Coriander Leaves Benefits: ಕೊತ್ತಂಬರಿ ಸೊಪ್ಪು ರುಚಿಗಷ್ಟೇ ಅಲ್ಲಾ? ಸರ್ವ ರೋಗಕ್ಕೂ ರಾಮಬಾಣ

Coriander Leaves: ಆಹಾರಕ್ಕೆ ಬಳಕೆಯಾಗುವುದರ ಜೊತೆಗೆ ಈ ಕೊತ್ತಂಬರಿ ಸೊಪ್ಪು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಸಹ ನೆರವಾಗುತ್ತದೆ. ಈ ಸೊಪ್ಪಿನಲ್ಲಿ ಖನಿಜಗಳು, ಥಿಯಮೈನ್, ವಿಟಮಿನ್ ಸಿಯಂತಹ ವಿಟಮಿನ್‍ಗಳು, ರೈಬೊಫ್ಲವಿನ್, ರಂಜಕ, ಕ್ಯಾಲ್ಸಿಯಂ, ಪ್ರೊಟೀನ್, ಕೊಬ್ಬು, ನಾರು ಮತ್ತು ನೀರು ಇರುತ್ತವೆ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

  • Share this:
    ಹಲವಾರು ಆಹಾರ ಪದಾರ್ಥಗಳಿಗೆ ರುಚಿಯನ್ನು ತುಂಬುವ ಕೊತ್ತಂಬರಿ ಸೊಪ್ಪು (Coriander Leaves) ಒಂದು ಪರಿಣಾಮಕಾರಿ ಗಿಡಮೂಲಿಕೆಯಾಗಿದ್ದು, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ಈ ಸೊಪ್ಪಿನಲ್ಲಿ ಖನಿಜಗಳು, ಥಿಯಮೈನ್, ವಿಟಮಿನ್ (Vitamin) ಸಿಯಂತಹ ವಿಟಮಿನ್‍ಗಳು, ರೈಬೊಫ್ಲವಿನ್, ರಂಜಕ, ಕ್ಯಾಲ್ಸಿಯಂ, ಪ್ರೊಟೀನ್, ಕೊಬ್ಬು, ನಾರು ಮತ್ತು ನೀರು ಇರುತ್ತವೆ. ಪ್ರತಿಯೊಬ್ಬರ ಮನೆಯ ರೆಫ್ರಿಜಿರೇಟರ್ ನಲ್ಲಿ ಕೊತ್ತಂಬರಿ ಸೊಪ್ಪು ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಅಲಂಕರಿಸಿರುತ್ತದೆ. ಈ ಸೊಪ್ಪಿನಲ್ಲಿ ಖನಿಜಗಳು, ಥಿಯಮೈನ್, ವಿಟಮಿನ್ ಸಿಯಂತಹ ವಿಟಮಿನ್‍ಗಳು, ರೈಬೊಫ್ಲವಿನ್, ರಂಜಕ, ಕ್ಯಾಲ್ಸಿಯಂ, ಪ್ರೊಟೀನ್ (Protein) ಕೊಬ್ಬು, ನಾರು ಮತ್ತು ನೀರು (Water) ಇರುತ್ತವೆ. 

    ಕೊತ್ತಂಬರಿ ಸೊಪ್ಪು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ

    ಆಹಾರಕ್ಕೆ ಬಳಕೆಯಾಗುವುದರ ಜೊತೆಗೆ ಈ ಕೊತ್ತಂಬರಿ ಸೊಪ್ಪು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಸಹ ನೆರವಾಗುತ್ತದೆ. ಈ ಸೊಪ್ಪಿನಲ್ಲಿ ಖನಿಜಗಳು, ಥಿಯಮೈನ್, ವಿಟಮಿನ್ ಸಿಯಂತಹ ವಿಟಮಿನ್‍ಗಳು, ರೈಬೊಫ್ಲವಿನ್, ರಂಜಕ, ಕ್ಯಾಲ್ಸಿಯಂ, ಪ್ರೊಟೀನ್, ಕೊಬ್ಬು, ನಾರು ಮತ್ತು ನೀರು ಇರುತ್ತವೆ. ಕೊತ್ತಂಬರಿ ಸೊಪ್ಪಿನಲ್ಲಿ ಮೆದುವಾದ ಮೆಣಸಿನಂತಹ ರುಚಿಯಿದೆ. ಇದು ಆಹಾರಕ್ಕೆ ಅನುಪಮವಾದ ರುಚಿಯನ್ನು ನೀಡುತ್ತದೆ. ಕೊತ್ತಂಬರಿ ಸೊಪ್ಪಿನ ಬೆಲೆ ತೀರ ಕಡಿಮೆ, ಆದರೆ ಅದರಿಂದುಂಟಾಗುವ ಲಾಭ ಅಮೂಲ್ಯವಾದುದು.

    ಇದನ್ನೂ ಓದಿ: Pineapple Side Effects: ಅತಿಯಾಗಿ ಅನಾನಸ್​ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ತಪ್ಪಿದಲ್ಲ

    ಕೊತ್ತಂಬರಿ ಸೊಪ್ಪಿನ ರಸ ರಕ್ತ ಸ್ರಾವವನ್ನು ನಿಲ್ಲಿಸಲು ಸಹಕಾರಿ

    ಮೂಗಿನಲ್ಲಿ ರಕ್ತಸ್ರಾವ 20 ಗ್ರಾಂನಷ್ಟು ತಾಜ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ. ಸ್ವಲ್ಪ ಪ್ರಮಾಣದ ಕರ್ಪೂರದ ಜೊತೆಗೆ ಇದನ್ನು ಬೆರೆಸಿ ಚೆನ್ನಾಗಿ ಜಜ್ಜಿ. ನಂತರ ಇವೆರಡ ಮಿಶ್ರಣವನ್ನು ತೆಗೆದುಕೊಂಡು, ಅದರ ರಸವನ್ನು ಮೂಗಿನ ಹೊಳ್ಳೆಗಳಿಗೆ ಹಿಂಡಿ. ಮೂಗಿನ ರಕ್ತ ಸ್ರಾವವು ತತ್‍ಕ್ಷಣಕ್ಕೆ ನಿಲ್ಲುತ್ತದೆ. ಇಲ್ಲದಿದ್ದರೆ ಈ ಮಿಶ್ರಣವನ್ನು ನಿಮ್ಮ ಹಣೆಗೆ ಹಚ್ಚಿ. ಆಗಲೂ ಸಹ ಮೂಗಿನಲ್ಲಿ ರಕ್ತಸ್ರಾವ ನಿಲ್ಲುತ್ತದೆ. ಇದರ ಜೊತೆಗೆ ತಾಜಾ ಕೊತ್ತಂಬರಿ ಸೊಪ್ಪಿನ ವಾಸನೆಯನ್ನು ಸೇವಿಸುವುದು ಸಹ ಈ ಸಮಸ್ಯೆಗೆ ಪ್ರಯೋಜನಕಾರಿಯಾಗಿರುತ್ತದೆ.

    ಕೊತ್ತಂಬರಿ ಸೊಪ್ಪಿನ ಚಹಾ ಕೂಡ ಪರಿಣಾಮಕಾರಿ

    ಕೊತ್ತಂಬರಿ ಸೊಪ್ಪಿನ ಚಹಾ ಕೂಡ ಪರಿಣಾಮಕಾರಿ.ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುದಿಸಿ. ಅದನ್ನು ಸೋಸಿಕೊಂಡು ಕುಡಿಯಿರಿ. ಪ್ರತಿದಿನ ನೀವು ಮಾಡುವ ಮೇಲೋಗರಗಳಲ್ಲೂ ಕೊತ್ತಂಬರಿ ಸೊಪ್ಪನ್ನು ಬಳಸಿ. ಕೊತ್ತಂಬರಿ ಸೊಪ್ಪು ದೇಹವನ್ನು ತಂಪಾಗಿಡುತ್ತದೆ. ಇದನ್ನು ಮೊಸರಿನ ಜೊತೆ ಕೂಡ ಸೇವನೆ ಮಾಡಬಹುದು.

    ಅತಿಸಾರದ ಪರಿಣಾಮಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ

    ಬೇಧಿ ಹೆಚ್ಚಾಗಿದ್ದರೆ ಒಣ ಕೊತ್ತಂಬರಿ ಬೀಜದ ಕಷಾಯ ಮಾಡಿಕೊಂಡು ಕುಡಿಯಿರಿ. ಇದು ಔಷಧದಂತೆ ಕೆಲಸ ಮಾಡುತ್ತದೆ, ದೇಹದಲ್ಲಿರುವ ವಿಷದ ಅಂಶವನ್ನು ಹೊರಹಾಕುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್‌ಗಳ ಆಗರ ಇದು. ಕೊತ್ತಂಬರಿ ಸೊಪ್ಪಿನಲ್ಲಿ ಇರುವ ಆಮ್ಲಗಳು ಶಾಖದ ಹೊಡೆತ ಮತ್ತು ಅತಿಸಾರದ ಪರಿಣಾಮಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ.

    ಇದನ್ನೂ ಓದಿ: Kulfi: ಬೇಸಿಗೆಯಲ್ಲಿ ತಂಪಾಗಿರಿಸಲು ಮನೆಯಲ್ಲಿಯೇ ತಯಾರಿಸಿ ಈ 5 ಕುಲ್ಫಿಗಳು! ಬರೀ ಅರ್ಧ ಗಂಟೆ ಸಾಕು

    ಚರ್ಮ ವ್ಯಾಧಿಗಳನ್ನು ಗುಣಪಡಿಸುತ್ತದೆ

    ಚರ್ಮ ವ್ಯಾಧಿಗಳು ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಬೂಷ್ಟು ನಿರೋದಕ, ನಂಜು ನಿರೋಧಕ, ನಂಜು ನಿವಾರಕ ಮತ್ತು ಕೊಳೆ ನಿರೋಧಕ ಗುಣಗಳು ಇರುವುದರಿಂದ ಇದು ಹಲವಾರು ಚರ್ಮ ವ್ಯಾಧಿಗಳನ್ನು ಗುಣಪಡಿಸುತ್ತದೆ. ಇದಕ್ಕಾಗಿ ನೀವು ಕೊತ್ತಂಬರಿ ರಸವನ್ನು ಸೇವಿಸಿ ಅಥವಾ ಅದರ ಪೇಸ್ಟನ್ನು ಚರ್ಮಕ್ಕೆ ಲೇಪಿಸಿ. ತುರಿಕೆ ಮತ್ತು ಕಜ್ಜಿ ಅಥವಾ ಹುಳುಕಾಟಕ್ಕೆ ತಾಜ ಕೊತ್ತಂಬರಿ ಸೊಪ್ಪಿನ ರಸವನ್ನು ಮತ್ತು ಜೇನು ತುಪ್ಪವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಸಮಸ್ಯೆ ಇರುವ ಭಾಗಕ್ಕೆ ಲೇಪಿಸಿ. 15 ನಿಮಿಷ ಬಿಟ್ಟು , ಈ ಭಾಗವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ.
    Published by:Swathi Nayak
    First published: