ಅಲೋವೆರಾದಲ್ಲಿದೆ ನಿಮ್ಮ ತ್ವಚೆಯ ಸೌಂದರ್ಯ

ಸನ್ ಬರ್ನ್ ಸಮಸ್ಯೆಯನ್ನು ತೊಡೆದುಹಾಕಲು ಅಲೋವೆರಾ ಜೆಲ್ ಸಹಕಾರಿ. ಪಿಂಪಲ್​ಗಳನ್ನು ಹೋಗಲಾಡಿಸುವಲ್ಲಿ ಅಲೋವೆರಾ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಮುಖದಿಂದ ಮೇಕ್ಅಪ್ ತೆಗೆದುಹಾಕಲು ಸಹ ಅಲೋವೆರಾ ಜೆಲ್ ತುಂಬಾ ಉಪಯುಕ್ತ. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ.

zahir | news18-kannada
Updated:October 15, 2019, 11:09 AM IST
ಅಲೋವೆರಾದಲ್ಲಿದೆ ನಿಮ್ಮ ತ್ವಚೆಯ ಸೌಂದರ್ಯ
aloe vera
zahir | news18-kannada
Updated: October 15, 2019, 11:09 AM IST
ಯೌವ್ವನದಲ್ಲಿ ತ್ವಚೆಯ ಸೌಂದರ್ಯದ ಕಾಳಜಿವಹಿಸಿದರೆ ವಯಸ್ಸಾದಂತೆ ಅದರ ಪ್ರತಿಫಲ ಕಾಣಬಹುದು. ಸಾಮಾನ್ಯವಾಗಿ ಹೆಚ್ಚಿನವರು ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಹಲವು ರೀತಿಯ ರಾಸಾಯನಿಕ ಸೌಂದರ್ಯವರ್ಧಕಗಳ ಮೊರೆ ಹೋಗುವವರೇ ಹೆಚ್ಚು. ಆದರೆ ಎಲ್ಲ ಕಡೆಯು ಹೇರಳವಾಗಿ ದೊರೆಯುವ ಕೆಲ ಗಿಡಗಳಿಂದಲೂ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ.

ಹೌದು, ಲೋಳೆಸರ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳುವ ಅಲೋವೇರ ಎಲೆಗಳನ್ನು ಬಳಸಿ ಕೂಡ ತ್ವಚೆಯನ್ನು ಆರೈಕೆ ಮಾಡಬಹುದು. ಪ್ರಸ್ತುತ ಅನೇಕ ಕಂಪೆನಿಗಳು ಸಹ ಅಲೋವೇರ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಆದರೆ ನೇರವಾಗಿ ಲೋಳೆಸರ ಎಲೆಗಳಿಂದಲೇ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ನೆನಪಿರಲಿ.

ಚರ್ಮದ ಪೋಷಣೆ:

ಅಲೋವೇರಾ ಚರ್ಮದ ಮೇಲೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಬರುತ್ತದೆ. ಅಲ್ಲದೆ, ಚರ್ಮಕ್ಕೆ ಬೇಕಾದ ಪೋಷಕಾಂಶ ಕೂಡ ಲೋಳೆಸರದಿಂದ ಸಿಗುತ್ತದೆ. ಒಂದು ವೇಳೆ ಚರ್ಮದ ಅಲರ್ಜಿಯಿದ್ದರೆ ನೀವು ಅಲೋವೇರ ಜೆಲ್​ಗಳನ್ನು ಬಳಸದಿರುವುದು ಉತ್ತಮ.

ಚರ್ಮದ ಹೊಳಪು:
ಚರ್ಮದ ಸೌಂದರ್ಯವನ್ನು ಸುಧಾರಿಸಲು ಬಯಸಿದರೆ, ಅಲೋವೆರಾ ಜೆಲ್ ಅನ್ನು ಬಳಸುವುದು ಉತ್ತಮ. ನಿಮ್ಮ ಮುಖದಿಂದ ಧೂಳು, ಕೊಳಕು, ಡೆಡ್​ ಸ್ಕಿನ್​ ಮತ್ತು ಕೊಳೆಯನ್ನು ಸ್ವಚ್ಛಗೊಳಿಸಲು ಇದು ತುಂಬಾ ಸಹಾಯಕವಾಗಿದೆ. ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುವುದಲ್ಲದೆ ಆಕರ್ಷಣೀಯವಾಗಿಸುತ್ತದೆ.

ವಿರೋಧಿ ಗುಣಲಕ್ಷಣಗಳು:
Loading...

ವಯಸ್ಸಾಗುವಿಕೆಯ ವಿರೋಧಿ ಗುಣಗಳು ಅಲೋವೆರಾದಲ್ಲಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳೂ ಮುಖದ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ಪ್ರತಿದಿನ ಬಳಸುವುದರಿಂದ ಯೌವ್ವನ ಮತ್ತು ಸೌಂದರ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Bigg Boss Kannada Season 7: ಇವರೇ ನೋಡಿ ಬಿಗ್ ಬಾಸ್​ ಮನೆಗೆ ಎಂಟ್ರಿಕೊಟ್ಟ ಸೆಲೆಬ್ರಿಟಿಗಳು..!

ಬಿಸಿಲಿನ ಬೇಗೆ:
ಸನ್ ಬರ್ನ್ ಸಮಸ್ಯೆಯನ್ನು ತೊಡೆದುಹಾಕಲು ಅಲೋವೆರಾ ಜೆಲ್ ಸಹಕಾರಿ. ಪಿಂಪಲ್​ಗಳನ್ನು ಹೋಗಲಾಡಿಸುವಲ್ಲಿ ಅಲೋವೆರಾ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಮುಖದಿಂದ ಮೇಕ್ಅಪ್ ತೆಗೆದುಹಾಕಲು ಸಹ ಅಲೋವೆರಾ ಜೆಲ್ ತುಂಬಾ ಉಪಯುಕ್ತ. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ಪಾದದ ತೊಂದರೆ:
ಕಣಕಾಲುಗಳನ್ನು ಮೃದು ಮತ್ತು ಸುಂದರವಾಗಿಸಲು ಮತ್ತು ಪಾದದ ಬಿರುಕಿನ ಸಮಸ್ಯೆಗೂ ಅಲೋವೆರಾ ಜೆಲ್​ಗಳನ್ನು ಬಳಸಬಹುದು. ಹಾಗೆಯೇ ಈ ಜೆಲ್ ಅನ್ನು ತುಟಿಗಳನ್ನು ಮೃದುವಾಗಿ ಮತ್ತು ಗುಲಾಬಿಯಂತೆ ಸುಂದರವಾಗಿಸಲು ಸಹ ಪರಿಣಾಮಕಾರಿಯಾಗಿದೆ.

First published:October 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...