ಹಲವು ಸಮಸ್ಯೆಗಳಿಗೆ ಸೀತಾಫಲ ರಾಮಬಾಣ

Health Tips: ಈ ಹಣ್ಣಿನಲ್ಲಿ ವಿಟಮಿನ್ B6 ಹೇರಳವಾಗಿದ್ದು, ಇದರ ನಿಯಮಿತ ಸೇವನೆಯಿಂದ ಶ್ವಾಸನಾಳಗಳ ಆರೋಗ್ಯ ವೃದ್ದಿಸುತ್ತದೆ. ಇದರಿಂದ ನಿಮಗೆ ಅಸ್ತಮಾ ರೋಗದ ಸಮಸ್ಯೆಗಳು ತಲೆದೂರುವ ಅಪಾಯ ಕಡಿಮೆಯಾಗುತ್ತದೆ.

zahir | news18-kannada
Updated:October 23, 2019, 10:54 AM IST
ಹಲವು ಸಮಸ್ಯೆಗಳಿಗೆ ಸೀತಾಫಲ ರಾಮಬಾಣ
Custard Apples
  • Share this:
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಸೀತಾಫಲ ಎಲ್ಲರಿಗೂ ಪರಿಚಿತ ಹಣ್ಣು. ತಿನ್ನಲು ತುಸು ಕಷ್ಟವಾದರೂ, ಈ ಹಣ್ಣಿನಿಂದ ಸಿಗುವ ಬಾಯಿ ರುಚಿ ಮಾತ್ರ ಅಷ್ಟಿಷ್ಟಲ್ಲ. ಅಂದರೆ ರುಚಿಯೊಂದಿಗೆ ಇದು ನಿಮ್ಮ ಆರೋಗ್ಯವನ್ನೂ ಕಾಪಾಡುವಲ್ಲಿ ಈ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಗೊತ್ತಿರಲಿ. ಹೌದು ಸೀತಾಫಲ ನಾನಾ ಸಮಸ್ಯೆಗಳಿಗೆ ರಾಮಬಾಣ ಎಂದರೆ ಒಪ್ಪಲೇಬೇಕು.

ಈ ಹಣ್ಣಿನ ಸೇವನೆಯಿಂದ ಹೆಚ್ಚಿನ ಕ್ಯಾಲೋರಿ ದೊರಕುತ್ತವೆ. ಅಷ್ಟೇ ಅಲ್ಲದೆ ತ್ವಚೆ, ಕೂದಲು, ರಕ್ತದೊತ್ತಡ ನಿರ್ವಹಣೆ, ಮೂಳೆಗಳ ಆರೋಗ್ಯವನ್ನು ಮೊದಲಾದ ಹಲವು ಹೆಚ್ಚಿಸುತ್ತದೆ. ಸೀತಾಫಲದ ಪ್ರಮುಖ ಪ್ರಯೋಜನಗಳು ಯಾವುವು ಇಲ್ಲಿ ವಿವರಿಸಲಾಗಿದೆ.

ಅಸ್ತಮಾ ರೋಗ ತಡೆಯುತ್ತದೆ:

ಈ ಹಣ್ಣಿನಲ್ಲಿ ವಿಟಮಿನ್ B6 ಹೇರಳವಾಗಿದ್ದು, ಇದರ ನಿಯಮಿತ ಸೇವನೆಯಿಂದ ಶ್ವಾಸನಾಳಗಳ ಆರೋಗ್ಯ ವೃದ್ದಿಸುತ್ತದೆ. ಇದರಿಂದ ನಿಮಗೆ ಅಸ್ತಮಾ ರೋಗದ ಸಮಸ್ಯೆಗಳು ತಲೆದೂರುವ ಅಪಾಯ ಕಡಿಮೆಯಾಗುತ್ತದೆ.

ಹೃದಯಾಘಾತದಿಂದ ರಕ್ಷಿಸುತ್ತದೆ:
ಸೀತಾ ಫಲದಲ್ಲಿ ವಿಟಮಿನ್ B6 ಪ್ರಮಾಣ ಹೆಚ್ಚಾಗಿರುವುದರಿಂದ ರಕ್ತದಲ್ಲಿ ಹೀಮೋಸಿಸ್ಟೈನ್ (homocystein)ಸಂಗ್ರಹವನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ಮುಂದೆ ಹೃದಯಾಘಾತದ ಅಪಾಯ ಬರುವ ಸಾಧ್ಯತೆ ಇರುವುದಿಲ್ಲ.

ಮಧುಮೇಹ ಸಮಸ್ಯೆಗೆ ಪರಿಹಾರ:ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರ ಮಾಡಬಹುದು. ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ. ಹಾಗೆಯೇ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮಧುಮೇಹದ ಸಮಸ್ಯೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ:
ಸೀತಾಫಲ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ನಿಯಮಿತವಾಗಿ ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ.

ಇದನ್ನೂ ಓದಿ: Bigg Boss Kannada 7: ಬಿಗ್ ಬಾಸ್​​ನಲ್ಲಿ ಕಾಣಿಸಿಕೊಳ್ಳಲು ರವಿ ಬೆಳಗೆರೆ ಪಡೆದ ಸಂಭಾವನೆ ಇಷ್ಟೇನಾ?

ಕೊಲೆಸ್ಟ್ರಾಲ್ ಕಡಿಮೆ:
ಈ ಹಣ್ಣಿನಲ್ಲಿರುವ ನಿಯಾಸಿನ್ ಹಾಗೂ ಕರಗುವ ನಾರು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ.

ರಕ್ತಹೀನತೆಗೆ ಪರಿಹಾರ:
ಸೀತಾಫಲದಲ್ಲಿ ರಕ್ತಕಣಗಳ ಉತ್ಪಾದನೆಗೆ ಸಹಕರಿಸುವ ಗುಣಗಳಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ತಾಮ್ರ, ಕಬ್ಬಿಣ ಅಂಶಗಳಿದ್ದು ರಕ್ತಕಣಗಳ ಉತ್ಪಾದನೆ ಹೆಚ್ಚಿಸುತ್ತವೆ. ನಿಯಮಿತವಾಗಿ ಸೀತಾಫಲ ಸೇವಿಸುತ್ತಿದ್ದರೆ ರಕ್ತಹೀನತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ರೋಗ ನಿರೋಧಕ ಶಕ್ತಿ:
ಸೀತಾಫಲ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಆಂಟಿ ಆಕ್ಸಿಡೆಂಟು ಅಥವಾ ವಿಟಮಿನ್ ಸಿ ಇದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ.

Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್
First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading