ಮೊಡವೆ, ತಲೆಹೊಟ್ಟು ಸೇರಿದಂತೆ ನಾನಾ ಸಮಸ್ಯೆಗಳಿಗೆ ಕರಿಬೇವು ಮನೆಮದ್ದು..!

ತಲೆ ಕೂದಲು ಉದುರುವಿಕೆಯೊಂದಿಗೆ ತಲೆಹೊಟ್ಟಿನ ಸಮಸ್ಯೆ ಕೂಡ ಕಾಣಿಸುತ್ತದೆ. ಇದನ್ನು ಕೂಡ ಕರಿಬೇವಿನ ಎಲೆಗಳ ಪೇಸ್ಟ್​ನಿಂದ ನಿವಾರಿಸಬಹುದು. ಇದಕ್ಕಾಗಿ, ಕರಿಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ.

news18-kannada
Updated:June 22, 2020, 3:04 PM IST
ಮೊಡವೆ, ತಲೆಹೊಟ್ಟು ಸೇರಿದಂತೆ ನಾನಾ ಸಮಸ್ಯೆಗಳಿಗೆ ಕರಿಬೇವು ಮನೆಮದ್ದು..!
curry leaves
  • Share this:
ಕರಿಬೇವಿನ ಎಲೆಗಳು ಖಾದ್ಯಕ್ಕೆ ವಿಭಿನ್ನ ಪರಿಮಳ ನೀಡುವ ವಿಷಯ ಎಲ್ಲರಿಗೂ ಗೊತ್ತಿರುವುದೇ, ಆದರೆ ಇದೇ ಎಲೆಗಳಿಂದ ಹತ್ತಾರು ಆರೋಗ್ಯಕರ ಲಾಭಗಳನ್ನು ಕೂಡ ಪಡೆಯಬಹುದು ಎಂಬುದು ತಿಳಿದಿದೆಯಾ?. ಈ ಎಲೆಗಳನ್ನು ಬಳಸಿ ಸೌಂದರ್ಯವರ್ಧಕ, ತಲೆಹೊಟ್ಟು ನಿವಾರಕ, ಚರ್ಮರಕ್ಷಕ...ಹೀಗೆ ನಾನಾ ರೀತಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಕರಿಬೇವಿನ ಅಂತಹ ಕೆಲ ಲಾಭದಾಯಕ ಗುಣಗಳನ್ನು ಇಲ್ಲಿ ತಿಳಿಸಲಾಗಿದೆ.

ಮುಖದ ಹೊಳಪು:
ಕರಿಬೇವಿನ ಎಲೆಗಳು ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ ಕರಿಬೇವಿನ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಬಳಿಕ ಅದನ್ನು ಪುಡಿಮಾಡಿ ಅದಕ್ಕೆ ಒಂದು ಸಣ್ಣ ಚಮಚ ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದರಿಂದ ಮುಖ ಕಾಂತಿಯುತವಾಗುವುದಲ್ಲದೆ, ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ.

ಮೃದು ಚರ್ಮ:
ಕರಿಬೇವಿನ ಎಲೆಗಳನ್ನು ಮೃದು ಚರ್ಮಕ್ಕಾಗಿ ಬಳಸಬಹುದು. ಇದಕ್ಕಾಗಿ ಕರಿಬೇವಿನ ಎಲೆಗಳನ್ನು ಹಾಲಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖ ಮತ್ತು ಇನ್ನಿತರ ಚರ್ಮಗಳ ಭಾಗಗಳ ಮೇಲೆ ಹಚ್ಚಿ . ಒಣಗಿದ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಇದರಿಂದ ಚರ್ಮ ಮೃದುವಾಗುವುದಲ್ಲದೆ, ಚರ್ಮದ ಮೇಲಿರುವ ಕಲೆಗಳು ಮಾಯವಾಗುತ್ತವೆ.

ಮೊಡವೆಗೆ ಮನೆಮದ್ದು:
ಮೊಡವೆ ಅಥವಾ ಪಿಂಪಲ್​ಗಳಿಂದ ನೀವು ಚಿಂತತರಾಗಿದ್ದರೆ, ಅದನ್ನು ಕರಿಬೇವಿನ ಎಲೆಗಳ ಮೂಲಕ ತೊಡೆದು ಹಾಕಬಹುದು. ಇದಕ್ಕಾಗಿ, 3-4 ಕರಿಬೇವಿನ ಎಲೆಗಳನ್ನು ತೊಳೆದು ಪೇಸ್ಟ್ ಮಾಡಿ. ಅದರಲ್ಲಿ ನಿಂಬೆ ರಸವನ್ನು ಬೆರೆಸಿ ಪಿಂಪಲ್‌ ಇರುವ ಭಾಗಗಳಿಗೆ ಹಚ್ಚಿ. ಒಣಗಿದಾಗ ಶುದ್ಧ ನೀರಿನಿಂದ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ತಂಪಾಗಿಸುವುದರ ಜೊತೆಗೆ, ಪಿಂಪಲ್ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ.ಕೂದಲು ಉದುರುವಿಕೆ ಸಮಸ್ಯೆ:
ಕೂದಲು ಉದುರುವಿಕೆಯಿಂದ ನೀವು ತೊಂದರೆಗೀಡಾಗಿದ್ದರೆ, ಕರಿಬೇವಿನ ಎಲೆಗಳಿಂದ ದೇಶೀಯ ಎಣ್ಣೆ ತಯಾರಿಸಿ. ಇದಕ್ಕಾಗಿ, ಬಾಣಲೆಯಲ್ಲಿ ಅರ್ಧ ಬಟ್ಟಲು ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದಕ್ಕೆ ಸ್ವಚ್ಛ ಮಾಡಿರುವ ಕರಿಬೇವಿನ ಎಲೆಗಳನ್ನು ಸೇರಿಸಿ ಬಿಸಿ ಮಾಡಿ. ಈ ಮಿಶ್ರಣದ ಬಣ್ಣ ಬದಲಾಗುವಾಗ ಬಿಸಿ ಮಾಡುವುದನ್ನು ನಿಲ್ಲಿಸಿ. ಇದು ತಣ್ಣಗಾದ ನಂತರ ಬಾಟಲಿಯಲ್ಲಿ ಶೇಖರಿಸಿ ಮಲಗುವ ಮೊದಲು ಪ್ರತಿದಿನ ಕೂದಲಿಗೆ ಹಚ್ಚಿ. ಇದರಿಂದ ಕೆಲವೇ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ದೂರವಾಗುತ್ತದೆ.

ತಲೆಹೊಟ್ಟು:
ತಲೆ ಕೂದಲು ಉದುರುವಿಕೆಯೊಂದಿಗೆ ತಲೆಹೊಟ್ಟಿನ ಸಮಸ್ಯೆ ಕೂಡ ಕಾಣಿಸುತ್ತದೆ. ಇದನ್ನು ಕೂಡ ಕರಿಬೇವಿನ ಎಲೆಗಳ ಪೇಸ್ಟ್​ನಿಂದ ನಿವಾರಿಸಬಹುದು. ಇದಕ್ಕಾಗಿ, ಕರಿಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ. ಬಳಿಕ ಅದಕ್ಕೆ ಮೊಸರು ಸೇರಿಸಿ. ನಂತರ ತಲೆಗೆ ಚೆನ್ನಾಗಿ ಹಚ್ಚಿ. ಇದು ಒಣಗಿದ ಬಳಿಕ ಇದನ್ನು ಚೆನ್ನಾಗಿ ತೊಳೆಯಿರಿ. ಹೀಗೆ ವಾರಕ್ಕೆ ಎರಡು ಬಾರಿ ಬಳಸುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
First published:June 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading