Fenugreek Seed Benefits: ಮೆಂತೆಕಾಳು ಕಹಿ ಎಂದು ಮೂಗು ಮುರಿಯ ಬೇಡಿ ಇದರಲ್ಲಿ ಅಡಗಿದೆ ಉತ್ತಮ ಮದ್ದಿನ ಗುಣ
ಮೆಂತ್ಯೆ ಕಾಳುಗಳನ್ನು (ಮೆಂತ್ಯೆ ಬೀಜಗಳು) ಸಾಮಾನ್ಯವಾಗಿ ಭಾರತೀಯ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ಮೆಂತ್ಯೆ ಕಾಳಿನ ನೀರು ದೇಹದಲ್ಲಿ ದ್ರವಾಂಶ ನಿಲ್ಲುವುದು ಮತ್ತು ಹೊಟ್ಟೆ ಉಬ್ಬರ ತಡೆಯುವುದು.
ಮೆಂತ್ಯೆ (Fenugreek) ಬಹುಪಯೋಗಿ ಗಿಡಮೂಲಿಕೆಯಾಗಿದ್ದು, ಹಸಿರು ಎಲೆಗಳು ಮತ್ತು ಸಣ್ಣ ಬಿಳಿ ಹೂಗಳನ್ನು ಹೊಂದಿದೆ. ಈ ಹೂವುಗಳು ಬೀಜದ ಬೀಜಗಳನ್ನು ಹೊಂದಿದ್ದು, ಇದು ಕಹಿ ರುಚಿಯನ್ನು ಹೊಂದಿರುವ ಸಣ್ಣ, ಹಳದಿ-ಕಂದು, ಗಟ್ಟಿಯಾದ, ಬೀಜಗಳನ್ನು ಹೊಂದಿರುತ್ತದೆ. ಮೆಂತ್ಯೆ ಕಾಳುಗಳನ್ನು (ಮೆಂತ್ಯೆ ಬೀಜಗಳು) ಸಾಮಾನ್ಯವಾಗಿ ಭಾರತೀಯ ಅಡುಗೆ (Cook) ಮನೆಯಲ್ಲಿ ಬಳಸಲಾಗುತ್ತದೆ. ಆದರೆ ಇದರ ಬಳಕೆಗಳು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಅದರಾಚೆಗೂ ಇದೆ. ಆಯುರ್ವೇದದಲ್ಲಿ (Ayurveda) ಸೂಚಿಸಿರುವಂತಹ ಕೆಲವೊಂದು ವಿಧಾನಗಳನ್ನು ನಾವು ಪಾಲಿಸಿಕೊಂಡು ಹೋದರೆ ಅದು ನಮಗೆ ದಿನನಿತ್ಯದಲ್ಲಿ ಆರೋಗ್ಯ (Health) ಕಾಪಾಡಲು ತುಂಬಾ ನೆರವಾಗಲಿದೆ.
ಮೆಂತ್ಯೆ ಕಾಳಿನ ನೀರು ದೇಹದಲ್ಲಿ ದ್ರವಾಂಶ ನಿಲ್ಲುವುದು ಮತ್ತು ಹೊಟ್ಟೆ ಉಬ್ಬರ ತಡೆಯುವುದು. ಇದರಲ್ಲಿ ಉತ್ತಮ ಪ್ರಮಾಣದ ಮೆಗ್ನಿಶಿಯಂ ಇದೆ ಮತ್ತು ನಿಯಮಿತವಾಗಿ ಇದರ ಸೇವನೆ ಮಾಡಿದರೆ ಅದರಿಂದ ದೇಹವು ಆರಾಮವಾಗಿರಲು ನೆರವಾಗುವುದು.
ಮೆಂತ್ಯೆ ಕಾಳಿನ ನೀರನ್ನು ನಿತ್ಯವೂ ಕುಡಿದರೆ ಅದರಿಂದ ತೂಕ ಇಳಿಸಲು ತುಂಬಾ ನೆರವಾಗುವುದು. ಇದು ಚಯಾಪಚಯಕ್ಕೆ ವೇಗ ನೀಡುವುದು. ಇದು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವುದು ಮತ್ತು ತೂಕ ಇಳಿಸಲು ಮತ್ತು ನಿರ್ವಹಿಸಲು ಸಹಕರಿಸುವುದು. ತೂಕ ಇಳಿಸಲು ಬಯಸಿದ್ದರೆ ಆಗ ನೀವು ಮೆಂತ್ಯೆ ಕಾಳನ್ನು ಬಳಸಿ.
ನಿಯಮಿತವಾಗಿ ಸೇವನೆ ಮಾಡಿದರೆ ಜೀರ್ಣಕ್ರಿಯೆಗೆ ಸಹಕಾರಿ
ಮೆಂತ್ಯೆ ಕಾಳು ಆಮ್ಲ ವಿರೋಧಿಯಾಗಿದೆ ಮತ್ತು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ಬಲ ಬರುವುದು ಮತ್ತು ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆ ಉಬ್ಬರದ ಸಮಸ್ಯೆಯು ಕಡಿಮೆ ಆಗುವುದು. ಇದನ್ನು ಶೀತ ತಿಂಗಳುಗಳಲ್ಲಿ ತಿಂದರೆ ಒಳ್ಳೆಯದು ಎಂದು ಆಯುರ್ವೇದ ಮತ್ತು ಯೋಗ ತಜ್ಞ ಯೋಗಾಚಾರ್ಯ ಅನೂಪ್ ಅವರು ಸಲಹೆ ನೀಡುತ್ತಾರೆ.
ಕಫ ದ ಸಮಸ್ಯೆಗೆ ಮೆಂತ್ಯೆ ನೀರು ತುಂಬಾ ಒಳ್ಳೆಯದು
ಕಫ ಹೆಚ್ಚಾಗಿ ಇರುವಂತಹ ಜನರ ದೇಹದಲ್ಲಿ ಉಷ್ಣತೆ(ಅಗ್ನಿ)ಯು ಕಡಿಮೆ ಇರುವುದು ಎಂದು ಆಯುರ್ವೇದವು ಹೇಳುತ್ತದೆ. ಕಫ ಇರುವ ವ್ಯಕ್ತಿಗಳಲ್ಲಿ ಪ್ರತಿರೋಧಕ ಶಕ್ತಿಯು ಕಡಿಮೆ ಇರುವುದು ಮತ್ತು ಇದರಿಂದ ಶೀತ, ಕೆಮ್ಮು ಮತ್ತು ಜ್ವರ ಬರುವುದು. ಮೆಂತ್ಯೆ ನೀರು ಕುಡಿದರೆ ಅದು ದೇಹಕ್ಕೆ ಉಷ್ಣತೆ ನೀಡುವುದು ಹಾಗೂ ದೇಹದ ಪ್ರತಿರೋಧಕ ಶಕ್ತಿ ಕೂಡ ವೃದ್ಧಿಸುವುದು.
ಮೆಂತ್ಯೆ ನೀರು ಬಾಣಂತಿಯರಿಗೆ ತುಂಬಾ ಒಳ್ಳೆಯದು
ಮೆಂತ್ಯೆ ಕಾಳನ್ನು ಮಿತ ಪ್ರಮಾಣದಲ್ಲಿ ಬಳಕೆ ಮಾಡಿದರೆ ಅದರಿಂದ ವಿವಿಧ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಮೆಂತ್ಯೆ ಕಾಳು ತುಂಬಾ ಲಾಭಕಾರಿ. ಮೆಂತ್ಯೆ ನೀರು ಬಾಣಂತಿಯರಿಗೆ ತುಂಬಾ ಒಳ್ಳೆಯದು. ಯಾಕೆಂದರೆ ಇದು ಹಾಲಿನ ಉತ್ಪತ್ತಿ ಹೆಚ್ಚಿಸುವುದು. ಇದರಿಂದಾಗಿ ಬಾಣಂತಿಯರಿಗೆ ಮೆಂತ್ಯೆ ಕಾಳಿನಿಂದ ತಯಾರಿಸಿದ ಲಾಡು ನೀಡಲಾಗುತ್ತದೆ. ಮೆಂತ್ಯೆಯಲ್ಲಿರುವಂತಹ ಕೆಲವೊಂದು ಅಂಶಗಳು ಗರ್ಭಕೋಶವನ್ನು ಮೊದಲಿನ ಸ್ಥಿತಿಗೆ ತರಲು ನೆರವಾಗುವುದು. ಇದರಿಂದ ಮೆಂತ್ಯೆ ನೀರನ್ನು ಬಳಸಬಹುದು.
ಮೆಂತ್ಯೆ ಕಾಳು ಹಾಕಿದಂತಹ ಬಿಸಿ ನೀರನ್ನು ದಿನಾಲೂ ಕುಡಿದರೆ ಅದರಿಂದ ಟೈಪ್-2 ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಮೆಂತ್ಯೆ ಕಾಳು ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಿಸುವುದು. ದೇಹದಲ್ಲಿನ ಅಂಗಾಂಶಗಳು ಇನ್ಸುಲಿನ್ ಗೆ ಸರಿಯಾಗಿ ಕೆಲಸ ಮಾಡದೆ ಇರುವುದೇ ಮಧುಮೇಹ ಎನ್ನಬಹುದು. ಈ ವೇಳೆ ಮಧುಮೇಹಿಯ ರಕ್ತದಲ್ಲಿನ ಸಕ್ಕರೆ ಮಟ್ಟವು ಸರಾಸರಿಗಿಂತಲೂ ಹೆಚ್ಚಾಗಿರುತ್ತದೆ. ಇದರಲ್ಲಿ ಇರುವಂತಹ ನಾರಿನಾಂಶವು ಜೀರ್ಣ ಕ್ರಿಯೆಗೆ ವೇಗ ನೀಡುವುದು. ಇದೇ ವೇಳೆ ದೇಹದಲ್ಲಿ ಸಕ್ಕರೆ ಬಳಸುವುದನ್ನು ಸುಧಾರಿಸುವುದು.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ