Blood Sugar: ಹೈ ಬ್ಲಡ್ ಶುಗರ್ ನಿಯಂತ್ರಿಸಲು ಅಮೆರಿಕ ಪೌಷ್ಟಿಕ ತಜ್ಞರ ಸಲಹೆ ಹೀಗಿದೆ!

ಅಮೇರಿಕನ್ ಪೌಷ್ಟಿಕ ತಜ್ಞ ಎರಿನ್ ಕೆನ್ನಿ ಅವರು ಹೇಳುವ ಪ್ರಕಾರ ಅಧಿಕ ರಕ್ತದ ಸಕ್ಕರೆ ನಿಮ್ಮ ದೇಹದ ಅಂಗಾಂಶಗಳನ್ನು ಮಾತ್ರವಲ್ಲದೆ ಮನಸ್ಥಿತಿ ಮತ್ತು ನಿದ್ರೆಯ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಹೈಪರ್ಗ್ಲೈಸೀಮಿಯಾ ಕಾಯಿಲೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೇ ಹೋದರೆ ನೀವು ಅನೇಕ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಧಿಕ ರಕ್ತದ ಸಕ್ಕರೆ ಕಾಯಿಲೆಯನ್ನು (High Blood Sugar Disease) ವೈದ್ಯಕೀಯ ಭಾಷೆಯಲ್ಲಿ ಹೈಪರ್ಗ್ಲೈಸೀಮಿಯಾ ಎಂದು ಕರೆಯುತ್ತಾರೆ. ಇದರರ್ಥ ರಕ್ತದಲ್ಲಿ ಸಕ್ಕರೆ ಮಟ್ಟವು ಅಧಿಕವಾಗಿದೆ ಎಂದು ಸೂಚಿಸುತ್ತದೆ. ದೇಹದಲ್ಲಿ (Body) ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ದೇಹವು ಸಾಧ್ಯವಾಗದೇ ಹೋದಾಗ ಅಧಿಕ ರಕ್ತದ ಸಕ್ಕರೆ ಕಾಯಿಲೆ ಉಂಟಾಗುತ್ತದೆ. ನಿಮ್ಮ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುವುದು ಸಾಕಷ್ಟು ಆರೋಗ್ಯ (Health) ತೊಂದರೆ ಉಂಟು ಮಾಡುತ್ತದೆ. ಮಧುಮೇಹವು ಯಾವುದೇ ಚಿಕಿತ್ಸೆ ಇಲ್ಲದ ಕಾಯಿಲೆಯಾಗಿದ್ದು, ಒಮ್ಮೆ ಅಂಟಿಕೊಂಡರೆ ಜೀವನದುದ್ದಕ್ಕೂ ಅದರ ವಿರುದ್ಧ ಹೋರಾಡಬೇಕಾಗುತ್ತದೆ. ಮತ್ತು ನೀವು ವಾಂತಿ, ಅತಿಯಾದ ಹಸಿವು ಮತ್ತು ಬಾಯಾರಿಕೆ, ಹೆಚ್ಚಿದ ಹೃದಯ ಬಡಿತ, ಕಡಿಮೆಯಾದ ಅಥವಾ ದೃಷ್ಟಿಹೀನತೆಯಂತಹ ರೋಗ ಲಕ್ಷಣ ಅನುಭವಿಸಬಹುದು.

    ರಕ್ತದ ಸಕ್ಕರೆ ಮಟ್ಟವು ಹೆಚ್ಚಾಗುವುದು

    ರಕ್ತದ ಸಕ್ಕರೆ ಮಟ್ಟವು 125 mg/dL (mg per deciliter) ಗಿಂತ ಹೆಚ್ಚು ತಲುಪಿದಾಗ ಅದನ್ನು ಹೈಪರ್ಗ್ಲೈಸೀಮಿಯಾ ಎಂದು ಕರೆಯುತ್ತಾರೆ. ರಕ್ತದ ಗ್ಲೂಕೋಸ್ ಮಟ್ಟ ಹೇಗಿರಬೇಕು? ನಿಮ್ಮ ರಕ್ತದ ಗ್ಲೂಕೋಸ್ ಮಟ್ಟವು 90 mg/dL ಗಿಂತ ಕಡಿಮೆ ಇರಬೇಕು.

    ಹೈಪರ್ಗ್ಲೈಸೀಮಿಯಾ ಕಾಯಿಲೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೇ ಹೋದರೆ ನೀವು ಅನೇಕ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬಹುದು.

    ಇದನ್ನೂ ಓದಿ: ಬೆಳಗಿನ ಜಾವ ನಿಯಮಿತವಾಗಿ ಮಾಡುವ ಯೋಗ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?

    ಅಮೇರಿಕನ್ ಪೌಷ್ಟಿಕ ತಜ್ಞ ಎರಿನ್ ಕೆನ್ನಿ ಅವರು ಹೇಳುವ ಪ್ರಕಾರ, ಅಧಿಕ ರಕ್ತದ ಸಕ್ಕರೆ ನಿಮ್ಮ ದೇಹದ ಅಂಗಾಂಶಗಳನ್ನು ಮಾತ್ರವಲ್ಲದೆ ಮನಸ್ಥಿತಿ ಮತ್ತು ನಿದ್ರೆಯ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ನಿಮ್ಮ ರಕ್ತದ ಗ್ಲೂಕೋಸ್ ಮಟ್ಟ ನಿಯಂತ್ರಿಸಲು ನಿಮಗೆ ಸಹಾಯ ಮಾಡಬಹುದಾದ ಕೆಲವು ವಿಧಾನಗಳು ಇವೆ.

    ಹೈಪರ್ಗ್ಲೈಸೆಮಿಯಾ ಎಂದರೇನು?

    ಹೈಪರ್ಗ್ಲೈಸೀಮಿಯಾ ಅಥವಾ ಅಧಿಕ ರಕ್ತದ ಗ್ಲೂಕೋಸ್ ಕಾಯಿಲೆ ಎಂದರೆ, ರಕ್ತದ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಸಂಭವಿಸುವ ಕಾಯಿಲೆ ಆಗಿದೆ. ನಿಮ್ಮ ದೇಹವು ತುಂಬಾ ಕಡಿಮೆ ಇನ್ಸುಲಿನ್ ಅನ್ನು ಹೊಂದಿದ್ದರೆ ಅಥವಾ ದೇಹವು ಅದನ್ನು ಸರಿಯಾಗಿ ಬಳಸಲು ಸಾಧ್ಯವಾಗದೇ ಇದ್ದಾಗ ಇದು ಸಂಭವಿಸುತ್ತದೆ. ಇದು ರಕ್ತದ ಗ್ಲೂಕೋಸ್ ಅನ್ನು ಒಡೆಯುವ ಹಾರ್ಮೋನ್ ಆಗಿದೆ. ಅದರ ಕೊರತೆಯಿಂದ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ.

    ಸಾಕಷ್ಟು ನಿದ್ರೆ ಮಾಡುವುದು ಅತ್ಯಗತ್ಯ

    ನಿದ್ರೆಯ ಕೊರತೆ ಅಥವಾ ಸಂಪೂರ್ಣ ವಿಶ್ರಾಂತಿ ಇನ್ಸುಲಿನ್ ಸಂವೇದನೆಯಲ್ಲಿ ಇಳಿಕೆ ಉಂಟು ಮಾಡಲು ಕಾರಣವಾಗಬಹುದು ಎಂದು ಅಧ್ಯಯನಗಳು ಹೇಳಿವೆ. ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ನೀವು ಬಯಸಿದರೆ, ನೀವು ಕನಿಷ್ಟ ಎಂಟು ಗಂಟೆಗಳವರೆಗೆ ನಿದ್ದೆ ಮಾಡಬೇಕು.

    ಸಮತೋಲಿತ ಆಹಾರ ಸೇವನೆ ಅತ್ಯಗತ್ಯ

    ನಿಮ್ಮ ಆಹಾರದಲ್ಲಿ ಯಾವಾಗಲೂ ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ಫೈಬರ್ ಸಮೃದ್ಧ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ತುಂಬಾ ಮುಖ್ಯ. ಇವು ರಕ್ತದ ಸಕ್ಕರೆ ಅಂಶವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಸಹಾಯ ಮಾಡುವ ಪೋಷಕಾಂಶಗಳು ಆಗಿವೆ.

    ಹೈಡ್ರೇಟೆಡ್ ಆಗಿ ಉಳಿಯುವುದು ಸಹ ಉತ್ತಮ ಮಾರ್ಗ ಆಗಿದೆ

    ನೀವು ಸಾಕಷ್ಟು ಪ್ರಮಾಣದ ನೀರು, ಹಣ್ಣು ಹಾಗೂ ದ್ರವ ಪದಾರ್ಥ ಸೇವನೆ ಮಾಡಬೇಕು. ಮೂತ್ರದ ಮೂಲಕ ಹೆಚ್ಚುವರಿ ಸಕ್ಕರೆ ತೆಗೆದು ಹಾಕಲು ಇದು ನಿಮ್ಮ ಮೂತ್ರಪಿಂಡಗಳಿಗೆ ಸಹಾಯ ಮಾಡುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ಮತ್ತು ಮಧುಮೇಹ ಅಪಾಯ ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: ತೂಕ ಇಳಿಸಲು ಬಿಸಿ ನೀರು ಬೆಸ್ಟ್ ಅಂತೆ, ನೀವೂ ಟ್ರೈ ಮಾಡಿ

    ನಿತ್ಯವೂ ವ್ಯಾಯಾಮ ಮಾಡಿ

    ವ್ಯಾಯಾಮ ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುತ್ತದೆ. ಮತ್ತು ರಕ್ತದ ಸಕ್ಕರೆ ಬಳಸಲು ಸಹಾಯ ಮಾಡಲು ನಿಮ್ಮ ಸ್ನಾಯುಗಳ ಕಾರ್ಯ ನಿರ್ವಹಣೆ ಸುಧಾರಿಸುತ್ತದೆ. ಇದು ವಾಕಿಂಗ್, ಬೈಕಿಂಗ್, ನೃತ್ಯ, ದಿನವಿಡೀ 10 ನಿಮಿಷ ಚಟುವಟಿಕೆ ಒಳಗೊಂಡಿದೆ.
    Published by:renukadariyannavar
    First published: