Amla Benefits: ನೆಲ್ಲಿಕಾಯಿ ಒಗರು ಅಂತ ತಿನ್ನದೇ ಇರಬೇಡಿ? ಅದು ಎಲ್ಲಾ ರೋಗಕ್ಕೂ ರಾಮಬಾಣ

ನೆಲ್ಲಿಕಾಯಿಯು ಉತ್ತಮ ಆಹಾರವಾಗಿದ್ದು, ದೇಹಕ್ಕೆ ಇದರಿಂದ ಹಲವು ರೀತಿಯ ಪ್ರಯೋಜನಗಳಿವೆ. ಇದು ಕೇವಲ ಆರೋಗ್ಯ ಮಾತ್ರವಲ್ಲದೆ, ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನೆಲ್ಲಿಕಾಯಿ (Amla) ಯು ಉತ್ತಮ ಆಹಾರವಾಗಿದ್ದು, ದೇಹಕ್ಕೆ ಇದರಿಂದ ಹಲವು ರೀತಿಯ ಪ್ರಯೋಜನಗಳಿವೆ. ಇದು ಕೇವಲ ಆರೋಗ್ಯ ಮಾತ್ರವಲ್ಲದೆ, ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೆಲ್ಲಿಕಾಯಿಯನ್ನು ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಿಕೊಳ್ಳಬಹುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ನೆಲ್ಲಿಕಾಯಿಯನ್ನು ನೀವು ಚಟ್ನಿ, ಕ್ಯಾಂಡಿ, ಉಪ್ಪಿನಕಾಯಿ (Pickle), ಜಾಮ್ ಮೊದಲಾದ ಮಾದರಿಯಲ್ಲಿ ತಯಾರಿಸಿ ಸೇವಿಸಬಹುದು. ದೇಹಕ್ಕೆ ಇದರಿಂದ ಹಲವು ರೀತಿಯ ಪ್ರಯೋಜನಗಳಿವೆ. ಇದು ಕೇವಲ ಆರೋಗ್ಯ ಮಾತ್ರವಲ್ಲದೆ, ಚರ್ಮ (Skin)  ಹಾಗೂ ಕೂದಲಿನ ಆರೈಕೆ (Hair Care) ಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

    ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಳ್ಳಬೇಕು

    ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಸೇವನೆ ಮಾಡಲು ಸ್ವಲ್ಪ ಕಹಿ ಅನುಭವ ಉಂಟು ಮಾಡುತ್ತದೆ. ಸೇವನೆ ಮಾಡಿದ ಮೇಲೆ ಬಾಯಿ ಮತ್ತು ನಾಲಿಗೆ ಸಿಹಿಯಾಗುತ್ತದೆ.
    ಆರೋಗ್ಯ ತಜ್ಞರ ಪ್ರಕಾರ ಚಳಿಗಾಲದ ಸಮಯದಲ್ಲಿ ನಿಮ್ಮ ಶೀತ, ಕೆಮ್ಮು, ಜ್ವರ, ನೆಗಡಿ, ಬಾಯಿ ಹುಣ್ಣು ಇತ್ಯಾದಿಗಳ ಸಮಸ್ಯೆಗೆ ಅತ್ಯಂತ ಸುಲಭವಾಗಿ ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಳ್ಳಬೇಕು ಎಂದರೆ 2 ಟೀ ಚಮಚ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನೊಂದಿಗೆ ಅಷ್ಟೇ ಪ್ರಮಾಣದ ಹಸಿ ಜೇನು ತುಪ್ಪವನ್ನು ಸೇರಿಸಿ ಪ್ರತಿ ದಿನವೂ ಸೇವನೆ ಮಾಡಿ.

    ಇದನ್ನೂ ಓದಿ: Hair Care: ದಪ್ಪ ಕೂದಲು ನಿಮ್ಗೆ ಬೇಕಾ? ಕೂದಲಿನ ಆರೈಕೆ ಈ ರೀತಿ‌ ಮಾಡಿ‌ ನೋಡಿ

    ಶೀತ ಮತ್ತು ಕೆಮ್ಮಿನ ಸಮಸ್ಯೆಗಳು ಬಹಳ ಬೇಗ ನಿಮ್ಮಿಂದ ದೂರವಾಗುತ್ತವೆ

    ಶೀತ ಮತ್ತು ಕೆಮ್ಮಿನ ಸಮಸ್ಯೆಗಳು ಬಹಳ ಬೇಗ ನಿಮ್ಮಿಂದ ದೂರವಾಗುತ್ತವೆ. ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಎರಡು ಟೀ ಚಮಚದಷ್ಟು ಬೆಟ್ಟದ ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ದಿನದಲ್ಲಿ ಎರಡು ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣುಗಳು ಬಹಳ ಬೇಗನೆ ವಾಸಿಯಾಗುತ್ತವೆ.

    ಉಸಿರಾಟದ ತೊಂದರೆ ಮತ್ತು ಆಸ್ತಮಾ ಸಮಸ್ಯೆ ಗಳಿಗೂ ದಿವ್ಯೌಷಧಿ

    ನಿಮ್ಮ ದೇಹದ ರಕ್ತ ಸಂಚಾರದಲ್ಲಿ ಸಕ್ಕರೆ ಅಂಶದ ಪ್ರಮಾಣ ಹೆಚ್ಚಾದರೆ ಅದರಿಂದ ನಿಮ್ಮ ಮಧುಮೇಹದ ಮಟ್ಟ ನಿಯಂತ್ರಣ ತಪ್ಪಿ ಏರಿಕೆಯಾಗುತ್ತದೆ. ಇದರ ಜೊತೆಗೆ ಇನ್ನು ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ.
    ಕೆಲವರಿಗೆ ಉಸಿರಾಟದ ತೊಂದರೆ ಮತ್ತು ಆಸ್ತಮಾ ಸಮಸ್ಯೆ ಕೂಡ ಕಂಡು ಬರಬಹುದು. ಆದರೆ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ದಿವ್ಯೌಷಧಿಯ ರೀತಿಯಲ್ಲಿ ಕೆಲಸ ಮಾಡುವ ಬೆಟ್ಟದ ನೆಲ್ಲಿಕಾಯಿಯಲ್ಲಿ ಇಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರವಿದೆ.

    ಇದನ್ನೂ ಓದಿ: Weight Loss: ಬೊಜ್ಜು ಕರಗಿಸಲು ಹರಸಾಹಸ ಪಡ್ತಿದ್ದೀರಾ? ಗಸಗಸೆಯನ್ನು ತಿಂದು ತೂಕ ಇಳಿಸಿಕೊಳ್ಳಿ

    ಮಲಬದ್ಧತೆ ಸಮಸ್ಯೆಗೆ ಪರಿಹಾರ

    ಇತ್ತೀಚಿನ ಬಹುತೇಕ ಯುವ ಜನತೆ ಸೇರಿದಂತೆ ವಯಸ್ಸಾದವರು ಸಹ ತಾವು ಸೇವಿಸಿದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗುತ್ತಿಲ್ಲ ಎಂಬ ದೂರನ್ನು ಹೇಳುತ್ತಾರೆ. ಹೊಟ್ಟೆಯಲ್ಲಿ ಆಮ್ಲೀಯತೆ ಸಮಸ್ಯೆ ಕೆಲವರಿಗೆ ಹೆಚ್ಚಾದರೆ ಇನ್ನು ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಇದಕ್ಕೆಲ್ಲಾ ದುರ್ಬಲ ಜೀರ್ಣ ವ್ಯವಸ್ಥೆ ಕಾರಣ ಎಂದು ಹೇಳಬಹುದು. ಆದರೆ ಬೆಟ್ಟದ ನೆಲ್ಲಿಕಾಯಿಯ ನಿಯಮಿತವಾದ ಸೇವನೆಯಿಂದ ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪಾರು ಮಾಡಿಕೊಳ್ಳಬಹುದು. ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಸಂದರ್ಭದಲ್ಲಿ ಆರೋಗ್ಯಕರ ಜೀರ್ಣ ವ್ಯವಸ್ಥೆಯನ್ನು ನಿಮ್ಮದಾಗಿಸುವಂತೆ ನೋಡಿಕೊಳ್ಳುವ ಸ್ವಭಾವ ಬೆಟ್ಟದ ನೆಲ್ಲಿಕಾಯಿಯಲ್ಲಿ ಕಂಡು ಬರುತ್ತದೆ.

    ಕೂದಲು ಬೇಗನೆ ಬೆಳ್ಳಗಾಗುತ್ತಿದ್ದರೆ ಕೂದಲಿಗೆ ನೆಲ್ಲಿಕಾಯಿ ರಸವನ್ನು ಬಳಸಿ

    ತಲೆ ಕೂದಲು ಬೇಗನೆ ಬೆಳ್ಳಗಾಗುತ್ತಿದ್ದರೆ ಕೂದಲಿಗೆ ನೆಲ್ಲಿಕಾಯಿ ರಸವನ್ನು ಬಳಸಬೇಕು. ಸ್ನಾನಕ್ಕೆ ಒಂದು ಗಂಟೆ ಮೊದಲು ನೆಲ್ಲಿಕಾಯಿ ರಸವನ್ನು ಕೂದಲಿಗೆ ಹಚ್ಚಬೇಕು. ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಕೂದಲಿಗೆ ಎಣ್ಣೆಯನ್ನು ಹಚ್ಚಿದಂತೆ, ಒಂದು ಬಟ್ಟಲಿನಲ್ಲಿ ನೆಲ್ಲಿಕಾಯಿಯನ್ನು ರಸವನ್ನು ತೆಗೆದಿಟ್ಟುಕೊಳ್ಳಿ. ನಂತರ ಹತ್ತಿಯ ಸಹಾಯದಿಂದ ನೆಲ್ಲಿಕಾಯಿಯ ರಸವನ್ನು. ಕೂದಲಿನ ಬುಡಕ್ಕೆ ಹಚ್ಚಿ. ಪೂರ್ತಿ ಕೂದಲಿಗೆ ನೆಲಿಕಾಯಿ ರಸವನ್ನು ಹಚ್ಚಿದ ನಂತರ ಅರ್ಧ ಗಂಟೆ ಬಿಟ್ಟು ಕೂದಲನ್ನು ಶಾಂಪೂವಿನಿಂದ ತೊಳೆಯಿರಿ.
    Published by:Swathi Nayak
    First published: