Health Tips: ಹೆಸರಿಗೆ ತಕ್ಕಂತೆ ಅಮೃತವೆಂಬ ಅಮೃತಬಳ್ಳಿಯಲ್ಲಿದೆ ರೋಗ ನಿರೋಧಕ ಗುಣ

Amruthaballi: ನಮ್ಮನ್ನ ಕಾಡುವ ಡೆಂಘಿ, ಚಿಕನ್ ಗುನ್ಯಾ ಸೇರಿ ಎಲ್ಲಾ ಬಗೆಯ ವೈರಲ್ ಫೀವರ್ ನಿವಾರಣೆಗೆ ಅಮೃತಬಳ್ಳಿ ಮದ್ದಾಗಿದೆ. ಅಮೃತಬಳ್ಳಿ ತಾಮ್ರ, ಕಬ್ಬಿಣ, ರಂಜಕ, ಸತು, ಕ್ಯಾಲ್ಸಿಯಂ, ಮೆಗ್ನೀಷಿಯಮ್ ಮತ್ತು ಅನೇಕ ಆಂಟಿ-ಆಕ್ಸಿಡೆಂಟ್, ಉರಿಯೂತ, ಕ್ಯಾನ್ಸರ್ ವಿರೋಧಿ ಗುಣಗಳಿಂದಲೂ ಕೂಡಿದೆ

 ಅಮೃತಬಳ್ಳಿ

ಅಮೃತಬಳ್ಳಿ

  • Share this:
    Gilory  plant health Benefits: ಒಂದೆಡೆ ಕೊರೋನಾ(Corona) ವೈರಸ್(Virus) ನ ವಿವಿಧ ಪ್ರಕಾರಗಳು ಇಡೀ ದೇಶದಲ್ಲಿ(Country) ಮತ್ತೆ ಹರಡುತ್ತಿದೆ. ಮತ್ತೊಂದೆಡೆ, ಜನರು ಮನೆಯಲ್ಲಿಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ. ರೋಗ ನಿರೋಧಕ(Immunity) ಶಕ್ತಿ ಹೆಚ್ಚಿಸಲು ಅಶ್ವಗಂಧ(Ashwagandha), ಅರಿಶಿನ, ಅಮೃತ ಬಳ್ಳಿಯಂತಹ ನೈಸರ್ಗಿಕ ಔಷಧಿಗಳನ್ನು(Medicine) ಬಳಸಲು ಆಯುಷ್ ಸಚಿವಾಲಯ ಶಿಫಾರಸು ಮಾಡಿದೆ.ಅಮೃತಬಳ್ಳಿಯು ಅಮೃತಕ್ಕೆ ಸಮಾನವಾದ ಪದಾರ್ಥ. ದಿವ್ಯ ಔಷಧೀಯ ಗುಣಗಳನ್ನು ಹೊಂದಿರುವ ಅಮೃತಬಳ್ಳಿಯ ಸದ್ಬಳಕೆಯ ಪರಿಕಲ್ಪನೆ ನಮ್ಮಲ್ಲಿ ಮೂಡಬೇಕು. ಜ್ವರ ಕಡಿಮೆ ಮಾಡುವಂತಹ ಅತ್ಯಂತ ಪ್ರಭಾವಿ ಗುಣಗಳನ್ನು ಅಮೃತ ಬಳ್ಳಿ ಹೊಂದಿದೆ.ಅಮೃತಬಳ್ಳಿಯ ಎಲೆ, ಕಾಂಡ, ಬೇರು ಎಲ್ಲವೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಎಲೆಯನ್ನು ನೀರಿನಲ್ಲಿ ಬೇಯಿಸಿ ಕುಡಿದರೆ ದೇಹಾರೋಗ್ಯಕ್ಕೆ ಬಹಳ ಉತ್ತಮ. ನೀರಿನಲ್ಲಿ ಬೇಯಿಸಿ ಜ್ಯೂಸ್ (Juice) ರೀತಿ ಮಾಡಿ ಕುಡಿಯಬಹುದು. ಮಾಡೋದು ತುಂಬಾ ಸಿಂಪಲ್. ಇದು  ಇಮ್ಯೂನಿಟಿ ಬೂಸ್ಟರ್ ಕೂಡಾ. ಕೆಲವರು ಇದರ ಎಲೆಯನ್ನು ಬೇರೆ ಹಣ್ಣಿನ ಜೊತೆ ಸೇರಿಸಿ ತಿನ್ನುತ್ತಾರೆ. 

    ಹೆಸರಿನಂತೆ ಅಮೃತದ ಗುಣ ಹೊಂದಿದೆ ಅಮೃತಬಳ್ಳಿ

    ಇದರಲ್ಲಿ ಆಂಟಿ-ಟಾಕ್ಸಿಕ್, ಆಂಟಿಪೈರೆಟಿಕ್ ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಒಳಗೊಂಡಿದೆ. ಅಮರತ್ವದ ಗುಣವನ್ನು ಹೊಂದಿರುವ ಈ ಗಿಡಮೂಲಿಕೆಯನ್ನು ವೈರಲ್ ಸೋಂಕುಗಳನ್ನು ತಡೆಯಲು ಬಳಸಬಹುದು. ಶೀತ, ಕೆಮ್ಮು, ಕೀಲು ನೋವು, ಆಮ್ಲೀಯತೆ, ಚರ್ಮದ ಅಲರ್ಜಿ, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವುದು.

    ಇದನ್ನೂ ಓದಿ:ಆ್ಯಪಲ್ ಸೈಡರ್ ವಿನೇಗರ್‌ನ ಆರೋಗ್ಯ ಪ್ರಯೋಜನಗಳ ಗೊತ್ತೇ?

    1)ಯಕೃತ್ ಸಮಸ್ಯೆ ನಿವಾರಣೆ: ಯಕೃತ್ತಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ಗುಣಪಡಿಸುವುದು. ಹೊಟ್ಟೆ ಉಬ್ಬರ, ಹೊಟ್ಟೆ ಕಿವುಚಿದಂತಾಗುವುದು, ಹೊಟ್ಟೆ ಉರಿಯಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಣೆ ಮಾಡುವುದು.

    2)ಎಲ್ಲಾ ರೀತಿಯ ಜ್ವರ ನಿವಾರಣೆ: ನಮ್ಮನ್ನ ಕಾಡುವ ಡೆಂಘಿ, ಚಿಕನ್ ಗುನ್ಯಾ ಸೇರಿ ಎಲ್ಲಾ ಬಗೆಯ ವೈರಲ್ ಫೀವರ್ ನಿವಾರಣೆಗೆ ಅಮೃತಬಳ್ಳಿ ಮದ್ದಾಗಿದೆ. ಅಮೃತಬಳ್ಳಿ ತಾಮ್ರ, ಕಬ್ಬಿಣ, ರಂಜಕ, ಸತು, ಕ್ಯಾಲ್ಸಿಯಂ, ಮೆಗ್ನೀಷಿಯಮ್ ಮತ್ತು ಅನೇಕ ಆಂಟಿ-ಆಕ್ಸಿಡೆಂಟ್, ಉರಿಯೂತ, ಕ್ಯಾನ್ಸರ್ ವಿರೋಧಿ ಗುಣಗಳಿಂದಲೂ ಕೂಡಿದೆ. ಈ ಎಲ್ಲಾ ಅಂಶಗಳು ಒಟ್ಟಾಗಿ ಎಲ್ಲಾ ರೀತಿಯ ಜ್ವರದಿಂದ ನಮ್ಮನ್ನ ದೂರವಿರಿಸುತ್ತದೆ.

    3)ದೃಷ್ಟಿ ದೋಷ ನಿವಾರಣೆ: ದೃಷ್ಟಿ ದೋಷ ಅಥವಾ ದೃಷ್ಟಿ ಮಾಂದ್ಯ ಸಮಸ್ಯೆಗಳಿಗೆ ಅಮೃತ ಬಳ್ಳಿ ಅತ್ಯುತ್ತಮ ಚಿಕಿತ್ಸೆ ನೀಡುವುದು.ಚಿಕ್ಕ ಮಕ್ಕಳಲ್ಲಿ ದೃಷ್ಟಿ ದೋಷ ಇರುವವರು ಈ ಔಷಧವನ್ನು ಸೇವಿಸುವುದಿಂದ ದೃಷ್ಟಿ ದೋಷ ಬಹುಬೇಗ ನಿವಾರಣೆಯಾಗುವುದು.

    4)ಕೂದಲಿನ ಆರೋಗ್ಯಕ್ಕೆ: ಅಮೃತ ಬಳ್ಳಿಯ ಚಪ್ಪರದ ಕೆಳಗೆ ನಿತ್ಯವೂ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸಾಕು ತಲೆಕೂದಲಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ಕೂದಲು ಸೊಂಪಾಗಿ ಬೆಳೆಯುವುದು. ಅಮೃತ ಬಳ್ಳಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಿಸಿಕೊಳ್ಳಬಹುದು.

    ಇದನ್ನೂ ಓದಿ: ಅಲ್ಜೈಮರ್ ಅಪಾಯವನ್ನು ವಯಾಗ್ರದಿಂದ ಕಡಿಮೆ ಮಾಡಬಹುದಂತೆ

    5)ತೂಕ ಕಡಿಮೆ ಮಾಡಿಕೊಳ್ಳಲು: ಅಮೃತ ಬಳ್ಳಿ ಕೇವಲ ಆರೋಗ್ಯದ ಸಮಸ್ಯೆ ನಿವಾರಣೆಗೆ ಮಾತ್ರವಲ್ಲ ತೂಕ ಇಳಿಕೆ ಮಾಡಿಕೊಳ್ಳಬೇಕೆ ಎಂದು ಬಯಸುವವರಿಗೆ ಅಮೃತಬಳ್ಳಿ ಸಾಕಷ್ಟು ರೀತಿಯಲ್ಲಿ ಪ್ರಯೋಜನಕಾರಿ

    6)ಹೃದಯದ ಆರೋಗ್ಯಕ್ಕೆ ಸಹಕಾರಿ: ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ನಿವಾರಿಸುವುದು. ಅನಿರೀಕ್ಷಿತವಾಗಿ ಹೆಚ್ಚುವ ಹೃದಯ ಬಡಿತ ಹಾಗೂ ಅನಿರೀಕ್ಷಿತವಾಗಿ ಕಡಿಮೆಯಾಗುವ ಹೃದಯ ಬಡಿತದ ಸಮಸ್ಯೆಗಳಿಗೆ ಸೂಕ್ತ ಆರೈಕೆ ಮಾಡುವುದು.
    Published by:ranjumbkgowda1 ranjumbkgowda1
    First published: