ಪವಿತ್ರ ರಂಜಾನ್ ತಿಂಗಳು ಆರಂಭ : ಈ ತಿಂಗಳ ಮಹತ್ವದ ಬಗ್ಗೆ ತಿಳಿಯಿರಿ

news18
Updated:May 17, 2018, 6:23 PM IST
ಪವಿತ್ರ ರಂಜಾನ್ ತಿಂಗಳು ಆರಂಭ : ಈ ತಿಂಗಳ ಮಹತ್ವದ ಬಗ್ಗೆ ತಿಳಿಯಿರಿ
news18
Updated: May 17, 2018, 6:23 PM IST
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಒಂಬತ್ತನೆಯ ತಿಂಗಳನ್ನು ರಂಜಾನ್ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ಮುಸ್ಲಿಂ ಸಮುದಾಯದವರು ಉಪವಾಸ ವ್ರತವನ್ನು ಮಾಡುತ್ತಾರೆ. ಮೇ17ರಂದು ಮುಸ್ಲಿಂರ ಪವಿತ್ರ ತಿಂಗಳು ಪ್ರಾರಂಭವಾಗಿದೆ.


ಪವಿತ್ರ ಗ್ರಂಥ ಕುರಾನಿನ ಪ್ರಕಾರ ರಂಜಾನ್ ತಿಂಗಳನ್ನು ಅಲ್ಲಾಹನ ತಿಂಗಳು ಎಂದು ಪರಿಗಣಿಸಲಾಗಿದೆ. ಈ ಪವಿತ್ರ ತಿಂಗಳಲ್ಲಿ ಮುಸ್ಲಿಂ ಸಮುದಾಯದವರು ಉಪವಾಸ ಮಾಡಬೇಕೆಂದು ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಾನಿನಲ್ಲಿ ತಿಳಿಸಿದ್ದಾರೆ.


 

ಉಪವಾಸ ಕೈಗೊಂಡು ದೇವರನ್ನು ಆರಾಧಿಸುವುದು ಈ ತಿಂಗಳ ಮಹತ್ವದ ಕಾರ್ಯ. ರಂಜಾನ್​ನಲ್ಲಿ ಯಾವುದೇ ರೀತಿಯ ಕೆಟ್ಟ ಕಾರ್ಯಗಳನ್ನು ಮಾಡಬಾರದು. ಕೆಟ್ಟ ಕಾರ್ಯಗಳನ್ನು ಹರಾಮ್(ನಿಷಿದ್ದ) ಎಂದು ಪರಿಗಣಿಸಲಾಗಿದೆ. ಇತರರಿಗೆ ಸಹಾಯ ಹಸ್ತ ಚಾಚುವುದರಿಂದ ಅಲ್ಲಾಹನ ಕೃಪೆಗೆ ಪಾತ್ರವಾಗಬಹುದೆಂಬ ನಂಬಿಕೆ ಇಸ್ಲಾಂ ಧರ್ಮದಲ್ಲಿದೆ.


ಸೂರ್ಯೋದಯಕ್ಕೆ ಮುಂಚಿತವಾಗಿ ಆಹಾರವನ್ನು ಸೇವಿಸಿ ಸೂರ್ಯಾಸ್ತಮಾನದವರೆಗೆ ಉಪವಾಸ ಮಾಡುತ್ತಾರೆ. ಸೂರ್ಯಾಸ್ತಮಾನ ಮತ್ತು ಸೂರ್ಯೋದಯದ ನಡುವಿನ ಸಮಯದಲ್ಲಿ ಆಹಾರ ಸೇವಿಸಬಹುದು.


ಇಸ್ಲಾಂ ಧರ್ಮದ ನಿಯಮಗಳ ಪ್ರಕಾರ ಐದು ತಪ್ಪುಗಳನ್ನು ಮಾಡಿದರೆ ಉಪವಾಸ ಅಸಿಂಧು ಆಗುತ್ತದೆ. ಅವುಗಳೆಂದರೆ ಸುಳ್ಳು ಹೇಳುವುದು, ದುಷ್ಟತೆ ಮೆರೆಯುವುದು, ಚಾಡಿ ಹೇಳುವುದು, ಸುಳ್ಳು ಪ್ರಮಾಣ, ದುರಾಸೆ ಹೊಂದುವುದು.


ಈ ತಿಂಗಳಲ್ಲಿ ತಪ್ಪದೇ ಐದು ಬಾರಿ ನಮಾಜ್​ (ಪಾರ್ಥನೆ) ಮಾಡಬೇಕು. ಇಸ್ಲಾಂ ನಿಯಮ ಅನುಸಾರ ಉಪವಾಸ ಕೈಗೊಂಡರೆ ದೇವರ ದಯೆ ಇರಲಿದೆ ಎಂದು ನಂಬಲಾಗುತ್ತದೆ.
First published:May 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...