚಿನಾ ಟೇಸ್ಟ್ ಮಾಡಿರ್ತೀವಿ. ಇಲ್ಲಿ ಕೂಡ ಫುಡ್ ಬ್ಲಾಗರ್ ಹಾರ್ದಿಕ್ ಮಲ್ಲಿಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡೆಲ್ಲಿಯ ರೋಹಿಣಿಯಲ್ಲಿರುವ ಜೈ ವೀರ್ ಚಾಟ್ ಸೆಂಟರ್‌ನಲ್ಲಿ ರೆಡಿ ಆಗಿರುವ ಅನಾರ್ ಕುಲ್ಫಿ ಬಗ್ಗೆ ವೀಡಿಯೋ ಒಂದನ್ನು ಶೇರ್ ಮಾಡಿದ್ದು , ನೀವು ಇದನ್ನ ಯಾವತ್ತಾದ್ರೂ ಟೇಸ್ಟ್ ಮಾಡಿದ್ದೀರಾ ? ಅಂತ ಟ್ಯಾಗ್ ಲೈನ್ ನೀಡಿದ್ದಾರೆ.

ಇದನ್ನೂ ಓದಿ: Trending| 1 ರೂ. ಕುಲ್ಫಿ ಐಸ್‌ಕ್ರೀಮ್ ವ್ಯಾಪಾರವನ್ನು 6 ಕೋಟಿ ವ್ಯವಹಾರವನ್ನಾಗಿ ಮಾರ್ಪಡಿಸಿದ ಬಿಸ್‌ನೆಸ್ ಯಶೋಗಾಥೆ

ಹೊಸ ರೀತಿಯ ಕುಲ್ಫಿ

ನಾವು, ನೀವೆಲ್ಲ ಹೋಟೆಲ್, ರೆಸ್ಟೋರೆಂಟ್ ಎಲ್ಲಿಗಾದ್ರೂ ಹೋಗಿದ್ರೆ ಅಲ್ಲಿ ಊಟ ಮಾಡೋದರ ಜೊತೆಗೆ ನಮ್ಮ ಮೆನುವಿನಲ್ಲಿ ಕೊನೆಯದಾಗಿ ಒಂದು ಸಿಹಿ ತಿನಿಸು ಇದ್ದೇ ಇರುತ್ತೆ. ಅದ್ರಲ್ಲೂ ಐಸ್‌ಕ್ರೀಮ್‌ ಐಟಂ ಅಂತೂ ಪಕ್ಕ ಇರುತ್ತೆ. ಅದ್ರಲ್ಲಿ ಕುಲ್ಫಿ, ಗಡ್‌ಬಡ್‌, ಕೋನ್ ಅಂತೆಲ್ಲ ಬೇರೆ ಬೇರೆ ವೆರೈಟಿ ಇರುತ್ತೆ. ನಾವೆಲ್ಲ ಕುಲ್ಫೀನ ಟೇಸ್ಟ್ ಮಾಡಿರ್ತೀವಿ ಆದ್ರೆ ಜೈ ವೀರ್ ಚಾಟ್ ಸೆಂಟರಲ್ಲಿ ಹೊಸ ರೀತಿಯ ಕುಲ್ಫಿ ಬಂದಿದೆ ಅಂತೆ ಬನ್ನಿ ನೋಡಣ.

ವಿಡಿಯೋ ನೋಡಿ:
ಫುಡ್ ಬ್ಲಾಗರ್ ವಿಡಿಯೋ ಶೇರ್

ಅನಾರ್ ಕುಲ್ಫಿಯನ್ನ ಜೈ ವೀರ್ ಚಾಟ್ ಸೆಂಟರಲ್ಲಿ ಹೇಗೆ ಮಾಡ್ತಾರೆ ಅಂತ ಫುಡ್ ಬ್ಲಾಗರ್ ಹಾರ್ದಿಕ್ ಮಲ್ಲಿಕ್ ವೀಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿ ದಾಳಿಂಬೆ ಹಣ್ಣನ್ನು ಡೀಪ್ ಫ್ರೀಜ್‌ನಲ್ಲಿಟ್ಟು ತದನಂತರ ಮೇಲ್ಬಾಗದ ಸಿಪ್ಪೆ ಮಾತ್ರ ಕತ್ತರಿಸಿ ಬೀಜವಿಲ್ಲದೆ ದಾಳಿಂಬೆ ಹಣ್ಣಿನ ತಿರುಳನ್ನು ಮಾತ್ರ ತೆಗೆದು ಮತ್ತೆ ಅದೇ ದಾಳಿಂಬೆ ಹಣ್ಣಲ್ಲಿ ಕುಲ್ಫಿ ಜತೆ ಸ್ಟಫ್ ಮಾಡಿ ಡೀಪ್ ಫ್ರೀಜ್‌ನಲ್ಲಿ ಇಟ್ಟು ಕೊಡುತ್ತಾರೆ. ಇದನ್ನ ಟೇಸ್ಟ್ ಮಾಡಿದ ಮಲ್ಲಿಕ್ ಇದರ ರುಚಿ ಅದ್ಭುತವಾಗಿದೆ ನೀವು ಇದನ್ನು ಟ್ರೈ ಮಾಡಿ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್.. ವೈರಲ್ ವಿಡಿಯೋ ಅಸಲಿಯತ್ತೇನು..?

2,50,000 ಲೈಕ್ಸ್

ಫುಡ್ ಬ್ಲಾಗರ್ ಹಾರ್ದಿಕ್ ಮಲ್ಲಿಕ್ ಹಾಕಿರುವ ವಿಡಿಯೋಗೆ ಅದ್ಭುತ ರೆಸ್ಪಾನ್ಸ್ ಬಂದಿದ್ದು ಈ ವಿಡಿಯೋ ಈಗಾಗ್ಲೇ ಸುಮಾರು 2,50,000 ಲೈಕ್ಸ್ ಪಡೆದುಕೊಂಡಿದೆ. ಕಾಮೆಂಟ್‌ಗಳ ಸುರಿಮಳೆ ಹರಿದು ಬಂದಿದೆ. ನೋಡೋಕೆ ಈ ಐಟಂ ತುಂಬಾ ಚೆನ್ನಾಗಿದೆ, ದಿಸ್ ಐಸ್ ಸೋ ಗುಡ್, ಯಮ್ಮಿ ಅಂತೆಲ್ಲ ಹಾರ್ದಿಕ್ ಮಲ್ಲಿಕ್ ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ ಈಗ್ಲೇ ಜೈ ವೀರ್ ಚಾಟ್ ಸೆಂಟರ್ಗೆ ಹೋಗಿ ಅನಾರ್ ಕುಲ್ಫಿಯನ್ನು ಟ್ರೈ ಮಾಡ್ಬಿಡಿ.
Published by:vanithasanjevani vanithasanjevani
First published: