Breast Feeding: ಹಾಲುಣಿಸುವ ತಾಯಿಯ ಗೊಂದಲಗಳಿಗೆ ತಜ್ಞರ ಉತ್ತರ

ತಾಯಿಯಾದ ಬಳಿಕ ಮಗುವಿನ ಆರೈಕೆ ಬಗ್ಗೆ ಕುಟುಂಬದೊಂದಿಗೆ ಹಂಚಿಕೊಳ್ಳಲಾಗದಷ್ಟೂ ಗೊಂದಲ, ಅನುಮಾನ, ಪ್ರಶ್ನೆಗಳು ಅವಳಲ್ಲಿ ಮನೆ ಮಾಡಿರುತ್ತದೆ. ಹೊಸದಾಗಿ ತಾಯ್ತನದ ಸಿಹಿ ಅನುಭವಿಸುವ ಪ್ರತಿಯೊಬ್ಬ ಹೆಣ್ಣಿಗೂ ಕಾಡುವ ಒಂದಷ್ಟೂ ಗೊಂದಲಗಳಿಗೆ ತಜ್ಞರು ಉತ್ತರ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಾಯ್ತನ (Mother) ಎನ್ನುವುದು ಪ್ರತಿ ಹೆಣ್ಣಿಗೂ ಸುಂದರ ಪಯಣವೇ ಸರಿ. ಅದರಲ್ಲೂ ಹೊಸದಾಗಿ ತಾಯಿಯಾಗುವ ಸ್ತ್ರೀ, ತನ್ನ ಮಗುವಿನ ಬಗ್ಗೆ ಸಾಕಷ್ಟು ಕನಸುಗಳನ್ನು ಹೊತ್ತಿರುತ್ತಾಳೆ. ಜೊತೆಗೆ ಅಷ್ಟೇ ಗೊಂದಲವೂ ಅವಳಲ್ಲಿ ತುಂಬಿರುತ್ತದೆ. ತಾಯಿಯಾದ ಬಳಿಕ ಮಗುವಿನ ಆರೈಕೆ (Child Care) ಬಗ್ಗೆ ಕುಟುಂಬದೊಂದಿಗೆ (Family) ಹಂಚಿಕೊಳ್ಳಲಾಗದಷ್ಟೂ ಗೊಂದಲ, ಅನುಮಾನ, ಪ್ರಶ್ನೆಗಳು ಅವಳಲ್ಲಿ ಮನೆ ಮಾಡಿರುತ್ತದೆ. ಹೊಸದಾಗಿ ತಾಯ್ತನದ ಸಿಹಿ ಅನುಭವಿಸುವ ಪ್ರತಿಯೊಬ್ಬ ಹೆಣ್ಣಿಗೂ ಕಾಡುವ ಒಂದಷ್ಟೂ ಗೊಂದಲಗಳ ಬಗ್ಗೆ ಫೊರ್ಟಿಸ್‌ ಆಸ್ಪತ್ರೆಯ (Fortis Hospital) ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರ್ತಿ ಡಾ. ಗಾಯತ್ರಿ ಡಿ. ಕಾಮತ್‌ ಗೊಂದಲಗಳಿಗೆ ಉತ್ತರ ನೀಡಿದ್ದಾರೆ. 

ಮಗುವಾದ ಮೇಲೆ ಯಾವ ರೀತಿ ಆಹಾರ ಸೇವಿಸಬೇಕು?

ಗರ್ಭಿಣಿಯಾದ ಬಳಿಕ ಮತ್ತು ಹೆರಿಯ ಬಳಿಕ  ಮಹಿಳೆ ದಿನಕ್ಕೆ 300 ರಿಂದ 350 ಕ್ಯಾಲೋರಿ ಹೆಚ್ಚುವರಿ ಆಹಾರ ಸೇವಿಸಬೇಕು. ಮುಖ್ಯವಾಗಿ ಹಣ್ಣು, ತರಕಾರಿ, ಬೀಜಗಳು, ಮೊಸರು ಮತ್ತು ಮಾಂಸದ ಆಹಾರ ಸೇವನೆ ಮಾಡಬಹುದು. ಆದರೆ,ಇದರಲ್ಲೂ ನಿಯಂತ್ರಣವಿರಲಿ. ಅತಿಯಾದ ಕ್ಯಾಲೋರಿ ಹಾಗೂ ಕಾರ್ಬೋಹೈಡ್ರೇಟ್‌ಗಳು ಸಹ ನಿಮ್ಮ ತೂಕ ಹೆಚ್ಚಾಗಲು ಕಾರಣವಾಗಬಹುದು.ಮಸಾಲೆಯುಕ್ತ, ಕರಿದ ಆಹಾರ ಸೇವನೆ ಮೇಲೆ ನಿಯಂತ್ರಣವಿರಲಿ. ಸಂಸ್ಕರಿಸದ ಚೀಸ್, ಹಳಸಿದ ಆಹಾರ, ಪ್ರಿಜವೇರಿವ್‌ ಆಹಾರಗಳ ಸೇವನೆಯೂ ಸಹ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರ ಮೇಲೂ ನಿಯಂತ್ರಣವಿರಲಿ. ಇನ್ನು, ಹಿಂದಿನ ಕಾಲದಲ್ಲಿ ಹಿರಿಯರು ತುಪ್ಪದ ಬಿಸಿ ಅನ್ನವನ್ನು ಮಾತ್ರ ನೀಡುತ್ತಿದ್ದರು. ಇದು ಸಹ ಅತಿಯಾಗುವುದು ಬೇಡ. ಇದರಿಂದಲೂ ಹಾಲು ಉತ್ಪತ್ತಿ ಕಡಿಮೆಯಾಗಬಹುದು.

ಇದನ್ನೂ ಓದಿ: Breastfeeding Infection: ಹಾಲುಣಿಸುವ ತಾಯಂದಿರು ಈ ಸೋಂಕಿನ ಬಗ್ಗೆ ತಿಳಿದುಕೊಳ್ಳಲೇಬೇಕು, ಇಲ್ಲದಿದ್ದರೆ ಅಪಾಯ ಗ್ಯಾರಂಟಿ!

ಮಗುವಿಗೆ ಸಾಕಾಗುವಷ್ಟು ಹಾಲು ಕುಡಿದಿದೆ ಎಂದು ತಿಳಿಯೋದು ಹೇಗೆ?

ಸಾಮಾನ್ಯವಾಗಿ ಈ ಅನುಮಾನ ಪ್ರತಿ ತಾಯಿಯನ್ನ ಕಾಡುತ್ತದೆ. ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮಗು ಹಾಲು ಕುಡಿದ ನಂತರ ಕನಿಷ್ಠ 2 ಗಂಟೆ ನಿದ್ರೆ ಮಾಡುವುದು ಹಾಗೂ ದಿನಕ್ಕೆ 6 ಬಾರಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ. ನೀವು ನಿಮ್ಮ ಮಗುವಿಗೆ ಸಾಕಾಗುವಷ್ಟು ಹಾಲು ಕುಡಿಸುತ್ತಿದ್ದೀರಿ ಎಂದರ್ಥ. ಕೆಲವೊಮ್ಮೆ ತಾಯಂದಿರು ತಮ್ಮ ಎದೆ ಹಾಲು ತೊಟ್ಟಿಕ್ಕುತ್ತಿಲ್ಲ, ಹೀಗಾಗಿ ಹಾಲು ಉತ್ಪಾದನೆ ಕಡಿಮೆಯಾಗಿದೆ ಎಂದು ಭಾವಿಸುತ್ತಾರೆ. ಇದು ತಪ್ಪು. ಹಾಲು ಎದೆಯಿಂದ ತೊಟ್ಟಿಕ್ಕಿದರೆ ಮಾತ್ರ ಉತ್ಪಾದನೆ ಸರಿಯಾಗಿ ಆಗುತ್ತಿದೆ ಎನ್ನುವುದು ಸುಳ್ಳು. ಮಗುವಿನ ಬೆಳವಣಿಗೆ ನಿಮ್ಮ ಎದೆ ಹಾಲು ಉತ್ಪತ್ತಿ ಬಗ್ಗೆ ತೋರುತ್ತದೆ.

ಹಾಲು ಕುಡಿಯುತ್ತಿದ್ದರೂ ಮಗು ತೂಕ ಕಳೆದುಕೊಳ್ಳುತ್ತಿದ್ದರೆ ಏನರ್ಥ?

ಸಾಮಾನ್ಯವಾಗಿ ಮಗು ಜನಿಸಿದ ಮೊದಲ 10 ದಿನಗಳಲ್ಲಿ ದೇಹದ ಶೇ. 10ರಷ್ಟು ತೂಕ ಕಳೆದುಕೊಳ್ಳುತ್ತದೆ. ಇದು ಸರ್ವೇಸಾಮಾನ್ಯ. ಇದಕ್ಕೆ ಕಾರಣ, ಮಗುವಿನಲ್ಲಿನ ನೀರಿನ ಹರಿವು. ಹಾಗೆಂದ ಮಾತ್ರಕ್ಕೆ 6 ತಿಂಗಳ ಒಳಗಿನ ಶಿಶುವಿಗೆ ತೂಕ ಹೆಚ್ಚಿಸಲು ಎದೆ ಹಾಲಿನ ಜೊತೆ ಬೇರೆ ಯಾವ ಆಹಾರವನ್ನೂ ನೀಡಬಾರದು. ಮಗುವಿಗೆ 6 ತಿಂಗಳ ಕಾಲ ಎದೆ ಹಾಲು ಬಿಟ್ಟು ಬೇರಾವ ಆಹಾರವನ್ನು ನೀಡಬಾರದು.

ಇಲ್ಲವಾದರೆ, ಎದೆ ಹಾಲನ್ನು ಹಿಂಡಿ ಅದನ್ನು ಚಮಚದ ಮೂಲಕ ಮಗುವಿಗೆ ಕುಡಿಸುವುದು ಅಭ್ಯಸಿ. ಇದು ಮಗು ಹಾಲು ಎಷ್ಟು ಪ್ರಮಾಣದಲ್ಲಿ ಕುಡಿಯುತ್ತಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬಹುದು. ಒಂದು ವೇಳೆ ಮಗು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾಗಿ ತೂಕ ಕಳೆದುಕೊಳ್ಳುತ್ತಿದ್ದರೆ ಮಗುವು ನಿರ್ಜಲೀಕರಣದ ಯಾವುದೋ ಸಮಸ್ಯೆ ಎದುರಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ತಾಯಿಯಿ ಶಿಶುವೈದ್ಯರನ್ನು ಕಾಣುವುದು ಸೂಕ್ತ.\

ಇದನ್ನೂ ಓದಿ: Breastfeeding: ಎದೆಹಾಲು ನೀಡಿದ್ರೆ ಮಗುವಿಗೆ ಕ್ಯಾನ್ಸರ್​ನಿಂದ ರಕ್ಷಣೆ ಸಿಗುತ್ತೆ, ಹಾಲೂಡಿಸುವ ಸರಿಯಾದ ವಿಧಾನ ಏನು? ವೈದ್ಯರು ತಿಳಿಸಿದ್ದಾರೆ..

ಹಾಲುಣಿಸಿದ ನಂತರವೂ ಮಗು ಅಳುತ್ತಾ?

ಈ ಬಗ್ಗೆ ಎಲ್ಲಾ ತಾಯಂದಿರೂ ತಪ್ಪು ಕಲ್ಪನೆ ಹೊಂದಿರುತ್ತಾರೆ. ಮಗು ಕೇವಲ ಹಸಿವಿದ್ದಾಗ ಮಾತ್ರ ಅಳುವುದಿಲ್ಲ. ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್‌ ಚಲನದಿಂದಲೂ ಮಗುವಿಗೆ ಕಿರಿಕಿರಿ ಉಂಟಾಗಿ ಅಳಬಹುದು. ಇನ್ನೂ ಕೆಲವೊಮ್ಮೆ ಮಗು ತಾನು ಒಬ್ಬಂಟಿಯಾಗಿರುವ ಭಯ ಕಾಡುತ್ತದೆ. ಈ ವೇಳೆ ತಾಯಿ ಅಥವಾ ಕುಟುಂಬಸ್ಥರು ಪಕ್ಕದಲ್ಲಿಯೇ ಇರುವುದನ್ನು ಮಗುವಿಗೆ ಗೊತ್ತು ಮಾಡಿಸುವುದು ಒಳ್ಳೆಯದು. ಮಗುವಿಗೆ ಹಸಿವಾಗಿದೆ ಎನ್ನುವುದನ್ನು ತಿಳಿಯಲು, ಮಗುವನ್ನು ಎದೆ ಮೇಲಿರಿಸಿದಾಗ ಮಗು ತಂತಾನೆ ಹಾಲು ಕುಡಿಯಲು ಪ್ರಾರಂಭಿಸುವ ಸನ್ನೆ ನೀಡುತ್ತದೆ. ಜೊತೆಗೆ ತಾಯಿಯು ಎರಡು ಗಂಟೆಗೊಮ್ಮೆ ಹಾಲುಣಿಸುತ್ತಿದ್ದರೆ, ಮಗುವಿಗೆ ಹಸಿವಾಗುವುದನ್ನು ತಡೆಯಬಹುದು.

ಬಾಣಂತಿಯರು ಬೇಸಿಗೆಯಲ್ಲೂ ಸ್ವೆಟರ್‌ ಧರಿಸಲೇ ಬೇಕೆ?

ಹಿಂದಿನ ಕಾಲದಿಂದಲೂ ಕುಟುಂಬಸ್ಥರು ಒತ್ತಾಯಪೂರ್ವಕವಾಗಿಯಾದರೂ ಬಾಣಂತಿಯರನ್ನು ಸಂಪೂರ್ಣ ಬೆಚ್ಚಗಿಡಲು ನೋಡುತ್ತಾರೆ. ಇದರಿಂದ ತಾಯಿ ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆ ಇದೆ. ಬಾಣಂತಿಯರು ಹಾಲುಣಿಸುವ ವೇಳೆ ಹೆಚ್ಚು ನೀರು ಕುಡಿಯುವ ಮೂಲಕ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದನ್ನು ತಪ್ಪಿಸಬೇಕು. ಇಲ್ಲವಾದರೆ, ಕಿಡ್ನಿಯಲ್ಲಿ ಕಲ್ಲು, ಮಲಬದ್ಧತೆಯಂತ ಸಮಸ್ಯೆಗೆ ಒಳಗಾಗಬಹುದು.
Published by:Pavana HS
First published: