Benefits Of Clay Pot: ಮಣ್ಣಿನ ಪಾತ್ರೆಯಲ್ಲಿ ಆಹಾರ ಸೇವನೆ ಎಷ್ಟು ಆರೋಗ್ಯಕರ ಗೊತ್ತಾ?

Health Tips: ಮಣ್ಣಿನ ಪಾತ್ರೆಗಳು 16 ಕ್ಕಿಂತ ಹೆಚ್ಚು ನೈಸರ್ಗಿಕ ಖನಿಜಗಳನ್ನು ಹೊಂದಿದ್ದು ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.  ಪ್ರಸ್ತುತ  ಜನರ  ಆರೋಗ್ಯ ಸಮಸ್ಯೆಗೆ ಕಾರಣಗಳಲ್ಲಿ  ಖನಿಜ ಅಂಶದ ಕೊರತೆ ಕೂಡ ಕಾರಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸುಮಾರು 25,000 ವರ್ಷಗಳ ಹಿಂದೆ ನಮ್ಮ  ಹಿರಿಯರು  ತಮ್ಮ ಆಹಾರವನ್ನು ಮಣ್ಣಿನ ಮಡಕೆಗಳಲ್ಲಿ(Clay Pot) ಅಂದರೆ ಮಣ್ಣಿನ ಬೇಯಿಸುತ್ತಿದ್ದರು ಎಂಬುದು  ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ನಾವು ಸ್ಟೀಲ್ ಪಾತ್ರೆಗಳನ್ನು(Steel Utensil) ಹೆಚ್ಚಾಗಿ ಬಳಕೆ ಮಾಡುತ್ತೇವೆ. ನಮ್ಮ ಹಿರಿಯರು ಮಣ್ಣಿನ ಪಾತ್ರೆಗಳನ್ನು ಬಳಕೆ ಮಾಡಲು ಒಂದು ಕಾರಣವಿದೆ. ನೀವು ಗಮನಿಸಿ ನೋಡಿ ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ.  ಮಣ್ಣಿನ ಮಡಕೆಗಳು ಕೇವಲ ಅಗ್ಗದ ಮತ್ತು ಸುಲಭವಾಗಿ ಲಭ್ಯವಿರುವ ಪಾತ್ರೆಗಳು ಮಾತ್ರವಲ್ಲದೇ, ಅವುಗಳು ನಿಮ್ಮ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಮಣ್ಣಿನ ಪಾತ್ರೆಗಳು ಎಷ್ಟು ಪ್ರಯೋಜನ ಹೊಂದಿದೆ ಎಂಬುದು ಇಲ್ಲಿದೆ.

ಹೆಚ್ಚಿನ ಪೋಷಕಾಂಶ

ಅಡುಗೆಗಾಗಿ ಮಣ್ಣಿನ ಮಡಕೆಗಳ ಪ್ರಮುಖ ಪ್ರಯೋಜನಗಳಲ್ಲಿ ಇದು ಒಂದು. ಅಡುಗೆ ಪ್ರಕ್ರಿಯೆಯಲ್ಲಿ ಶಾಖ ಮತ್ತು ತೇವಾಂಶವನ್ನು ನಿಯಂತ್ರಿಸುವ ಮಣ್ಣಿನ ಮಡಕೆಗಳಲ್ಲಿರುವ ರಂಧ್ರಗಳಿಂದಾಗಿ, ಆಹಾರದ ಪೌಷ್ಠಿಕಾಂಶದ ಮೌಲ್ಯವು 100%ನಷ್ಟು ಹೆಚ್ಚುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಸ್ಟೀಲ್ ಮತ್ತು ಅಲುಮಿನಿಯಂ ಇತರ ಪಾತ್ರೆಗಳಲ್ಲಿ, ಪೌಷ್ಠಿಕಾಂಶದ ಮೌಲ್ಯವು 7-13% ರಷ್ಟು ಮಾತ್ರ ಉಳಿದಿರುತ್ತದೆ ಎನ್ನಲಾಗುತ್ತದೆ.

ಖನಿಜಗಳನ್ನು ಹೆಚ್ಚಿಸುತ್ತದೆ

ಇದನ್ನೂ ಓದಿ: ಬಾಳೆ ಹೂವಿನಲ್ಲಿದೆ ಇಷ್ಟೆಲ್ಲ ಆರೋಗ್ಯ ಪ್ರಯೋಜನಗಳು

ಮಣ್ಣಿನ ಪಾತ್ರೆಗಳು 16 ಕ್ಕಿಂತ ಹೆಚ್ಚು ನೈಸರ್ಗಿಕ ಖನಿಜಗಳನ್ನು ಹೊಂದಿದ್ದು ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.  ಪ್ರಸ್ತುತ  ಜನರ  ಆರೋಗ್ಯ ಸಮಸ್ಯೆಗೆ ಕಾರಣಗಳಲ್ಲಿ  ಖನಿಜ ಅಂಶದ ಕೊರತೆ ಕೂಡ ಕಾರಣ. ಹಾಗಾಗಿ ಮಣ್ಣಿನ ಪಾತ್ರೆಯಲ್ಲಿ ಆಹಾರ ಸೇವನೆ ಮಾಡುವುದು ಉತ್ತಮ. ಇದರಲ್ಲಿ ಸೇವನೆ ಮಾಡುವುದರಿಂದ ಪೋಷಕಾಂಶಗಳಾದ ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಅನ್ನು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸೇರಲು ಸಹಾಯ ಮಾಡುತ್ತದೆ. ಆದ್ದರಿಂದ, ಮಣ್ಣಿನ ಮಡಕೆಗಳಲ್ಲಿ ಆಹಾರವನ್ನು ತಯಾರಿಸುವುದು ಅದರ ಖನಿಜಾಂಶದಿಂದ ಆರೋಗ್ಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಇದು ಬ್ರಾಂಕೈಟಿಸ್, ಆಸ್ತಮಾ ಮತ್ತು ಕ್ಯಾನ್ಸರ್ ನಂತಹ ವಿವಿಧ ರೋಗಗಳ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

ಆಮ್ಲೀಯ ಮೌಲ್ಯವನ್ನು ತಟಸ್ಥಗೊಳಿಸುತ್ತದೆ

ಅಡುಗೆಗಾಗಿ ಜೇಡಿಮಣ್ಣಿನ ಮಡಕೆಗಳ ಒಂದು ಆರೋಗ್ಯ ಪ್ರಯೋಜನವೆಂದರೆ ಅವು ಕ್ಷಾರೀಯ ಸ್ವಭಾವವನ್ನು ಹೊಂದಿದೆ. , ಇದು ಆಹಾರದ ಆಮ್ಲೀಯ ಮೌಲ್ಯವನ್ನು ತಟಸ್ಥಗೊಳಿಸಲು ಕಾರಣವಾಗುತ್ತದೆ, ಆದ್ದರಿಂದ ಹೊಟ್ಟೆಯ ಕಿರಿಕಿರಿ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ.

ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ

ಮಣ್ಣಿನ ಪಾತ್ರೆಗಳ ಕುರಿತು ನಡೆದ ಕೆಲ ಸಂಶೋಧನೆಗಳ ಪ್ರಕಾರ, ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಆಹಾರ  ಬೇಸಿಯಲ್ಲಿ ಸಹ 36 ಗಂಟೆಗಳ ಎಸಿ ಇಲ್ಲದ ರೈಲು ಪ್ರಯಾಣದಲ್ಲಿ ಅದರ ಪೌಷ್ಟಿಕಾಂಶದ ಮೌಲ್ಯವನ್ನು  ಹಾಗೆಯೇ ಉಳಿಸಿಕೊಂಡಿರುವುದು ಎಂದು ತಿಳಿದುಬಂದಿದೆ. ಕೆಲವು ವಿಧದ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಜೇಡಿಮಣ್ಣು  ಅಡ್ಡವಾಗುತ್ತದೆ. ಅದರ ಪಾತ್ರೆಗಳು ಬ್ಯಾಕ್ಟೀರಿಯಾಗಳಿಗೆ ತಡೆಗೋಡೆಯಾಗಿ ನಿಮ್ಮ ಆಹಾರವನ್ನು ಹಾಳುಮಾಡುವುದನ್ನು ತಡೆಯುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಸೇರದಂತೆ ತಡೆದು, ಆರೋಗ್ಯವನ್ನು ಕಾಪಾಡುತ್ತದೆ.

ಕಡಿಮೆ ಎಣ್ಣೆ ಬಳಕೆ

ಮಣ್ಣಿನ ಪಾತ್ರೆಗಳು ಎಣ್ಣೆಯನ್ನು ನೈಸರ್ಗಿಕವಾಗಿ ಹೀರಿಕೊಳ್ಳುವ ಗುಣವನ್ನು ಹೊಂದಿದೆ. ನಿಮ್ಮ ಮಣ್ಣಿನ ಪಾತ್ರೆಗಳ 2 - 3 ಬಳಕೆಯ ನಂತರ, ಮಣ್ಣಿನ ಮಡಕೆಗಳು ನೈಸರ್ಗಿಕವಾಗಿ ಅದರ ಎಲ್ಲಾ ಎಣ್ಣೆಗಳು ಮತ್ತು ಆಹಾರದ ತೇವಾಂಶವನ್ನು ಉಳಿಸಿಕೊಳ್ಳುತ್ತವೆ, ಆದ್ದರಿಂದ ನಿಮ್ಮ ಆಹಾರದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ನಿಮಗೆ ಹೆಚ್ಚುವರಿ ಎಣ್ಣೆ ಅಗತ್ಯವಿರುವುದಿಲ್ಲ, ನಿಮ್ಮ ಆಹಾರವನ್ನು ಹೆಚ್ಚು ಆರೋಗ್ಯಕರಗೊಳಿಸಲು ಇದು ಸಹಾಯಕಾರಿ.

ಇದನ್ನೂ ಓದಿ: ಈ ವಸ್ತುಗಳನ್ನು ಬಳಸಿ ಮನೆಯಲ್ಲಿಯೇ ಪೆಡಿಕ್ಯೂರ್ ಮಾಡಿ..

ಆಹಾರವನ್ನು ಹೆಚ್ಚು ರುಚಿಕರವಾಗಿಸುತ್ತದೆ

ನಮ್ಮ ಹಿರಿಯರು ನಮಗೆ ಹಲವಾರು ಬಾರಿ ಹೇಳಿದ್ದಾರೆ. ಮಣ್ಣಿನ ಪಾತ್ರೆಯಲ್ಲಿ ಆಹಾರ ತಯಾರಿಸುವುದು, ಆಹಾರವನ್ನು ಹೆಚ್ಚು ರುಚಿಕರವಾಗಿಸುತ್ತದೆ ಎಂದು. ಹೌದು, ಮಣ್ಣಿನ ನೈಸರ್ಗಿಕ ಸುವಾಸನೆ ಮತ್ತು ನಿಧಾನ ಅಡುಗೆ ಪ್ರಕ್ರಿಯೆಯು ಇತರ ಅಡುಗೆ  ತಯಾರಿಸುವ ಪಾತ್ರೆಗಳಿಗೆ ಹೋಲಿಸಿದರೆ ಆಹಾರದಲ್ಲಿ 10 ಪಟ್ಟು ಉತ್ತಮ ರುಚಿಯನ್ನು ನೀಡುತ್ತದೆ.
Published by:Sandhya M
First published: